Home
ಮೊಬೈಲ್

iPhone 16 vs 16 pro vs 16 pro max: ಇದಕ್ಕಿಂತ ಉತ್ತಮ ಫೋನ್​ಗಳಿಲ್ಲ! ಯಾವುದು ಬೆಸ್ಟ್? ಬೆಲೆ ಎಷ್ಟು?

Apple iPhone 16 series launched: ಆಪಲ್‌ ಅಂತಿಮವಾಗಿ ಐಫೋನ್ 16 (iPhone 16) ಸರಣಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಸ್ಮಾರ್ಟ್‌ಫೋನ್ ಪ್ರಿಯರ ಕಾಯುವಿಕೆಗೆ ಅಂತ್ಯವಾಡಿದೆ. ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಆಪಲ್ ಪಾರ್ಕ್‌ನಲ್ಲಿ ನಡೆದ 'ಇಟ್ಸ್ ಗ್ಲೋಟೈಮ್' ಸಮಾರಂಭದಲ್ಲಿ ಕಂಪನಿತು ನೂತನ ಆಪಲ್‌ ಐಫೋನ್ 16 (Apple iPhone 16) ಸರಣಿಯನ್ನು ಲೋಕಾರ್ಪಣೆಗೊಳಿಸಿತು.

ಹೌದು, ಆಪಲ್ ಕಂಪನಿಯು ಐಫೋನ್ 16 ಸರಣಿಯ ಅಡಿಯಲ್ಲಿ ನಾಲ್ಕು ಹೊಸ ಐಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ಆಪಲ್‌ ಐಫೋನ್ 16 (Apple iPhone 16), ಐಫೋನ್ 16 ಪ್ಲಸ್ (iPhone 16 Plus), ಐಫೋನ್ 16 ಪ್ರೊ (iPhone 16 Pro) ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್‌ (iPhone 16 Pro Max) ಅನ್ನು ಒಳಗೊಂಡಿದೆ. ಈ ಎಲ್ಲಾ ಐಫೋನ್‌ಗಳು ಎಐ (AI) ವೈಶಿಷ್ಟ್ಯಗಳೊಂದಿಗೆ ಎಂಟ್ರಿ ಕೊಟ್ಟಿವೆ.

iPhone 16 vs 16 pro vs 16 pro max: ಯಾವುದು ಉತ್ತಮ ಆಯ್ಕೆ? ಬೆಲೆ ಎಷ್ಟು?

ನಾವೀಗ, ಐಫೋನ್ 16, ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್‌ ಫೋನಿನಲ್ಲಿ ಯಾವುದು ಉತ್ತಮ ಎಂದು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಈ ಫೋನ್‌ಗಳ ಬೆಲೆ, ವೈಶಿಷ್ಟ್ಯಗಳನ್ನು ತಿಳಿಯಲು ಮುಂದೆ ಓದಿ.

ಬೆಲೆ: ಐಫೋನ್ 16 ಬೆಲೆ $799 ರಿಂದ (79,900 ರೂ.) ಪ್ರಾರಂಭವಾಗುತ್ತದೆ. ಆದರೆ, ಐಫೋನ್ 16 ಪ್ರೊ ಅನ್ನು $999 (84,000 ರೂ.) ಪ್ರಾರಂಭವಾಗುತ್ತದೆ. ಕಂಪನಿಯು ಐಫೋನ್ 16 ಪ್ರೊ ಮ್ಯಾಕ್ಸ್ ಅನ್ನು $1199 (1,00,700 ರೂ.) ಆರಂಭಿಕ ಬೆಲೆಗೆ ಬಿಡುಗಡೆ ಮಾಡಿದೆ. ಇದೇ ಸೆಪ್ಟೆಂಬರ್ 20 ರಿಂದ ಈ ಹೊಸ ಐಫೋನ್‌ಗಳ ಮಾರಾಟವು ಪ್ರಾರಂಭವಾಗಲಿದೆ.

ಡಿಸ್ಪ್ಲೇ: ಐಫೋನ್ 16 ಸರಣಿಯು ಆಪಲ್ ಇಂಟೆಲಿಜೆನ್ಸ್ (Apple Intelligence) ವೈಶಿಷ್ಟ್ಯವನ್ನು ಹೊಂದಿದೆ. ಐಫೋನ್ 16 ಮೊಬೈಲ್ 2000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ 6.1 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಐಫೋನ್ 16 ಪ್ರೊ 6.3 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿದೆ. ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್‌ 6.9 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಪಡೆದಿದೆ. ಐಫೋನ್ 16 ಸರಣಿಯನ್ನು ಗ್ರೇಡ್ 5 ಟೈಟಾನಿಯಂ ವಸ್ತುಗಳಿಂದ ತಯಾರಿಸಲಾಗುತ್ತದೆ. ಶೇ.100 ರಷ್ಟು ಮರುಬಳಕೆಯ ವಸ್ತುಗಳನ್ನು ಬಳಸಲಾಗಿದೆ.

ಪ್ರೊಸೆಸರ್: ಹೊಸ ಐಫೋನ್‌ಗಳು ಶಕ್ತಿಯುತ A18 ಚಿಪ್‌ಸೆಟ್ ಅನ್ನು ಹೊಂದಿವೆ. ಇದು ಐಫೋನ್‌ 15 ಗಿಂತ ಶೇ.30 ರಷ್ಟು ವೇಗವಾಗಿದೆ. ಇತರೆ ಎಲ್ಲಾ ಸ್ಪರ್ಧಿಗಳ ಫೋನ್‌ಗಳಿಗಿಂತ ಚಿಪ್‌ಸೆಟ್ ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ಆಪಲ್ ಹೇಳಿದೆ.

ಕ್ಯಾಮೆರಾ: ಐಫೋನ್ 16 ಮೊಬೈಲ್ 48 ಮೆಗಾಪಿಕ್ಸೆಲ್ ಫ್ಯೂಷನ್ ಪ್ರಾಥಮಿಕ ಹಿಂಬದಿಯ ಕ್ಯಾಮೆರಾ, 12 ಮೆಗಾಪಿಕ್ಸೆಲ್ 2x ಟೆಲಿಫೋಟೋ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. ಐಫೋನ್ 16 ಸರಣಿಯಲ್ಲಿ ಪ್ರಾದೇಶಿಕ ಕ್ಯಾಪ್ಚರ್ ವೈಶಿಷ್ಟ್ಯ ಸಹ ಇದೆ. ಇದು ವಿಡಿಯೋಗಳು ಮತ್ತು ಫೋಟೋಗಳನ್ನು ಸೆರೆಹಿಡಿಯಲು ಸಾಧ್ಯವಾಗಿಸುತ್ತದೆ.

ಐಫೋನ್ 16 ಪ್ರೊ ಕಸ್ಟಮೈಸ್ ಮಾಡಿದ ಆಕ್ಷನ್ ಬಟನ್, ಹೊಸ ನವೀನ ಕ್ಯಾಮೆರಾ ನಿಯಂತ್ರಣಗಳಿಗಾಗಿ ಕ್ಯಾಪ್ಚರ್ ಬಟನ್ ಮತ್ತು ಮರುವಿನ್ಯಾಸಗೊಳಿಸಲಾದ ಫೋಟೋಗಳ ಅಪ್ಲಿಕೇಶನ್ ಅನ್ನು ಒಳಗೊಂಡಿದೆ. ಇದು 48 ಮೆಗಾಪಿಕ್ಸೆಲ್ ಫ್ಯೂಷನ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಇದು ಆಟೋಫೋಕಸ್ ಮತ್ತು ದ್ಯುತಿರಂಧ್ರ f/2.2 ಜೊತೆಗೆ 48 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಕೋನವನ್ನು ಬೆಂಬಲಿಸುತ್ತದೆ. ಐಫೋನ್ 16 ಪ್ರೊ ಕ್ಯಾಮೆರಾ ನಿಯಂತ್ರಣ ವೈಶಿಷ್ಟ್ಯದೊಂದಿಗೆ 12 ಮೆಗಾಪಿಕ್ಸೆಲ್ 5x ಟೆಲಿಫೋಟೋ ಲೆನ್ಸ್ ಸಹ ಹೊಂದಿದೆ.

ಬ್ಯಾಟರಿ: ಐಫೋನ್ 15 ಗಿಂತ ಐಫೋನ್ 16 ಸರಣಿಯ ಫೋನ್‌ಗಳು ದೊಡ್ಡ ಬ್ಯಾಟರಿಯನ್ನು ಹೊಂದಿವೆ. ಉತ್ತಮ ಅನುಭವ ಮತ್ತು ತುರ್ತು SOS ಲೈವ್ ವಿಡಿಯೋ ವೈಶಿಷ್ಟ್ಯವು iOS 18 ನೊಂದಿಗೆ ಲಭ್ಯವಿದೆ. ಇನ್ನೂ, ಐಫೋನ್ 16 ಪ್ರೊ ಮ್ಯಾಕ್ಸ್‌ ಅತ್ಯುತ್ತಮ ಬ್ಯಾಟರಿ ಬಾಳಿಕೆಯನ್ನು ಒದಗಿಸುತ್ತದೆ.

Best Mobiles in India

English summary
iPhone 16 vs iPhone 16 Pro vs iPhone 16 Pro Max: which is better? Know price, features and specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+