Home
ಮೊಬೈಲ್

ಹೊಸ iPhone 16e ಪ್ರಿ-ಬುಕಿಂಗ್ ಶುರು! ಜಾಗತಿಕ ಬೆಲೆ ಬಹಿರಂಗ.. ಅಲ್ಲಿ ಇಷ್ಟು ಕಡಿಮೆನಾ? ಭಾರತದಲ್ಲಿ ಎಷ್ಟು?

iPhone 16e prices in Global Market: ಆಪಲ್ ಕಂಪನಿಯು ತನ್ನ ಬಹುನಿರೀಕ್ಷಿತ ಐಫೋನ್ 16e (iPhone 16e) ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ಇತ್ತೀಚಿನ ಐಫೋನ್ 16 ಸರಣಿಗೆ ಈ ಹೊಸ ಐಫೋನ್ ಸೇರ್ಪಡೆಯಾಗಿದೆ. ಆಪಲ್ ಸಂಸ್ಥೆಯು ಈ ಮೊಬೈಲ್ ​ ಅನ್ನು ಐಫೋನ್ SE4 (iPhone SE4) ಹೆಸರಿನೊಂದಿಗೆ ಲೋಕಾರ್ಪಣೆಗೊಳಿಸುವ ನಿರೀಕ್ಷೆಯಿತ್ತು. ಆದರೆ, ಕಂಪನಿಯು ಇದನ್ನು ಐಫೋನ್ 16 ಸರಣಿಯಲ್ಲಿ ಆರಂಭಿಕ ಹಂತದ ಸ್ಮಾರ್ಟ್‌ಫೋನ್‌ ಆಗಿ ಪರಿಚಯಿಸಿದೆ. ಇದೀಗ, ಐಫೋನ್​ 16e ಜಾಗತಿಕ ಬೆಲೆ ಸಹ ಬಹಿರಂಗವಾಗಿದೆ.

ಹೊಸದಾಗಿ ಬಿಡುಗಡೆಯಾದ ಐಫೋನ್ 16e (iPhone 16e) ಸ್ಮಾರ್ಟ್‌ಫೋನ್ ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಇದು ಅತ್ಯಂತ ಕೈಗೆಟುಕುವ ಐಫೋನ್‌ ಮಾದರಿಯಾಗಿದೆ. ಇದಲ್ಲದೆ, ಐಫೋನ್ 16e ಅನೇಕ ಪ್ರಮುಖ ಅಪ್‌ಗ್ರೇಡ್‌ಗಳನ್ನು ಒಳಗೊಂಡಿದೆ. ಇದರಲ್ಲಿ ವರ್ಧಿತ ಡಿಸೈನ್​ ಲಾಂಗ್ವೇಜ್​, ಪವರ್​ಫುಲ್​ ಚಿಪ್‌ಸೆಟ್, ದೊಡ್ಡ​ ಡಿಸ್ಪ್ಲೇ ಮತ್ತು ಸುಧಾರಿತ​ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದು. ಬನ್ನಿ, ಈ ಹೊಸ ಐಫೋನ್ 16E ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

iPhone 16e ಪ್ರಿ-ಬುಕಿಂಗ್ ಶುರು! ಜಾಗತಿಕ ಬೆಲೆ ಬಹಿರಂಗ.. ಭಾರತದಲ್ಲಿ ಎಷ್ಟು?

ಐಫೋನ್ 16e ಜಾಗತಿಕ ಬೆಲೆ

ಹೊಸ ಐಫೋನ್ 16e ಸ್ಮಾರ್ಟ್‌ಫೋನ್ ಅನ್ನು ಮೂರು ಸ್ಟೋರೇಜ್​ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ನೀವು ಕಪ್ಪು​ ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಈ ಐಫೋನ್ ಅನ್ನು ಖರೀದಿಸಬಹುದು. ಭಾರತದಲ್ಲಿ ಐಫೋನ್ 16e ಫೋನಿನ 128GB ರೂಪಾಂತರದ ಬೆಲೆ 59,999 ರೂ. ಇದೆ. 256GB ರೂಪಾಂತರದ ಬೆಲೆ 69,999 ರೂ. ಮತ್ತು 512GB ಬೆಲೆ 89,999 ರೂ. ಆಗಿದೆ. ಇನ್ನೂ ಅಮೆರಿಕದಲ್ಲಿ ಈ ಐಫೋನ್‌ನ 128GB ಮೂಲ ರೂಪಾಂತರದ ಬೆಲೆ 49,526 ($599) ಇದೆ. 256GB ರೂಪಾಂತರದ ಬೆಲೆ 57,787 ($699) ಮತ್ತು 512GB ರೂಪಾಂತರದ ಬೆಲೆ 74,408 ($899) ಇದೆ.

ಯುಕೆಯಲ್ಲಿ ಐಫೋನ್ 16e ಸ್ಮಾರ್ಟ್‌ಫೋನ್‌ನ 128GB ರೂಪಾಂತರವು 59,533 ರೂ. (£599), 256GB ವೇರಿಯಂಟ್ 69,694 ರೂ. (£699) ಮತ್ತು 512GB ರೂಪಾಂತರವು 89,607 ರೂ.ಗೆ (£899) ಬಿಡುಗಡೆಯಾಗಿದೆ. ಯುಎಇಯಲ್ಲಿ 128GB ರೂಪಾಂತರವು 58,340 ರೂ., 256GB ಮಾದರಿ 67,345 ರೂ. ಮತ್ತು 512GB ವೇರಿಯಂಟ್ 86,396 ರೂ. ಬೆಲೆ ಹೊಂದಿದೆ. ಜಪಾನ್‌ನಲ್ಲಿ 128GB ರೂಪಾಂತರದ ಬೆಲೆ 56,393 ರೂ., 256GB ಆಯ್ಕೆಯ ಬೆಲೆ 65,000 ರೂ. ಮತ್ತು 512GB ವೇರಿಯಂಟ್ ಬೆಲೆ 81,885 ರೂ.ಗೆ ಮಾರಾಟವಾಗುತ್ತಿದೆ.

3,900 ರೂ.ಗೆ ಸಿಲಿಕೋನ್ ಕೇಸ್‌

ಆಪಲ್ ಈ ಹೊಸ ಐಫೋನ್ 16e ಗಾಗಿ ಸಿಲಿಕೋನ್ ಕೇಸ್‌ಗಳನ್ನು ಬಿಡುಗಡೆ ಮಾಡಿದೆ. ನೀವು 3,900 ರೂ.ಗೆ ಇಷ್ಟವಾದ ಕೇಸ್‌ಗಳನ್ನು ಪಡೆಯಬಹುದು. ಇದು ಐದು ಬಣ್ಣಗಳಲ್ಲಿ ಬರುತ್ತದೆ. ವಿಂಟರ್ ಬ್ಲೂ, ಫ್ಯೂಷಿಯಾ, ಲೇಕ್ ಗ್ರೀನ್, ಬ್ಲ್ಯಾಕ್​ ಆ್ಯಂಡ್​ ವೈಟ್ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ಈಗಾಗಲೇ (ಫೆಬ್ರವರಿ 21 ರಿಂದ) ಐಫೋನ್ 16e ಫೋನಿನ ಪ್ರಿ-ಬುಕಿಂಗ್ ಪ್ರಾರಂಭವಾಗಿದೆ. ಇದೇ ಫೆಬ್ರವರಿ 28 ರಿಂದ ಮೊದಲ ಮಾರಾಟ ಶುರುವಾಗಲಿದೆ. ಇದು ಭಾರತ, ಅಮೆರಿಕ, ಯುಕೆ, ಜಪಾನ್, ಯುಎಇ, ಮಲೇಷ್ಯಾ, ಚೀನಾ, ಕೆನಡಾ, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ಒಟ್ಟು 59 ದೇಶಗಳಲ್ಲಿ ಲಭ್ಯವಿರುತ್ತದೆ.

ಐಫೋನ್ 16e ವೈಶಿಷ್ಟ್ಯಗಳು

ಐಫೋನ್ 16e ಮೊಬೈಲ್ 6.1 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಐಫೋನ್‌ನಲ್ಲಿ 48 ಮೆಗಾಪಿಕ್ಸೆಲ್ ಫ್ಯೂಷನ್ ಕ್ಯಾಮೆರಾ ಲಭ್ಯವಿದೆ. ಇದು ಆಪಲ್‌ನ A18 ಪ್ರೊಸೆಸರ್ ಹೊಂದಿದೆ. ಹಾಗೆಯೇ ಸ್ಯಾಟಲೈಟ್ ವೈಶಿಷ್ಟ್ಯಗಳು ಮತ್ತು ಐಫೋನ್ 11 ಫೋನಿಗಿಂತ ಆರು ಗಂಟೆಗಳವರೆಗೆ ದೀರ್ಘ ಬ್ಯಾಟರಿ ಬ್ಯಾಕಪ್ ಒಳಗೊಂಡಿದೆ. ಗ್ರಾಫಿಕ್ಸ್ ಮತ್ತು ಹೆಚ್ಚು ಕಾರ್ಯಗಳನ್ನು ನಿರ್ವಹಿಸಲು 4 ಕೋರ್ ಜಿಪಿಯು ಸಹ ಹೊಂದಿದೆ. ಇದು ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳನ್ನು ಬೆಂಬಲಿಸುವ ಅತ್ಯಂತ ಕೈಗೆಟುಕುವ ಐಫೋನ್ ಆಗಿದೆ.

Best Mobiles in India

English summary
iPhone 16e prices in India, US, UK, China, Dubai, Canada and more compared: Where to buy cheapest?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+