Home
ಮೊಬೈಲ್

ಅತಿ ಸ್ಲಿಮ್ ಮತ್ತು ಅಗ್ಗದ ಹೊಸ ಐಫೋನ್ ಕುರಿತು ಮತ್ತೊಂದು ಮಾಹಿತಿ!

ಕ್ಯುಪರ್ಟಿನೋ ಮೂಲದ ತಂತ್ರಜ್ಞಾನ ದೈತ್ಯ ಆಪಲ್ ತನ್ನ ಬಹುನಿರೀಕ್ಷಿತ "ಅವೇ ಡ್ರಾಪಿಂಗ್" (Away Dropping) ಬಿಡುಗಡೆ ಕಾರ್ಯಕ್ರಮವನ್ನು ಸೆಪ್ಟೆಂಬರ್ 9 ರಂದು ನಡೆಸಲು ಸಜ್ಜಾಗಿದೆ. ಈ ಕಾರ್ಯಕ್ರಮದಲ್ಲಿ ಐಫೋನ್ 17 ಸರಣಿಯನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ. ಈ ಬಾರಿ, ಸಾಂಪ್ರದಾಯಿಕವಾಗಿ ಇರುತ್ತಿದ್ದ ಬೇಸ್, ಪ್ರೊ, ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳ ಜೊತೆಗೆ, ನಾಲ್ಕನೇ ಒಂದು ಹೊಸ ಮಾದರಿಯನ್ನು ಪರಿಚಯಿಸುವ ಸಾಧ್ಯತೆಯಿದೆ. ಇದು, ಈ ಹಿಂದೆ ಇರುತ್ತಿದ್ದ 'ಪ್ಲಸ್' ಮಾದರಿಯ ಬದಲಿಗೆ ಬರಬಹುದು ಎಂದು ವರದಿಯಾಗಿದೆ. ಆದರೆ, ವಿಷಯ ಇಷ್ಟು ಮಾತ್ರವಲ್ಲ.!

ಮಂಗಳವಾರ ಎಕ್ಸ್ (Twitter) ಬಳಕೆದಾರರಾದ @FrigidJW ಹಂಚಿಕೊಂಡಿರುವ ಮಾಹಿತಿಯ ಚಿತ್ರವೊಂದು ಐಫೋನ್ 17 ಏರ್ (iPhone 17 Air) ಆಗಮನದ ಸೂಚನೆಯನ್ನು ನೀಡಿದೆ. ಐಫೋನ್ ಪರಿಕರಗಳನ್ನು ತಯಾರಿಸುವ ಕಂಪೆನಿಯಿಂದ ಸೋರಿಕೆಯಾಗಿದೆ ಎನ್ನಲಾದ ಈ ಮಾಹಿತಿಯ ಚಿತ್ರವು, ಹೊಸ ಐಫೋನ್ ಮಾದರಿಯ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಆದರೆ, ಈ ಸೋರಿಕೆಯು ಅಧಿಕೃತವಾಗಿ ದೃಢಪಟ್ಟಿಲ್ಲ ಮತ್ತು ಈ ಹಿಂದೆ ವಿಶ್ವಾಸಾರ್ಹ ಸೋರಿಕೆಗಳನ್ನು ಪ್ರಕಟಿಸದ ಖಾತೆಯಿಂದ ಇದು ಬಂದಿರುವುದರಿಂದ ಇದರ ನಂಬಿಕಾರ್ಹತೆಯ ಬಗ್ಗೆ ಖಚಿತತೆ ಇಲ್ಲ. ಆದರೆ, ಈ ಸುಳಿವು ಒಂದು ದೊಡ್ಡ ಚರ್ಚೆಗೆ ಕಾರಣವಾಗಿದೆ.

ಅತಿ ಸ್ಲಿಮ್ ಮತ್ತು ಅಗ್ಗದ ಹೊಸ ಐಫೋನ್ ಕುರಿತು ಮತ್ತೊಂದು ಮಾಹಿತಿ!

ಈ ಮೊದಲು, ಐಪೋನ್‌ನ ಈ ಹೊಸ ಮಾದರಿಗೆ 'ಸ್ಲಿಮ್' ಅಥವಾ 'ಏರ್' ಎಂಬ ಹೆಸರು ಇರಬಹುದು ಎಂಬ ಚರ್ಚೆಗಳು ತೀರ್ವವಾಗಿದ್ದವು. ಇತ್ತೀಚಿನ ಸೋರಿಕೆಗಳು ಇದು ಐಫೋನ್ 17 ಏರ್ ಆಗಿರಬಹುದು ಎಂದು ಹೇಳಿದ್ದವು. ಇದೀಗ ಈ ಪಟ್ಟಿಯು ಈ ಸಾಧನದ ಹೆಸರನ್ನು ಐಫೋನ್ 17 ಏರ್ ಎಂದು ನಮೂದಿಸಿದೆ. @FrigidJW ಖಾತೆಯಲ್ಲಿ ಹಂಚಿಕೊಂಡಿರುವ ಈ ಚಿತ್ರವು, ಪರಿಕರಗಳ ಪಟ್ಟಿಯನ್ನು ತೋರಿಸುತ್ತದೆ. ಈ ಪಟ್ಟಿಯನ್ನು ತಯಾರಕರು, ಪೂರೈಕೆದಾರರು ಅಥವಾ ಚಿಲ್ಲರೆ ವ್ಯಾಪಾರಿಗಳು ತಮ್ಮ ದಾಸ್ತಾನು ಮತ್ತು ಆರ್ಡರ್‌ಗಳನ್ನು ನಿರ್ವಹಿಸಲು ಬಳಸುತ್ತಾರೆ ಎಂದು ಅಂದಾಜಿಸಲಾಗಿದೆ.

ಹೇಗಿರಲಿದ iPhone 17 'ಏರ್'?

ಈಗಾಗಲೇ ಹರಿದಾಡುತ್ತಿರುವ ಹಲವಾರು ವರದಿಗಳನ್ನು ನಂಬುವುದಾದರೆ, ಐಫೋನ್ 17 ಏರ್ ಮಾದರಿಯುಕೇವಲ 5.5 ಮಿಮೀ ದಪ್ಪದೊಂದಿಗೆ ಇದುವರೆಗಿನ ಆಪಲ್‌ನ ಅತ್ಯಂತ ತೆಳುವಾದ ಫೋನ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಹೊಸ ಮಾದರಿಯ ಆರಂಭಿಕ ಬೆಲೆ ಸುಮಾರು $949 (ಅಂದಾಜು ₹83,000) ಇರಬಹುದು ಎಂದು ಅಂದಾಜಿಸಲಾಗಿದೆ. ಇದು ಕಪ್ಪು, ತಿಳಿ ನೀಲಿ, ತಿಳಿ ಚಿನ್ನ ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.

ಐಫೋನ್ 17 ಏರ್ ಮಾದರಿಯು ಕೆಲವು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದುವ ಸಾಧ್ಯತೆ ಇದೆ.ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಐಫೋನ್ 17 ಏರ್ 120Hz ರಿಫ್ರೆಶ್ ರೇಟ್ ಹೊಂದಿರುವ 6.6 ಇಂಚಿನ ಪ್ರೊಮೋಷನ್ ಡಿಸ್‌ಪ್ಲೇಯನ್ನು ಹೊಂದುವ ಸಾಧ್ಯತೆ ಇದೆ. ಹಾರ್ಡ್‌ವೇರ್ ವಿಷಯದಲ್ಲಿ, ಇದು ಆಪಲ್‌ನ ಹೊಸ A19 ಪ್ರೊ SoC ಜೊತೆಗೆ 12GB RAM ಅನ್ನು ಒಳಗೊಂಡಿರಬಹುದು.

ಕ್ಯಾಮೆರಾದ ವಿಚಾರದಲ್ಲಿ, ಐಫೋನ್ 17 ಏರ್ ಮಾದರಿಯು ಹಿಂಭಾಗದಲ್ಲಿ 48 ಮೆಗಾಪಿಕ್ಸೆಲ್‌ನ ಒಂದೇ ಫ್ಯೂಷನ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 24 ಮೆಗಾಪಿಕ್ಸೆಲ್ ಸೆನ್ಸರ್ ಅನ್ನು ಹೊಂದುವ ನಿರೀಕ್ಷೆಯಿದೆ. ಆದರೆ, ಇದರ ತೆಳು ವಿನ್ಯಾಸದಿಂದಾಗಿ, ಬ್ಯಾಟರಿ ಸಾಮರ್ಥ್ಯವು 3,000mAh ಗಿಂತ ಕಡಿಮೆ ಇರಬಹುದು ಎಂದು ವರದಿಗಳು ಸೂಚಿಸುತ್ತವೆ. ಆದರೆ, ಆಪಲ್ ಕಂಪೆನಿಯು ಈ ಕುರಿತ ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ಪರಿಚಯಿಸಿಲ್ಲ.

ಆಪಲ್ ತನ್ನ ಹೊಸ ಐಫೋನ್ 17 ಸರಣಿಯನ್ನು ಸೆಪ್ಟೆಂಬರ್ 9 ರಂದು ಬೆಳಗ್ಗೆ 10 ಗಂಟೆಗೆ (ಭಾರತೀಯ ಕಾಲಮಾನ ರಾತ್ರಿ 10:30) ಬಿಡುಗಡೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಎಲ್ಲಾ ವಿವರಗಳು ವದಂತಿಗಳಾಗಿದ್ದು, ಅಧಿಕೃತ ಮಾಹಿತಿಗಾಗಿ ಆಪಲ್‌ನ ಬಿಡುಗಡೆ ಕಾರ್ಯಕ್ರಮಕ್ಕಾಗಿ ಕಾಯಬೇಕಿದೆ. ಐಫೋನ್ 17 ಸರಣಿಯಲ್ಲಿ ಯಾವ ಹೊಸ ಮಾದರಿ ಸೇರಲಿದೆ ಮತ್ತು ಅದರ ವೈಶಿಷ್ಟ್ಯಗಳೇನು ಎಂಬುದನ್ನು ಕಾದು ನೋಡಬೇಕಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Apple’s upcoming iPhone 17 is rumored to arrive as the slimmest iPhone ever, possibly named either Air or Slim. here is What the Leaks Suggest
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+