ಐಫೋನ್ 17, 17 ಏರ್, 17 ಪ್ರೊ, 17 ಪ್ರೊ ಮ್ಯಾಕ್ಸ್: ನಿರೀಕ್ಷಿತ ಫೀಚರ್ಸ್, ಬೆಲೆ!
ಟೆಕ್ ದೈತ್ಯ ಆಪಲ್ ನಾಳೆ ತನ್ನ ಬಹುನಿರೀಕ್ಷಿತ iPhone 17 ಸರಣಿಯನ್ನು ಜಾಗತಿಕವಾಗಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಬಾರಿ iPhone 17, iPhone 17 Air, iPhone 17 Pro, ಮತ್ತು iPhone 17 Pro Max ಎಂಬ ನಾಲ್ಕು ಹೊಸ ಐಫೋನ್‌ಗಳನ್ನು ಅನಾವರಣ ಮಾಡಲಾಗುತ್ತದೆ. ಹಳೆಯ Plus ಮಾದರಿಯ ಬದಲಿಗೆ, ಈ ಬಾರಿ ತೂಕದಲ್ಲಿ ಹಗುರವಾದ ಹಾಗೂ ಸ್ಲಿಮ್ ಆಗಿರುವ ಹೊಸ iPhone 17 Air ಅನ್ನು ಪರಿಚಯಿಸಲಾಗುತ್ತಿದೆ. ಈ ಲೇಖನದಲ್ಲಿ iPhone 17 ಹೊಸ ಸರಣಿಯ ನಿರೀಕ್ಷಿತ ಪ್ರಮುಖ ವೈಶಿಷ್ಟ್ಯಗಳು, ಬೆಲೆ ಮತ್ತು ಇತರೆ ಎಲ್ಲಾ ಪ್ರಮುಖ ಅಂಶಗಳನ್ನು ನೋಡೋಣ ಬನ್ನಿ.
Apple iPhone 17 ಸರಣಿ: ನಿರೀಕ್ಷಿತ ಪ್ರಮುಖ ವೈಶಿಷ್ಟ್ಯಗಳು
ಹೊಸ iPhone 17 ಸರಣಿಯು ಹಲವಾರು ಪ್ರಮುಖ ಅಪ್‌ಗ್ರೇಡ್‌ಗಳೊಂದಿಗೆ ಬರುತ್ತಿದೆ. ಹಲವಾರು ಸೋರಿಕೆಯ ಮಾಹಿತಿಗಳಂತೆ, iPhone 17 ಸರಣಿಯ ಎಲ್ಲಾ ಮಾದರಿಗಳಲ್ಲೂ ಆಪಲ್‌ನ ಹೊಸ ಮತ್ತು ಹೆಚ್ಚು ಶಕ್ತಿಶಾಲಿ A19 ಚಿಪ್ ಅಥವಾ A19 Pro ಚಿಪ್ ಅಳವಡಿಸಲಿದೆ ಎನ್ನಲಾಗಿದೆ. ಇದರೊಂದಿಗೆ 8GB ಯಿಂದ 12GB RAM ಮತ್ತು 1TB ವರೆಗಿನ ಸಂಗ್ರಹಣೆ ಆಯ್ಕೆಗಳು ಲಭ್ಯವಾಗಬಹುದು ಎಂದು ಹೇಳಲಾಗಿದೆ.
ಡಿಸ್‌ಪ್ಲೇ ವಿಭಾಗದಲ್ಲಿ, iPhone 17 ಮಾದರಿಯು 6.3 ಇಂಚಿನ ಡಿಸ್ಪ್ಲೇ ಹೊಂದಿದ್ದರೆ, iPhone 17 Pro Max ಭಾರಿ 6.9 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಎಲ್ಲಾ ಪ್ರೊ ಮಾದರಿಗಳಲ್ಲಿ 120Hz ProMotion ತಂತ್ರಜ್ಞಾನ ಇರುವ ಸಾಧ್ಯತೆ ಇದೆ. ಸ್ಟ್ಯಾಂಡರ್ಡ್ ಐಫೋನ್ ಮಾದರಿಯು ಅಂತಿಮವಾಗಿ 120Hz ಪರದೆಯನ್ನು ಯಾವಾಗಲೂ ಆನ್ ಡಿಸ್ಪ್ಲೇ ವೈಶಿಷ್ಟ್ಯದೊಂದಿಗೆ ಪಡೆಯುವ ಸಾಧ್ಯತೆ ಇದೆ.
ಕ್ಯಾಮೆರಾ ವಿಭಾಗದಲ್ಲಿ, iPhone 17 ಸರಣಿಯ ಎಲ್ಲಾ ಮಾದರಿಗಳು 48MP ಪ್ರೈಮರಿ ಸೆನ್ಸರ್ ಮತ್ತು 24MP ಸೆಲ್ಫಿ ಕ್ಯಾಮೆರಾಹೊಂದಿರಬಹುದು. ಇವುಗಳಲ್ಲಿ ಐಫೋನ್ 17 ಏರ್ OIS ನೊಂದಿಗೆ ಒಂದೇ 48MP ಪ್ರಾಥಮಿಕ ಸಂವೇದಕವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳಲ್ಲಿ 48MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಇರಲಿದ್ದು, ಇದು 8x ಆಪ್ಟಿಕಲ್ ಜೂಮ್ ಸಾಮರ್ಥ್ಯದೊಂದಿಗೆ ಗಮನ ಸೆಳೆಯಬಹುದು. ಇದರ ಜೊತೆಗೆ, ಈ ಎಲ್ಲಾ ಫೋನ್‌ಗಳು 8K ವೀಡಿಯೋ ರೆಕಾರ್ಡಿಂಗ್‌ಗೂ ಸಹ ಬೆಂಬಲ ನೀಡುತ್ತವೆ ಎನ್ನಲಾಗಿದೆ.

Apple iPhone 17 Air: ನಿರೀಕ್ಷಿತ ಪ್ರಮುಖ ವೈಶಿಷ್ಟ್ಯಗಳು
iPhone 17 ಸರಣಿಯಲ್ಲಿ ಎಲ್ಲರ ಗಮನಸೆಳೆದಿರುವುದು ಹೊಸದಾಗಿ ಪರಿಚಯಿಸಲಾಗುತ್ತಿರುವ iPhone 17 Air. ಹೊಸ ಮಾದರಿಯ ಈ ಐಫೋನ್ ಕೇವಲ 5.5mm ದಪ್ಪವಾಗಿದ್ದು, ಈ ಸರಣಿಯಲ್ಲಿನ ಅತ್ಯಂತ ಸ್ಲಿಮ್ ಮಾದರಿಯಾಗಿ ಬರುತ್ತಿದೆ. ಇದು ಮುಂಭಾಗ ಮತ್ತು ಹಿಂಭಾಗದಲ್ಲಿ ಗಾಜಿನ ರಕ್ಷಣೆಯನ್ನು ಮತ್ತು ಟೈಟೇನಿಯಂ ಫ್ರೇಮ್ ಹೊಂದಿರಲಿದೆ ಹಾಗೂ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ ಇದು IP68 ರೇಟಿಂಗ್ ಅನ್ನು ಸಹ ಹೊಂದಿರುತ್ತದೆ ಎನ್ನಲಾಗಿದೆ. ಆಪಲ್ ಬ್ಯಾಟರಿ ಸಾಮರ್ಥ್ಯವನ್ನು ಬಹಿರಂಗಪಡಿಸದಿದ್ದರೂ, ಐಫೋನ್ 17 ರ ಸೆಲ್ 3,600 mAh ಅನ್ನು ಮೀರುವ ನಿರೀಕ್ಷೆಯಿದೆ.
Apple iPhone 17 Air: ನಿರೀಕ್ಷಿತ ಬೆಲೆ
ಬೆಲೆ ವಿಷಯಕ್ಕೆ ಬಮದರೆ, ಐಫೋನ್ 17 ಬೆಲೆ $799 (ಸರಿಸುಮಾರು ರೂ. 70,400) ರಿಂದ ಪ್ರಾರಂಭವಾಗಬಹುದು .iPhone 17 ಸರಣಿಯ ನಿರೀಕ್ಷಿತ ಬೆಲೆಗಳು ₹70,400 ರಿಂದ ₹1,14,500 ವರೆಗೆ ಇರಬಹುದು. ಈ ಬೆಲೆ ಶ್ರೇಣಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ ಸರಣಿ ಮತ್ತು ಫೋಲ್ಡಬಲ್ ಫೋನ್‌ಗಳಿಗೆ ನೇರ ಸ್ಪರ್ಧೆ ನೀಡಲಿದೆ. iPhone 17 ಸರಣಿಯು 120Hz ಡಿಸ್ಪ್ಲೇ, 8K ರೆಕಾರ್ಡಿಂಗ್ ಮತ್ತು ಪೆರಿಸ್ಕೋಪ್ ಕ್ಯಾಮೆರಾದಂತಹ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಹೈ-ಎಂಡ್ ಗ್ರಾಹಕರನ್ನು ಆಕರ್ಷಿಸುವ ಸಾಧ್ಯತೆ ಇದೆ.
ಐಫೋನ್ 17 ಸರಣಿ ಬಿಡುಗಡೆ ಸಮಯ
ಐಫೋನ್ 17 ಸರಣಿಯು ಭಾರತ ಮತ್ತು ಜಾಗತಿಕವಾಗಿ ನಾಳೆ (ಸೆಪ್ಟೆಂಬರ್ 9) ರಾತ್ರಿ 10:30 IST ಕ್ಕೆ ಬಿಡುಗಡೆಯಾಗಲಿದೆ. ಆಪಲ್ ಈವೆಂಟ್ ಅನ್ನು ನೇರಪ್ರಸಾರ ವೀಕ್ಷಿಸಲು ಆಸಕ್ತಿ ಹೊಂದಿರುವವರು ಕಂಪನಿಯ ವೆಬ್‌ಸೈಟ್ ಅಥವಾ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದು. ಐಫೋನ್ 17 ಸರಣಿಯ ಸುತ್ತಲಿನ ಎಲ್ಲಾ ಇತ್ತೀಚಿನ ಅಪ್‌ಡೇಟ್‌ಗಳನ್ನು ನಾವು ನಮ್ಮ ಕನ್ನಡ ಗಿಜ್‌ಬಾಟ್ ವೆಬ್‌ಸೈಟ್ ಮೂಲಕ ಒದಗಿಸುತ್ತೇವೆ. ಅಲ್ಲಿಯವರೆಗೂ ಇತರೆ ಎಲ್ಲಾ ಟೆಕ್ ಸುದ್ದಿಗಳತ್ತ ಅಪ್‌ಡೇಟ್ ಹೊಂದಿರಿ.


Click it and Unblock the Notifications








