iPhone 17 Pro ಸರ್ಪ್ರೈಸ್ ಲೀಕ್: ನೆಕ್ಸ್ಟ್-ಜೆನ್ ಫೀಚರ್ಸ್ ಯಾವುವು ನೋಡಿ!
ಆಪಲ್‌ನ ಬಹುನಿರೀಕ್ಷಿತ 'Awe Dropping' ಈವೆಂಟ್ ಹತ್ತಿರ ಬರುತ್ತಿರುವಂತೆ, ಮುಂದಿನ iPhone 17 ಸರಣಿಯ ಕುರಿತು ಕುತೂಹಲ ಕೆರಳಿಸುವಂತಹ ಹೊಸ ಮಾಹಿತಿಗಳು ಸೋರಿಕೆಯಾಗಿವೆ. ದಕ್ಷಿಣ ಕೊರಿಯಾದಿಂದ ಬಂದಿರುವ ಕೆಲವು ವರದಿಗಳ ಪ್ರಕಾರ, iPhone 17 Pro ಮತ್ತು Pro Max ಮಾದರಿಗಳು ಹೊಸ ತಾಪ ನಿಯಂತ್ರಣ ತಂತ್ರಜ್ಞಾನ ಮತ್ತು ಕ್ಯಾಮೆರಾದಲ್ಲಿ ಗಮನಾರ್ಹ ಸುಧಾರಣೆಗಳನ್ನು ಪಡೆಯಲಿವೆ. ಈ ಬದಲಾವಣೆಗಳು ಬಳಕೆದಾರರ ಅನುಭವವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ.!
ಹೌದು, ಟಿಪ್‌ಸ್ಟರ್ @Jukanlosreve ಅವರ X (ಹಿಂದೆ ಟ್ವಿಟರ್) ನಲ್ಲಿ ಈಗ ಅಳಿಸಲಾದ ಪೋಸ್ಟ್ ಅನ್ನು ಉಲ್ಲೇಖಿಸಿ, 9to5Mac ಐಫೋನ್ 17 ಪ್ರೊ ಮಾದರಿಗಳು ಸುಧಾರಿತ ಟೆಲಿಫೋಟೋ ಕ್ಯಾಮೆರಾಗಳನ್ನು ಒಳಗೊಂಡಿರುತ್ತವೆ ಎಂದು ವರದಿ ಮಾಡಿದೆ. iPhone 17 Pro ಮಾದರಿಗಳು 8x ಆಪ್ಟಿಕಲ್ ಜೂಮ್ ಸಾಮರ್ಥ್ಯದ ಹೊಸ ಟೆಲಿಫೋಟೋ ಕ್ಯಾಮೆರಾ ಲೆನ್ಸ್‌ಅನ್ನು ಹೊಂದಲಿವೆ ಎಂದು ವರದಿಯು ಹೇಳಿದೆ. ವೃತ್ತಿಪರ ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಫರ್‌ಗಳಿಗೆ ಇದು ಒಂದು ಪ್ರಮುಖ ಅಪ್‌ಗ್ರೇಡ್ ಆಗಲಿದೆ.
ಪ್ರಸ್ತುತ iPhone 16 Pro ಸರಣಿಯಲ್ಲಿರುವ 48MP ಲೆನ್ಸ್‌ಗಳು 5x ಆಪ್ಟಿಕಲ್ ಜೂಮ್ ಮಾತ್ರ ನೀಡುತ್ತವೆ. ಆದರೆ, ಈ ಹೊಸ 8x ಜೂಮ್ ಸಾಮರ್ಥ್ಯವು ಫೋಟೋಗ್ರಫಿ ಮತ್ತು ವೀಡಿಯೋ ಚಿತ್ರೀಕರಣದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಲಿದೆ. ದೂರದ ದೃಶ್ಯಗಳನ್ನು ಉತ್ತಮ ಸ್ಪಷ್ಟತೆ ಮತ್ತು ಗುಣಮಟ್ಟದಲ್ಲಿ ಸೆರೆಹಿಡಿಯಲು ಇದು ಸಹಕಾರಿ. ಇನ್ನು ಕ್ಯಾಮೆರಾ ಸುಧಾರಣೆಯ ಜೊತೆಗೆ, ಈ ಹೊಸ ಸರಣಿಯಲ್ಲಿ ವೇಪರ್ ಚೇಂಬರ್ ಕೂಲಿಂಗ್ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ ಎಂದು ಹೇಳಲಾಗಿದೆ.

iPhone 16 Pro ಸರಣಿಯಲ್ಲಿ ಆಪಲ್ ಈಗಾಗಲೇ ಗ್ರಾಫೀನ್ ಆಧಾರಿತ ಕೂಲಿಂಗ್ ವ್ಯವಸ್ಥೆಯನ್ನು ಅಳವಡಿಸಿತ್ತು. ಆದರೆ, iPhone 17 Pro ಯಲ್ಲಿ ಈ ತಂತ್ರಜ್ಞಾನವನ್ನು ಇನ್ನಷ್ಟು ಸುಧಾರಿಸುವ ಸಾಧ್ಯತೆ ಇದೆ. ಹೊಸ ಅಲ್ಯೂಮಿನಿಯಂ ಫ್ರೇಮ್ ಮತ್ತು A19 Pro ಚಿಪ್‌ಸೆಟ್‌ನೊಂದಿಗೆ ಸೇರಿ, ಈ ವೇಪರ್ ಚೇಂಬರ್ ತಂತ್ರಜ್ಞಾನವು ಫೋನ್ ಹೆಚ್ಚು ಸಮಯದವರೆಗೆ ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ.
ಈ ತಂತ್ರಜ್ಞಾನವನ್ನು ಸಾಮಾನ್ಯವಾಗಿ ಹೈ-ಎಂಡ್ ಗೇಮಿಂಗ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಬಳಸಲಾಗುತ್ತದೆ. ಇದು CPU ಮತ್ತು GPU ಗಳಿಂದ ಉತ್ಪತ್ತಿಯಾಗುವ ಅಧಿಕ ತಾಪವನ್ನು ಸಮರ್ಥವಾಗಿ ಹೊರಹಾಕಲು ಸಹಾಯ ಮಾಡುತ್ತದೆ. ಇದು ಗೇಮಿಂಗ್, 8K ವಿಡಿಯೋ ರೆಕಾರ್ಡಿಂಗ್ ಮತ್ತು ದೀರ್ಘಕಾಲದ ProRes ಶೂಟಿಂಗ್ ಮಾಡುವಾಗ ಫೋನ್ ಬಿಸಿಯಾಗುವ ಸಮಸ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.
ಈ ತಾಂತ್ರಿಕ ಸುಧಾರಣೆಗಳು ಮಾರುಕಟ್ಟೆಯ ಮೇಲೂ ದೊಡ್ಡ ಪರಿಣಾಮ ಬೀರಲಿವೆ. iPhone 17 Pro ಮಾದರಿಗಳು ಗೇಮರುಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳನ್ನು ಹೆಚ್ಚು ಆಕರ್ಷಿಸುವ ಸಾಧ್ಯತೆ ಇದೆ. ಇದರಿಂದಾಗಿ, ಸ್ಯಾಮ್‌ಸಂಗ್, ಗೂಗಲ್ ಮತ್ತು ಒಪ್ಪೊದಂತಹ ಪ್ರತಿಸ್ಪರ್ಧಿ ಕಂಪನಿಗಳ ಮೇಲೆ ಒತ್ತಡ ಹೆಚ್ಚಾಗಬಹುದು. ಈ ಕಂಪನಿಗಳು ತಮ್ಮ ಮುಂದಿನ ಫ್ಲಾಗ್‌ಶಿಪ್ ಮಾದರಿಗಳಲ್ಲಿ ಉತ್ತಮ ತಾಪ ನಿಯಂತ್ರಣ ಮತ್ತು ಕ್ಯಾಮೆರಾ ಸಾಮರ್ಥ್ಯಗಳನ್ನು ಒದಗಿಸುವುದು ಅನಿವಾರ್ಯವಾಗಬಹುದು.
iPhone 17 Pro ಮತ್ತು Pro Max ಮಾದರಿಗಳು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 'ಕೂಲಿಂಗ್ ಮತ್ತು ಕ್ಯಾಮೆರಾ ಪರ್ಫಾರ್ಮೆನ್ಸ್' ಪ್ರಮುಖ ಮಾರಾಟ ಅಂಶಗಳಾಗುವಂತೆ ಮಾಡಬಹುದು. ಈ ಹೊಸ ವೈಶಿಷ್ಟ್ಯಗಳು ಐಫೋನ್ ಬೆಲೆಯನ್ನು ಹೆಚ್ಚಿಸಬಹುದು. ಆದಾಗ್ಯೂ, ಉತ್ತಮ ಪರ್ಫಾರ್ಮೆನ್ಸ್ ಮತ್ತು ದೀರ್ಘಾವಧಿಯ ಬಳಕೆಯ ಭರವಸೆ ನೀಡುವ ಈ ಮಾದರಿಗಳು ಹೈ-ಎಂಡ್ ಫೋನ್ ಬಯಸುವ ಗ್ರಾಹಕರಿಗೆ ಒಂದು ಆಕರ್ಷಕ ಆಯ್ಕೆಯಾಗಲಿದೆ.
ಈ ಹೊಸ ಫೀಚರ್‌ಗಳು ನಿಜವಾಗಿಯೂ ಕಾರ್ಯರೂಪಕ್ಕೆ ಬಂದಲ್ಲಿ, ಆಪಲ್ ಮತ್ತೊಮ್ಮೆ ಸ್ಮಾರ್ಟ್‌ಫೋನ್ ವಿನ್ಯಾಸ ಮತ್ತು ತಂತ್ರಜ್ಞಾನದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವುದು ಖಚಿತ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು?. ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








