iPhone 17 ಸರಣಿ: ಈ ಒಂದು ಬಣ್ಣದ ಐಫೋನ್ ಆಗಲೇ ಸೋಲ್ಡ್ ಔಟ್!
ಟೆಕ್ ದೈತ್ಯ ಆಪಲ್ ಈ ತಿಂಗಳ ಆರಂಭದಲ್ಲಿ iPhone 17, iPhone 17 pro, iPhone Sir ಮತ್ತು 17 pro max ಸೇರಿದಂತೆ iPhone 17 ಸರಣಿಯನ್ನು ಬಿಡುಗಡೆ ಮಾಡಿದೆ. ಈ ಎಲ್ಲಾ ಐಫೋನ್‌ಗಳು ಇದೇ ಸೆಪ್ಟೆಂಬರ್ 19 ರಿಂದ ಮಾರಾಟಕ್ಕೆ ಬರುತ್ತಿದ್ದು, ಈಗಾಗಲೇ ಪ್ರೀ-ಆರ್ಡರ್ ಮಾಡಲು ಲಭ್ಯವಾಗಿವೆ. ಆದರೆ, ಇತ್ತೀಚಿನ ಸುದ್ದಿ ಏನೆಂದರೆ, ಈ ಸರಣಿಯಲ್ಲಿನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ iPhone 17 Pro Max ನ ವಿಶೇಷ ಬಣ್ಣ Cosmic Orange ಭಾರತದಲ್ಲಿಯೇ ಅಲ್ಲ, ಜಗತ್ತಿನ ಅನೇಕ ಮಾರುಕಟ್ಟೆಗಳಲ್ಲಿ ಕೂಡ ಸ್ಟಾಕ್ ಖಾಲಿಯಾಗಿರುವ ವರದಿಗಳು ಹೊರಬಿದ್ದಿವೆ.!
ಹೌದು, ಪ್ರಮುಖ ಮಾಧ್ಯಮವೊಂದರ ವರದಿಯ ಪ್ರಕಾರ ಕೇವಲ ಮೂರು ದಿನಗಳಲ್ಲಿ Cosmic Orange ಬ್ಣದ iPhone 17 Pro Max ಸಾಧನವು ಸಂಪೂರ್ಣ ಮಾರಾಟವಾಗಿದೆ. ಕಾಸ್ಮಿಕ್ ಆರೆಂಜ್ ಬಣ್ಣದ iPhone 17 Pro Max ಸಾಧನವು ಮಾರುಕಟ್ಟೆತಯಲ್ಲಿ ಬಲವಾದ ಬೇಡಿಕೆಯನ್ನು ಗಳಿಸಿದೆ, ಕಂಪನಿಯು ಹ್ಯಾಂಡ್‌ಸೆಟ್‌ಗಳಿಗಾಗಿ ಮುಂಗಡ-ಆದೇಶಗಳನ್ನು ಸ್ವೀಕರಿಸಲು ಪ್ರಾರಂಭಿಸಿದ ಮೂರು ದಿನಗಳ ನಂತರ, ಯುಎಸ್ ಮತ್ತು ಭಾರತದಲ್ಲಿ ಅಂಗಡಿಯಲ್ಲಿ ಪಿಕಪ್‌ಗಾಗಿ ಬುಕಿಂಗ್ ಮುಗಿದಿದೆ. ಇದು ನಡೆಯುತ್ತಿರುವ ಸ್ಟಾಕ್ ಕೊರತೆಯಿಂದಾಗಿ ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿಯು ತಿಳಿಸಿದೆ.
ಏಕೆ ಈ ಬಣ್ಣ ಹಿಟ್ ಆಯ್ತು?
ವಿಶೇಷ ಆಕರ್ಷಕ ವಿನ್ಯಾಸ - Cosmic Orange ಬಣ್ಣದಲ್ಲಿ ಮೆಟಾಲಿಕ್ ಫಿನಿಷ್ ಜೊತೆಗೆ ಪ್ರೀಮಿಯಂ ಲುಕ್ ನೀಡಲಾಗಿದೆ.
ಲಿಮಿಟೆಡ್ ಎಡಿಷನ್ ಅನುಭವ - ಆಪಲ್ ಈ ಬಣ್ಣವನ್ನು ಸೀಮಿತ ಪ್ರಮಾಣದಲ್ಲಿ ಬಿಡುಗಡೆ ಮಾಡಿದೆ.
ಯುವ ಜನರಲ್ಲಿ ಬೇಡಿಕೆ - ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆದ ಕಾರಣ ಬೇಡಿಕೆ ಹೆಚ್ಚಾಗಿದೆ.
ಪ್ರೀಮಿಯಂ ಬ್ರಾಂಡ್ ಫ್ಯಾಕ್ಟರ್ - iPhone ಎಂದರೆ ಪ್ರತಿಷ್ಠೆಯ ಸಂಕೇತ, ವಿಶೇಷ ಬಣ್ಣಗಳಲ್ಲಿ ಇದಕ್ಕೆ ಹೆಚ್ಚು ಕ್ರೇಜ್ ಬಂದಿರಬಹುದು.

ಆಪಲ್‌ನ ಆನ್‌ಲೈನ್ ಸ್ಟೋರ್ ಹಾಗೂ Flipkart, Amazon ಮುಂತಾದ ಇ-ಕಾಮರ್ಸ್ ವೇದಿಕೆಗಳಲ್ಲಿ Cosmic Orange ಮಾದರಿಯ ಎಲ್ಲಾ ವೇರಿಯಂಟ್‌ಗಳು "Out of Stock" ಎಂದು ತೋರಿಸುತ್ತಿವೆ. ಕೆಲವು ಆಫ್‌ಲೈನ್ ಆಪಲ್ ಸ್ಟೋರ್‌ಗಳಲ್ಲೂ ಮುಂಗಡ ಬುಕ್ಕಿಂಗ್‌ಗಳು ಮುಕ್ತಾಯಗೊಂಡಿವೆ. ಜಾಗತಿಕವಾಗಿಯೂ ಪರಿಸ್ಥಿತಿ ಭಿನ್ನವಾಗಿಲ್ಲ ಎಂದು ಹೇಳಲಾಗಿದೆ. ಅಮೆರಿಕಾ, ಯೂರೋಪ್, ಜಪಾನ್ ಮುಂತಾದ ಪ್ರಮುಖ ಮಾರುಕಟ್ಟೆಗಳಲ್ಲಿ ಸಹ ಇದೇ ಸ್ಥಿತಿ. ಆರ್ಡರ್ ಮಾಡಿದ ಗ್ರಾಹಕರು ಹೆಚ್ಚುವರಿ ವಿತರಣಾ ಸಮಯಕ್ಕಾಗಿ ಕಾಯಬೇಕಾಗಿದೆ.
ಈ ಪರಿ ಬೇಡಿಕೆಯನ್ನು ಗಮನಿಸಿದರೆ, ಆಪಲ್ ಶೀಘ್ರದಲ್ಲೇ Cosmic Orange ಬಣ್ಣದ ಹೆಚ್ಚಿನ iPhone 17 Pro Max ಯೂನಿಟ್‌ಗಳನ್ನು ಮಾರುಕಟ್ಟೆಗೆ ತರಬಹುದೆಂದು ನಿರೀಕ್ಷಿಸಲಾಗುತ್ತಿದೆ. ಆದರೆ ಈಗಾಗಲೇ ಈ ಬಣ್ಣದ ಬೇಡಿಕೆ ಅಚ್ಚರಿಯ ಮಟ್ಟಿಗೆ ಏರಿರುವುದರಿಂದ, ಹೊಸ ಸ್ಟಾಕ್ ಕೂಡ ತಕ್ಷಣವೇ ಖಾಲಿಯಾಗುವ ಸಾಧ್ಯತೆ ಇದೆ.!
iPhone 17 Pro Max ಪ್ರಮುಖ ವೈಶಿಷ್ಟ್ಯಗಳು
6.9-ಇಂಚಿನ ಸೂಪರ್ ರೆಟಿನಾ XDR ಪ್ರದರ್ಶನ ಡಿಸ್‌ಪ್ಲೇ
ಸೆರಾಮಿಕ್ ಶೀಲ್ಡ್ 2: ಸಾಧನದ ಮುಂಭಾಗ ಮತ್ತು ಹಿಂಭಾಗ ಎರಡೂ ಸೆರಾಮಿಕ್ ಶೀಲ್ಡ್ 2 ನಿಂದ ರಕ್ಷಿಸಲ್ಪಟ್ಟಿವೆ.
A19 ಪ್ರೊ Bionic ಚಿಪ್ -ಈ ಚಿಪ್ A18 ಪ್ರೊಗಿಂತ 40% ವರೆಗೆ ಉತ್ತಮ ನಿರಂತರ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ
ಟ್ರಿಪಲ್ 48MP ಹಿಂಭಾಗದ ಕ್ಯಾಮೆರಾಗಳು: ಎಲ್ಲಾ ಮೂರು ಕ್ಯಾಮೆರಾಗಳು 48MP ಫ್ಯೂಷನ್ ಸಂವೇದಕಗಳು (ಮುಖ್ಯ, ಅಲ್ಟ್ರಾ ವೈಡ್ ಮತ್ತು ಟೆಲಿಫೋಟೋ )
18MP ಸೆಂಟರ್ ಸ್ಟೇಜ್ ಫ್ರಂಟ್ ಕ್ಯಾಮೆರಾ
ಹೊಸ ವೇಪರ್ ಚೇಂಬರ್ ಕೂಲಿಂಗ್ ಸಿಸ್ಟಮ್
ಹೊಸ 40W ಡೈನಾಮಿಕ್ ಪವರ್ ಅಡಾಪ್ಟರ್
ಬೆಲೆ: 256GB: ₹1,49,900, 512GB: ₹1,69,900, 1TB: ₹1,89,900, 2TB: ₹2,29,900


Click it and Unblock the Notifications








