Home
ಮೊಬೈಲ್

ಅಮೆಜಾನ್‌ನಲ್ಲಿ iPhone 17 Pro ಸರಣಿ ಆಫರ್ ಬೆಲೆಗಳು ಲೈವ್: ಖರೀದಿಗೆ ಸೂಕ್ತ ಸಮಯ!

ಇ-ಕಾಮರ್ಸ್ ದೈತ್ಯ ಅಮೆಜಾನ್ ಭಾರತದಲ್ಲಿ ಜನವರಿ 16ರಿಂದ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026 ಅನ್ನು ಆರಂಭಿಸುತ್ತಿರುವ ಸುದ್ದಿಯನ್ನು ನೀವು ಈಗಾಗಲೇ ತಿಳಿದಿರಬಹುದು. ಸಂಕ್ರಾಂತಿ ಹಬ್ಬ ಮತ್ತು ಗಣರಾಜ್ಯೋತ್ಸವ ಸಂಭ್ರಮದಲ್ಲಿ ದೇಶಾದ್ಯಂತ ಆನ್‌ಲೈನ್ ಶಾಪಿಂಗ್ ಉತ್ಸಾಹ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ, ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026 ನಲ್ಲಿ ಆಪಲ್ ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸಲು ಸೂಕ್ತ ಸಮಯ ಎನ್ನಬಹುದು. ಏಕೆಂದರೆ, ಈ ಸೇಲ್‌ನಲ್ಲಿ Phone 17 Pro ಸರಣಿ ಮತ್ತು iPhone Air ಫೋನ್‌ಗಳು ರಿಯಾಯಿತಿಗಳು ಲಭ್ಯವಾಗಲಿವೆ.!

ಹೌದು, ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026 ನಲ್ಲಿ ಆಪಲ್ iPhone 17 Pro ಸರಣಿ ಮತ್ತು iPhone Air ಮೇಲೆ ನೇರ ಬೆಲೆ ಕಡಿತವಾಗಿದೆ. ಅಮೆಜಾನ್‌ನ ಅಧಿಕೃತ ಸೇಲ್ ಪೇಜ್‌ನಲ್ಲಿ iPhone 17 Pro ಸರಣಿ ಮತ್ತು iPhone Air ಫೋನ್‌ಗಳ ಆಫರ್ ಬೆಲೆಗಳು ಲೈವ್ ಆಗಿದ್ದು, ಸಾಮಾನ್ಯ ದಿನಗಳಿಗಿಂತ ಕಡಿಮೆ ದರದಲ್ಲಿ ಖರೀದಿಸಲು ಅವಕಾಶ ನೀಡಲಾಗಿದೆ. ಜೊತೆಗೆ SBI ಕ್ರೆಡಿಟ್ ಕಾರ್ಡ್ ಮತ್ತು EMI ವ್ಯವಹಾರಗಳ ಮೇಲೆ 10 ಶೇಕಡಾ ತಕ್ಷಣದ ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್ ಹಾಗೂ ಕ್ಯಾಶ್‌ಬ್ಯಾಕ್ ಆಫರ್‌ಗಳು ಗ್ರಾಹಕರಿಗೆ ಹೆಚ್ಚುವರಿ ಉಳಿತಾಯವನ್ನು ತರುತ್ತವೆ.

ಬೆಲೆ ವಿವರಗಳತ್ತ ನೋಡಿದರೆ, iPhone 17 Pro Max ಅನ್ನು 1,40,400 ರೂ. ಕ್ಕೆ ಖರೀದಿಸಬಹುದು. ಇದು ಅದರ ಸಾಮಾನ್ಯ ಮಾರುಕಟ್ಟೆ ಬೆಲೆಯಿಗಿಂತ (1,49,900 ರೂ.) ಗಮನಾರ್ಹವಾಗಿ ಕಡಿಮೆ. ಅದೇ ರೀತಿ, iPhone 17 Pro ಸಾಮಾನ್ಯ 1,34,900 ರೂ. ಬದಲಿಗೆ 1,25,400 ರೂ.ಕ್ಕೆ ಲಭ್ಯವಾಗಲಿದ್ದು, ಪ್ರೀಮಿಯಂ ಫೀಚರ್‌ಗಳನ್ನು ಬಯಸುವವರಿಗೆ ಇದು ಉತ್ತಮ ಡೀಲ್ ಆಗಿದೆ. ಹಗುರ ವಿನ್ಯಾಸ ಮತ್ತು ಸ್ಟೈಲಿಶ್ ಲುಕ್‌ಗಾಗಿ ಪರಿಚಿತವಾದ iPhone Air ಅನ್ನು ರೂ. 91,249ಕ್ಕೆ(99,000 ರೂ.ಬೆಲೆ) ಪಡೆಯಬಹುದು, ಇದು ಈ ವಿಭಾಗದ ಬಳಕೆದಾರರಿಗೆ ಆಕರ್ಷಕ ಆಯ್ಕೆಯಾಗಿದೆ.

ಅಮೆಜಾನ್‌ನಲ್ಲಿ iPhone 17 Pro ಸರಣಿ ಆಫರ್ ಬೆಲೆಗಳು ಲೈವ್: ಖರೀದಿಗೆ ಸೂಕ್ತ ಸಮಯ!

ಕಾರ್ಯಕ್ಷಮತೆಯ ವಿಷಯದಲ್ಲಿ, iPhone 17 Pro, iPhone 17 Pro Max ಮತ್ತು iPhone Air ಈ ಮೂರು ಐಫೋನ್‌ಗಳಲ್ಲೂ ಆಪಲ್‌ನ ಹೊಸ A19 Pro ಚಿಪ್‌ಸೆಟ್ ಬಳಕೆಯಾಗಿದೆ. ವೇಗ, ದಕ್ಷತೆ ಮತ್ತು ಬ್ಯಾಟರಿ ಆಪ್ಟಿಮೈಸೇಶನ್‌ನಲ್ಲಿ ಇದು ಉತ್ತಮ ಅನುಭವ ನೀಡುತ್ತದೆ. ಆದರೆ, iPhone Air ನಲ್ಲಿ ಸ್ಲಿಮ್ ಮತ್ತು ಲೈಟ್ ವಿನ್ಯಾಸ ಕಾಯ್ದುಕೊಳ್ಳಲು ಸ್ವಲ್ಪ ಕಡಿಮೆ ಪವರ್ ಆವೃತ್ತಿಯ ಚಿಪ್ ಬಳಸಲಾಗಿದ್ದು, ದೈನಂದಿನ ಬಳಕೆಗೆ ಇದು ಸಮತೋಲನದ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ.

ಕ್ಯಾಮೆರಾ ವಿಭಾಗದಲ್ಲೂ ಆಪಲ್ ತನ್ನ ಗುಣಮಟ್ಟವನ್ನು ಮುಂದುವರಿಸಿದೆ. iPhone 17 Pro ಸರಣಿಯಲ್ಲಿ ಟ್ರಿಪಲ್ 48 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ನೀಡಲಾಗಿದ್ದು, ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ ಪ್ರಿಯರಿಗೆ ಇದು ದೊಡ್ಡ ಪ್ಲಸ್. ಇನ್ನು iPhone Air ನಲ್ಲಿ ಒಂದೇ 48 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ ಇದ್ದರೂ, ಆಪಲ್‌ನ ಇಮೇಜ್ ಪ್ರೊಸೆಸಿಂಗ್‌ನಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಮೂರು ಫೋನ್‌ಗಳಲ್ಲೂ 18 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಮತ್ತು Centre Stage ಬೆಂಬಲವಿದೆ.

Amazon Great Republic Day Sale 2026 ಪ್ರೀಮಿಯಂ ಐಫೋನ್ ಖರೀದಿಸಲು ಯೋಜನೆ ಹಾಕಿಕೊಂಡಿರುವ ಭಾರತೀಯ ಗ್ರಾಹಕರಿಗೆ ದೊಡ್ಡ ಅವಕಾಶವಾಗಿದೆ. ಕಡಿಮೆ ಬೆಲೆ, ಬ್ಯಾಂಕ್ ಆಫರ್‌ಗಳು ಮತ್ತು ಎಕ್ಸ್‌ಚೇಂಜ್ ಪ್ರಯೋಜನಗಳು ಸೇರಿ, ಈ ಸೇಲ್ ಅನ್ನು ವರ್ಷದ ಪ್ರಮುಖ ಶಾಪಿಂಗ್ ಈವೆಂಟ್‌ಗಳಲ್ಲೊಂದು ಎಂದು ಹೇಳಬಹುದು. ಇನ್ನು ಈ ಸೇಲ್ ಅವಧಿಯನ್ನು ಕಂಪನಿ ಘೋಷಿಸಿಲ್ಲದಿದ್ದರೂ, ಪ್ರಮುಖ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳು ಲಭ್ಯವಾಗಲಿವೆ ಎಂಬುದು ಸ್ಪಷ್ಟವಾಗಿದೆ.

Best Mobiles in India

English summary
Amazon’s Great Republic Day Sale 2026, starting January 16, brings attractive discounts on Apple’s premium iPhone 17 Pro series and iPhone Air, along with bank offers, exchange bonuses, and instant cashback for additional savings.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+