₹90 ಸಾವಿರದ ಬಜೆಟ್‌ನಲ್ಲಿ ಐಫೋನ್ 17 ಪ್ರೊ vs ಸ್ಯಾಮ್‌ಸಂಗ್ S25 ಆಲ್ಟ್ರಾ: ಯಾವುದು ನಿಮ್ಮ ಆಯ್ಕೆ?
ಸೆಪ್ಟೆಂಬರ್ 1 ರ ಮಧ್ಯಾಹ್ನ 12:00 ರಿಂದ 15:00 ರ ಅವಧಿಯಲ್ಲಿ ಲಭ್ಯವಿದ್ದ ಆಫರ್‌ಗಳ ಪ್ರಕಾರ, ಫ್ಲಿಪ್‌ಕಾರ್ಟ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಆಲ್ಟ್ರಾ (12/256GB) ಬೆಲೆ ₹94,975 ನಲ್ಲಿದೆ. ಬ್ಯಾಂಕ್ ಡಿಸ್ಕೌಂಟ್ ಬಳಸಿದರೆ ಇದು ಬರಿ ₹90,975 ಕ್ಕೆ ಸಿಗುತ್ತದೆ. ಇತ್ತ ಐಫೋನ್ 17 ಪ್ರೊ (256GB) ಫ್ಲಿಪ್‌ಕಾರ್ಟ್‌ನಲ್ಲಿ ಸುಮಾರು ₹1,29,900 ಕ್ಕೆ ಲಿಸ್ಟ್ ಆಗಿದ್ದು, ಎಕ್ಸ್‌ಚೇಂಜ್ ಮತ್ತು ಕಾರ್ಡ್ ಆಫರ್‌ಗಳ ಜೊತೆ ₹90,900 ರಿಂದ ₹93,900 ರ ಆಸುಪಾಸಿನಲ್ಲಿ ಸಿಗುತ್ತಿದೆ. ಆಪಲ್‌ನ ಅಧಿಕೃತ ಆರಂಭಿಕ ಬೆಲೆ ಮಾತ್ರ ಇನ್ನೂ ₹1,34,900 ರಷ್ಟೇ ಇದೆ.
ಈ ಎರಡೂ ಫ್ಲ್ಯಾಗ್‌ಶಿಪ್ ಫೋನ್‌ಗಳು ಡಿಸ್ಕೌಂಟ್ ಬೆಲೆಯಲ್ಲಿ ಭಾರಿ ಸದ್ದು ಮಾಡುತ್ತಿರುವುದರಿಂದ, ಗ್ರಾಹಕರು ಈಗ ಕ್ಯಾಮೆರಾ ರೇಂಜ್, ವಿಡಿಯೋ ಸ್ಟೆಬಿಲಿಟಿ, ಬ್ಯಾಟರಿ ಚಾರ್ಜಿಂಗ್ ಸ್ಪೀಡ್, ಗೇಮಿಂಗ್ ಕೂಲಿಂಗ್, ಆನ್-ಡಿವೈಸ್ AI ಫೀಚರ್‌ಗಳು ಹಾಗೂ ಭಾರತದಲ್ಲಿ ಇವುಗಳ ನಿರ್ವಹಣಾ ವೆಚ್ಚವನ್ನು ಹೋಲಿಸಿ ನೋಡುತ್ತಿದ್ದಾರೆ. ಇಂದಿನ ಕಾರ್ಟ್ ಬೆಲೆಗಳು, ಅಧಿಕೃತ ಸ್ಪೆಸಿಫಿಕೇಶನ್‌ಗಳು ಮತ್ತು ಲ್ಯಾಬ್ ಟೆಸ್ಟ್ ವರದಿಗಳನ್ನು ಆಧರಿಸಿ ಈ ಬೆಲೆಯಲ್ಲಿ ಯಾವುದು ಉತ್ತಮ ಆಯ್ಕೆ ಎಂಬುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಐಫೋನ್ 17 ಪ್ರೊ vs ಗ್ಯಾಲಕ್ಸಿ S25 ಆಲ್ಟ್ರಾ: ಭಾರತದಲ್ಲಿ ಬೆಲೆ ಎಷ್ಟಿದೆ?
ಫ್ಲಿಪ್‌ಕಾರ್ಟ್ ನೀಡುತ್ತಿರುವ ಬೆಲೆ ಕಡಿತ ಮತ್ತು ಬ್ಯಾಂಕ್ ಆಫರ್‌ಗಳಿಂದಾಗಿ ಗ್ಯಾಲಕ್ಸಿ S25 ಆಲ್ಟ್ರಾ ಸದ್ಯ ಸ್ಪಷ್ಟವಾಗಿ ಕಮ್ಮಿ ಬೆಲೆಗೆ ಸಿಗುತ್ತಿದೆ. ಆದರೆ ಐಫೋನ್ 17 ಪ್ರೊ ಪರಿಣಾಮಕಾರಿ ಬೆಲೆ ಕಡಿಮೆಯಾಗಬೇಕಾದರೆ ನಿಮ್ಮ ಹಳೆಯ ಫೋನ್‌ಗೆ ಸಿಗುವ ಉತ್ತಮ ಎಕ್ಸ್‌ಚೇಂಜ್ ಮೌಲ್ಯ ಮತ್ತು ಬ್ಯಾಂಕ್ ಆಫರ್‌ಗಳನ್ನೇ ಹೆಚ್ಚಾಗಿ ನೆಚ್ಚಿಕೊಳ್ಳಬೇಕಾಗುತ್ತದೆ. ಇದಲ್ಲದೆ ಆಪಲ್ ಟ್ರೇಡ್ ಇನ್ ಮತ್ತು ಸ್ಯಾಮ್‌ಸಂಗ್ ಬೋನಸ್ ಎಕ್ಸ್‌ಚೇಂಜ್ ಆಫರ್‌ಗಳು ಫೋನ್ ಅಪ್‌ಗ್ರೇಡ್ ಮಾಡಲು ಮತ್ತಷ್ಟು ನೆರವಾಗಲಿವೆ.
| ಮಾಡೆಲ್ | ಇಂದಿನ ಪರಿಣಾಮಕಾರಿ ಬೆಲೆ | 30 ನಿಮಿಷದ ಚಾರ್ಜಿಂಗ್ |
|---|---|---|
| ಗ್ಯಾಲಕ್ಸಿ S25 ಆಲ್ಟ್ರಾ 12/256 | ₹90,975 (ಫ್ಲಿಪ್‌ಕಾರ್ಟ್ ಬ್ಯಾಂಕ್ ಆಫರ್) | 45W ಅಡಾಪ್ಟರ್‌ನೊಂದಿಗೆ ಸುಮಾರು 65% |
| ಐಫೋನ್ 17 ಪ್ರೊ 256 | ₹90,900–₹93,900 (ಎಕ್ಸ್‌ಚೇಂಜ್ + ಕಾರ್ಡ್) | 35W ಚಾರ್ಜರ್‌ನೊಂದಿಗೆ ಸುಮಾರು 72% |
ಐಫೋನ್ 17 ಪ್ರೊ vs ಗ್ಯಾಲಕ್ಸಿ S25 ಆಲ್ಟ್ರಾ: ಕ್ಯಾಮೆರಾ ಮತ್ತು ವಿಡಿಯೋ ಶಕ್ತಿ
ಐಫೋನ್ 17 ಪ್ರೊ ಮಾಡೆಲ್ ಐಫೋನ್ ಇತಿಹಾಸದಲ್ಲೇ ಅತ್ಯಂತ ದೀರ್ಘವಾದ 8x ಅಪ್ಟಿಕಲ್-ಕ್ವಾಲಿಟಿ ಜೂಮ್ ಹಾಗೂ 4K/120 ಡೆಫಿನಿಷನ್‌ನ ಡಾಲ್ಬಿ ವಿಷನ್ ವಿಡಿಯೋ ಸಪೋರ್ಟ್‌ನೊಂದಿಗೆ ಬಂದಿದೆ. ಇದಕ್ಕೆ ಪ್ರತಿಯಾಗಿ ಗ್ಯಾಲಕ್ಸಿ S25 ಆಲ್ಟ್ರಾ 200MP ಮೇನ್ ಸೆನ್ಸರ್, 5x ಮತ್ತು 3x ಡ್ಯುಯಲ್ ಟೆಲಿಫೋಟೋ ಲೆನ್ಸ್, ಹೊಸ 50MP ಅಲ್ಟ್ರಾವೈಡ್ ಲೆನ್ಸ್ ಹಾಗೂ 4K/120 ಶೂಟಿಂಗ್ ಫೀಚರ್ ಹೊಂದಿದೆ. ಕಡಿಮೆ ಬೆಳಕಿನಲ್ಲೂ ಅತ್ಯುತ್ತಮ ಫೋಟೊ ಬರುವಂತೆ ನಾಯ್ಸ್ ರಿಡಕ್ಷನ್ ತಂತ್ರಜ್ಞಾನವನ್ನು ಸ್ಯಾಮ್‌ಸಂಗ್ ಸುಧಾರಿಸಿದೆ.
ಐಫೋನ್ 17 ಪ್ರೊ vs ಗ್ಯಾಲಕ್ಸಿ S25 ಆಲ್ಟ್ರಾ: ಬ್ಯಾಟರಿ, ಚಾರ್ಜಿಂಗ್, ಪರ್ಫಾರ್ಮೆನ್ಸ್ ಮತ್ತು ಹಿಟಿಂಗ್ ನಿಯಂತ್ರಣ
ಟಾಮ್ಸ್ ಗೈಡ್ ನಡೆಸಿದ ಸ್ಟ್ಯಾಂಡರ್ಡ್ ಬ್ಯಾಟರಿ ಟೆಸ್ಟ್‌ನಲ್ಲಿ ಐಫೋನ್ 17 ಪ್ರೊ 15 ಗಂಟೆ 32 ನಿಮಿಷ ಹಾಗೂ S25 ಆಲ್ಟ್ರಾ 14 ಗಂಟೆ 27 ನಿಮಿಷಗಳ ಕಾಲ ಬಾಳಿಕೆ ನೀಡಿವೆ. 30 ನಿಮಿಷಗಳ ಚಾರ್ಜಿಂಗ್‌ನಲ್ಲಿ ಕ್ರಮವಾಗಿ ಶೇ. 72 ಮತ್ತು ಶೇ. 71 ರಷ್ಟು ಚಾರ್ಜ್ ಆಗಿವೆ. ಇನ್ನು ಗೇಮಿಂಗ್ ವಿಚಾರಕ್ಕೆ ಬಂದರೆ, ಭಾರತದ ಬೇಸಿಗೆಯ ಬಿಸಿಯಲ್ಲೂ ಸ್ಯಾಮ್‌ಸಂಗ್‌ನ ವೇಪರ್ ಚೇಂಬರ್ ಮತ್ತು ಸ್ನಾಪ್‌ಡ್ರಾಗನ್ 8 ಎಲಿಟ್ ಪ್ರೊಸೆಸರ್ ಗೇಮಿಂಗ್ ಸಮಯದಲ್ಲಿ ಸ್ಥಿರವಾದ ಫ್ರೇಮ್ ರೇಟ್ ನೀಡಿ ಫೋನ್ ಅತಿಯಾಗಿ ಕಾಯದಂತೆ ನೋಡಿಕೊಳ್ಳುತ್ತವೆ.
ಐಫೋನ್ 17 ಪ್ರೊ vs ಗ್ಯಾಲಕ್ಸಿ S25 ಆಲ್ಟ್ರಾ: AI, ಇಕೋಸಿಸ್ಟಮ್ ಮತ್ತು ಆಫ್ಟರ್-ಸೇಲ್ಸ್ ಸೇವೆಗಳು
ಭಾರತದಲ್ಲಿ ಆಪಲ್ ಇಂಟೆಲಿಜೆನ್ಸ್ ಸೌಲಭ್ಯ ಲಭ್ಯವಿದ್ದು, ಇದು ರೈಟಿಂಗ್ ಟೂಲ್ಸ್, ಕ್ಲೀನ್ ಅಪ್ ಹಾಗೂ ಚಾಟ್‌ಜಿಪಿಟಿ ಬೆಂಬಲವನ್ನು ಹೊಂದಿದೆ. ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ AI ಲೈವ್ ಟ್ರಾನ್ಸ್‌ಲೇಟ್, ಟ್ರಾನ್ಸ್‌ಕ್ರಿಪ್ಟ್ ಅಸಿಸ್ಟ್ ಮತ್ತು ಹಿಂದಿ, ಗುಜರಾತಿ ಭಾಷೆಗಳ ಬೆಂಬಲವನ್ನು ನೀಡುತ್ತದೆ. ಇನ್ನು ಸರ್ವಿಸ್ ವಿಚಾರಕ್ಕೆ ಬಂದರೆ, ಆಪಲ್ 17 ಸರಣಿಯ ಡಿಸ್ಪ್ಲೇ ರಿಪೇರಿ ಬೆಲೆ ₹32,900 ರಷ್ಟಿದೆ. ಆದರೆ ಸ್ಯಾಮ್‌ಸಂಗ್‌ನ 'ಸ್ಕ್ರೀನ್ ಫಿಕ್ಸ್+' ಮೂಲಕ S25 ಆಲ್ಟ್ರಾಗೆ ₹17,990 ದರ ಪಟ್ಟಿಯಾಗಿದೆ. ಅಲ್ಲದೆ, ಸ್ಯಾಮ್‌ಸಂಗ್ 7 ವರ್ಷಗಳ OS ಮತ್ತು ಸೆಕ್ಯುರಿಟಿ ಅಪ್‌ಡೇಟ್‌ಗಳ ಭರವಸೆ ನೀಡಿದೆ.
ಇಂದಿನ ಬೆಲೆಯಲ್ಲಿ ಯಾವುದು ಬೆಸ್ಟ್?: ನೀವು ₹95,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಪವರ್‌ಫುಲ್ ಟೆಲಿಫೋಟೋ ಜೂಮ್, ಎಸ್-ಪೆನ್ (S-Pen) ಸೌಲಭ್ಯ ಮತ್ತು ಬಲವಾದ AI ಫೀಚರ್‌ಗಳನ್ನು ಬಯಸಿದರೆ ಗ್ಯಾಲಕ್ಸಿ S25 ಆಲ್ಟ್ರಾ ಅತ್ಯುತ್ತಮ. ಅದೇ ರೀತಿ ಅದ್ಭುತ ಡಾಲ್ಬಿ ವಿಷನ್ ವಿಡಿಯೋ, ಆಪಲ್ ಇಕೋಸಿಸ್ಟಮ್, ಉತ್ತಮ ರಿಸೇಲ್ ವ್ಯಾಲ್ಯೂ ಮತ್ತು ಆಪಲ್ ಇಂಟೆಲಿಜೆನ್ಸ್ ಬೇಕಿದ್ದರೆ ಐಫೋನ್ 17 ಪ್ರೊ ಆಯ್ಕೆ ಮಾಡಬಹುದು. ಗೇಮರ್‌ಗಳಿಗೆ ಮತ್ತು ಕಂಟೆಂಟ್ ಕ್ರಿಯೇಟರ್‌ಗಳಿಗೆ ಎರಡೂ ಫೋನ್‌ಗಳು ಸೈ ಎನಿಸುತ್ತವೆ; ನಿಮ್ಮ ನೆಚ್ಚಿನ ಆಪರೇಟಿಂಗ್ ಸಿಸ್ಟಮ್ ಮತ್ತು ಸೇವಾ ಜಾಲವನ್ನು ಪರಿಗಣಿಸಿ ನಿರ್ಧಾರ ತಗೊಳ್ಳಿ.


Click it and Unblock the Notifications