ಭಾರತದಲ್ಲಿ ಇಂದಿನಿಂದ ಐಫೋನ್ 17 ಸರಣಿ ಸೇಲ್: ಬೆಲೆ ಮತ್ತು ಆಫರ್ಸ್ ನೋಡಿ!
ಟೆಕ್ ದೈತ್ಯ Apple ಕಂಪೆನಿಯ ಬಹುನಿರೀಕ್ಷಿತ iPhone 17 ಸರಣಿ ಫೋನ್‌ಗಳು ಭಾರತದಲ್ಲಿ ಇಂದಿನಿಂದ (ಸೆಪ್ಟೆಂಬರ್ 19, 2025 ) ಮೊದಲ ಬಾರಿಗೆ ಮಾರಾಟಕ್ಕೆ ಬಂದಿವೆ. iPhone 17 ಸರಣಿಯಲ್ಲಿ iPhone 17, iPhone Air, iPhone 17 Pro ಮತ್ತು iPhone 17 Pro Max ಎಲ್ಲಾ ನಾಲ್ಕು ಸ್ಮಾರ್ಟ್‌ಫೋನ್‌ಗಳು ಇಂದು ಖರೀದಿಗೆ ಲಭ್ಯವಿದ್ದು, ದೆಹಲಿ, ಮುಂಬೈ, ಬೆಂಗಳೂರು ಮತ್ತು ಪುಣೆಯಲ್ಲಿ ಹೊಸದಾಗಿ ತೆರೆದಿರುವ ಆಪಲ್ ಸ್ಟೋರ್‌ಗಳಲ್ಲಿ ಮತ್ತು ಅಧಿಕೃತ ಮರುಮಾರಾಟಗಾರರಲ್ಲಿ ದೊರೆಯುತ್ತಿವೆ. ಈ ಲೇಖನದಲ್ಲಿ ಐಫೋನ್ 17 ಸರಣಿಯ ಬೆಲೆಗಳು, ಆನ್‌ಲೈನ್‌ನಲ್ಲಿ ಫೋನ್‌ಗಳನ್ನು ಖರೀದಿಸಲು ಇರುವ ಮಾರ್ಗಗಳು ಮತ್ತು ಲಭ್ಯವಿರುವ ಡಿಸ್ಕೌಂಟ್ ಕೊಡುಗೆಗಳನ್ನು ನೋಡೋಣ ಬನ್ನಿ.
ಐಫೋನ್ 17 ಸರಣಿಯ ಬೆಲೆ ಮತ್ತು ಲಭ್ಯತೆ
ಹೊಸ ಐಫೋನ್ 17 ಸರಣಿಯ ಬೆಲೆಗಳು ಈ ಕೆಳಗಿನಂತಿವೆ:
iPhone 17: 256GB ಮಾದರಿಗೆ ₹82,900 ಮತ್ತು 512GB ಮಾದರಿಗೆ ₹1,02,900.
iPhone Air: 256GB ಮಾದರಿಗೆ ₹1,19,900, 512GBಗೆ ₹1,39,900 ಮತ್ತು 1TB ಮಾದರಿಗೆ ₹1,59,900.
iPhone 17 Pro: 256GB ಮಾದರಿಗೆ ₹1,34,900, 512GBಗೆ ₹1,54,900 ಮತ್ತು 1TB ಮಾದರಿಗೆ ₹1,74,900.
iPhone 17 Pro Max: 256GB ಮಾದರಿಗೆ ₹1,49,900, 512GBಗೆ ₹1,69,900, 1TBಗೆ ₹1,89,900 ಮತ್ತು 2TB ಮಾದರಿಗೆ ₹2,29,900.

ನೀವು ಹೊಸ ಐಫೋನ್‌ಗಳನ್ನು ಇ-ಕಾಮರ್ಸ್ ವೆಬ್‌ಸೈಟ್‌ಗಳು, ಕ್ವಿಕ್ ಕಾಮರ್ಸ್ ಅಪ್ಲಿಕೇಶನ್‌ಗಳು ಮತ್ತು ಕ್ರೋಮಾ, ವಿಜಯ್ ಸೇಲ್ಸ್ ಮತ್ತು ಇಂಗ್ರಾಮ್ ಮೈಕ್ರೋ ಇಂಡಿಯಾದಂತಹ ಇತರ ಅಧಿಕೃತ Apple ಚಿಲ್ಲರೆ ವ್ಯಾಪಾರಿಗಳಿಂದ ಆರ್ಡರ್ ಮಾಡಬಹುದು. ಹೊಸ ಐಫೋನ್ ಖರೀದಿಸುವವರಿಗೆ ವಿವಿಧ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಆಕರ್ಷಕ ಕೊಡುಗೆಗಳಿವೆ.
ಇನ್‌ಗ್ರಾಮ್ ಮೈಕ್ರೋ: (Ingram Micro)
iPhone 17 ಮೇಲೆ ₹6,000 ತ್ವರಿತ ಕ್ಯಾಶ್‌ಬ್ಯಾಕ್
iPhone 17 ಮೇಲೆ ₹7,000 ವರೆಗೆ ವಿನಿಮಯ ಬೋನಸ್
iPhone Air ಮತ್ತು iPhone 17 Pro ಮಾದರಿಗಳ ಮೇಲೆ ₹4,000 ಕ್ಯಾಶ್‌ಬ್ಯಾಕ್
ಬ್ಯಾಂಕ್ ಆಫರ್‌ಗಳು, ಎಕ್ಸ್‌ಚೇಂಜ್ ಬೋನಸ್‌ಗಳು ಮತ್ತು ನೋ-ಕಾಸ್ಟ್ EMI ಆಯ್ಕೆಗಳೂ ಲಭ್ಯವಿವೆ.
ರಿಲಯನ್ಸ್ ಡಿಜಿಟಲ್:
iPhone 17 ಮೇಲೆ ₹6,000 ರಿಯಾಯಿತಿ.
iPhone Air ಮತ್ತು iPhone 17 Pro ಮಾದರಿಗಳ ಮೇಲೆ ₹4,000 ರಿಯಾಯಿತಿ.
ಬ್ಯಾಂಕ್ ಆಫರ್‌ಗಳು, ಎಕ್ಸ್‌ಚೇಂಜ್ ಬೋನಸ್‌ಗಳು ಮತ್ತು ನೋ-ಕಾಸ್ಟ್ EMI ಆಯ್ಕೆಗಳೂ ಲಭ್ಯವಿವೆ.
ಕ್ರೋಮಾ:
iPhone 17 ಮೇಲೆ ₹6,000 ವರೆಗಿನ ತತ್‌ಕ್ಷಣ ರಿಯಾಯಿತಿ.
₹12,000 ವರೆಗಿನ ಎಕ್ಸ್‌ಚೇಂಜ್ ಬೋನಸ್
ಆನ್‌ಲೈನ್ ಮತ್ತು ಆಫ್‌ಲೈನ್ ಖರೀದಿಗಳಲ್ಲಿ 6 ತಿಂಗಳವರೆಗೆ ಸುಲಭವಾದ EMI ಸೌಲಭ್ಯ.
ವಿವಿಧ ಆಪಲ್ ಪರಿಕರಗಳ ಮೇಲೆ ಶೇಕಡಾ 20 ರಷ್ಟು ರಿಯಾಯಿತಿ.
ವಿಜಯ್ ಸೇಲ್ಸ್:
iPhone 17 ಮಾದರಿಯ ಮೇಲೆ ₹6,000) ರಿಯಾಯಿತಿ.
2TB iPhone 17 Pro ಮಾದರಿಯ ಮೇಲೆ ₹4,000 ರಿಯಾಯಿತಿ.
ಹಳೆಯ ಸಾಧನವನ್ನು ವಿನಿಮಯ ಮಾಡುವ ಮೂಲಕ ಹೊಸ ಐಫೋನ್ 17 ಸರಣಿಯ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಬಹುದು.
ಈ ಆಫರ್‌ಗಳು ಗ್ರಾಹಕರಿಗೆ ಹೊಸ ಐಫೋನ್ ಖರೀದಿಯನ್ನು ಹೆಚ್ಚು ಸುಲಭ ಮತ್ತು ಲಾಭದಾಯಕವಾಗಿಸುತ್ತವೆ. ಬೆಂಗಳೂರು, ಮುಂಬೈ, ದೆಹಲಿ ಮತ್ತು ಪುಣೆ ಎಲ್ಲಾ ನಗರಗಳಲ್ಲಿನ ಅಂಗಡಿಗಳ ಹೊರಗೆ ಉದ್ದನೆಯ ಸರತಿ ಸಾಲುಗಳು ಕಂಡುಬರುತ್ತಿದೆ. ಹಾಗಾಗಿ, ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವುದು ಸುಲಭ ವಿಧಾನವಾಗಿದೆ. ಆಪಲ್‌ನ ಇತ್ತೀಚಿನ ಈ ಸರಣಿಯು ತನ್ನ ನವೀನ ಫೀಚರ್‌ಗಳೊಂದಿಗೆ ತಂತ್ರಜ್ಞಾನ ಪ್ರಿಯರನ್ನು ಮತ್ತಷ್ಟು ಆಕರ್ಷಿಸಿದೆ. ಈ ಬೆಲೆ ಮತ್ತು ಆಫರ್‌ಗಳು ಮುಂದಿನ ದಿನಗಳಲ್ಲಿ ಬದಲಾಗಬಹುದು, ಆದ್ದರಿಂದ ಖರೀದಿ ಮಾಡುವ ಮೊದಲು ಎಲ್ಲಾ ವಿವರಗಳನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.


Click it and Unblock the Notifications








