ಭಾರತದಲ್ಲಿ 64,900 ರೂ.ಗೆ iPhone 17e ಲಾಂಚ್: ಇಲ್ಲಿದೆ ಸಂಪೂರ್ಣ ಮಾಹಿತಿ!
ಆಪಲ್ ಐಫೋನ್ 17 ಸರಣಿಯಲ್ಲೇ ಅತ್ಯಂತ ಕೈಗೆಟುಕುವ ಸ್ಮಾರ್ಟ್‌ಫೋನ್ ಆಗಿ ಹೊಸ iPhone 17e ಸಾಧನವು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಸೋಮವಾರದಂದು ಭರ್ಜರಿಯಾಗಿ ಬಿಡುಗಡೆಯಾಗಿದೆ. ಕಳೆದ ವರ್ಷದ iPhone 16e ಗೆ ಉತ್ತರಾಧಿಕಾರಿಯಾಗಿರುವ ಈ ಹೊಸ ಫೋನ್, A19 ಚಿಪ್, MagSafe ಬೆಂಬಲ, Ceramic Shield 2 ಡಿಸ್ಪ್ಲೇ ರಕ್ಷಣೆ ಮತ್ತು ಕಳೆದ ವರ್ಷದ ಮಾದರಿಗಿಂತ ಎರಡು ಪಟ್ಟು ಹೆಚ್ಚು ಸಂಗ್ರಹಣೆ ಸೇರಿದಂತೆ ಕೆಲವು ಗಮನಾರ್ಹ ಅಪ್‌ಗ್ರೇಡ್‌ಗಳೊಂದಿಗೆ ಬಂದಿದ್ದು, ಮಧ್ಯಮ ಬಜೆಟ್‌ನಲ್ಲಿ ಗ್ರಾಹಕರನ್ನು ಆಕರ್ಷಿಸಲು ಸಿದ್ಧವಾಗಿದೆ. ಹಾಗಾದರೆ, ಹೊಸ iPhone 17e ಹೇಗಿದೆ?, ಬೆಲೆ ಎಷ್ಟು ಮತ್ತು ಸಂಪೂರ್ಣ ಫೀಚರ್ಸ್ ಯಾವುವು ಎಂಬುದನ್ನು ನೋಡೋಣ ಬನ್ನಿ.
ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
ಭಾರತೀಯ ಮಾರುಕಟ್ಟೆಯಲ್ಲಿ iPhone 17e ಪ್ರಾರಂಭಿಕ ಬೆಲೆ 64,900 ರೂ. ಗಳಾಗಿದ್ದು, ಈ ದರದಲ್ಲಿ 256GB ಸ್ಟೋರೇಜ್ ಹೊಂದಿರುವ ಮೂಲ ಮಾದರಿ ಲಭ್ಯವಾಗಲಿದೆ. ಫೋನ್ 512GB ಸ್ಟೋರೇಜ್ ಆಯ್ಕೆಯಲ್ಲಿಯೂ ಲಭ್ಯವಿದ್ದು, ಇದಕ್ಕೆ 84,900 ರೂ. ಬೆಲೆ ನಿಗದಿಪಡಿಸಲಾಗಿದೆ. ದೇಶದಲ್ಲಿ ಈಗಾಗಲೇ iPhone 17e ಮುಂಗಡ ಬುಕ್ಕಿಂಗ್ ಆರಂಭವಾಗಿದ್ದು, ಮಾರ್ಚ್ 11ರಿಂದ ಅಧಿಕೃತ ವೆಬ್‌ಸೈಟ್ ಮತ್ತು ಅಧಿಕೃತ ಡೀಲರ್‌ಗಳ ಮೂಲಕ ಮಾರಾಟ ಪ್ರಾರಂಭವಾಗಲಿದೆ. ಗ್ರಾಹಕರು ಕಪ್ಪು, ಸೋಫ್ಟ್ ಪಿಂಕ್ ಮತ್ತು ಬಿಳಿ ಬಣ್ಣಗಳಲ್ಲಿ ಈ ಫೋನ್ ಅನ್ನು ಖರೀದಿಸಬಹುದು.

iPhone 17e: ಪ್ರಮುಖ ವೈಶಿಷ್ಟ್ಯಗಳು
ಹೊಸ iPhone 17e ನಲ್ಲಿ 1,170×2,532 ಪಿಕ್ಸೆಲ್ ರೆಸಲ್ಯೂಶನ್ ಹಾಗೂ 60Hz ರಿಫ್ರೆಶ್ ರೇಟ್ ಹೊಂದಿರುವ 6.1 ಇಂಚಿನ Super Retina XDR OLED ಡಿಸ್ಪ್ಲೇ ಇದ್ದು, ಇದಕ್ಕೆTrue Tone ಮತ್ತು ಗರಿಷ್ಠ 800 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಇದೆ. ಹೊಸ Ceramic Shield 2 ಗ್ಲಾಸ್, ಹಿಂದಿನ ಮಾದರಿಗಿಂತ ಹೆಚ್ಚು ಸ್ಕ್ರ್ಯಾಚ್ ಪ್ರತಿರೋಧ ನೀಡುತ್ತದೆ ಎಂದು ಆಪಲ್ ಹೇಳಿಕೊಂಡಿದೆ. ಇದು ಐಫೋನ್ 16e ನಲ್ಲಿರುವ ಗಾಜಿನೊಂದಿಗೆ ಹೋಲಿಸಿದರೆ 3 ಪಟ್ಟು ಉತ್ತಮ ಸ್ಕ್ರಾಚ್ ಪ್ರತಿರೋಧವನ್ನು ನೀಡುತ್ತದೆ ಎಂದು ಹೇಳಲಾಗಿದೆ.
ಕಾರ್ಯಕ್ಷಮತೆಗಾಗಿ, ಈ iPhone 17e ಫೋನ್ ಅನ್ನು Appleನ ಹೊಸ A19 ಚಿಪ್ ಶಕ್ತಿಗೊಳಿಸಿದೆ. ಇದರಲ್ಲಿ 6-ಕೋರ್ CPU, 4-ಕೋರ್ GPU ಮತ್ತು 16-ಕೋರ್ Neural Engine ಸೇರಿವೆ. 8GB RAM ಇರುವುದರಿಂದ ದೈನಂದಿನ ಬಳಕೆ ಮತ್ತು ಮಲ್ಟಿಟಾಸ್ಕಿಂಗ್ ಸುಗಮವಾಗಿರುವ ಭರವಸೆ ತಂದಿದೆ. ಸಾಫ್ಟ್‌ವೇರ್ ವಿಭಾಗದಲ್ಲಿ ಫೋನ್ iOS 26 ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು Apple Intelligence ವೈಶಿಷ್ಟ್ಯಗಳಿಗೆ ಬೆಂಬಲ ನೀಡುತ್ತದೆ. ಹಾಗೂ Nano SIM + eSIM ಡ್ಯುಯಲ್ ಸಿಮ್ ಆಯ್ಕೆಯೂ ಇದೆ.

ಕ್ಯಾಮೆರಾ ವಿಭಾಗದಲ್ಲಿ, iPhone 17e ನಲ್ಲಿ 48 ಮೆಗಾಪಿಕ್ಸೆಲ್ ಹಿಂಭಾಗದ ಕ್ಯಾಮೆರಾ ಇದ್ದು, ಇದು f/1.6 ಅಪರ್ಚರ್ ಹಾಗೂ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಬೆಂಬಲ ಹೊಂದಿದೆ. ಇದರಿಂದ 24MP ಮತ್ತು 48MP ಚಿತ್ರಗಳನ್ನು ಸೆರೆಹಿಡಿಯಲು ಸಾಧ್ಯವಿದೆ. ಮತ್ತು 2x "ಆಪ್ಟಿಕಲ್ ಕ್ವಾಲಿಟಿ" ಜೂಮ್ ಸಹ ಲಭ್ಯವಿದೆ. ಸೆಲ್ಫಿಗಳಿಗಾಘಿ, ಮುಂಭಾಗದಲ್ಲಿ 12 ಮೆಗಾಪಿಕ್ಸೆಲ್ TrueDepth ಕ್ಯಾಮೆರಾ ಇದೆ. ಆದರೆ Action Mode ಮತ್ತು Cinematic Video ಮುಂತಾದ ಕೆಲವು ಪ್ರೀಮಿಯಂ ವೈಶಿಷ್ಟ್ಯಗಳು ಈ ಮಾದರಿಯಲ್ಲಿ ಲಭ್ಯವಿಲ್ಲ.
ಬ್ಯಾಟರಿ ವಿಭಾಗದಲ್ಲಿ, ಆಪಲ್ ಅಧಿಕೃತವಾಗಿ iPhone 17e ನಲ್ಲಿನ ಬ್ಯಾಟರಿ ಸಾಮರ್ಥ್ಯವನ್ನು ತಿಳಿಸಿಲ್ಲ. ಆದರೆ ಒಂದು ಬಾರಿ ಚಾರ್ಜ್ ಮಾಡಿದರೆ 26 ಗಂಟೆಗಳವರೆಗೆ ವೀಡಿಯೋ ಪ್ಲೇಬ್ಯಾಕ್ ಸಿಗುತ್ತದೆ ಎಂದು ಹೇಳಿಕೊಂಡಿದೆ. ಇದಕ್ಕೆ. 20W ವೈರ್ ಚಾರ್ಜಿಂಗ್ ಮತ್ತು 15W MagSafe ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಇದೆ. ಹಿಂದಿನ ಮಾದರಿಯಲ್ಲಿ ಇಲ್ಲದಿದ್ದ MagSafe ಈಗ ಸೇರಿರುವುದು ಮಹತ್ವದ ಅಪ್‌ಗ್ರೇಡ್.
ಸಂಪರ್ಕ ವೈಶಿಷ್ಟ್ಯಗಳು, 5G, 4G LTE, Wi-Fi 6, Bluetooth 5.3, NFC, GPS ಸೇರಿದಂತೆ ಹಲವಾರು ಆಯ್ಕೆಗಳು ಲಭ್ಯ. ಜೊತೆಗೆ GLONASS, Galileo, BeiDou ಮತ್ತು NavIC ನ್ಯಾವಿಗೇಷನ್ ಬೆಂಬಲವೂ ಇದೆ. IP68 ರೇಟಿಂಗ್ ಇರುವುದರಿಂದ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆ ಸಿಗುತ್ತದೆ. Face ID ಮೂಲಕ ಬಯೋಮೆಟ್ರಿಕ್ ಸುರಕ್ಷತೆ ನೀಡಲಾಗಿದೆ. ಫೋನ್ ತೂಕ ಸುಮಾರು 169 ಗ್ರಾಂ, ಮತ್ತು ಸಣ್ಣ ಹಾಗೂ ಹಗುರ ವಿನ್ಯಾಸ ಹೊಂದಿದೆ.
ಒಟ್ಟಾರೆಯಾಗಿ, ಹೊಸ A19 ಚಿಪ್, MagSafe ಬೆಂಬಲ ಮತ್ತು ಆರಂಭಿಕ 256GB ಸ್ಟೋರೇಜ್‌ನಿಂದ iPhone 17e ಮೌಲ್ಯಾಧಾರಿತ ಆಯ್ಕೆಯಾಗಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಹೆಚ್ಚಿನ ಪ್ರೀಮಿಯಂ ವೈಶಿಷ್ಟ್ಯಗಳನ್ನು ಬಯಸದ ಬಳಕೆದಾರರಿಗೆ, ಆದರೆ ದೀರ್ಘಾವಧಿ ಸಾಫ್ಟ್‌ವೇರ್ ಅಪ್ಡೇಟ್ ಹಾಗೂ Apple ಪರಿಸರದ ಅನುಭವ ಬೇಕಿರುವವರಿಗೆ ಇದು ಸೂಕ್ತ ಆಯ್ಕೆ ಆಗಬಹುದು. ಭಾರತೀಯ ಗ್ರಾಹಕರ ದೃಷ್ಟಿಯಿಂದ, ಮಧ್ಯಮ ಬಜೆಟ್‌ನಲ್ಲಿ ದೀರ್ಘಕಾಲ ಬಳಸಬಹುದಾದ iPhone ಬೇಕಿದ್ದರೆ iPhone 17e ಪರಿಗಣಿಸಬಹುದಾದ ಹೊಸ ಆಯ್ಕೆ ಎಂಬುದು ನಮ್ಮ ಅಭಿಪ್ರಾಯ.


Click it and Unblock the Notifications