Home
ಮೊಬೈಲ್

ಕಡಿಮೆ ಬೆಲೆಯ iPhone 17e ಬಿಡುಗಡೆಗೆ ದಿನಗಣನೆ: ಹಲವು ವಿವರಗಳು ಲೀಕ್!

ಆಪಲ್ ಕಳೆದ ವರ್ಷ ಫೆಬ್ರವರಿಯಲ್ಲಿ iPhone SE ಗೆ ಬದಲಿ ಆಯ್ಕೆಯಾಗಿ ಬಿಡುಗಡೆ ಮಾಡಿದ iPhone 16e ಬಳಿಕ, ಇದೀಗ ಅದರ ಮುಂದುವರಿದ ಮಾದರಿಯಾದ iPhone 17e ಇದೇ ತಿಂಗಳಲ್ಲೇ (ಫೆಬ್ರವರಿ 19, 2026 ರಂದು ಬಿಡುಗಡೆಯಾಗಬಹುದು) ಬಿಡುಗಡೆಯಾಗುವ ನಿರೀಕ್ಷೆ ಇದೆ. ಇತ್ತೀಚಿನ ಲೀಕ್‌ಗಳ ಪ್ರಕಾರ, ಹೊಸ ಐಫೋನ್ ದೊಡ್ಡ ವಿನ್ಯಾಸ ಬದಲಾವಣೆಗಳಿಗಿಂತ ಕಾರ್ಯಕ್ಷಮತೆಯ ಮೇಲೆಯೇ ಹೆಚ್ಚು ಗಮನ ಹರಿಸಿದ್ದು, ಆಪಲ್ ತನ್ನ ಎಂಟ್ರಿ-ಪ್ರೀಮಿಯಂ ಐಫೋನ್ ಸರಣಿಯನ್ನು ಮತ್ತಷ್ಟು ಬಲಪಡಿಸಲು ಸಿದ್ಧವಾಗಿರುವಂತೆ ಕಾಣುತ್ತಿದೆ.

ವಿನ್ಯಾಸದಲ್ಲಿ ಬದಲಾವಣೆ ಕಡಿಮೆ
ಹೌದು, Phone 17e ವಿನ್ಯಾಸದಲ್ಲಿ ಬದಲಾವಣೆ ಇಲ್ಲ ಎಂದು ಹೇಳಲಾಗುತ್ತುದೆ. ಲಭ್ಯವಿರುವ ಮಾಹಿತಿಯಂತೆ, iPhone 17e ನೋಡಲು ಬಹುತೇಕ iPhone 16e ನಂತೆಯೇ ಇರಲಿದೆ. ಆಪಲ್ ಈ ಬಾರಿ ಹೊಸ ಮೊಲ್ಡ್ ಬಳಸಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿರುವುದರಿಂದ, ಫೋನ್‌ನ ಗಾತ್ರ ಮತ್ತು ಹೊರನೋಟದಲ್ಲಿ ವ್ಯತ್ಯಾಸ ಕಾಣಿಸುವ ಸಾಧ್ಯತೆ ಕಡಿಮೆ. 6.1 ಇಂಚಿನ ಡಿಸ್ಪ್ಲೇ, ನಾಚ್ ವಿನ್ಯಾಸ, ಫೇಸ್ ಐಡಿ ಮತ್ತು 60Hz ರಿಫ್ರೆಶ್ ರೇಟ್ ಈ ಹೊಸ ಮಾದರಿಯಲ್ಲೂ ಮುಂದುವರಿಯಬಹುದು ಎಂದು ಹೇಳಲಾಗಿದೆ.

ಕಡಿಮೆ ಬೆಲೆಯ iPhone 17e ಬಿಡುಗಡೆಗೆ ದಿನಗಣನೆ: ಹಲವು ವಿವರಗಳು ಲೀಕ್!

ಪ್ರಮುಖ ಅಪ್‌ಗ್ರೇಡ್: ಹೊಸ A19 ಚಿಪ್
iPhone 17e ಯ ಅತಿ ದೊಡ್ಡ ಹೈಲೈಟ್ ಎಂದರೆ ಅದರ ಪ್ರೊಸೆಸರ್. ಲೀಕ್ ಪ್ರಕಾರ, ಈ ಫೋನ್‌ನಲ್ಲಿ ಆಪಲ್‌ನ ಹೊಸ A19 ಚಿಪ್ ಬಳಸಲಾಗುತ್ತದೆ. ಇದು iPhone 16e ಯಲ್ಲಿದ್ದ A18 ಚಿಪ್‌ಗೆ ಹೋಲಿಸಿದರೆ ಹೆಚ್ಚು ವೇಗ, ಉತ್ತಮ ಬ್ಯಾಟರಿ ದಕ್ಷತೆ ಮತ್ತು AI ಆಧಾರಿತ ಫೀಚರ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ. ದಿನನಿತ್ಯದ ಬಳಕೆ ಮತ್ತು ಗೇಮಿಂಗ್ ಅನುಭವದಲ್ಲೂ ಸ್ಪಷ್ಟವಾದ ಸುಧಾರಣೆ ನಿರೀಕ್ಷಿಸಬಹುದು.

ಕ್ಯಾಮೆರಾ ಮತ್ತು ರಕ್ಷಣಾ ವೈಶಿಷ್ಟ್ಯಗಳು
ಕ್ಯಾಮೆರಾ ವಿಭಾಗದಲ್ಲಿ ದೊಡ್ಡ ಬದಲಾವಣೆಗಳಿಲ್ಲ ಎನ್ನಲಾಗುತ್ತಿದೆ. iPhone 17e ನಲ್ಲಿ 48 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಜೊತೆಗೆ) ಮತ್ತು 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರಬಹುದು. ಜೊತೆಗೆ, IP68 ರೇಟಿಂಗ್ ಇರುವುದರಿಂದ ನೀರು ಮತ್ತು ಧೂಳಿನಿಂದ ಉತ್ತಮ ರಕ್ಷಣೆ ಲಭ್ಯವಾಗುವ ಸಾಧ್ಯತೆ ಇದೆ. ಇದು ಮಿಡ್‌-ರೇಂಜ್ ಪ್ರಿಯರ ಭಾರತೀಯ ಪರಿಸ್ಥಿತಿಗಳಲ್ಲಿ ಬಳಕೆಗೆ ಸಹಕಾರಿಯಾಗಲಿದೆ.

ಮ್ಯಾಗ್‌ಸೇಫ್ ಮತ್ತು ಇನ್-ಹೌಸ್ ಚಿಪ್‌ಗಳ ಸಾಧ್ಯತೆ
ಈ ಬಾರಿ iPhone 17e ಯಲ್ಲಿ MagSafe ಚಾರ್ಜಿಂಗ್ ಬೆಂಬಲ ದೊರೆಯಬಹುದು ಎನ್ನುವ ಮಾಹಿತಿ ಬಳಕೆದಾರರ ಗಮನ ಸೆಳೆಯುತ್ತಿದೆ. ಇದಲ್ಲದೆ, ಆಪಲ್ ತನ್ನದೇ ಆದ ಇನ್-ಹೌಸ್ ಸೆಲ್ಯುಲರ್ ಮತ್ತು ವೈರ್‌ಲೆಸ್ ಚಿಪ್‌ಗಳನ್ನು ಈ ಫೋನ್‌ನಲ್ಲಿ ಬಳಸಬಹುದು ಎಂದು ವರದಿಗಳು ಹೇಳುತ್ತಿವೆ. ಚಾರ್ಜಿಂಗ್ ವಿಷಯದಲ್ಲಿ 18W ವೈರ್ಡ್ ಮತ್ತು 7.5W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಮುಂದುವರಿಯುವ ಸಾಧ್ಯತೆ ಇದೆ.

ಬೆಲೆ ಮತ್ತು ಬಿಡುಗಡೆ ದಿನಾಂಕ
ಬೆಲೆ ವಿಚಾರದಲ್ಲಿ ಆಪಲ್ ಅಚ್ಚರಿ ನೀಡುವ ಸಾಧ್ಯತೆ ಕಡಿಮೆ. ವರದಿಗಳ ಪ್ರಕಾರ, iPhone 17e ಯ ಬೆಲೆ ಸುಮಾರು $599, ಅಂದರೆ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು ₹57,000 ಅಥವಾ ಇದಕ್ಕಿಂತಲೂ ಕಡಿಮೆ ಇರಬಹುದು. ಈ ಫೋನ್ ಅನ್ನು ಆಪಲ್‌ನ ಕಡಿಮೆ ಬೆಲೆಯ ಐಫೋನ್ ಆಯ್ಕೆಯಾಗಿ ಸ್ಥಾಪಿಸುವ ಉದ್ದೇಶ ಇದರಿಂದ ಸ್ಪಷ್ಟವಾಗುತ್ತದೆ. ಬಿಡುಗಡೆ ದಿನಾಂಕವನ್ನು ಫೆಬ್ರವರಿ 19 ಎಂದು ಊಹಿಸಲಾಗಿದೆ.

ಒಟ್ಟಾರೆ ನಿರೀಕ್ಷೆ ಏನು?
ಒಟ್ಟಾರೆಯಾಗಿ, iPhone 17e ದೊಡ್ಡ ರೀಡಿಸೈನ್ ಇಲ್ಲದಿದ್ದರೂ, ಹೊಸ A19 ಚಿಪ್ ಮತ್ತು ಕೆಲವು ಆಂತರಿಕ ಸುಧಾರಣೆಗಳ ಮೂಲಕ ಮೌಲ್ಯ ಆಧಾರಿತ ಐಫೋನ್ ಆಗಿ ಹೊರಹೊಮ್ಮುವ ಸಾಧ್ಯತೆ ಇದೆ. ಪ್ರೀಮಿಯಂ ಐಫೋನ್ ಅನುಭವ ಬೇಕು, ಆದರೆ ಅತಿ ಹೆಚ್ಚು ಹಣ ಖರ್ಚು ಮಾಡಲು ಇಚ್ಛಿಸದ ಬಳಕೆದಾರರಿಗೆ ಇದು ಆಕರ್ಷಕ ಆಯ್ಕೆಯಾಗಬಹುದು. ಬಿಡುಗಡೆಯ ನಂತರವೇ ಈ ಲೀಕ್‌ಗಳು ಎಷ್ಟರ ಮಟ್ಟಿಗೆ ನಿಜವಾಗುತ್ತವೆ ಎಂಬುದು ಸ್ಪಷ್ಟವಾಗಲಿದೆ.

Best Mobiles in India

English summary
Apple is expected to launch the iPhone 17e on February 19, 2026. Leaks suggest the phone will retain the iPhone 16e design while focusing on improved performance with the new A19 chip, offering better speed, efficiency, and AI capabilities in Apple’s entry-premium lineup.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+