ಆಪಲ್ ಐಫೋನ್ 3GS 9,999 ರೂಪಾಯಿ ಮಾತ್ರ!

Posted By: Varun
ಆಪಲ್ ಐಫೋನ್ 3GS 9,999 ರೂಪಾಯಿ ಮಾತ್ರ!

ಆಪಲ್ ಕಂಪನಿಯ ಐಫೋನ್ 3GS ಈಗ ನಂಬಲಸಾಧ್ಯ ಬೆಲೆಗೆ ಸಿಗಲಿದೆ.ಹೌದು, ಆಪಲ್ ಐಫೋನ್ 3G ಸೌಲಭ್ಯವಿರುವ ಐಫೋನ್ 3GS ಈಗ ಕೇವಲ 9,999 ರೂಪಾಯಿಗೆ ಬರಲಿದೆ. ಇದ್ಯಾವುದೋ ಟೋಪಿ ಸ್ಕೀಮ್ ಎಂದುಕೊಳ್ಳಬೇಡಿ. ಈ ರೀತಿಯ ಆಫರ್ ಅನ್ನು ಕೊಡುತ್ತಿದೆ, ಏರ್ಸೆಲ್ ಕಂಪನಿ.

ಇದನ್ನು ಖಚಿತ ಪಡಿಸಿಕೊಳ್ಳಲು ನಾವು ಬೆಂಗಳೂರಿನ ಏರ್ಸೆಲ್ ಕಸ್ಟಮರ್ ಕೇರ್ ಗೆ ಫೋನು ಮಾಡಿ ವಿಚಾರಿಸಿದಾಗ ಅವರು ಹೇಳಿದ್ದು ಇಷ್ಟು. ನೀವು ಏರ್ಸೆಲ್ ಕಂಪನಿಯ ಪೋಸ್ಟ್ ಪೇಡ್ ಮಿನಿಮಮ್ ಪ್ಲಾನ್ ತೆಗೆದುಕೊಂಡರೆ ಸಾಕು, ಈ ಫೋನ್ ನ ಆಫರ್ ಅನ್ನು ನೀವು ಅನುವು ಮಾಡಿಕೊಳ್ಳಬಹುದಂತೆ.

ಅದರೊಟ್ಟಿಗೆ ನೀವು 3 ಸಾವಿರ ರೋಪಾಯಿಯ 3G ರೆಂಟಲ್ ಡೇಟಾ ಪ್ಲಾನ್ ಅನ್ನು ತೆಗೆದುಕೊಂಡರೆ ಒಂದು ವರ್ಷ ಅನಿಯಮಿತ ಇಂಟರ್ನೆಟ್ ಉಪಯೋಗಿಸಬಹುದಾಗಿದೆ ಎಂದು ಕಂಪನಿ ತಿಳಿಸಿದೆ. 2G ಸೇವೆ ಮಾತ್ರ ಇರುವ ನಗರಗಳಲ್ಲಿ ನೀವು ಸಾಮಾನ್ಯ ಪ್ಲಾನ್ ತೆಗೆದುಕೊಂಡರೂ ಕೂಡ ಈ ಆಫರ್ ಲಭ್ಯವಿದೆ.

ಸದ್ಯಕ್ಕೆ 20 ಸಾವಿರ ರೂಪಾಯಿಗೆ ಸಿಗುತ್ತಿರುವ ಈ ಸ್ಮಾರ್ಟ್ ಫೋನ್ ಅನ್ನು ನೀವು 10 ಸಾವಿರಕ್ಕೆ ತೆಗೆದುಕೊಳ್ಳಬಹುದಾಗಿದೆ, ಏರ್ಸೆಲ್ ಮೂಲಕ. ಇದಕ್ಕಿಂತ ಕೂಲ್ ಆದ ಆಫರ್ ಇತ್ತೀಚಿನ ದಿನಗಳಲ್ಲಿ ಬಂದಿಲ್ಲ.

ಇತ್ತೀಚಿನ ವರದಿಗಳ ಪ್ರಕಾರ ತುಂಬಾ ಬೇಡಿಕೆ ಇರುವುದರಿಂದ ಸುಮಾರು ಏರ್ಸೆಲ್ ಮಳಿಗೆಗಳಲ್ಲಿ ಫೋನ್ ಸ್ಟಾಕ್ ಖಾಲಿಯಾಗಿದೆ ಎಂದು ಗ್ರಾಹಕರು ವಾಪಸ್ಸು ಬರುತ್ತಿದ್ದಾರಂತೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot