ಭಾರತಕ್ಕೆ ಐಫೋನ್‌ 5 ಅಕ್ಟೋಬರ್‌ 26ರಂದು ಬರಲಿದೆ

By Vijeth Kumar Dn
|

ಭಾರತಕ್ಕೆ ಐಫೋನ್‌ 5 ಅಕ್ಟೋಬರ್‌ 26ರಂದು ಬರಲಿದೆ
ಸೆಪ್ಟೆಂಬ್‌ 21 ರಂದು ಅಮೇರಿಕಾ, ಬ್ರಿಟನ್‌, ಆಸ್ಟ್ರೇಲಿಯಾ ಸೇರಿದಂತೆ ಇತರೆ ರಾಷ್ಟ್ರಗಳಲ್ಲಿ ಬಿಡುಗಡೆಯಾಗಿ ಯಶಸ್ಸುಗಳಿಸಿದ ಐಫೋನ್‌ 5 ಸ್ಮಾರ್ಟ್‌ಫೋನ್‌ ಅನ್ನು ಆಪಲ್‌ ಸಂಸ್ಥೆಯು ಸೆಪ್ಟೆಂಬರ್‌ 28ರ ವೇಳೆಗೆ ಇನ್ನೂ 22 ರಾಷ್ಟ್ರಗಳಲ್ಲಿ ಬಿಡುಗಡೆ ಮಾಡಿತ್ತು, ಇದರಿಂದಾಗಿ ಆಪಲ್‌ ಸಂಸ್ಥೆಯು ಬಿಡುಗಡೆಯ ಮೊದಲನೇ ವಾರಾಂತ್ಯಕ್ಕೆ ದಾಖಲೆಯ 5 ದಶಲಕ್ಷ ಯುನಿಟ್‌ಗಳ ಮಾರಾಟ ನಡೆಸಿತು.

ಅಂದಹಾಗೆ ಭಾರತಕ್ಕೆ ಆರನೇ ತಲೆಮಾರಿನ ಫೋನ್‌ ಎಂದೆನಿಸಿಕೊಂಡಿರುವ ಐಫೋನ್‌ 5 ಡಿಸೆಂಬರ್‌ ತಿಂಗಳಿಗೆ ಕಾಲಿರಿಸುವುದಾಗಿ ಈ ಹಿಂದೆ ವರದಿಯಾಗಿತ್ತು. ಆದರೆ ಇದೀಗ ಬಂದಿರುವ ವರದಿಗಳ ಪ್ರಕಾರ ಐಫೋನ್‌ ಪ್ರಿರಿಗೊಂದು ಸಿಹಿ ಸುದ್ಧಿ ಅದೇನೆಂದರೆ ಐಫೋನ್‌ 5 ಡಿಸೆಂಬರ್‌ ತಿಂಗಳಿಗೆ ಬದಲಾಗಿ ಅಕ್ಟೋಬರ್‌ ತಿಂಗಳಿನ ಕೊನೆಯ ಶುಕ್ರವಾರ 26ಕ್ಕೆ ಆಪಲ್‌ ಸಂಸ್ಥೆಯು ನೂತನ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿದೆ ಎಂದು ಬಿಜಿಆರ್‌ ವರದಿ ಮಾಡಿದೆ.

ಅಂದಹಾಗೆ ಐಫೋನ್‌ 5ನ ವಿಶೇಷತೆ ಕುರಿತಾಗಿ ಹೇಳುವುದಾದರೆ 4 ಇಂಚಿನ ಸ್ಕ್ರೀನ್‌ ಹಾಗೂ ರೆಸೆಲ್ಯೂಷನ್‌ ನೊಂದಿಗೆ 1136 x 640 ಪಿಕ್ಸೆಲ್ಸ್‌, ಆಪಲ್‌ A6 ಚಿಪ್‌ಸೆಟ್‌, 1GB RAM, 16GB/32GB/64GB ಆಂರಿಕ ಮಾದರಿಗಳಲ್ಲಿ ಲಭ್ಯ, 8MP ಹಿಂಬದಿಯ ಕ್ಯಾಮೆರಾ ಹಾಗೂ ಐಸೈಟ್‌ ತಂತ್ರಜ್ಞಾನ ಸೇರಿದಂತೆ ಮುಂಬದಿಯ 1.2MP ಕ್ಯಾಮೆರಾ ಹೊಂದಿದೆ.

iOS 6 ಒಳಗೊಂಡಿದ್ದು, ಐಫೋನ್‌ 5 ನಲ್ಲಿ Wi-Fi 802.11 b/g/n, ಬ್ಲೂಟೂತ್‌ 4.0 with A2DP, 4G LTE, 3G ಹಾಗೂ ಮೈಕ್ರೋ USB 2.0 ಬೆಂಬಲ ಸೇರಿದಂತೆ ಆಪಲ್‌ ಸಂಸ್ಥೆಯ ಪ್ರಕಾರ 8 ಗಂಟೆಗಳ ಟಾಕ್‌ಟೈಮ್‌ ಹಾಗೂ 225 ಗಂಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ.

ವಿಶ್ವದ ಮೊದಲ ಗೊಲ್ಡ್‌ ಪ್ಲೇಟೆಡ್‌ ಐಫೋನ್‌ 5 ಬಂದಿದೆ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X