Subscribe to Gizbot

ಭಾರತದಲ್ಲಿ ಐಫೊನ್‌ 5 ನ ಬೆಲೆ ಹೀಗಿದೆ ನೋಡಿ

Posted By: Super
ಭಾರತದಲ್ಲಿ ಐಫೊನ್‌ 5 ನ ಬೆಲೆ ಹೀಗಿದೆ ನೋಡಿ

ಆಪಲ್‌ ಐಫೊನ್‌ 5 ನ ಬಿಡುಗಡೆ ಸಂದರ್ಭದಲ್ಲಿ ಸೆಪ್ಟೆಂಬರ್‌ 14 ಕ್ಕೆ ಪ್ರಿ ಆರ್ಡರ್‌ ತೆಗೆದುಕೊಂಡು ಹಾಗೂ ಸೆಪ್ಟೆಂಬರ್‌ 21 ರ ನಂತರ ಅಮೆರಿಕಾ, ಕೆನಡಾ, ಬ್ರಿಟನ್‌, ಫ್ರಾನ್ಸ್‌, ಜೆರ್ಮನಿ, ಆಸ್ಟ್ರೇಲಿಯಾ, ಜಪಾನ್‌ ಸಿಂಗಪೂರ್‌ ಹಾಗೂ ಹಾಂಕಾಂಗ್‌ ನಲ್ಲಿನ ಗ್ರಾಹಕರುಗಳಿಗೆ ತಲುಪಿಸುವ ಕಾರ್ಯ ಆರಂಭಿಸುವುದಾಗಿ ಆಪಲ್‌ನ ಅಧಿಕಾರಿಗಳು ತಿಳಿಸಿದ್ದರು.

ಅಲ್ಲದೆ ಬಹುಬೇಗನೆ ಇನ್ನೂ 22 ರಾಷ್ಟ್ರಗಳಲ್ಲಿ ಸೆಪ್ಟೆಂಬರ್‌ 28 ಒಳಗಾಗಿ ಪೂರೈಕೆ ಮಾಡಲಾಗುವುದು ಎಂದು ಆಪಲ್‌ ಸಂಸ್ಥೆ ತಿಳಿಸಿತ್ತು. ಅಲ್ಲದೆ ಈ ಸಂಖ್ಯೆಯನ್ನು ವರ್ಷಾದ ಅಂತ್ಯದ ವೇಳೆಗೆ 100ಕ್ಕೆ ಏರಿಸಲಾಗುವುದು ಎಂದು ತಿಳಿಸಿದೆ.

ಅಂದಹಾಗೆ ಅಮೇರಿಕಾ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಐಫೊನ್‌ 5 ನ ಬೆಲೆ, 16GB ಯ ಐಫೋನ್‌ 5 $649, 32GB ಯದ್ದು $749 ಹಾಗೂ 64GB ಯದ್ದು $849 ಡಾಲರ್‌ ಬೆಲೆಯಲ್ಲಿ ಲಭ್ಯವಿದೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಎಷ್ಟಿರಬಹುದು ಎಂದು ಆಂತರಿಕ ಮೂಲಗಳಿಂದ ಗಿಜ್ಬಾಟ್‌ ನಿಮಗಾಗಿ ಸಂಗ್ರಹಿಸಿದ್ದು ಪಟ್ಟಿ ಈ ಕೆಳಗಿನಂತಿದೆ.

ಐಫೋನ್‌ 5 16GB ಅಮೇರಿಕಾದಲ್ಲಿ $649 – ಭಾರತದಲ್ಲಿ (locked)* ಸುಮಾರು 45,481 ರೂ. (Rs.35,481 + Rs. 10,000)

ಐಫೋನ್‌ 5 32GB ಅಮೇರಿಕಾದಲ್ಲಿ $749 – ಭಾರತದಲ್ಲಿ (locked)* ಸುಮಾರು 50,948 ರೂ. (Rs.40,948 + Rs. 10,000)

ಐಫೋನ್‌ 5 64GB ಅಮೇರಿಕಾದಲ್ಲಿ $849 – ಭಾರತದಲ್ಲಿ (locked)* ಸುಮಾರು 56,415 ರೂ. (Rs.46,415 + Rs. 10,000)

ಇದಲ್ಲದೆ ಆಂತರಿಕ ಮೂಲಗಳ ಪ್ರಕಾರ ಏರ್ಟೆಲ್‌ ಹಾಗೂ ಏರ್ಸೆಲ್‌ ಸಂಸ್ಥೆಗಳು 64GB ಯ ಐಫೊನ್‌ನನ್ನು ಬಿಡುಗಡೆ ಮಾಡುತ್ತಿಲ್ಲ ಬದಲಾಗಿ ಸಧ್ಯಕ್ಕೆ 16GB ಹಾಗೂ 32GB ಮಾದರಿಯ ಫೋನ್‌ಗಳನ್ನು ಮಾತ್ರ ಮಾರುಕಟ್ಟೆಗೆ ತರುತ್ತಿವೆ ಎಂದು ತಿಳಿಸಿವೆ.

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot