ಆಪಲ್ ಫೋನ್‌ನ ಟಾಪ್ ಐದು ವಿಶೇಷತೆಗಳು
ಆಪಲ್ ಕಂಪೆನಿಯು ತನ್ನ ಹೊಸ ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಅನ್ನು ಲಾಂಚ್ ಮಾಡಿ ಉನ್ನತ ಕೆಲಸವನ್ನೇ ಮಾಡಿದೆ. ಆಪಲ್‌ನ ಹೊಸ ಹ್ಯಾಂಡ್‌ಸೆಟ್ ನಿಜಕ್ಕೂ ಅತ್ಯುತ್ತಮ ಕೆಲಸವನ್ನೇ ಮಾಡಿದ್ದು ಐಫೋನ್ ಜನರೇಶನ್‌ನಲ್ಲಿ ಹೊಸತನವನ್ನು ಉಂಟುಮಾಡಿದೆ.
ಕಂಪೆನಿಯು ಆಪಲ್ ವೇರಿಯೇಬಲ್ ಅನ್ನು ಕೂಡ ಲಾಂಚ್ ಮಾಡಿದ್ದು ಇದನ್ನು ಈ ಡಿವೈಸ್‌ಗಳೊಂದಿಗೆ ಸಂಪರ್ಕಪಡಿಸಬಹುದಾಗಿದೆ ಈ ಫೋನ್‌ಗಳ ಡಿಸ್‌ಪ್ಲೇ ಗಾತ್ರವಂತೂ ನಿಜಕ್ಕೂ ಅದ್ಭುತವಾಗಿದ್ದು ಒಂದು ಫೋನ್ 4.4 ಇಂಚಿನದ್ದಾಗಿದ್ದರೆ ಇನ್ನೊಂದು 5.7 ಇಂಚಿನದ್ದಾಗಿದೆ. ಇದರ ಲಾಂಚ್ ಈಗಾಗಲೇ ನಡೆದಿದ್ದು ಇದರ ವಿಸ್ತೃತ ಮಾಹಿತಿಯನ್ನು ಈ ಲೇಖನದಲ್ಲಿ ನಾವು ನಿಮಗೆ ನೀಡುತ್ತಿದ್ದೇವೆ. ಐಫೋನ್ ಕುರಿತಾದ ಐದು ಮಹತ್ವದ ಅಂಶಗಳನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದು ಇದು ಖಂಡಿತ ಮನಸೆಳೆಯುವಂತಿದೆ.

#1
ನಿಮಗೆ ಮೊದಲೇ ತಿಳಿದಿರುವಂತೆ, ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಆಪಲ್ ರಚಿತ A8 ಅನ್ನು ವಿನ್ಯಾಸಗೊಳಿಸಲಾಗಿದೆ. ಇದು 2 ಬಿಲಿಯನ್ ಟ್ರಾನ್ಸಿಸ್ಟರ್ಸ್ ಒಳಭಾಗದಲ್ಲಿದೆ. ಐಫೋನ್ 6 ಪ್ಲಸ್‌ನೊಂದಿಗೆ ನೀವು ಈ ಫೋನ್‌ನಲ್ಲಿ 14 ಗಂಟೆಗಳು ಮತ್ತು 24 ಗಂಟೆಗಳಷ್ಟು ಮಾತನಾಡಬಹುದು.

#2
ಈ ಎರಡೂ ಐಫೋನ್‌ಗಳು ಉತ್ತಮ ಕ್ಯಾಮೆರಾ ಬೆಂಬಲವನ್ನು ಹೊಂದಿದ್ದು ನಿಜಕ್ಕೂ ಅದ್ಭುತವಾಗಿದೆ. ಇದು ಹೊಸ ಸ್ಲೋ ಮೋಶನ್ ವಿಶೇಷತೆಯನ್ನು ಒಳಗೊಂಡಿದೆ. ಇದರ ಮೂಲಕ ನಿಮಗೆ 240 ಫ್ರೇಮ್‌ಗಳ ವೀಡಿಯೊವನ್ನು ತೆಗೆಯಬಹುದಾಗಿದೆ.

#3
ಎರಡೂ ಡಿವೈಸ್‌ಗಳನ್ನು ಟ್ಯಾಪ್ ಮಾಡುವ ಮೂಲಕ ಡೇಟಾ ಸ್ವೈಪ್ ಮಾಡಲು ನಿಮಗೆ ಅನುಮತಿಸುತ್ತದೆ. ಹೊಸ ಟೆಕ್ ತಂತ್ರಜ್ಞಾನವನ್ನು ಆಪಲ್ ತನ್ನ ಈ ಎರಡೂ ಡಿವೈಸ್‌ಗಳಲ್ಲಿ ಅಳವಡಿಸಿದೆ.

#4
ಆಪಲ್‌ನ ವಾರ್ಷಿಕ ವರ್ಲ್ಡ್ ವೈಡ್ ಡೆವಲಪರ್ ಕಾನ್ಫರೆನ್ಸ್‌ನಲ್ಲಿ ಆಪಲ್ ಹೊಸ iOS 8 ಅನ್ನು ಲಾಂಚ್ ಮಾಡಿದೆ. ಹೊಸ ಓಎಸ್ ಸಪ್ಟೆಂಬರ್ 17 ರಂದು ಬಿಡುಗಡೆ ಮಾಡಿದೆ. ಹೊಸ ಅಪ್‌ಡೇಟ್ ಹೆಚ್ಚಿನ ವೈಶಿಷ್ಟ್ಯತೆಗಳನ್ನು ಒದಗಿಸುತ್ತಿದೆ. ಸುಧಾರಿತ ಕೀಬೋರ್ಡ್ ಅನ್ನು ಕೂಡ ಅಳವಡಿಸಿದೆ.

#5
ಈ ಎರಡೂ ಮಾಡಲ್‌ಗಳು ಎರಡು ಆವೃತ್ತಿಗಳಲ್ಲಿ ಬಂದಿದೆ. 4.7 ಇಂಚಿನ ಐಫೋನ್ 6 ಮತ್ತು 5.5 ಇಂಚಿನ ಐಫೋನ್ 6 ಪ್ಲಸ್‌ಗಳಲ್ಲಿ ಬಂದಿದೆ. ಮೂಲ 3.5 ಇಂಚುಗಳಲ್ಲಿ ಬಂದಿದೆ. ತನ್ನೆಲ್ಲಾ ಉತ್ಪನ್ನಗಳಲ್ಲಿ ಒಂದೇ ಗಾತ್ರವನ್ನು ನಿರ್ವಹಿಸಿದ್ದು ಈಗ ಹೊಸ ಮಾರ್ಪಡುಗಳನ್ನು ಬಂದಿದೆ.


Click it and Unblock the Notifications