ಆಪಲ್ ಐಪೋನ್ 6 ಸ್ಯಾಮ್‌ಸಂಗ್ ಗ್ಯಾಲಕ್ಸಿ S5

Written By:

ಹೊಸ ಹೊಸ ಫೋನ್‌ಗಳು ಮಾರುಕಟ್ಟೆಗೆ ದಾಳಿ ಇಟ್ಟಾಗ ಅವುಗಳ ನಡುವೆ ಸ್ಪರ್ಧೆ ಪೈಪೋಟಿ ಸಹಜವೇ. ಮಾರುಕಟ್ಟೆಯಲ್ಲಿ ಕೊಂಚವಾದರೂ ಸ್ಥಾನ ಸಿಗಲು ಈ ರೀತಿಯ ಹೋರಾಟವನ್ನು ಫೋನ್‌ಗಳು ಮಾಡಬೇಕಾಗುತ್ತದೆ.

ಉತ್ಪನ್ನದ ಆಕರ್ಷಣೆ ತುಸು ಬಲವಾಗಿ ಇದ್ದರೆ ಮಾತ್ರವೇ ಗ್ರಾಹಕರು ಅದಕ್ಕೆ ಮರುಳಾಗುತ್ತಾರೆ ಮತ್ತು ಅದರ ಖರೀದಿಗೆ ತೊಡಗುತ್ತಾರೆ. ಈ ರೀತಿಯ ಆರೋಗ್ಯಕರ ಸ್ಪರ್ಧೆಗಳು ಉತ್ಪನ್ನದ ಬೆಲೆಯನ್ನು ಹೆಚ್ಚಿಸುತ್ತದೆ ಮತ್ತು ಅದರ ಬೇಡಿಕೆಯನ್ನೂ ಕೂಡ..

ಇಂದಿನ ಲೇಖನದಲ್ಲಿ ನಾವು ವಿಶ್ಲೇಷಿಸುತ್ತಿರು ವಿಷಯವಾಗಿದೆ ಗ್ಯಾಲಕ್ಸಿ ಎಸ್‌5 ಮತ್ತು ಆಪಲ್ ಐಫೋನ್ 6. ಈಗಾಗಲೇ ಬರಲಿರುವ ಆಪಲ್ ಐಫೋನ್ 6 ಗ್ಯಾಲಕ್ಸಿ ಎಸ್‌5 ನಡುವೆ ರೂಪು ರೇಷೆಯಲ್ಲಿ ಪೈಪೋಟಿ ನಡೆದಿದೆ.
ಹಾಗಿದ್ದರೆ ಅವುಗಳ ವೈಶಿಷ್ಟ್ಯವನ್ನು ಕುರಿತು ಮುಂದೇ ಓದಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್ ಐಪೋನ್ 6 ಹಾಗೂ ಗ್ಯಾಲಕ್ಸಿ ಎಸ್‌5

ಆಪಲ್ ಐಪೋನ್ 6 ಹಾಗೂ ಗ್ಯಾಲಕ್ಸಿ ಎಸ್‌5

#1

ಆಪಲ್ ಐಪೋನ್ 6 ಗ್ಯಾಲಕ್ಸಿಗಿಂತ ಸಣ್ಣದಾಗಿದ್ದು ಇದು ಸ್ಯಾಮ್‌ಸಂಗ್ ಫ್ಲ್ಯಾಗ್‌ಶಿಪ್ ಮಾಡೆಲ್‌ಗಿಂತ ಸಣ್ಣದಾಗಿದೆ. ಇದು 6 ಮಿಲಿಮೀಟರ್ ದಪ್ಪನಾಗಿದ್ದು 4.7 ಇಂಚಿನ ಸ್ಕ್ರೀನ್ ಅನ್ನು ಹೊಂದಿದೆ.

ಐಪೋನ್ 6 ಪ್ಯಾನೆಲ್

ಐಪೋನ್ 6 ಪ್ಯಾನೆಲ್

#2

ಇದು ಆಕರ್ಷಕವಾದ ಪ್ಯಾನೆಲ್ ಅನ್ನು ಹೊಂದಿದ್ದು ನೋಡಲು ತುಂಬಾ ಸುಂದರವಾಗಿದೆ. ಇದಕ್ಕೆ ಸೆಲ್ ಟಚ್ ತಂತ್ರಜ್ಞಾನವನ್ನು ಬಳಸಲಾಗಿದೆ ಹಾಗೂ ದಪ್ಪನೆಯ ಸ್ಕ್ರೀನ್ ಅನ್ನು ಹೊಂದಿದೆ. ಬೇರೆ ಐಫೋನ್‌ಗೆ ಹೋಲಿಸಿದಾಗ ಇದು ತುಸು ವಿಭಿನ್ನವಾಗಿದೆ.

ಗಾತ್ರ

ಗಾತ್ರ

#3

ಆಪಲ್ ಐ ಫೋನ್ ಹಾಗೂ ಸ್ಯಾಮ್‌ಸಂಗ್ ಫೋನ್ ಚಿತ್ರದಲ್ಲಿ ತೋರಿಸಿರುವಂತಹ ವಿಭಿನ್ನತೆಯನ್ನು ನಮಗೆ ಪ್ರದರ್ಶಿಸಲಿದೆ. ಗ್ಯಾಲಕ್ಸಿಗಿಂತ ಐ ಫೋನ್ ಹ್ಯಾಂಡಿಯಾಗಿದ್ದು ಕಿಸೆಯಲ್ಲಿ ಇಡಲು ಸುಲಭವಾಗಿದೆ.

ಆಕರ್ಷಕ ನೋಟ

ಆಕರ್ಷಕ ನೋಟ

#4

ಅತ್ಯಾಧುನಿಕವಾಗಿರುವ ಐಫೋನ್ ಆಕರಷಕವಾಗಿದೆ ಮತ್ತು ಸುಂದರ ಪ್ಯಾನಲ್ ಅನ್ನು ಹೊಂದಿದೆ. ಇದಕ್ಕೆ ಒಳ್ಳೆಯ ಬೇಡಿಕೆ ಬರುವುದು ಎಂಬ ಕಾತರ ಕಂಪೆನಿಗಿದೆ.

ಇನ್ನಷ್ಟು ಐ ಫೋನ್ ಮಾರುಕಟ್ಟೆಗೆ

ಇನ್ನಷ್ಟು ಐ ಫೋನ್ ಮಾರುಕಟ್ಟೆಗೆ

#5

5.5 ಇಂಚಿನ ಸ್ಕ್ರೀನ್ ಉಳ್ಳ ಐಫೋನ್ ಅನ್ನು ಕೆಲವೇ ತಿಂಗಳಲ್ಲಿ ಮಾರುಕಟ್ಟೆಗೆ ತರುವ ಪ್ರಯತ್ನವನ್ನು ಕಂಪೆನಿ ಆಲೋಚಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot