Subscribe to Gizbot

ನಿರೀಕ್ಷಿತ ಐಫೋನ್ 6 ಕಣ್ಮನ ಸೆಳೆಯುವ ವೈಶಿಷ್ಟ್ಯಗಳು

Written By:

ಆಪಲ್ ತನ್ನ ಮುಂದಿನ ಐಫೋನ್ ಅನ್ನು ಹೊರತರಲು ಇನ್ನು ಕೆಲವೇ ಕೆಲವು ತಿಂಗಳುಗಳು ಬಾಕಿ. ಕಿವಿಗಡಚಿಕ್ಕುವ ವದಂತಿಗಳು ಮತ್ತು ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಐಫೋನ್ ಕಲ್ಪಿತ ಚಿತ್ರಗಳು ನಮ್ಮ ನಿರೀಕ್ಷೆಯನ್ನು ಹೆಚ್ಚಿಸುತ್ತಿವೆ.

ಈ ಐಫೋನ್ "ಐಫೋನ್ 6" ಎಂಬ ಹೆಸರಿನಲ್ಲಿ ಬರಲಿದೆಯೇ ಎಂಬುದು ಇನ್ನೂ ನಿಗದಿಯಾಗಿಲ್ಲ. ಆದರೆ ಆಪಲ್ ಮಾತ್ರ ತನ್ನ ಹೊಸ ಐಫೋನ್ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಭರವಸೆಯನ್ನು ಇಟ್ಟುಕೊಂಡಿದೆ. ಫೋನ್ ಕ್ಷೇತ್ರದಲ್ಲೇ ಒಂದಿಲ್ಲೊಂದು ವಿಶೇಷತೆಗಳಿಂದ ಪ್ರಯೋಜನಗಳಿಂದ ತನ್ನ ಸ್ಮಾರ್ಟ್‌ಫೋನ್ ಕ್ಷೇತ್ರವನ್ನು ಹಂತ ಹಂತವಾಗಿ ಮೇಲಕ್ಕೇರಿಸುತ್ತಿರುವ ಆಪಲ್ ತನ್ನ ಸರಿಸಾಟಿ ಯಾರೂ ಇಲ್ಲ ಎಂದೇ ಬೀಗುತ್ತಿದೆ.

ಈ ಬೀಗುವಿಕೆಗೆ ತಕ್ಕಂತೆ ತನ್ನ ಐಫೋನ್ ಅನ್ನು ಆಪಲ್ ತಯಾರಿಸಬೇಕೇ ಬೇಡವೇ? ಹೌದು ಐಫೋನ್ ಕ್ಷೇತ್ರದಲ್ಲೇ ತನ್ನ ಸಿಗ್ನೇಚರ್ ಬ್ರಾಂಡ್ ಅನ್ನು ರೂಪಿಸಿಕೊಂಡಿರುವ ಆಪಲ್ ತನ್ನ ಮುಂದಿನ ಐಫೋನ್‌ನಲ್ಲಿ ಏನೆಲ್ಲಾ ಬದಲಾವಣೆಯನ್ನು ಮಾರ್ಪಡುಗಳನ್ನು ಮಾಡಲಿದೆ ಎಂಬ ಅಂಶವನ್ನು ಗಮನವಿಟ್ಟುಕೊಂಡು ಇಂದು ಗಿಜ್‌ಬ್ಯಾಟ್ ಈ ಲೇಖನವನ್ನು ನಿಮ್ಮ ಮುಂದಿಟ್ಟಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಬಿಲ್ಟ್ ಇನ್ ಐಆರ್

#1

ಸ್ಯಾಮ್‌ಸಂಗ್ ಗ್ಯಾಲಕ್ಸಿ s4 ಹಾಗೂ s5 ಬಿಲ್ಟ್ ಇನ್ ಐಆರ್ ಬ್ಲಾಸ್ಟರ್ ಅನ್ನು ಹೊಂದಿವೆ, ಇದರಿಂದ ನಿಮ್ಮ ಪೋನ್ ಅನ್ನ ನಿಮಗೆ ಯುನಿವರ್ಸಲ್ ರಿಮೋಟ್‌ಗೆ ಪರಿವರ್ತಿಸಿಕೊಳ್ಳಬಹುದು. ಇದುವರಗೆ ಆಪಲ್ ತನ್ನ ಐಆರ್ ಅನ್ನು ತನ್ನ ಐಓಎಸ್ ಡಿವೈಸ್‌ಗಳ ಹೊರಗೆ ಇಟ್ಟಿದೆ, ಆದರೆ ಹೆಚ್ಚು ವದಂತಿಗಳಿಂದ ಪ್ರಸಿದ್ಧಿಗೆ ಬಂದಿರುವ ಆಪಲ್‌ನ ಟಿವಿ ಹೇಗಿರಬಹುದೆಂಬುದು ಯಾರು ಅರಿಯಬಲ್ಲರು?

ಎನ್‌ಎಫ್‌ಸಿ ಸಕ್ರಿಯಗೊಳ್ಳುವಿಕೆ

#2

ಆಪಲ್ ಎನ್‌ಎಫ್‌ಸಿ (ನಿಯರ್ ಫೀಲ್ಡ್ ಕಮ್ಯೂನಿಕೇಶನ್ಸ್) ಅಳವಡಿಸುವ ವದಂತಿಗಳೂ ಇದೆ. ಮೊಬೈಲ್ ಪಾವತಿಗಳ ವಿಷಯದಲ್ಲಿ ಇದು ಪ್ರಯಾಸವುಳ್ಳದಾಗಿದ್ದರೂ, ಇತರ ವಿಷಯಗಳಿಗೆ ಇದು ಉಪಯೋಗಕಾರಿಯಾಗಿದೆ.

ಬೆಟರ್ ಸಿರಿ

#3

ಆಪಲ್ ಸಿರಿ ಎನ್ನುವುದು ಒಂದು ಬಿಲ್ಟ್ ಇನ್ ವಾಯ್ಸ್ ಕಂಟ್ರೋಲ್ ಸೇವೆಯಾಗಿದ್ದು, ಇದು ಗೂಗಲ್ ನೌ ಮತ್ತು ಮೈಕ್ರೋಸಾಫ್ಟ್‌ನ "ಡಿಜಿಟಲ್ ಅಸಿಸ್ಟೆಂಟ್" ಕೊರ್ಟಾನಾವನ್ನು ಮೀರಿಸಿದೆ. ಐಫೋನ್ 5S ಮತ್ತು ಅದರ ಭಾಗವಾಗಿರುವ iOS 7 ನೊಂದಿಗೆ ಸಣ್ಣ ಮಟ್ಟಿಗೆ ಇದು ಸುಧಾರಣೆಯನ್ನು ಪಡೆದುಕೊಂಡಿದೆ. ಇದು ಹೆಂಗಸರ ಮತ್ತು ಗಂಡಸರ ಧ್ವನಿಯನ್ನು ಗುರುತಿಸುವ ವಿಶೇಷ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ವೈರ್‌ಲೆಸ್ ಚಾರ್ಜಿಂಗ್

#4

ಈಗ, ನಿಮ್ಮ ಫೋನ್‌ನ ಬ್ಯಾಟರಿಯನ್ನು ವೈರ್‌ಲೆಸ್ ಬಳಸಿ ಚಾರ್ಜ್ ಮಾಡುವುದಕ್ಕಾಗಿ ನೀವು ಬಯಸಿದರೆ, ನೀವು ಇದಕ್ಕಾಗಿ ಪ್ರತ್ಯೇಕ ಚಾರ್ಜಿಂಗ್ ಸ್ಲೀವ್ (ಕೇಸ್) ಅನ್ನು ಖರೀದಿಸಬೇಕಾಗುತ್ತದೆ. ಆದರೆ ಇತ್ತೀಚಿನ ಕೆಲವು ಫೋನ್‌ಗಳು ಚಾರ್ಜಿಂಗ್ ಕೇಸ್ ಅನ್ನು ತಮ್ಮ ಫೋನ್‌ನಲ್ಲೇ ಹೊಂದಿರುತ್ತವೆ. ಇಂತಹ ಪರಿಣಾಮಕಾರಿ ಬದಲಾವಣೆಯನ್ನು ಆಪಲ್‌ ಐಫೋನ್‌ನಲ್ಲಿ ನಾವು ನಿರೀಕ್ಷಿಸಬಹುದು.

ವಿಡ್ಜೆಟ್ಸ್/ಕಸ್ಟಮೈಸ್ ಮಾಡಬಹುದಾದ ಮುಖ್ಯ ಪರದೆ

#5

ಆಂಡ್ರಾಯ್ಡ್ ಫೋನ್‌ನ ಒಂದು ವಿಶೇಷತೆಯೆಂದರೆ ಇದಕ್ಕೆ ನೀವು ವಿಡ್ಜೆಟ್ಸ್ ಮತ್ತು ಫೋನ್‌ ಅನ್ನು ಹೆಚ್ಚು ಕಸ್ಟಮೈಸ್ ಮಾಡಿಕೊಳ್ಳಬಹುದು. ಇದರಿಂದ ನೀವು ಹೆಚ್ಚು ಬಳಸಿದ ಅಪ್ಲಿಕೇಶನ್‌ಗಳು, ಸೆಟ್ಟಿಂಗ್‌ಗಳು, ಮತ್ತು ಇತರ ಉಪಯೋಗಕಾರಿ ಮಾಹಿತಿಯನ್ನು ಕೂಡಲೇ ಪಡೆದುಕೊಳ್ಳಬಹುದು.

ಜಲನಿರೋಧಕ

#6

ನಿಮ್ಮ ಫೋನ್ ಸಾಕಷ್ಟು ಬಾರಿ ನೀರಿಗೆ ಬಿದ್ದು ಮೇಲೇಳಲಾರದ ಪರಿಸ್ಥಿಯನ್ನು ಅನುಭವಿಸಿದ್ದು ನಿಮಗೆ ತಿಳಿದಿರಬಹುದು. ಆದರೆ ಇತ್ತೀಚಿನ ಫೋನ್‌ಗಳು ನೀರು ಮತ್ತು ಧೂಳಿನಿಂದ ಸುರಕ್ಷೆಯನ್ನು ಪಡೆದುಕೊಂಡಿದ್ದು ಫೋನ್‌ಗೆ ಯಾವುದೇ ರೀತಿಯ ಹಾನಿಯನ್ನು ಉಂಟುಮಾಡುವುದಿಲ್ಲ.

ಅಪ್‌ಗ್ರೇಡ್ ಮಾಡಬಹುದಾದ ವೈ-ಫೈ

#7

ಆಪಲ್ ತನ್ನ ಇತ್ತೀಚಿನ ಮ್ಯಾಕ್‌ಬುಕ್ ಏರ್ಸ್ ಮತ್ತು ಏರ್‌ಪೋರ್ಟ್‌ ರೂಟರ್‌ಗಳೊಂದಿಗೆ ವೈ-ಫೈಯ ಹೊಸ ಸುವಾಸನೆಯೊಂದಿಗೆ ಬಂದಿದೆ. ಇತರ ಕಂಪೆನಿಗಳೂ ಕೂಡ ಹೊಸ ರೂಟರ್‌ಗಳು ಮತ್ತು ನೆಟ್‌ವರ್ಕಿಂಗ್ ಗೇರ್‌ನೊಂದಿಗೆ ಬಂದಿದ್ದು ವೈಫೈ 802.11ac ಯೊಂದಿಗೆ ಇದು ಬಂದಿದೆ.

ಹೆಚ್ಚು ಸಂಗ್ರಹಣೆ

#8

ಜೂನ್ 2010 ರಲ್ಲಿ ಮಾರುಕಟ್ಟೆಗೆ ಬಂದಿದ್ದ ತೋಶಿಬಾದ 128GB NAND ಫ್ಲ್ಯಾಶ್ ಮೆಮೊರಿ ಮಾಡ್ಯುಲ್‌ಗಳ ಬಗ್ಗೆ ನಿಮಗೆ ತಿಳಿದಿರಬಹುದು. ಆದರೆ ಪ್ರಸ್ತುತ ಐಫೋನ್ 64ಜಿಬಿ ಆಂತರಿಕ ಸಂಗ್ರಹಣೆಯೊಂದಿಗೆ ಬಂದಿದ್ದು ಇದನ್ನು ವಿಸ್ತರಿಸಲಾಗುವುದಿಲ್ಲ. ಆದರೆ ಮುಂದಿನ ಐಫೋನ್ ಇನ್ನಷ್ಟು ಮೆಮೊರಿ ಸಂಗ್ರಹಣೆಯೊಂದಿಗೆ ಬರುವ ನಿರೀಕ್ಷೆಯಲ್ಲಿದೆ.

ವೇಗವಾದ ಪ್ರೊಸೆಸರ್, ಸುಧಾರಿತ 3ಡಿ ಗ್ರಾಫಿಕ್ಸ್

#9

ಐಫೋನ್ ಹೆಚ್ಚು ವೈಶಿಷ್ಟ್ಯಗಳೊಂದಿಗೆ ಸುಧಾರಿತ ಐಫೋನ್ ಗ್ರಾಫಿಕ್ ಸಾಮರ್ಥ್ಯಗಳನ್ನು ಹೊರತರುತ್ತಿದ್ದು, ಮುಂದಿನ ಐಫೋನ್‌ನಲ್ಲೂ ಆಪಲ್‌ನಿಂದ ಈ ಬಗೆಯ ನಿರೀಕ್ಷೆಯನ್ನು ನಾವು ಮಾಡಬಹುದು.

ಉತ್ತಮ ಕ್ಯಾಮೆರಾ

#10

ಹೆಚ್ಚಿನ ಫೀಚರ್‌ಗಳೊಂದಿಗೆ ಆಪಲ್ ತನ್ನ ಫೋನ್‌ನಲ್ಲಿ ಕ್ಯಾಮೆರಾ ಗುಣಮಟ್ಟವನ್ನು ಕೂಡ ಸುಧಾರಿಸಲಿದೆ.

ಉತ್ತಮ ಬ್ಯಾಟರಿ ಲೈಫ್

#11

ವೇಗವಾದ ಪ್ರೊಸೆಸರ್ ಮತ್ತು ಗ್ರಾಫಿಕ್ಸ್‌ನೊಂದಿಗೆ ಬಾಳಿಕೆ ಬರುವ ಬ್ಯಾಟರಿ ಲೈಫ್ ಅನ್ನು ಕೂಡ ಮುಂದಿನ ಐಫೋನ್‌ಗಳಲ್ಲಿ ನಾವು ಆಪಲ್‌ನಿಂದ ಬಯಸುತ್ತೇವೆ. ಹೆಚ್ಚಿನ ಜನರು ಉತ್ತಮ ಬ್ಯಾಟರಿ ಬಾಳ್ವಿಕೆಗಾಗಿ ಸ್ವಲ್ಪ ದಪ್ಪನೆಯ ಫೋನ್ ಅನ್ನು ಬಯಸುತ್ತಿದ್ದಾರೆ.

ದೊಡ್ಡ ಸ್ಕ್ರೀನ್

#12

ಜಂಬೋ ಸ್ಮಾರ್ಟ್‌ಫೋನ್‌ಗಳಲ್ಲಿ, ರೂಮಿಯರ್ ಪರದೆಗಳೊಂದಿಗೆ, ಆಪಲ್ ತನ್ನ ಮುಂಬರಲಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಉತ್ತಮ ದೊಡ್ಡದಾದ ಪರದೆಯನ್ನು ಒದಗಿಸುವ ನಿರೀಕ್ಷೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot