ಆಪಲ್‌ನಿಂದ ಫ್ಯಾಬ್ಲೆಟ್ ಮಾರುಕಟ್ಟೆಗೆ ಭರ್ಜರಿ ಪ್ರವೇಶ

By Shwetha
|

ಕೆಲವು ತಿಂಗಳುಗಳ ಕಾಯುವಿಕೆಯ ನಂತರ, ಆಪಲ್ ಮಂಗಳವಾರ ದೊಡ್ಡ ಪರದೆಯುಳ್ಳ 5.5 ಇಂಚಿನ ಡಿಸ್‌ಪ್ಲೇಯ ಐಫೋನ್ ಅನ್ನು ಲಾಂಚ್ ಮಾಡಿದೆ. ಹೊಸದಾಗಿ ಲಾಂಚ್ ಮಾಡಿರುವ ಐಫೋನ್ 6 ಪ್ಲಸ್ ಜೊತೆಗೆ, ಆಪಲ್ ಕೊನೆಗೂ ಫ್ಯಾಬ್ಲೆಟ್ ಮಾರುಕಟ್ಟೆಗೆ ಕಾಲಿಟ್ಡಿದೆ. ಹೊಸದಾಗಿ ಲಾಂಚ್ ಮಾಡಿರುವ ದೊಡ್ಡ ಪರದೆಯ ಸ್ಮಾರ್ಟ್‌ಫೋನ್ ಯುಎಸ್‌ನಲ್ಲಿ ಸಪ್ಟೆಂಬರ್ 19 ರ ನಂತರ ಮಾರಾಟಕ್ಕೆ ಲಭ್ಯವಾಗಲಿದೆ.

ಇನ್ನಷ್ಟು ನಿಖರವಾಗಿ ಹೇಳಬೇಕಾದರೆ, ಆಪಲ್ ಐಫೋನ್ 6 ಪ್ಲಸ್ 5.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು ರೆಟಿನಾ HD ಡಿಸ್‌ಪ್ಲೇ (1920 x 1080) ಫೋನ್‌ನಲ್ಲಿದೆ. ಇದರ ಪಿಕ್ಸೆಲ್ ಡೆನ್ಸಿಟಿ 400 ppi ಆಗಿದ್ದು iOS 8 ಇದರಲ್ಲಿದೆ. ಸಫಿಯರ್ ಗ್ಲಾಸ್ ಪ್ಯಾನಲ್ ಡಿವೈಸ್‌ನಲ್ಲಿದ್ದು ಇದರ ಬಗ್ಗೆ ಹೆಚ್ಚು ಹೇಳಲು ಪದಗಳೇ ಸಾಲುತ್ತಿಲ್ಲ.

ಬಹು ನಿರೀಕ್ಷಿತ ಆಪಲ್ ಐಫೋನ್ 6 ಪ್ಲಸ್ ಲಾಂಚ್

ಇನ್ನೂ ಹೆಚ್ಚಾಗಿ, ಐಫೋನ್ 6 ಪ್ಲಸ್‌ನ ಹಿಂಭಾಗವು ಅಲ್ಯುಮಿನಿಯಮ್ ಕವರ್ ಅನ್ನು ಹೊಂದಿದ್ದು ಪೋನ್‌ನ ಸುತ್ತಲೂ ಸ್ಟೈನ್‌ಲೆಸ್ ಸ್ಟೀಲ್ ಅನ್ನು ಅಳವಡಿಸಲಾಗಿದೆ. ಇದೇ ಸಮಯಕ್ಕೆ ಬಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4, 7.1 ಎಮ್‌ಎಮ್ ಅಳತೆಯಲ್ಲಿದ್ದು ಮಾರುಕಟ್ಟೆಯಲ್ಲಿ ತೆಳುವಾದ ಫೋನ್ ಆಗಿ ಹೆಸರು ಗಳಿಸಿಲ್ಲ. ಆಪಲ್‌ನ ಐಫೋನ್ 6 ಪ್ಲಸ್ 64-bit A8 ಚಿಪ್‌ಸೆಟ್ ಸಾಮರ್ಥ್ಯವನ್ನು ಹೊಂದಿದ್ದು, ಕಂಪೆನಿ ಹೇಳುವಂತೆ ಇದು ಮೂಲ A7 ಪ್ರೊಸೆಸರ್‌ಗಿಂತ 50% ಹೆಚ್ಚು ಶಕ್ತಿಶಾಲಿಯಾಗಿದೆ. ಇದರ ಬಳಕೆದಾರ ಇಂಟರ್ಫೇಸ್ ಅನ್ನು ಕೂಡ ವಿಸ್ತರಿಸಲಾಗಿದ್ದು ಇದರ ದೊಡ್ಡ ಪರದೆ ಮತ್ತು ಸ್ಪಿಲ್ಟ್ ಸ್ಕ್ರೀನ್ ಮೋಡ್‌ಗೆ ಸರಿಹೊಂದುವಂತೆ ಮಾರ್ಪಡಿಸಲಾಗಿದೆ. ಐಫೋನ್ 6 ಪ್ಲಸ್ ಲ್ಯಾಂಡ್ ಸ್ಕೇಪ್ ಮೋಡ್‌ಗೂ ಬೆಂಬಲ ನೀಡುತ್ತದೆ.

ಬಹು ನಿರೀಕ್ಷಿತ ಆಪಲ್ ಐಫೋನ್ 6 ಪ್ಲಸ್ ಲಾಂಚ್

ಇನ್ನು ಕ್ಯಾಮೆರಾ ವಿಭಾಗದಲ್ಲಿ ಅತ್ಯಾಧುನಿಕ ಐಫೋನ್ 6 ಪ್ಲಸ್ 8 ಮೆಗಪಿಕ್ಸೆಲ್ iSight ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದ್ದು ಟ್ರು ಟೋನ್ ಡ್ಯುಯಲ್ LED ಫ್ಲ್ಯಾಶ್ ಅನ್ನು ಒಳಗೊಂಡಿದೆ. ಹೆಚ್ಚು ಆಸಕ್ತಿಕರವಾಗಿ ಐಫೋನ್ 6 ಪ್ಲಸ್ ಇದು ಅಪ್ಟಿಕಲ್ ಇಮೇಜ್ ಸ್ಟಿಬಿಲೈಸೇಶನ್ ವಿಶೇಷತೆಯನ್ನು ಕೂಡ ಹೊಂದಿದೆ.

ಅಚ್ಚುಕಟ್ಟಾದ ಡಿವೈಸ್ ಆಗಿರುವ ಐಫೋನ್ 6 ಪ್ಲಸ್‌ನ 16 ಜಿಬಿ ಆವೃತ್ತಿಗೆ ರೂ 17,940 64GB ಹಾಗೂ 128GB ಗೆ ರೂ 24,000 ಅಥವಾ ರೂ 29,940 ಎಂದು ನಿಗದಿಪಡಿಸಲಾಗಿದೆ. ಭಾರತದಲ್ಲಿ ಐಫೋನ್ 6 ಅನ್ನು ಕಂಪೆನಿ ಯಾವಾಗ ಲಾಂಚ್ ಮಾಡುತ್ತದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಇದೇ ಸಮಯದಲ್ಲಿ ಕಂಪೆನಿಯು ಐಫೋನ್ 6 ಮತ್ತು ಹೆಚ್ಚು ನಿರೀಕ್ಷಿತ ಆಪಲ್ ವಾಚ್ ಅನ್ನು ಬಿಡುಗಡೆ ಮಾಡಿದೆ.

Best Mobiles in India

English summary
This article tells about iPhone 6 Plus Launched With 5.5 inch Display Apple Might Fire up ‘Phablet’ Market.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X