ಭವಿಷ್ಯದ ಸ್ಮಾರ್ಟ್‌ಫೋನ್‌ಗಳು ಎಂದು ಗರುತಿಸಲ್ಪಡುವ ಐಫೋನ್ ಸೀರೀಸ್‌ನ ಸರಣಿ ಸ್ಮಾರ್ಟ್‌ಫೋನ್ ಐಫೋನ್ 8 ಬಿಡುಗಡೆಯಾಗಿದ್ದು, ಇದೀಗ ಜಾಗತಿಕ ಸುದ್ದಿಯಾಗಿ ಬದಲಾಗಿದೆ.!! ಆಪಲ್ ಹತ್ತನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಬಿಡುಗಡೆಯಾಗಿದ್ದು, ಐಫೋನ್ ಪ್ರಿಯರಿಗೆ ಖುಷಿ ಸುದ್ದಿಯಾಗಿದೆ.!!
ಕ್ಯಾಲಿಫೋರ್ನಿಯಾದ ಕ್ಯುಪೆರ್ಟಿನೊದ ಆಪಲ್ ಪಾರ್ಕ್‌ನಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ ಆಪಲ್ ಐಫೋನ್ 8 ಬಿಡುಗಡೆಯಾಗಿದ್ದು, ನಿರೀಕ್ಷೆಯಂತೆಯೇ ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಭಾರಿ ಫೀಚರ್ಸ್‌ಗಳನ್ನು ಹೊದ್ದು ಹೊರಬಂದಿದೆ.!! ಹಾಗಾದರೆ, ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಏನೆಲ್ಲಾ ಫೀಚರ್ಸ್ ಹೊಂದಿವೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!
ಅಭೂತಪೂರ್ವ ತಂತ್ರಜ್ಞಾನ
ನೂತನ ಐಫೋನ್ 8 ನಲ್ಲಿ ವೈರ್‌ಲೆಸ್ ಚಾರ್ಜಿಂಗ್ ಹಾಗೂ ಬಳಕೆದಾರರ ಮುಖವನ್ನು ಗುರುತಿಸಿ ಫೋನ್ ಆನ್ ಆಗುವಂಥ ವಿಶಿಷ್ಠ ಹಾಗೂ ಅಭೂತಪೂರ್ವ ತಂತ್ರಜ್ಞಾನಗಳನ್ನು ಪರಿಚಯಿಸಲಾಗಿದೆ.!! ಇನ್ನು ಎಮೋಜಿಗಳ ಮೂಲಕ ಸಂದೇಶ ರೆಕಾರ್ಡ್ ಮಾಡಿ ಕಳುಹಿಸುವ ಆಯ್ಕೆಯ ಮೂಲಕ ಐಪೋನ್ ಎಲ್ಲರನ್ನು ಅಚ್ಚರಿಗೆ ದೂಡಿದೆ.!!
ಐಫೋನ್ 8 ಬಣ್ಣ ಮತ್ತು ಹೋಂ ಬಟನ್
ನೂತನವಾಗಿ ಬಿಡುಗಡೆಯಾಗಿರುವ ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಸ್ಮಾರ್ಟ್‌ಪೋನ್‌ಗಳು ಸಿಲ್ವರ್, ಸ್ಪೇಸ್‌ಗ್ರೇ ಮತ್ತು ಗೋಲ್ಡ್ ಬಣ್ಣಗಳಲ್ಲಿ ಬಿಡುಗಡೆಯಾಗಿದೆ.!! ಮೊದಲೇ ರೂಮರ್ಸ್ ಹಬ್ಬಿದಂತೆ ಐಫೋನ್ 8 ಸ್ಮಾರ್ಟ್ಗಫೋನ್‌ಗಳಲ್ಲಿ ಹೋಂ ಬಟನ್ ಆಯ್ಕೆಯನ್ನು ಕೊನೆಗೊಳಿಸಲಾಗಿದೆ.!!
ಬಯೋನಿಕ್ ಚಿಪ್ ಮತ್ತು ವೈರ್‌ಲೆಸ್ ಚಾರ್ಜಿಂಗ್!!
ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಸ್ಮಾರ್ಟ್‌ಪೋನ್‌ಗಳು ನೂತನವಾಗಿ ಅಭಿವೃಧ್ದಿಪಡಿಸಿರುವ ಬಯೋನಿಕ್ ಚಿಪ್ ಅನ್ನು ಒಳಗೊಂಡಿದೆ ಎಂದು ಆಪಲ್ ಕಂಪೆನಿ ತಿಳಿಸಿದೆ.!! ಗ್ರಾಹಕರು ಬಹುದಿನಗಳಿಮದ ಕಾಯುತ್ತಿದ್ದ ವೈರ್‌ಲೆಸ್ ಚಾರ್ಜಿಂಗ್ ಆಸೆಯನ್ನು ಐಫೋನ್ 8 ಪೂರೈಸಿದೆ.!!
ಎಡ್ಜ್ ಟು ಎಡ್ಜ್ ಸ್ಕ್ರೀನ್!!
ಐಫೋನ್ 8 4.7 ಇಂಚಿನ ಡಿಸ್‌ಪ್ಲೇ ಹೊಂದಿದ್ದರೆ, ಐಫೋನ್ 8 ಪ್ಲಸ್ 5.5 ಇಂಚಿನ ರೆಟಿನಾ ಎಚ್‌ಡಿ ಡಿಸ್‌ಪ್ಲೇ ಹೊಂದಿವೆ.!! ಆಪಲ್ ಕಂಪೆನಿ ಹೇಳುವಂತೆ ಐಫೋನ್ 8ನಲ್ಲಿ ಬಳಕೆ ಮಾಡಿರುವ ಗ್ಲಾಸ್ ಹೆಚ್ಚು ಬಾಳಿಕೆ ಬರುವಂತೆ ರೂಪಿಸಲಾಗಿದೆ ಎಂದು ಹೇಳಿದೆ.! ಇನ್ನು ಎಡ್ಜ್ ಟು ಎಡ್ಜ್ ಸ್ಕ್ರೀನ್ ಮೂಲಕ ಭಾರಿ ಕ್ರೇಜ್ ಹುಟ್ಟಿಸಿದೆ.!!
ಡ್ಯುಯಲ್ ಕ್ಯಾಮೆರಾ ಮತ್ತು 3ಡಿ ಸಪೋರ್ಟೆಡ್
ಡಿಎಸ್ಎಲ್ಆರ್ ಕ್ಯಾಮೆರಾಗಳಲ್ಲಿ ಲಭ್ಯವಿರಬಹುದಾದ ಕ್ಯಾಮೆರಾ ಗುಣಮಟ್ಟವನ್ನು ಐಫೋನ್ 8 ಸ್ಮಾರ್ಟ್‌ಫೋನ್ ಒಳಗೊಂಡಿದೆ.!! ಇದಕ್ಕಾಗಿ ಐಫೋನ್ 8ನಲ್ಲಿ 12MP ಶಕ್ತಿಯ ಕ್ಯಾಮೆರಾಗಳು ಲಬಯವಿದ್ದು, ಅತ್ಯಾಧುನಿಕ ಲೆನ್ಸ್ ಬಳಸಲಾಗಿದೆ.!! ಇನ್ನು 3ಡಿ ಗೇಮ್‌ಗಳಿಗೆ ಸ್ಮಾರ್ಟ್ಗಫೋನ್ ಪೂರ್ಣ ಸಪೋರ್ಟ್ ಮಾಡಲಿದೆ.!!
ಓದಿರಿ:ವಾಟ್ಸ್‌ಆಪ್‌ನಲ್ಲಿ ಸೆಂಡ್ ಆದ ಮೆಸೇಜ್ ಡಿಲೀಟ್ ಮಾಡುವ ಆಯ್ಕೆ.!!
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.