Subscribe to Gizbot

ಭಾರಿ ಕುತೋಹಲ ಹುಟ್ಟಿಸಿದ ಐಫೋನ್ 8 ಫೀಚರ್ಸ್!..ಹೇಗಿದೆ ಗೊತ್ತಾ ಫೋನ್!!

Written By:

ಆಂಡ್ರಾಯ್ಡ್ ಫೋನ್‌ಗಳು ವಿಂಡೋಸ್ ಫೋನ್‌ಗಳನ್ನು ತುಳಿದವು. ಆದರೆ, ಆಪಲ್ ಅನ್ನು ಟಚ್‌ ಕೂಡ ಮಾಡಲಾಗಲಿಲ್ಲ ಎನ್ನುವುದು ಬಹುತೇಕ ಎಲ್ಲರಿಗೂ ಗೊತ್ತು.! ವಿಶ್ವಮಟ್ಟದಲ್ಲಿ ಇಂದಿಗೂ ಅತ್ಯುತ್ತಮ ಸ್ಮಾರ್ಟ್‌ಫೋನ್ ಪಟ್ಟ ಉಳಿಸಿಕೊಂಡಿರುವ ಐಪೋನ್ ಎಂದೂ ಕೂಡ ತನ್ನ ಗುಣಮಟ್ಟದಲ್ಲಿ ರಾಜಿಯಾಗಿಲ್ಲ.!

ಗ್ರಾಹಕರ ನಿರೀಕ್ಷಗೂ ಮೀರಿ ವಿನ್ಯಾಸಗೊಳ್ಳುವ ಐಪೊನ್‌ಗಳು ಪ್ರತಿಬಾರಿಯೂ ಒಂದಿಲ್ಲೊಂದು ವಿಶೇಷತೆಗಳನ್ನು ಹೊಂದಿ ಬರುತ್ತವೆ. ಮತ್ತು ಈ ಫೋನ್‌ಗಳನ್ನು ಖರೀದಿಸಲು ಗ್ರಾಹಕರು ಸಹ ಮುಗಿಬೀಳುತ್ತಾರೆ.! ಇದೀಗ ಇದಕ್ಕೆ ಹೊಸ ಸೇರ್ಪಡೆ ಆಪಲ್ ಸರಣಿ ಸ್ಮಾರ್ಟ್‌ಫೋನ್ ಐಫೋನ್ 8!!

ಪ್ರಸ್ತುತ ಐಫೋನ್ 8 ಯಾವ ಯಾವ ವಿಶೇಷತೆಗಳನ್ನು ಒಳಗೊಂಡಿರುತ್ತವೆ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದ್ದು. ಹಾಗಾಗಿ, ಭವಿಷ್ಯದ ಐಫೋನ್ 8 ಸ್ಮಾರ್ಟ್‌ಫೋನ್ ಯಾವ ಹೆಚ್ಚಿನ ಫೀಚರ್ಸ್ ಒಳಗೊಂಡಿದೆ? ಸ್ಮಾರ್ಟ್‌ಫೋನ್ ಹೇಗೆ ವಿನ್ಯಾಸ ಹೊಂದಿರುತ್ತದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಜೆಲ್‌ಲೆಸ್ ಎಲ್ಇಡಿ ಡಿಸ್‌ಪ್ಲೇ

ಬೆಜೆಲ್‌ಲೆಸ್ ಎಲ್ಇಡಿ ಡಿಸ್‌ಪ್ಲೇ

ನೂತನವಾಗಿ ಬಿಡುಗಡೆಯಾಗಲಿರುವ ನೂತನ ಆಪಲ್ 8 ಸ್ಮಾರ್ಟ್‌ಫೋನ್ ಸಂಪೂರ್ಣ ಗ್ಲಾಸ್ ಡಿಸ್‌ಪ್ಲೇಯನ್ನು ಹೋಂದಿರಲಿದೆ. ಸ್ಮಾರ್ಟ್‌ಪ್ರಿಯರ ನಿದ್ದಗೆಡಿಸಿರುವ ಬೆಜೆಲ್‌ಲೆಸ್ ಡಿಸ್‌ಪ್ಲೇ ಐಫೋನ್ 8 ರ ಪ್ರಮುಖ ವಿಶೇಷ ಎನ್ನಬಹುದು. ಪೂರ್ತಿ ಡಿಸ್‌ಪ್ಲೇಯನ್ನು ಹೊಂದುವ ಅವಕಾಶಕ್ಕಾಗಿ ಜನರು ಕಾಯುತ್ತಿದ್ದಾರೆ.!!

ಹೋಮ್ ಬಟನ್ ಲೆಸ್

ಹೋಮ್ ಬಟನ್ ಲೆಸ್

ಕೀಪ್ಯಾಡ್ ಫೋನ್‌ಗಳ ನಂತರ ಸಿಂಗಲ್ ಬಟನ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದಿದ್ದವು. ಇದೀಗ ಬೆಜೆಲ್‌ಲೆಸ್ ಡಿಸ್‌ಪ್ಲೇ ಹೊಂದು ಬರುತ್ತಿರುವ ನೂತನ ಸ್ಮಾರ್ಟ್‌ಫೋನ್ ಐಫೋನ್ 8 ಹೋಮ್ ಬಟನ್ ಹೊಂದಿರುವುದಿಲ್ಲ ಎನ್ನಲಾಗಿದೆ ಮತ್ತು ಹಿಂಬಾಗದಲ್ಲಿ ಸೆನ್ಸಾರ್ ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.!!

ಐಫೋನ್ ಹೊಂದಿರಲಿದೆ 8GB RAM!!

ಐಫೋನ್ ಹೊಂದಿರಲಿದೆ 8GB RAM!!

ಈಗಾಗಲೇ ಹಲವು ಸ್ಮಾರ್ಟ್‌ಫೊನ್‌ಗಳು 8GB RAM ಹೊಂದಿ ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಅವುಗಳಿಗೆ ಸೆಡ್ಡುಹೊಡೆಯಲು ಆಪಲ್ ಕಂಪೆನಿ ಐಫೋನ್ 8 ಸ್ಮಾರ್ಟ್‌ಫೋನ್ ಮೂಲಕ 8GB RAM ಹೊಂದಿರಲಿದೆ ಎಂದು ಹೇಳಲಾಗಿದೆ.!

ವೈರ್‌ಲೆಸ್ ಚಾರ್ಜ್

ವೈರ್‌ಲೆಸ್ ಚಾರ್ಜ್

ಸ್ಮಾರ್ಟ್ಫೋನ್ ಬಳಕೆದಾರರ ಬಹುದೊಡ್ಡ ಸಮಸ್ಯೆ ಎಂದರೆ ಬ್ಯಾಟರಿ ಚಾರ್ಜ್ ಬಹುಕಾಲ ಬಾಳಿಕೆ ಬರುವುದಿಲ್ಲ ಎಂಬುದು. ಸ್ಮಾರ್ಟ್‌ಫೋನ್ ಉಪಯೋಗಿಸುವಾಗ ಯಾವಾಗಲೂ ಚಾರ್ಜ್ ಹಾಕಿಯೇ ಫೋನ್ ಉಪಯೋಗಿಸಬೇಕಾದ ಪರಿಸ್ಥಿತಿ ಇದೆ. ಹಾಗಾಗಿ, ವೈರ್‌ಲೆಸ್ ಚಾರ್ಜ್ ಆಗುವ ಟೆಕ್ನಾಲಜಿ ಹೊಂದಿ ಆಪಲ್ 8 ಸ್ಮಾರ್ಟ್‌ಫೋನ್ ಹೊರಬರುತ್ತಿದೆ.

ಬಿಗ್ ಬ್ಯಾಟರಿ!

ಬಿಗ್ ಬ್ಯಾಟರಿ!

ಸ್ಮಾರ್ಟ್‌ಫೋನ್ ಬಳಕೆಗೆ ಸಾಕಾಗುವಷ್ಟು ಶಕ್ತಿಯನ್ನು ಪ್ರಸ್ತುತ ಐಫೋನ್ ಬ್ಯಾಟರಿಗಳು ನೀಡುತ್ತಿಲ್ಲ ಎಂಬುದು ಐಫೋನ್‌ ಪ್ರಿಯರ ದೂರು. ಹಾಗಾಗಿ, ಹೆಚ್ಚು ಚಾರ್ಜ್ ನೀಡುವಂತಹ ಬ್ಯಾಟರಿಯನ್ನು ಆಪಲ್ ಐಫೋನ್ 8 ಹೊಂದಲಿದೆ. ಇದಕ್ಕಾಗಿ ಶಕ್ತಿಯುತ ಲೀ-ಐಯಾನ್ ಬ್ಯಾಟರಿಗಳು ಐಫೋನ್ 8 ನಲ್ಲಿ ಬಳಕೆಗೆ ಬರಲಿವೆ.!!

ಐಫೋನ್ 8 ಬೆಲೆಯೂ ಲೀಕ್!!

ಐಫೋನ್ 8 ಬೆಲೆಯೂ ಲೀಕ್!!

ಭಾರೀ ಫೀಚರ್ಸ್ ಒಳಗೊಂಡುಬರುತ್ತಿರುವ ಐಫೋನ್ 8 ಬೆಲೆ ಕೂಡ ಲೀಕ್ ಆಗಿದ್ದು, 1100 ಡಾಲರ್‌ಗಳಿಗೆ ಐಫೋನ್ 8 ಬಿಡುಗಡೆಯಾಗುತ್ತದೆ ಎನ್ನಲಾಗಿದೆ.!! ಅಂದರೆ ಸುಮಾರು 70 ಸಾವಿರ ರೂಪಾಯಿಯನ್ನು ಐಫೋನ್ 8 ಖರೀದಿಸಲು ಖರ್ಚು ಮಾಡಬೇಕಿದೆ!!

ಓದಿರಿ:ಟೆಲಿಕಾಂ ಕಂಪೆನಿಗಳು ಮಾಡುತ್ತಿದ್ದ ಮೋಸಕ್ಕೆ ನಿಮ್ಮ ರಕ್ತ ಕುದಿಯುತ್ತದೆ!! ಏಕೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
iPhone 8 top lip will only show battery and connectivity options.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot