Subscribe to Gizbot

ಸೆಪ್ಟೆಂಬರ್‌ 12ಕ್ಕೆ ಬಿಡುಗಡೆಯಾಗಲಿದೆ ''ಐಫೋನ್ 8''!!..ಈ ಬಾರಿ ಏನೇನು ಹೊಸತು?

Written By:

ಐಫೋನ್ 8 ಬಿಡುಗಡೆ ಬಗ್ಗೆ ಇಷ್ಟು ದಿವಸ ಇದ್ದ ರೂಮರ್ಸ್‌ಗೆ ಇದೀಗ ಬ್ರೇಕ್ ಬಿಳುವ ಲಕ್ಷಣ ಇದೆ.! ಜಗತ್ತಿನಾಧ್ಯಂತ ಭಾರಿ ಕುತೋಹಲ ಮೂಡಿಸಿರುವ ಆಪಲ್‌ನ ನೂತನ ಸರಣಿ ಸ್ಮಾರ್ಟ್‌ಫೋನ್ 'ಐಫೋನ್ 8' ಇದೇ ಸೆಪ್ಟೆಂಬರ್‌ 12 ರಂದು ಲಾಂಚ್ ಆಗಲಿದೆ ಎನ್ನುವ ಸುದ್ದಿ ಹೊರಬಿದ್ದಿದೆ..!!

ಸೆಪ್ಟೆಂಬರ್ 12ರಂದು ಲಾಂಚ್ ಆಗಲಿರುವ ಐಫೋನ್ 8 ಒಟ್ಟು 4 ಮಿಲಿಯನ್ ಯುನಿಟ್ ಮಾತ್ರವೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಹೇಳಲಾಗಿದ್ದು, ಗ್ರಾಹಕರ ಬೇಡಿಕೆಗಿಂತಲೂ ಹೆಚ್ಚು ಫೀಚರ್ಸ್ ಬಿಡುಗಡೆಮಾಡುವ ಆಪಲ್‌ ಈ ಭಾರಿ 'ಐಫೋನ್ 8"ಮೂಲಕ ಯಾವೆಲ್ಲಾ ಹೊಸ ಫೀಚರ್ಸ್‌ಗಳನ್ನು ತರಲಿದೆ ಎಂಬುದು ಕುತೋಹಲಕ್ಕೆ ಕಾರಣವಾಗಿದೆ.!!

ಈಗಾಗಲೇ ಆಪಲ್ ಪ್ರಿಯರು ಐಫೋನ್ 8 ಸ್ಮಾರ್ಟ್‌ಫೋನ್‌ ಬರುವಿಕೆಗಾಗಿ ಕಾತುರದಿಂದ ಕಾಯುತ್ತಿದ್ದು, ನಿರೀಕ್ಷೆಯ ಪ್ರಕಾರ ಐಫೋನ್ 8 ಏನೆಲ್ಲಾ ಫಿಚರ್ಸ್ ಹೊಂದಿರಲಿದೆ? ಬೆಲೆ ಎಷ್ಟು? ಎಂಬೆಲ್ಲಾ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಜೆಲ್‌ಲೆಸ್ ಎಲ್ಇಡಿ ಡಿಸ್‌ಪ್ಲೇ

ಬೆಜೆಲ್‌ಲೆಸ್ ಎಲ್ಇಡಿ ಡಿಸ್‌ಪ್ಲೇ

ನೂತನವಾಗಿ ಬಿಡುಗಡೆಯಾಗಲಿರುವ ನೂತನ ಆಪಲ್ 8 ಸ್ಮಾರ್ಟ್‌ಫೋನ್ ಸಂಪೂರ್ಣ ಗ್ಲಾಸ್ ಡಿಸ್‌ಪ್ಲೇಯನ್ನು ಹೋಂದಿರಲಿದೆ. ಸ್ಮಾರ್ಟ್‌ಪ್ರಿಯರ ನಿದ್ದಗೆಡಿಸಿರುವ ಬೆಜೆಲ್‌ಲೆಸ್ ಡಿಸ್‌ಪ್ಲೇ ಐಫೋನ್ 8 ರ ಪ್ರಮುಖ ವಿಶೇಷ ಎನ್ನಬಹುದು.

ಹೋಮ್ ಬಟನ್ ಲೆಸ್

ಹೋಮ್ ಬಟನ್ ಲೆಸ್

ಕೀಪ್ಯಾಡ್ ಫೋನ್‌ಗಳ ನಂತರ ಸಿಂಗಲ್ ಬಟನ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದಿದ್ದವು. ಇದೀಗ ಬೆಜೆಲ್‌ಲೆಸ್ ಡಿಸ್‌ಪ್ಲೇ ಹೊಂದು ಬರುತ್ತಿರುವ ನೂತನ ಸ್ಮಾರ್ಟ್‌ಫೋನ್ ಐಫೋನ್ 8 ಹೋಮ್ ಬಟನ್ ಹೊಂದಿರುವುದಿಲ್ಲ..!!

ವೈರ್‌ಲೆಸ್ ಚಾರ್ಜ್

ವೈರ್‌ಲೆಸ್ ಚಾರ್ಜ್

ಸ್ಮಾರ್ಟ್ಫೋನ್ ಬಳಕೆದಾರರ ಬಹುದೊಡ್ಡ ಸಮಸ್ಯೆ ಎಂದರೆ ಬ್ಯಾಟರಿ ಚಾರ್ಜ್ ಬಹುಕಾಲ ಬಾಳಿಕೆ ಬರುವುದಿಲ್ಲ ಎಂಬುದು. ಸ್ಮಾರ್ಟ್‌ಫೋನ್ ಉಪಯೋಗಿಸುವಾಗ ಯಾವಾಗಲೂ ಚಾರ್ಜ್ ಹಾಕಿಯೇ ಫೋನ್ ಉಪಯೋಗಿಸಬೇಕಾದ ಪರಿಸ್ಥಿತಿ ಇದೆ. ಹಾಗಾಗಿ, ವೈರ್‌ಲೆಸ್ ಚಾರ್ಜ್ ಆಗುವ ಟೆಕ್ನಾಲಜಿ ಹೊಂದಿ ಆಪಲ್ 8 ಸ್ಮಾರ್ಟ್‌ಫೋನ್ ಹೊರಬರುತ್ತಿದೆ.

ನಾಲ್ಕು ಕ್ಯಾಮೆರಾ?

ನಾಲ್ಕು ಕ್ಯಾಮೆರಾ?

ಐಪೋನ್ 8 ಫೋನ್‌ ಹಿಂಭಾಗ ಮತ್ತು ಮುಂಭಾಗ ಎರಡು ಕಡೆಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದು ಎಂಬ ರೂಮರ್ಸ್ ಹರಿದಾಡಿದೆ. ಆದರೆತಂತ್ರಜ್ಞಾನ ವಿಶ್ಲೇಷಕರು ಈ ಬಗ್ಗೆ ಯಾವುದೇ ಖಚಿತತೆ ಹೊಂದಿಲ್ಲ.

ಬಿಗ್ ಬ್ಯಾಟರಿ!

ಬಿಗ್ ಬ್ಯಾಟರಿ!

ಸ್ಮಾರ್ಟ್‌ಫೋನ್ ಬಳಕೆಗೆ ಸಾಕಾಗುವಷ್ಟು ಶಕ್ತಿಯನ್ನು ಪ್ರಸ್ತುತ ಐಫೋನ್ ಬ್ಯಾಟರಿಗಳು ನೀಡುತ್ತಿಲ್ಲ ಎಂಬುದು ಐಫೋನ್‌ ಪ್ರಿಯರ ದೂರು. ಹಾಗಾಗಿ, ಹೆಚ್ಚು ಚಾಜ್‌ ನೀಡುವಂತಹ ಬ್ಯಾಟರಿಯನ್ನು ಆಪಲ್ ಐಫೋನ್ 8 ಹೊಂದಲಿದೆ ಎನ್ನಲಾಗಿದೆ..

ಬೆಲೆ ಎಷ್ಟು?

ಬೆಲೆ ಎಷ್ಟು?

ಬ್ಲಾಕ್, ಸಿಲ್ವರ್ ಮತ್ತು ಗೋಲ್ಡ್ ಬಣ್ಣದಲ್ಲಿ ಐಪೋನ್ 8 ಬಿಡುಗಡೆಯಾಗುತ್ತಿದೆ ಎನ್ನಲಾಗಿದ್ದು, ಮೂಲಗಳ ಪ್ರಕಾರ ಈ ಫೋನಿನ ಬೆಲೆ ರೂ. 80,000 ದಿಂದ ಒಂದು ಲಕ್ಷದ ವರೆಗೂ ಇರಲಿದೆ.

ಓದಿರಿ:ಆಂಡ್ರಾಯ್ಡ್ ''ಒರಿಯೋ'' ಒಎಸ್ ಬೆಸ್ಟ್ ಏಕೆ?..ಅಪ್‌ಡೇಟ್ ಮಾಡಿಕೊಳ್ಳುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
business newspaper in the US has been told by its sources.to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot