ಲೀಕ್ ಆಯ್ತು ಐಫೋನ್ 9 ಇಮೇಜ್: ಹೀಗಿದೆ ನೋಡಿ.!
ಆಪಲ್ ನೂತನ ಐಫೋನ್ ಬಗ್ಗೆ ಭಾರೀ ಕುತೂಹಲವು ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ದಿನಕ್ಕೊಂದು ರೂಮರ್ ಗಳು ಈ ಹೊಸ ಐಫೋನ್ ಬಗ್ಗೆ ಕೇಳಿ ಬರುತ್ತಿದೆ. ಇದೇ ಮಾದರಿಲ್ಲಿ ಇಂಟರ್ನೆಟ್‌ನಲ್ಲಿ ಫೋಟೋವೊಂದು ಸದ್ದು ಮಾಡುತ್ತಿದ್ದು, ಐಫೋನ್ 9 ಲೀಕ್ ಫೋಟೋ ಇದಾಗಿದೆ. ಈ ಹಿನ್ನಲೆಯಲ್ಲಿ ಐಫೋನ್ 9 ಬರುವುದಿಲ್ಲ ಎನ್ನುವ ಊಹಾಪೋಹಗಳಿಗೆ ಇದು ತೆರೆ ಎಳೆದಿದೆ ಎನ್ನಲಾಗಿದೆ. ಆದರೆ ಕೇಲವರು ಇದನ್ನು ಫೇಕ್ ಫೋಟೋ ಎಂದು ಕರೆಯುತ್ತಿದ್ದಾರೆ.

ಆದರೆ ಈ ಐಫೋನ್ iOS 12ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಐಫೋನ್ 9 ಮಾರುಕಟ್ಟೆಯಲ್ಲಿ ಹೊಸ ಶಕೆಯನ್ನು ಆರಂಭಿಸಲಿದೆ ಎನ್ನುವ ಮಾತು ಕೇಳಿ ಬಂದಿದೆ. . ಸದ್ಯ ಈ ಹೊಸ ಫೋನಿನ ಹಿಂಭಾಗದ ಫೋಟೋ ಮಾತ್ರವೇ ಲೀಕ್ ಆಗಿದ್ದು, ಇದರಲ್ಲಿ ಒಂದೇ ಒಂದು ಕ್ಯಾಮೆರಾ ಇರುವುದನ್ನು ನೀವು ಗಮನಿಸಬಹುದಾಗಿದೆ. ಇದರಿಂದಾಗಿ ಐಫೋನ್ 9 ಪ್ಲಸ್ ಸಹ ಲಾಂಚ್ ಆಗುವ ಸಾಧ್ಯತೆ ಇದ್ದು, ಅದರಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಆಪಲ್ ನೀಡಲಿದೆ ಎನ್ನುವ ಮಾಹಿತಿ ಇದೆ.

6.1 ಇಂಚಿನ ಡಿಸ್‌ಪ್ಲೇ:
ಆಪಲ್ ಐಫೋನ್ 9 ನಲ್ಲಿ 6.1 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಆದರೆ ಇದು LCD ಡಿಸ್‌ಪ್ಲೇ ಆಗಿದ್ದು, ಈ ಹಿಂದೆ ಮಾರುಕಟ್ಟೆಯಲ್ಲಿ ಐಪೋನ್ OLED ಡಿಸ್‌ಪ್ಲೇಯೊಂದಿಗೆ ಲಾಂಚ್ ಆಗುತಿತ್ತು. ಇದಲ್ಲದೇ ಐಫೋನ್ 9 ನಲ್ಲಿ ನೋಚ್ ಇರುವುದಿಲ್ಲ. ಬದಲಾಗಿ ಸಾಮಾನ್ಯವಾದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ.

ವೈರ್‌ಲೆಸ್ ಚಾರ್ಜರ್:
ಇದರೊಂದಿಗೆ ವೈರ್ಲೆಸ್ ಚಾರ್ಜರ್ ಅನ್ನು ಐಫೋನ್ 9 ನಲ್ಲಿ ಕಾಣಬಹುದಾಗಿದೆ. ಎಲ್ಲಾ ಮಾದರಿಯ ವೈರ್ಲೈಸ್ ಚಾರ್ಜರ್ ಗೆ ಇದು ಸಫೋರ್ಟ್ ಮಾಡಲಿದೆ. ಅಲ್ಲದೇ ಐಫೋನ್ 9 ಅನ್ನು ಮೇಟಲ್ ಬದಲಾಗಿ ಗ್ಲಾಸ್ ಬಾಡಿಯಿಂದ ಮಾಡಲಾಗಿದೆ. ಇದು ಬಳಕೆದಾರರಿಗೆ ಹೆಚ್ಚಿನ ಸಹಾಯವನ್ನು ಮಾಡಲಿದೆ.

ಇದರೊಂದಿಗೆ iOS 12:
ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ನೂತನ iOS 12 ಅನ್ನು ಐಫೋನ್ 9 ನೊಂದಿಗೆ ಕಾಣಬಹುದಾಗಿದ್ದು, ಈ ಎರಡು ಒಂದು ಬಾರಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನಲಾಗಿದೆ. ಇದಲ್ಲದೇ ಐಪ್ಯಾಡ್ ಸಹ ಲಾಂಚ್ ಮಾಡಲು ಆಪಲ್ ಸಿದ್ಧತೆ ನಡೆಸಿದೆ.

ಐಪ್ಯಾಡ್ ಫೋ:
ಈ ಬಾರಿ ಆಪಲ್ ಮೂರು ಐಫೋನ್ ಗಳನ್ನು ಲಾಂಚ್ ಮಾಡಲಿದ್ದು, ಇದರೊಂದಿಗೆ ನೂತನ ಐಪ್ಯಾಡ್ ಪ್ರೋ ಮಾಡಲ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ ಎನ್ನಲಾಗಿದೆ. ಇದರೊಂದಿಗೆ ಫುಲ್ ಸ್ಕ್ರಿನ್ ಡಿಸ್‌ಪ್ಲೇಯನ್ನು ನೀಡಲಿದ್ದು, ಜೊತೆಗೆ ಕರ್ವಡ್ ವಿನ್ಯಾಸವನ್ನು ಮಾಡಲಾಗಿದೆ.


Click it and Unblock the Notifications



