iPhone Air ರಿಲೀಸ್: ಇತಿಹಾಸದ ಅತಿ ಸ್ಲಿಮ್ iPhone ಹೇಗಿದೆ?..ಬೆಲೆ ಎಷ್ಟು ನೋಡಿ!
ಟೆಕ್ ದೈತ್ಯ Apple ಇಂದು ನಡೆದ 'Awe-Dropping' ಕಾರ್ಯಕ್ರಮದಲ್ಲಿ ತನ್ನ ಹೊಸ, ಅತ್ಯಂತ ಸ್ಲಿಮ್ ಆದ iPhone Air ಅನ್ನು ಭರ್ಜರಿಯಾಗಿ ಅನಾವರಣಗೊಳಿಸಿದೆ. ನಿರೀಕ್ಷೆಯಂತೆಯೇ, ಈ ಫೋನ್ iPhone 16 Plus ಅನ್ನು ಬದಲಾಯಿಸಿದ್ದು, ಕೇವಲ 5.6 mm ದಪ್ಪದೊಂದಿಗೆ Apple ಇತಿಹಾಸದಲ್ಲಿಯೇ ಅತಿ ತೆಳುವಾದ iPhone ಆಗಿದೆ. ಈ ಹೊಸ ಸಾಧನವು ಹೊಳಪುಳ್ಳ ಟೈಟಾನಿಯಂನಿಂದ ಮಾಡಿದ ಇದರ ವಿನ್ಯಾಸವು ಪ್ರೀಮಿಯಂ ಅನುಭವ ನೀಡುತ್ತದೆ ಮತ್ತು ಇದು ಉನ್ನತ ದರ್ಜೆಯ ತಂತ್ರಜ್ಞಾನ ಹಾಗೂ ವಿಶಿಷ್ಟ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
iPhone Air: ಪ್ರಮುಖ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನ
ಹೊಸ iPhone Air ಒಂದು 6.5-ಇಂಚಿನ ProMotion OLED ಡಿಸ್‌ಪ್ಲೇಯನ್ನು ಹೊಂದಿದೆ, ಇದು 120 Hz ರಿಫ್ರೆಶ್ ರೇಟ್ ಮತ್ತು 3,000 nits ಗರಿಷ್ಠ ಪ್ರಕಾಶಮಾನತೆಯನ್ನು ಒದಗಿಸುತ್ತದೆ ಎಂದು ಆಪಲ್ ತಿಳಿಸಿದೆ. ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ, Ceramic Shield 2 ಗ್ಲಾಸ್ ಅನ್ನು ಬಳಸಲಾಗಿದ್ದು, ಇದು ಗೀರುಗಳಿಗೆ 4 ಪಟ್ಟು ಹೆಚ್ಚು ಪ್ರತಿರೋಧಕವಾಗಿದೆ ಮತ್ತು ಬೆಳಕಿನ ಪ್ರತಿಫಲನವನ್ನು ಕಡಿಮೆ ಮಾಡುವ ಕೋಟಿಂಗ್ ಅನ್ನು ಹೊಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಈ ಹೊಸ iPhone Air ಸಾಧನವು ಹೊಸ A19 Pro ಚಿಪ್‌ನಿಂದ ಕಾರ್ಯನಿರ್ವಹಿಸುತ್ತದೆ, ಇದು Apple Intelligence ಸೇರಿದಂತೆ ಅತ್ಯಾಧುನಿಕ AI ಕಾರ್ಯಗಳನ್ನು ನಿರ್ವಹಿಸಲು ಶಕ್ತಿಯನ್ನು ಒದಗಿಸುತ್ತದೆ. ಇದರ ಜೊತೆಗೆ, ವೇಗದ ಸಂಪರ್ಕಕ್ಕಾಗಿ C1x ಮೊಡೆಮ್ ಮತ್ತು N1 ಚಿಪ್ (Wi-Fi 7, Bluetooth 6, Thread) ಅನ್ನು ಒಳಗೊಂಡಿದೆ. ಸಾಫ್‌ವೇರ್ ವಿಭಾಗದಲ್ಲಿ, ಈ ಹೊಸ ಫೋನ್, iOS 26 ನೊಂದಿಗೆ ಬರುತ್ತದೆ, ಇದರಲ್ಲಿ ಹೊಸ Liquid Glass ವಿನ್ಯಾಸ ಭಾಷೆಯನ್ನು ಪರಿಚಯಿಸಲಾಗಿದೆ.
Apple ಇದರ ಬ್ಯಾಟರಿ ಬಾಳಿಕೆಯನ್ನು "ದಿನವಿಡೀ" ಎಂದು ಹೇಳುತ್ತದೆ ಮತ್ತು 40 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್ ನೀಡುತ್ತದೆ ಎಂದು ಹೇಳಿಕೊಂಡಿದೆ. ಹ್ಯಾಂಡ್‌ಸೆಟ್ ಅನ್ನು 30 ನಿಮಿಷಗಳಲ್ಲಿ ಶೇಕಡಾ 50 ರಷ್ಟು ಚಾರ್ಜ್ ಮಾಡಬಹುದು ಎಂದು ತಿಳಿಸಲಾಗಿದೆ. ಈ ಮಾದರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ತೆಳುವಾದ MagSafe ಬ್ಯಾಟರಿ ಪ್ಯಾಕ್ ಸಹ ಲಭ್ಯವಿದೆ. ಆದರೆ ಬ್ಯಾಟರಿ ಸಾಮರ್ಥ್ಯ ಎಷ್ಟು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ iPhone Air ಫೋನಿನಲ್ಲಿ eSIM ಮಾತ್ರ ಇದೆ. ಇದರಿಂದ ಇದರ ವಿನ್ಯಾಸ ಇನ್ನಷ್ಟು ತೆಳುವಾಗಿದೆ.

ಕ್ಯಾಮೆರಾ ವಿಭಾಗದಲ್ಲಿಯೂ ಸಗ iPhone Air ಪ್ರಭಾವಶಾಲಿ ವೈಶಿಷ್ಟ್ಯಗಳನ್ನು ಹೊಂದಿದೆ. ಇದು 48 MP ಮುಖ್ಯ ಕ್ಯಾಮೆರಾ ಮತ್ತು AI-ಆಧಾರಿತ 2x ಆಪ್ಟಿಕಲ್ ಗುಣಮಟ್ಟದ ಜೂಮ್‌ನೊಂದಿಗೆ 12 MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ, ಸೆಂಟರ್ ಸ್ಟೇಜ್ ವೈಶಿಷ್ಟ್ಯದೊಂದಿಗೆ 18 MP ಸೆಲ್ಫಿ ಕ್ಯಾಮೆರಾ ಇದೆ. ಅತಿ ಸ್ಲಿಮ್ ವಿನ್ಯಾಸದ ಹೊರತಾಗಿಯೂ ಆಪಲ್ ಈ ಸಾಧನದಲ್ಲಿ ಉತ್ತಮ ಕ್ಯಾಮರಾವನ್ನು ಅಳವಡಿಸುವಲ್ಲಿ ಸಫಲವಾಗಿರುವಂತೆ ಕಾಣುತ್ತಿದೆ.
iPhone Air: ಬೆಲೆ ಲಭ್ಯತೆ
ಅಮೆರಿಕದಲ್ಲಿ $1,099 ರಿಂದ ಪ್ರಾರಂಭವಾಗುವ iPhone Air, ಭಾರತದಲ್ಲಿ ಮೂಲ ಆವೃತ್ತಿಯ ಬೆಲೆ 1,19,900 ರೂ.ಗಳಿಂದ ಆರಂಭವಾಗುತ್ತದೆ, 512GB ಮತ್ತು 1TB ಆವೃತ್ತಿಗಳ ಬೆಲೆ ಕ್ರಮವಾಗಿ 1,39,900 ಮತ್ತು 1,59,900 ರೂ.ಗಳಾಗಿವೆ. ಭಾರತದಲ್ಲಿ ಇದರ ಪ್ರಿ-ಆರ್ಡರ್‌ಗಳು ಸೆಪ್ಟೆಂಬರ್ 12, 2025 ರಿಂದ ಪ್ರಾರಂಭವಾಗಲಿವೆ ಮತ್ತು ಮಾರಾಟವು ಸೆಪ್ಟೆಂಬರ್ 19, 2025 ರಿಂದ ಆರಂಭವಾಗಲಿದೆ. ಇನ್ನು iPhone Air ಸಾಧನವು Space Black, Light Gold, Sky Blue, ಮತ್ತು Cloud White. ನಾಲ್ಕು ಬಣ್ಣಗಳಲ್ಲಿ ಲಭ್ಯವಿರಲಿದೆ.

ಒಟ್ಟಾರೆಯಾಗಿ, iPhone Air ನವೀನ ವಿನ್ಯಾಸ ಮತ್ತು ಉನ್ನತ ತಂತ್ರಜ್ಞಾನದ ಸಂಯೋಜನೆಯಾಗಿದ್ದು, ಇದು Apple ನ iPhone ಶ್ರೇಣಿಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ. ಇದರ ಅತ್ಯಂತ ತೆಳುವಾದ ವಿನ್ಯಾಸ, ಪ್ರಬಲ A19 Pro ಚಿಪ್, ಸುಧಾರಿತ ಕ್ಯಾಮೆರಾ ವ್ಯವಸ್ಥೆ ಮತ್ತು ಸುದೀರ್ಘ ಬ್ಯಾಟರಿ ಬಾಳಿಕೆಯು ಗ್ರಾಹಕರನ್ನು ಆಕರ್ಷಿಸುವುದರಲ್ಲಿ ಸಂದೇಹವಿಲ್ಲ. ನೀವು ಕೂಡ ಇತಿಹಾಸದಲ್ಲಿಯೇ ಅತಿ ಸ್ಲಿಮ್ iPhone ಆಕರ್ಷಿತವಾಗಿದ್ದರಾ?, ಈ ಐಫೋನ್ ಕುರಿತು ನಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








