iPhone Air ಖರೀದಿಸುವ ಮೊದಲು ಒಂದು ಸಲ ಇಲ್ಲಿ ನೋಡಿ!
ಟೆಕ್ ದೈತ್ಯ ಆಪಲ್ ತನ್ನ ಹೊಸ iPhone 17 ಸ್ಮಾರ್ಟ್‌ಫೋನ್ ಸರಣಿಯಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸುವ ಗುರಿಯಿಂದ iPhone Air ಅನ್ನು ಅನಾವರಣಗೊಳಿಸಿದೆ. ಇದು ಆಪಲ್‌ನ ಇತಿಹಾಸದಲ್ಲೇ ಅತ್ಯಂತ ಸ್ಲಿಮ್ ಐಫೋನ್ ಆಗಿದ್ದು, ವಿಶೇಷ ವಿನ್ಯಾಸವನ್ನು ಹೊಂದಿದೆ. ಇದರ ಹೊರತಾಗಿಯೂ ಸಹ, ಈ ಐಪೋನ್ ಶಕ್ತಿಶಾಲಿ A19 Pro ಚಿಪ್ ಮತ್ತು ಹೊಸ Super Retina XDR ಡಿಸ್‌ಪ್ಲೇ ಇತ್ಯಾದಿ ವೈಶಿಷ್ಟ್ಯಗಳಿಂದ ಗ್ರಾಹಕರಲ್ಲಿ ಕುತೂಹಲ ಹೆಚ್ಚಿಸಿದೆ. ಆದರೆ, ಈ ಐಫೋನ್ ಕೆಲವು ವಿಷಯಗಳಿಂದ ನಕಾರಾತ್ಮಕ ಅಭಿಪ್ರಾಯಗಳನ್ನು ಸಹ ಮೂಡಿಸಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಇತಿಹಾಸದಲ್ಲೇ ಅತ್ಯಂತ ಸ್ಲಿಮ್ ಐಫೋನ್ ಸಾಧನವಾದ iPhone Air ಖರೀದಿಸಲು ಮತ್ತು ಖರೀದಿಸದೇ ಇರಲು ಚರ್ಚಿತವಾಗುತ್ತಿರುವ ಕೆಲವು ಮುಖ್ಯ ಕಾರಣಗಳನ್ನು ನೋಡೋಣ.!
iPhone Air ಖರೀದಿಸಲು ಪ್ರಮುಖ ಕಾರಣಗಳು
1. ಸ್ಲಿಮ್ ಮತ್ತು ಸ್ಟೈಲಿಶ್: ಆಪಲ್‌ನ ಇತಿಹಾಸದಲ್ಲೇ ಅತ್ಯಂತ ಸ್ಲಿಮ್ ಐಫೋನ್ ಆಗಿರುವ ಈ iPhone Air ಸಾಧನವು ಅತ್ಯಂತ ಸ್ಲಿಮ್ (5.6 ಮಿಮೀ) ಮತ್ತು ಕಡಿಮೆ ತೂಕದ (165 ಗ್ರಾಂ) ವಿನ್ಯಾಸ ಹೊಂದಿದೆ. eSIM ಮೂಲಕ ಭವಿಷ್ಯದ ನೆಟ್ವರ್ಕ್‌ಗಳಿಗೆ ಸಿದ್ಧತೆ ಹೊಂದಿದೆ.
2. ಸ್ಪಷ್ಟ ಮತ್ತು ಶಕ್ತಿಶಾಲಿ ಡಿಸ್‌ಪ್ಲೇ: iPhone Air ನಲ್ಲಿ 6.5 ಇಂಚಿನ Super Retina XDR OLED ಡಿಸ್‌ಪ್ಲೇ ನೀಡಲಾಗಿದೆ. ಇದು 2736×1260 ಪಿಕ್ಸೆಲ್ ರೆಸಲ್ಯೂಷನ್, 460 ppi ಮತ್ತು 120Hz ProMotion ರಿಫ್ರೆಶ್ ರೇಟ್ ಹೊಂದಿದೆ. ವಿಶೇಷವಾಗಿ ಹೊರಗಡೆ ಬಳಸುವಾಗ 3000 nits ಪೀಕ್ ಬ್ರೈಟ್ನೆಸ್ ಬೆಂಬಲದಿಂದ, ಸೂರ್ಯನ ಬೆಳಕಿನಲ್ಲೂ ಸ್ಪಷ್ಟವಾಗಿ ಕಾಣುತ್ತದೆ.
3. ಶಕ್ತಿಯುತ A19 Pro ಚಿಪ್, 15% ಹೆಚ್ಚು ವೇಗ: iPhone Air ನಲ್ಲಿ A19 Pro ಚಿಪ್ ಇದೆ. ಆಪಲ್ ಪ್ರಕಾರ, ಹಿಂದಿನ ತಲೆಮಾರಿನ A18 Pro ಗೆ ಹೋಲಿಸಿದರೆ, CPU ಸುಮಾರು 15% ವೇಗ ಹೆಚ್ಚಳ ನೀಡುತ್ತದೆ. ಸ್ಟೋರೇಜ್ ಆಯ್ಕೆಗಳಲ್ಲಿ 256GB, 512GB ಮತ್ತು 1TB ವೇರಿಯಂಟ್‌ಗಳು ಇವೆ.
4. ಕಣ್ಣುಕುಕ್ಕುವ ಕ್ಯಾಮೆರಾ ಸೆಟಪ್: ಕ್ಯಾಮೆರಾ ವಿಭಾಗದಲ್ಲಿ, iPhone Air ನಲ್ಲಿ ಹಿಂಭಾಗದ 48MP ಫ್ಯೂಷನ್ ಮೆನ್ ಲೆನ್ಸ್ ಹಾಗೂ ಮುಂಭಾಗದ 18MP Center Stage ಕ್ಯಾಮೆರಾ ದೊರೆಯುತ್ತದೆ. ಸಾಮಾನ್ಯ ಫೋಟೋಗ್ರಫಿ ಮತ್ತು ವಿಡಿಯೋ ಕಾಲಿಂಗ್‌ಗಾಗಿ ಸಾಕಷ್ಟು ಉತ್ತಮ.
5. ಸ್ಲಿಮ್ ಡಿಸೈನ್‌ನಲ್ಲಿ ಉತ್ತಮ ಬ್ಯಾಟರಿ: ಬ್ಯಾಟರಿಯ ವಿಚಾರಕ್ಕೆ ಬಂದರೆ iPhone Air ನಲ್ಲಿ, 3,149 mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಆಪಲ್ ಪ್ರಕಾರ, ಒಂದು ಚಾರ್ಜ್‌ನಲ್ಲಿ 27 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್ ಸಾಧ್ಯ. ಇಷ್ಟು ಸ್ಲಿಮ್ ಡಿಸೈನ್‌ನಲ್ಲಿ ಇಷ್ಟು ಬ್ಯಾಟರಿ ಬಾಳಿಕೆಯು ಉತ್ತಮವಾಗಿದೆ.

6. ಸ್ಲಿಮ್ ಆದರೂ ಸ್ಟ್ರಾಂಗ್: ಬಲವಾದ ಟೈಟಾನಿಯಂ ಫ್ರೇಮ್ ಮತ್ತು Ceramic Shield ರಕ್ಷಣೆಯ ಗಾಜಿನಿಂಟ ಗಟ್ಟಿಮುಟ್ಟಾಗಿರುವ ಈ ಫೋನ್ ನೋಡಲು ಸ್ಟೈಲಿಶ್ ಆಗಿದೆ. ಜೊತೆಗೆ IP68 ಪ್ರಮಾಣಿತ ನೀರು ಮತ್ತು ಧೂಳು ನಿರೋಧಕತೆಯೂ ಇದೆ.
iPhone Air ಖರೀದಿಸದೇ ಇರಲು ಪ್ರಮುಖ ಕಾರಣಗಳು
iPhone Air ಸಾಧನವು ಅತ್ಯುತ್ತಮವಾಗಿ ಕಾಣಿಸುತ್ತಿದೆ. ಆದರೆ, ಬೆಲೆ, ಬ್ಯಾಟರಿ ಸಾಮರ್ಥ್ಯ ಮತ್ತು ಕೆಲವು ವೈಶಿಷ್ಟ್ಯಗಳ ಕೊರತೆಯಿಂದ, ಎಲ್ಲರಿಗೂ ಇದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಕೆಲವು ಅಂಶಗಳನ್ನು ಇಲ್ಲಿ ನೋಡೋಣ ಬನ್ನಿ.
iPhone Air ನಲ್ಲಿ Ultra-wide ಅಥವಾ Telephoto ಲೆನ್ಸ್ ಇಲ್ಲದಿರುವುದು ಕೆಲವು ಬಳಕೆದಾರರಿಗೆ ಅಸಮಾಧಾನಕಾರಿಯಾಗಬಹುದು.
iPhone Air ಮಾದರಿಯಲ್ಲಿ GPU 5-ಕೋರ್ ಆವೃತ್ತಿಯಷ್ಟೇ ಲಭ್ಯವಿದ್ದು, Pro ಮಾದರಿಗಳ 6-ಕೋರ್ GPUಗೆ ಹೋಲಿಸಿದರೆ ಸ್ವಲ್ಪ ಕಡಿಮೆ ಸಾಮರ್ಥ್ಯ ಹೊಂದಿದೆ. ಜೊತೆಗೆ ಪ್ರೊ ಮಾದರಿಗಳಷ್ಟು ಗ್ರಾಫಿಕ್ಸ್ ಶಕ್ತಿ ಇಲ್ಲ.
eSIM ಮಾತ್ರ ಬೆಂಬಲವಿರುವುದರಿಂದ, ಫಿಸಿಕಲ್ SIM ಕಾರ್ಡ್ ಬಳಸುವವರಿಗೆ ಇದು ಅಸೌಕರ್ಯವಾಗಬಹುದು.
iPhone Air ನಲ್ಲಿ ಇರುವ 3,149 mAh ಬ್ಯಾಟರಿ ಹೆಚ್ಚು ಬಳಕೆದಾರರಿಗೆ ಸಾಕಾಗದೇ ಇರಬಹುದು. ಹೆಚ್ಚು ಪ್ರಯಾಣ ಮಾಡುವವರಿಗೆ ಪವರ್ ಬ್ಯಾಂಕ್ ಅಗತ್ಯವಾಗಬಹುದು. ಅಥವಾ (MagSafe ಬ್ಯಾಟರಿ ಪ್ಯಾಕ್ ಬಳಸಿ 40 ಗಂಟೆಗಳವರೆಗೆ ವಿಸ್ತರಿಸಬಹುದು: ಇದಕ್ಕೆ ಹೆಚ್ಚು ವೆಚ್ಚವಾಗಬಹುದು)
ಭಾರತದಲ್ಲಿ ಪ್ರಾರಂಭಿಕ ಬೆಲೆ ₹1,19,900 ಆಗಿದೆ. ಇತರ ಬ್ರ್ಯಾಂಡ್‌ಗಳಲ್ಲಿ ಕಡಿಮೆ ಬೆಲೆಗೆ ಹೆಚ್ಚು ವೈಶಿಷ್ಟ್ಯ ಸಿಗುತ್ತದೆ ಎಂಬುದು ಕೆಲವರ ಅಭಿಪ್ರಾಯ.
ಯಾವುದೇ ಹೊಸ ಸಾಧನದ ಬಗ್ಗೆ ಹೇಳುವಾಗ ಅದರ ಉತ್ತಮ ಹಾಗೂ ದುರ್ಬಲ ಅಂಶಗಳು ಪ್ರಸ್ತಾಪಕ್ಕೆ ಬರುತ್ತವೆ. ಆದರೆ ಕೊನೆಯಲ್ಲಿ, ಆ ಸಾಧನವು ನಮ್ಮ ಅಗತ್ಯಗಳನ್ನು ಪೂರೈಸುತ್ತದೆಯೇ ಎಂಬುದೇ ಮುಖ್ಯ. ಉದಾಹರಣೆಗೆ, ಕೆಲವರಿಗೆ ಸ್ಲಿಮ್ ವಿನ್ಯಾಸ ಆಕರ್ಷಕವಾಗಿ ತೋರುತ್ತದೆ, ಆದರೆ ಇತರರಿಗೆ ಅದೇ ತೆಳುವಿನ ಕಾರಣದಿಂದ ಕೈಯಿಂದ ಜಾರುವ ಭಯವಾಗಬಹುದು. ಆದ್ದರಿಂದ, ಈ ಮಾಹಿತಿಯನ್ನು ಕೇವಲ ಪರಿಚಯಾತ್ಮಕ ಅಂಶಗಳೆಂದು ಪರಿಗಣಿಸಿ. iPhone Air ಖರೀದಿಸುವ ನಿರ್ಧಾರವನ್ನು ತೆಗೆದುಕೊಳ್ಳುವಾಗ ನಿಮ್ಮ ಸ್ವಂತ ಅಗತ್ಯಗಳು ಮತ್ತು ಆದ್ಯತೆಗಳಿಗೆ ಪ್ರಾಮುಖ್ಯತೆ ನೀಡಿ.


Click it and Unblock the Notifications








