ವಿಜಯ್ ಸೇಲ್ಸ್‌ನಲ್ಲಿ Phone Air ಬೆಲೆ ಕಡಿತ: ₹28,000 ಕ್ಕೂ ಹೆಚ್ಚು ಉಳಿತಾಯ!
ವಿಜಯ್ ಸೇಲ್ಸ್ ಈ ವರ್ಷದ ವಾಲೆಂಟೈನ್ಸ್ ಡೇ ವಿಶೇಷ ಆಫರ್‌ಗಳೊಂದಿಗೆ ಆಪಲ್‌ನ ಹೊಸ ತಲೆಮಾರಿನ ಐಫೋನ್‌ಗಳ ಮೇಲೆ ಗಮನಾರ್ಹ ಬೆಲೆ ಕಡಿತವನ್ನು ಘೋಷಿಸಿದೆ. ಹಾಗಾದರೆ, iPhone Air ಹಾಗೂ iPhone 17 Pro ಮಾದರಿಗಳಿಗೆ ನೇರ ರಿಯಾಯಿತಿಯ ಜೊತೆಗೆ ಬ್ಯಾಂಕ್ ಕಾರ್ಡ್ ಆಧಾರಿತ ಹೆಚ್ಚುವರಿ ಉಳಿತಾಯದ ಅವಕಾಶವನ್ನು ವಿಜಯ್ ಸೇಲ್ಸ್ ಪ್ರಕಟಿಸಿದ್ದು, ಇತ್ತೀಚಿನ ಪ್ರೀಮಿಯಂ ಐಫೋನ್ ಖರೀದಿಸಲು ಯೋಜಿಸುತ್ತಿರುವವರಿಗೆ ಇದು ಸರಿಯಾದ ಸಮಯವೆನ್ನಬಹುದು. ಏನಿದು ಕೊಡುಗೆಗಳು ಎಂಬುದನ್ನು ನೊಡೋಣ ಬನ್ನಿ.
iPhone Air (256GB) ಮಾದರಿಯ ಸಾಮಾನ್ಯ ಮಾರುಕಟ್ಟೆ ಬೆಲೆ ₹1,19,900 ಆಗಿದ್ದು, ವಿಜಯ್ ಸೇಲ್ಸ್‌ನಲ್ಲಿ ಇದು ಈಗ ₹94,990 ಕ್ಕೆ ಲಭ್ಯವಾಗಿದೆ. ಇದರೊಂದಿಗೆ ಐಸಿಐಸಿಐ ಬ್ಯಾಂಕ್ EMI ಆಯ್ಕೆಯನ್ನು ಬಳಸಿದರೆ ಇನ್ನೂ ₹4,000 ತಕ್ಷಣದ ರಿಯಾಯಿತಿ ಸಿಗುತ್ತದೆ. ಈ ಎಲ್ಲಾ ಪ್ರಯೋಜನಗಳನ್ನು ಸೇರಿಸಿದರೆ, ಗ್ರಾಹಕರಿಗೆ ಒಟ್ಟು ₹28,000 ಕ್ಕಿಂತ ಹೆಚ್ಚಿನ ಉಳಿತಾಯ ಸಾಧ್ಯವಾಗುತ್ತದೆ. ಅಂದರೆ, 95 ಸಾವಿರಕ್ಕಿಂತ ಕಡಿಮೆ ಬೆಲೆಗೆ ಈಗ ಹಗುರ, ಸ್ಲಿಮ್ ಮತ್ತು ಶಕ್ತಿಶಾಲಿ iPhone Air (256GB) ದೊರೆಯುತ್ತಿದೆ. ಈ ಡೀಲ್ ಆಕರ್ಷಕವಾಗಿದೆ.
iPhone Air ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು iOS 26 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 6.5 ಇಂಚಿನ Super Retina XDR OLED ಡಿಸ್ಪ್ಲೇ, 3,000 ನಿಟ್ಸ್‌ಗಳ ಗರಿಷ್ಠ ಬ್ರೈಟ್‌ನೆಸ್ ಮತ್ತು ProMotion ತಂತ್ರಜ್ಞಾನದಿಂದ 120Hz ವರೆಗೆ ಹೊಂದಿಕೊಳ್ಳುವ ರಿಫ್ರೆಶ್ ರೇಟ್ ಇದರ ಪ್ರಮುಖ ಹೈಲೈಟ್‌ಗಳಾಗಿವೆ. ಕೇವಲ 5.6 ಮಿಮೀ ದಪ್ಪವಿರುವ ಈ ಫೋನ್ ಆಪಲ್‌ನ ಇತಿಹಾಸದಲ್ಲೇ ಅತಿ ಸ್ಲಿಮ್ ಐಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಡಿಸೈನ್ ಮತ್ತು ದೈರ್ಘ್ಯದ ದೃಷ್ಟಿಯಿಂದಲೂ iPhone Air ಗಮನ ಸೆಳೆಯುತ್ತದೆ. 80 ಶೇಕಡಾ ಮರುಬಳಕೆಯ ಟೈಟಾನಿಯಂ ಬಳಕೆ ಹಾಗೂ ಮುಂಭಾಗ ಮತ್ತು ಹಿಂಭಾಗದಲ್ಲಿ Ceramic Shield 2 ರಕ್ಷಣೆ ಇದಕ್ಕೆ ಹೆಚ್ಚುವರಿ ಬಲ ನೀಡುತ್ತದೆ. ಒಳಗೆ ಬಿನ್ನ್ಡ್ ಆವೃತ್ತಿಯ A19 Pro ಚಿಪ್, ಶಕ್ತಿಶಾಲಿ Neural Engine ಮತ್ತು Apple Intelligence ಫೀಚರ್‌ಗಳ ಬೆಂಬಲವಿದ್ದು, ದೈನಂದಿನ ಬಳಕೆಗೂ ಹಾಗೂ AI ಆಧಾರಿತ ಕಾರ್ಯಗಳಿಗೂ ಇದು ಸೂಕ್ತವಾಗಿದೆ.

ಇನ್ನೊಂದೆಡೆ, ಪ್ರಸ್ತುತ ಆಪಲ್‌ನ ಅತ್ಯಂತ ಪ್ರೀಮಿಯಂ ಸಾಧನ iPhone 17 Pro (256GB) ಮಾದರಿಗೂ ವಿಜಯ್ ಸೇಲ್ಸ್ ವಿಶೇಷ ಬೆಲೆ ಕಡಿತವನ್ನು ನೀಡುತ್ತಿದೆ. ಸಾಮಾನ್ಯವಾಗಿ ₹1,34,900 ಬೆಲೆಯಿರುವ ಈ ಪ್ರೊ ಮಾದರಿ ಈಗ ₹1,32,490 ಕ್ಕೆ ಲಭ್ಯವಿದೆ. ಇದರ ಜೊತೆಗೆ ಐಸಿಐಸಿಐ ಬ್ಯಾಂಕ್ EMI ಮೂಲಕ ಪಾವತಿ ಮಾಡಿದರೆ ಹೆಚ್ಚುವರಿ ₹4,000 ರಿಯಾಯಿತಿ ಸಿಗುತ್ತದೆ. ಈ ಮೂಲಕ ಒಟ್ಟು ಉಳಿತಾಯ ₹6,000 ಕ್ಕಿಂತ ಹೆಚ್ಚು ಆಗಲಿದೆ.
iPhone 17 Pro ತಾಂತ್ರಿಕವಾಗಿ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 6.3 ಇಂಚಿನ Super Retina XDR ಡಿಸ್ಪ್ಲೇ, 120Hz ProMotion ಸಪೋರ್ಟ್ ಮತ್ತು 3,000 ನಿಟ್ಸ್‌ಗಳ ಹೊರಾಂಗಣ ಬ್ರೈಟ್‌ನೆಸ್ ಇದನ್ನು ಪ್ರೊಫೆಷನಲ್ ಬಳಕೆಗೆ ಸೂಕ್ತವಾಗಿಸುತ್ತದೆ. ಹೊಸ ವಾಪರ್ ಚೇಂಬರ್ ಕೂಲಿಂಗ್ ವ್ಯವಸ್ಥೆ ಗೇಮಿಂಗ್ ಮತ್ತು ಹೆವಿ ಟಾಸ್ಕ್‌ಗಳ ವೇಳೆ ಫೋನ್ ತಾಪಮಾನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಒಟ್ಟಾರೆಯಾಗಿ, ವಿಜಯ್ ಸೇಲ್ಸ್ ವಾಲೆಂಟೈನ್ಸ್ ಡೇ ಆಫರ್‌ಗಳು ಆಪಲ್ ಐಫೋನ್ ಖರೀದಿಸಲು ಯೋಚಿಸುತ್ತಿರುವ ಭಾರತೀಯ ಗ್ರಾಹಕರಿಗೆ ಉತ್ತಮ ಅವಕಾಶವನ್ನು ಒದಗಿಸುತ್ತಿವೆ. ಸೀಮಿತ ಅವಧಿಗೆ ಮಾತ್ರ ಲಭ್ಯವಿರುವ ಈ ಡೀಲ್‌ಗಳು ಬೆಲೆ, ವೈಶಿಷ್ಟ್ಯ ಮತ್ತು ಬ್ಯಾಂಕ್ ರಿಯಾಯಿತಿಗಳ ದೃಷ್ಟಿಯಿಂದ ಆಕರ್ಷಕವಾಗಿದ್ದು, ಹೊಸ ಐಫೋನ್ ಮನೆಗೆ ತರುವ ಯೋಚನೆಯಿದ್ದರೆ ಈ ಸಮಯವನ್ನು ಬಳಸಿಕೊಳ್ಳುವುದು ಒಳಿತು. ಈ ಆಫರ್‌ಗಳ ಪ್ರಮುಖ ಆಕರ್ಷಣೆ ಎಂದರೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ EMI ಪಾವತಿಗೆ ದೊರೆಯುವ ತಕ್ಷಣದ ಹೆಚ್ಚುವರಿ ರಿಯಾಯಿತಿ ಎನ್ನಬಹುದು.


Click it and Unblock the Notifications








