Home
ಮೊಬೈಲ್

iPhone ಪ್ರಿಯರಿಗೆ ಖುಷಿ ಸುದ್ದಿ! ಆ್ಯಪಲ್ ಫೋನ್‌ಗಳ ದರ ಭಾರೀ ಇಳಿಕೆ: ಎಷ್ಟಿತ್ತು? ಎಷ್ಟಾಗಿದೆ?

ಐಫೋನ್ ಪ್ರಿಯರು​ ಫುಲ್​ ಖುಷಿ ಪಡೋ ಸುದ್ದಿ ಇದು. ಎಲ್ಲರಿಗೂ ಒಂದು ಬಾರಿಯಾದರೂ ಐಫೋನ್​ ಖರೀದಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ಐಫೋನ್​ ಖರೀದಿಸಬೇಕು ಅಂತಲೇ ಹಲವರು ದುಡ್ಡು ಕೂಡಿಟ್ಟಿರುತ್ತಾರೆ. ಇದೀಗ, ಐಫೋನ್​ ಗ್ರಾಹಕರಿಗೆ ಸಿಹಿ ಬಂದಿದೆ. ಭಾರತದಲ್ಲಿ ಆ್ಯಪಲ್ ಫೋನ್‌ಗಳ ಬೆಲೆ ದಿಢೀರನೆ ಕಡಿಮೆ ಆಗಿದೆ. ಹೊಸ ಐಫೋನ್ ಬಿಡುಗಡೆಗೂ ಮುನ್ನವೇ, ಆಪಲ್ ಕಂಪನಿಯು ಹಳೆಯ ಐಫೋನ್ ಮಾದರಿಗಳ ಬೆಲೆಯನ್ನು ಕಡಿಮೆ ಮಾಡಿದೆ. ಬೆಲೆ ಕಡಿತದ ನಂತರ, ಗ್ರಾಹಕರು ಈ ಐಫೋನ್‌ ಖರೀದಿಯಲ್ಲಿ ಸಾವಿರಾರು ಉಳಿಸಬಹುದು.

ಹೌದು, ಆಪಲ್ ಕಂಪನಿ ತನ್ನ ಎಲ್ಲ ಐಫೋನ್‌ಗಳ ಬೆಲೆಗಳನ್ನು ಶೇಕಡಾ 3 ರಿಂದ 4 ರಷ್ಟು ಕಡಿತಗೊಳಿಸಿದೆ. ಪ್ರೊ ಅಥವಾ ಪ್ರೊ ಮ್ಯಾಕ್ಸ್ ಮಾದರಿಯನ್ನು ಖರೀದಿಸಿದರೆ 5,100 ರೂ.ಗಳಿಂದ 6,000 ರೂ.ಗಳ ವರೆಗೆ ಡಿಸ್ಕೌಂಟ್‌ ಪಡೆಯಬಹುದು. iPhone 13, iPhone 14 ಮತ್ತು iPhone 15 ಸೇರಿ ಎಲ್ಲ ಮಾದರಿಯ ಐಫೋನ್‌ಗಳು ಕನಿಷ್ಠ 300 ರೂ. ಅಗ್ಗವಾಗಿದೆ. iPhone ಎಸ್‌ಇ ಬೆಲೆಯು 2,300 ರೂ. ಇಳಿಕೆ ಕಂಡಿದೆ.

iPhone ಪ್ರಿಯರಿಗೆ ಖುಷಿ ಸುದ್ದಿ! ಆ್ಯಪಲ್ ಫೋನ್‌ಗಳ ದರ ಭಾರೀ ಇಳಿಕೆ: ಎಷ್ಟಾಗಿದೆ?

ಐಫೋನ್ ಖರೀದಿಸುವುದರಿಂದ ಎಷ್ಟು ಉಳಿತಾಯ?

ಆಪಲ್ ತನ್ನ ಹೊಸ ಸರಣಿಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದಾಗ, ಅದು ತನ್ನ ಹಳೆಯ ಐಫೋನ್ ಮಾದರಿಗಳ ಬೆಲೆಗಳನ್ನು ಕಡಿತಗೊಳಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಈ ಬಾರಿಯೂ ಬಹುತೇಕ ಅಂಥದ್ದೇ ಘಟನೆ ನಡೆದಿದೆ. ಕಂಪನಿಯು ತನ್ನ iPhone 15, iPhone 14 ಮತ್ತು iPhone 15 Pro ಬೆಲೆಗಳನ್ನು ಕಡಿಮೆ ಮಾಡಿದೆ. ಮತ್ತು ಅವುಗಳನ್ನು ಅಗ್ಗದ ಬೆಲೆಯಲ್ಲಿ ಖರೀದಿಸಲು ಅವಕಾಶವನ್ನು ನೀಡಿದೆ.

ಐಫೋನ್‌ಗಳ ಬೆಲೆ ಎಷ್ಟಿತ್ತು? ಈಗ ಎಷ್ಟಾಗಿದೆ?

iPhone 15 Pro Max ನ ಬೆಲೆ 1,59,000 ರೂ. ಇತ್ತು. ಆದರೆ, ಬೆಲೆ ಕಡಿತದ ನಂತರ ನೀವು ಇದನ್ನು 1,54,000 ರೂ. ಬೆಲೆಗೆ ಖರೀದಿಸಬಹುದು. iPhone 15 Pro ನ ಬೆಲೆ 79,900 ರೂ. ಇತ್ತು. ಆದರೆ, ಬೆಲೆ ಕಡಿತದ ನಂತರ ನೀವು ಈ ಫೋನ್ ಅನ್ನು 79,600 ರೂ.ಗೆ ಪಡೆಯಬಹುದು. ಇನ್ನೂ, iPhone 15 Plus, iPhone 14 ಮತ್ತು iPhone SE ಬೆಲೆ ಎಷ್ಟು ಅಂತ ಮುಂದೆ ನೋಡೋಣ.

iPhone 15 Plus ಬೆಲೆ 89,900 ರೂ. ಆಗಿದೆ. ಬೆಲೆ ಕಡಿತದ ನಂತರ 89,600 ರೂ.ಗಳಿಗೆ ಈ ಫೋನ್ ಲಭ್ಯವಿರುತ್ತದೆ. iPhone 14 ನ ಮೂಲ ಬೆಲೆ 69,900 ರೂ. ಆಗಿದೆ. ಬೆಲೆ ಇಳಿಕೆಯ ನಂತರ ನೀವು 69,600 ರೂ.ಗಳಿಗೆ ಖರೀದಿಸಬಹುದು. ಮತ್ತು iPhone SE ನ ಮೂಲ ಬೆಲೆ 49,900 ರೂ. ಇದೆ. ಬೆಲೆ ಕಡಿತದ ಬಳಿಕ ನೀವು 47,600 ರೂ.ಗಳಿಗೆ ಇದನ್ನು ಖರೀದಿಸುವ ಸುವರ್ಣಾವಕಾಶ ಒದಗಿಬಂದಿದೆ.

iPhone 15 Pro ಖರೀದಿಸಿದರೆ 6,000 ಸೇವ್!

iPhone 15 Pro ಮಾದರಿಯಲ್ಲಿ ಹೆಚ್ಚು ಬೆಲೆ ಕಡಿತವನ್ನು ಮಾಡಲಾಗಿದೆ. ನೀವು ಈ ಫೋನ್‌ನಲ್ಲಿ ನೇರವಾಗಿ 6,000 ರೂ.ಗಳನ್ನು ಉಳಿಸಬಹುದು. ಇದೇ ಸಮಯದಲ್ಲಿ, ಅದರ ಇತರ ಮಾದರಿಗಳಾದ ವೆನಿಲ್ಲಾ ಐಫೋನ್ 15 ಮತ್ತು ಐಫೋನ್ 15 ಪ್ಲಸ್‌ನಲ್ಲಿ ಕೊಂಚ ಬೆಲೆ ಕಡಿತಗಳನ್ನು ಮಾಡಲಾಗಿದೆ. ಆಪಲ್ ತನ್ನ ಐಫೋನ್ 16 ಸರಣಿಯನ್ನು ಪ್ರಾರಂಭಿಸುವ ಮೊದಲು ಈ ಎಲ್ಲಾ ಕಡಿತಗಳನ್ನು ಮಾಡಿದೆ.

ಒಟ್ಟಾರೆ, ಸೆಪ್ಟೆಂಬರ್‌ನಲ್ಲಿ ಐಫೋನ್ 16 ಸರಣಿಯನ್ನು ಬಿಡುಗಡೆ ಮಾಡಲು ಆಪಲ್ ತಯಾರಿ ನಡೆಸುತ್ತಿದೆ. ಮುಂಬರುವ ಸರಣಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗಗೊಂಡಿಲ್ಲ. ಆದರೆ, ಬಿಡುಗಡೆಯ ಮೊದಲು, ಅದಕ್ಕೆ ಸಂಬಂಧಿಸಿದ ಅನೇಕ ಅಪ್ಡೇಟ್‌ಗಳು ಹೊರಬಂದಿವೆ. ಈ ಮಧ್ಯೆಯೇ, ಹೊಸ ಸರಣಿಯನ್ನು ಪ್ರಾರಂಭಿಸುವ ಮೊದಲು, ಆಪಲ್ ಕಂಪನಿಯ ಹಳೆಯ ಐಫೋನ್ ಮಾದರಿಗಳ ಬೆಲೆಯನ್ನು ಕಡಿಮೆ ಮಾಡಿದೆ.

Best Mobiles in India

English summary
Apple cuts prices of all iPhone models in India, here are the new prices: check specs, offer and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+