ಭಾರತೀಯರಿಗಾಗಿಯೇ ಬಜೆಟ್ ಬೆಲೆಯಲ್ಲಿ ಐಫೋನ್..? ಆಪಲ್ ಹೊಸ ಐಫೋನ್ ಕಥೆ ಏನು..?

|

ಆಪಲ್ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡು ಹೊಸ ಮಾದರಿಯಲ್ಲಿ ಬಜೆಟ್ ಬೆಲೆಯಲ್ಲಿ ಐಫೋನ್ ವೊಂದನ್ನು ನಿರ್ಮಾಣ ಮಾಡುತ್ತಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಕಡಿಮೆ ಬೆಲೆಯ ಐಫೋನ್ ಮತ್ತು ಭಾರತದಲ್ಲಿ ನಿರ್ಮಾಣವಾಗುತ್ತಿರುವ ಐಫೋನ್ SE ಮುಂದುವರೆದ ಆವೃತ್ತಿಯನ್ನು ಮಾರುಕಟ್ಟೆಗೆ ತರಲು ಆಪಲ್ ಚಿಂತನೆ ನಡೆಸಿದೆ.

ಭಾರತೀಯರಿಗಾಗಿಯೇ ಬಜೆಟ್ ಬೆಲೆಯಲ್ಲಿ ಐಫೋನ್..? ಆಪಲ್ ಹೊಸ ಐಫೋನ್ ಕಥೆ ಏನು..?

ಐಫೋನ್ SE 2 ನಿರ್ಮಾಣಕ್ಕೆ ಆಪಲ್ ಮುಂದಾಗಿದ್ದು, ಐಫೋನ್ SE ವಿನ್ಯಾಸದ ಮುಂದುವರೆದ ಭಾಗ ಇದಾಗಿರಲಿದೆ. ಮೂಲಗಳ ಪ್ರಕಾರ ಈ ಫೋನ್ ಸಹ ಭಾರತೀಯ ಮಾರುಕಟ್ಟೆಯಲ್ಲಿಯೇ ನಿರ್ಮಾಣಗೊಳ್ಳಲಿದೆ ಎನ್ನುವ ಮಾತು ಕೇಳಿ ಬಂದಿದೆ. ಇದೇ ವರ್ಷದಲ್ಲಿ ನಡೆಯಲಿರುವ WWDC ಸಮಾವೇಶದಲ್ಲಿ ಈ ಫೋನ್ ಅನ್ನು ಪರಿಚಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಜೆಟ್ ಬೆಲೆಯಲ್ಲಿ:

ಬಜೆಟ್ ಬೆಲೆಯಲ್ಲಿ:

ಭಾರತದಲ್ಲಿ ಈಗಾಗಲೇ ಐಫೋನ್ ಬೇಡಿಕೆಯೂ ಹೆಚ್ಚಾಗುತ್ತಿದೆ. ಅಲ್ಲದೇ ದುಬಾರಿ ಬೆಲೆಯ ಐಫೋನ್ X ಸಹ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿತ್ತು. ಈ ಹಿನ್ನಲೆಯಲ್ಲಿ ಆಪಲ್ ಐಫೋನ್ SE 2 ಅನ್ನು ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

A10 ಪ್ರೋಸೆಸರ್:

A10 ಪ್ರೋಸೆಸರ್:

ಐಫೋನ್ SE 2ನಲ್ಲಿ ಆಪಲ್ A10 ಪ್ರೋಸೆಸರ್ ಅನ್ನು ಅಳವಡಿಸುವ ಸಾಧ್ಯತೆ ಇದೆ. ಅಲ್ಲದೇ ಇದರೊಂದಿಗೆ 2GB RAM ಮತ್ತು 32/128 GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳಲಿದ್ದು, ಮಾರುಕಟ್ಟೆಯಲ್ಲಿ ಹೊಸ ಆಲೆಯನ್ನು ಹುಟ್ಟಿ ಹಾಕಲಿದೆ.

4.2 ಇಂಚಿನ ಸ್ಕ್ರಿನ್:

4.2 ಇಂಚಿನ ಸ್ಕ್ರಿನ್:

ಇದಲ್ಲದೇ ಐಫೋನ್ SE 2 ನಲ್ಲಿ ಆಪಲ್ 4.2 ಇಂಚಿನ ಪರದೆಯನ್ನು ಅಳವಡಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ 4 ಇಂಚಿನ ಡಿಸ್‌ಪ್ಲೇಯನ್ನು ನೀಡಬಹುದಾಗಿದೆ. ಬೆಲೆಯೂ ಕಡಿಮೆ ಇರುವ ಕಾರಣಕ್ಕಾಗಿ ಪರದೆ ಚಿಕ್ಕದಾಗಿರಲಿದೆ.

ಫೇಸ್‌ ಐಡಿ

ಫೇಸ್‌ ಐಡಿ

ಇದಲ್ಲದೇ ಐಫೋನ್ X ನಲ್ಲಿ ನೀಡಲಾಗಿದ್ದ ಫೇಸ್‌ ಐಡಿ ಆಯ್ಕೆಯನ್ನು ಆಪಲ್ ಐಫೋನ್ SE 2 ನಲ್ಲಿಯೂ ನೀಡಲಿದೆ ಎನ್ನವ ಮಾಹಿತಿಯೂ ದೊರೆತಿದ್ದು, ಈ ಹಿಂದೆ ನೀಡುತ್ತಿದ್ದ ಟೆಚ್ ಐಡಿಯ ಬದಲಿಗೆ ಫೇಸ್‌ ಐಡಿಯನ್ನು ಬಳಕೆದಾರರಿಗೆ ನೀಡಲಿದೆ.

Best Mobiles in India

English summary
iPhone SE 2 Rumoured to Sport 4.2-Inch Display. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X