ಕೇವಲ 28 ಸಾವಿರಕ್ಕೆ ಮಾರುಕಟ್ಟೆಗೆ ಬರಲಿದೆಯಂತೆ ಹೊಸ 'ಐಫೋನ್ ಎಸ್ಇ 2'!

|

ಈ ವರ್ಷ ಐಫೋನ್ 11, ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್ ಎಂಬ ಮೂರು ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿರುವ ಆಪಲ್‌ನ ಮುಂದಿನ ಯೋಜನೆ ಆಶ್ಚರ್ಯ ಮೂಡಿಸಿದೆ. ಆಪಲ್‌ನ ಮುಂದಿನ ಐಫೋನ್ 12ನೇ ಸರಣಿಯಾಗಬಹುದು ಎಂದು ಊಹಿಸಿದ್ದ ಮಾರುಕಟ್ಟೆಗೆ ಇದು ಅತ್ಯಂತ ಆಶ್ಚರ್ಯಕರ ಸುದ್ದಿಯಾಗಿದ್ದು, ಆಪಲ್ ಶೀಘ್ರದಲ್ಲೇ ಐಫೋನ್ ಎಸ್ಇಗೆ ಉತ್ತರಾಧಿಕಾರಿಯನ್ನು ಪ್ರಾರಂಭಿಸಬಹುದು. ಐಫೋನ್ ಎಸ್ಇಯ ಫಾಲೋ-ಅಪ್ ಫೋನನ್ನು ಐಫೋನ್ ಎಸ್ಇ 2 ಎಂದು ಕರೆಯಲಾಗುವುದು ಎಂದು ವದಂತಿಗಳು ಹೇಳಿವೆ.

ಐಫೋನ್ ಎಸ್ಇ

ಹೌದು, ಮೊಬೈಲ್ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿದ್ದ ಆಪಲ್‌ನ ಬಜೆಟ್ ಸ್ಮಾರ್ಟ್‌ಫೋನ್ ಐಫೋನ್ ಎಸ್ಇ ಇದೀಗ ಸರಣಿಯಾಗಿ ಕಾಲಿಡುತ್ತಿದೆ. ಮೊಬೈಲ್ ಮಾರುಕಟ್ಟೆಯ ಪ್ರಖ್ಯಾತ ವಿಶ್ಲೇಷಕ ಮಿಂಗ್-ಚಿ ಕುವೊ ಅವರಿಂದ ಬರುವ ಹೊಸ ವರದಿಯ ಪ್ರಕಾರ, ಐಫೋನ್ ಎಸ್ಇ 2 ಬಿಡುಗಡೆ ಸಮಯ ಹಾಗೂ ಬೆಲೆ ಎಷ್ಟು ಎಂಬುದನ್ನು ಬಹಿರಂಗವಾಗಿದೆ. ಮಿಂಗ್-ಚಿ ಕುವೊ ಅವರಿಂದ ಬಹಿರಂಗವಾಗಿರುವ ಮಾಹಿತಿಯಂತೆ 2020 ರ ಮೊದಲ ತ್ರೈ ಮಾಸಿಕದಲ್ಲಿ 'ಐಫೋನ್ ಎಸ್ಇ 2' ವಿಶ್ವ ಮೊಬೈಲ್ ಮಾರುಕಟ್ಟೆಗೆ ಕಾಲಿಡಲಿದೆ ಎಂದು ತಿಳಿಸಿದ್ದಾರೆ.

ಎಸ್ಇ 2

ಇನ್ನು ಬೆಲೆ ಮತ್ತು ಫೀಚರ್ಸ್ ವಿಷಯಕ್ಕೆ ಬಂದರೆ, ಐಫೋನ್ ಎಸ್ಇ ಯಂತೆಯೇ ಮುಂಬರುವ ಎಸ್ಇ 2 ಸಹ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯನ್ನು ತಲುಪಲಿದೆ ಎಂದು ಅವರು ತಿಳಿಸಿದ್ದಾರೆ. ಹೊಸ ಐಫೋನ್ 11 ಸರಣಿ ಫೋನ್‌ಗಳಂತೆಯೇ ಐಫೋನ್ ಎಸ್ಇ 2 ಅನ್ನು ಎ 13 ಸಿಪಿಯು 64 ಜಿಬಿ ಮತ್ತು 128 ಜಿಬಿ ಎಂಬ ಎರಡು ಶೇಖರಣಾ ಆವೃತ್ತಿಗಳಲ್ಲಿ ಲಭ್ಯವಿರುತ್ತದೆ. ಹಾಗೆಯೇ, ಐಫೋನ್ ಎಸ್ಇ 2 ಬೆಲೆಯನ್ನು ಅಂದಾಜು 28,300 ರೂ.ಗಳಿಗೆ ನಿಗದಿಪಡಿಸಬಹುದು ಎಂದು ವಿಶ್ಲೇಷಕ ಮಿಂಗ್-ಚಿ ಕುವೊ ಅವರು ತಿಳಿಸಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

ಐಫೋನ್ X

ಈ ಹಿಂದಿನ ವದಂತಿಗಳು ಮುಂಬರುವ ಐಫೋನ್ ಎಸ್ಇ 2 ವಿನ್ಯಾಸವು ಐಫೋನ್ 8 ವಿನ್ಯಾಸದಂತೆ ಇರಲಿದೆ ಎಂದು ಸೂಚಿಸಿದ್ದವು. ಆದರೆ, ಇದೀಗ ಬಿಗಡೆಯಾಗಿರುವ ಕೆಲವೊಂದು ಚಿತ್ರಗಳು ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿದ್ದ ಐಫೋನ್ X ವಿನ್ಯಾಸದ ಮೂಲಕ ಐಫೋನ್ ಎಸ್ಇ 2 ಕಾಲಿಡಲಿದೆ ಎಂದು ಹೇಳಿವೆ. ವಿನ್ಯಾಸದ ವಿಷಯದಲ್ಲಿ ನೀರಸವಾಗಿ ಕಾಣುವ ಐಫೋನ್ ಎಸ್ಇಗಿಂತ ಐಫೋನ್ ಎಸ್ಇ 2 ವಿನ್ಯಾಸ ನವೀಕರಣವಾಗಿರಲಿದೆ. ಆದರೆ, ಫೀಚರ್ಸ್ ವಿಷಯದಲ್ಲಿ ಅಷ್ಟೇನು ಬದಲಾವಣೆಗಳು ಕಾಣುವುದಿಲ್ಲ ಎಂದು ಹೇಳಲಾಗಿದೆ.

ಐಫೋನ್ ಎಸ್ಇ 2

ಒಟ್ಟು ಎರಡು ಆವೃತ್ತಿಯಲ್ಲಿ ಐಫೋನ್ ಎಸ್ಇ 2 ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಐಫೋನ್ ಎಸ್ಇ 2ನಲ್ಲಿ ಆಪಲ್ ಎ 13 ಪ್ರೋಸೆಸರ್ ಅನ್ನು ಅಳವಡಿಸುವ ಸಾಧ್ಯತೆ ಇದೆ. ಅಲ್ಲದೇ ಇದರೊಂದಿಗೆ 2 ಅಥವಾ 3 GB RAM ಮತ್ತು 64/128 GB ಇಂಟರ್ನಲ್ ಮೆಮೊರಿ ಸಹ ಇರಲಿದೆ ಎಂದು ಹೇಳಲಾಗಿದೆಮೂಲಗಳ ಪ್ರಕಾರ 4 ಇಂಚಿನ ಅಥವಾ 4.5 ಇಂಚಿನ ಡಿಸ್‌ಪ್ಲೇ ನೀಡಬಹುದಾಗಿದೆ. ಈ ಹಿಂದೆ ನೀಡುತ್ತಿದ್ದ ಟೆಚ್ ಐಡಿಯ ಬದಲಿಗೆ ಫೇಸ್‌ ಐಡಿ ಆಯ್ಕೆಯನ್ನು ಆಪಲ್ ಐಫೋನ್ ಎಸ್ಇ 2 ನಲ್ಲಿಯೂ ನೀಡಲಿದೆ ಎನ್ನವ ಮಾಹಿತಿಯೂ ದೊರೆತಿದೆ.

Best Mobiles in India

English summary
The iPhone SE 2 will be powered by A13 CPU similar to the new iPhone 11 series phones. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X