Home
ಮೊಬೈಲ್

ಮೇ ತಿಂಗಳಿನಲ್ಲಿ ಬಜೆಟ್ ಬೆಲೆಯ ಐಫೋನ್ ಲಾಂಚ್..!

By Bhaskar N J

ಮಾರುಕಟ್ಟೆಯಲ್ಲಿ ಹೆಚ್ಚಿನ ಸದ್ದು ಮಾಡುತ್ತಿರುವ ಆಪಲ್, ಮಾರುಕಟ್ಟೆಯಲ್ಲಿ ಹೊಸದಾಗಿ ಐಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದೆ. ಅದುವೇ ಬಜೆಟ್ ಐಫೋನ್ ಎನ್ನಲಾಗಿದ್ದು, ಎರಡು ವರ್ಷದ ಹಿಂದೆ ಲಾಂಚ್ ಆಗಿದ್ದ ಐಫೋನ್ SE ಮುಂದುವರೆದ ಭಾಗವಾಗಿ ಐಫೋನ್ SE 2 ಅನ್ನು ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿಯೂ ಲೀಕ್ ಆಗಿದೆ.

ಮೇ ತಿಂಗಳಿನಲ್ಲಿ ಬಜೆಟ್ ಬೆಲೆಯ ಐಫೋನ್ ಲಾಂಚ್..!

ಮೂಲಗಳ ಪ್ರಕಾರ ಮುಂದಿನ ತಿಂಗಳು ಅಂದರೆ ಮೇ ಮೊದಲ ವಾರದಲ್ಲಿ ಐಫೋನ್ SE 2 ಅನ್ನು ಲಾಂಚ್ ಮಾಡಲು ಆಪಲ್ ತಯಾರಿಯನ್ನು ನಡೆಸಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಸೃಷ್ಠಿಸಿಕೊಳ್ಳಲಿದೆ. ಈ ಐಫೋನ್ SE 2ಯಲ್ಲಿ A10 ಪ್ಯೂಷನ್ ಪ್ರೋಸೆಸರ್ ಅನ್ನು ಆಪಲ್ ಅಳವಡಿಸಲಿದೆ ಎನ್ನಲಾಗಿದೆ.

ಐಫೋನ್ SE 2 ಮಾರುಕಟ್ಟೆಯಲ್ಲಿ ಆಪಲ್‌ಗೆ ಹೆಚ್ಚಿನ ಜನರನ್ನು ತಲುಪಲು ಸಹಾಯವನ್ನು ಮಾಡಲಿದೆ ಎನ್ನಲಾಗಿದ್ದು, ಬಜೆಟ್ ಬೆಲೆಯಲ್ಲಿ ದೊರೆಯುವ ಈ ಐಫೋನ್ ಮೇಲೆ ಭಾರೀ ನಿರೀಕ್ಷೆ ಇದ್ದು, ಭಾರತ ಸೇರಿದಂತೆ ವಿವಿಧ ಮಾರುಕಟ್ಟೆಯಲ್ಲಿ ಧೂಳ್ ಎಬ್ಬಿಸುವ ಸಾಧ್ಯತೆ ಹೆಚ್ಚಾಗಿದೆ. ಆಪಲ್ ಕೊಳ್ಳಬೇಕು ಎನ್ನುವವವರಿಗೆ ಬೆಸ್ಟ್ ಆಯ್ಕೆಯಾಗುವ ಸಾಧ್ಯತೆ ಇದೆ.

ಮೇ ತಿಂಗಳಿನಲ್ಲಿ ಬಜೆಟ್ ಬೆಲೆಯ ಐಫೋನ್ ಲಾಂಚ್..!

ಐಫೋನ್ SE 2 ಬಜೆಟ್ ಬೆಲೆಯಲ್ಲಿ ದೊರೆತರು ಸಹ ಹೆಚ್ಚಿನ ಆಯ್ಕೆಗಳನ್ನು ಹೊಂದಿರಲಿದ್ದು, ಐಪೋನ್ X ಮಾದರಿಯ ವಿನ್ಯಾಸ ಹಾಗೂ ಡಿಸ್‌ಪ್ಲೇ ನೋಚ್ ಅನ್ನು ಒಳಗೊಂಡಿರಲಿದೆ. ಅಲ್ಲದೇ ಮೂಲಗಳು ಹೇಳುವಂತೆ ಡ್ಯುಯಲ್ ಸಿಮ್ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.

ಐಫೋನ್ SE 2 ಕುರಿತಂತೆ ಸಾಕಷ್ಟು ರೂಮರ್ ಗಳು ಕೇಳಿ ಬಂದಿದ್ದು, ಮಾರುಕಟ್ಟೆಯಲ್ಲಿ ತನ್ನ ಪ್ರಭಾವನ್ನು ಏರಿಕೆ ಮಾಡಿಕೊಳ್ಳಲು ಆಪಲ್ ಈ ಐಪೋನಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆಗಳನ್ನು ನೀಡಲಿದ್ದು, ಬೆಲೆಯಲ್ಲಿ ಕಡಿಮೆ ಇಡುವ ಸಾಧ್ಯತೆ ಇದೆ. ಮೇ ತಿಂಗಳಿನಿಂದ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಲಿದೆ.

Best Mobiles in India

English summary
iPhone SE 2 Without Face ID to Launch in May. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+