ಇಂದಿನಿಂದ 'ಐಫೋನ್ ಎಕ್ಸ್' ಪ್ರೀ ಬುಕ್ಕಿಂಗ್ ಆರಂಭ!!..ಭಾರತದಲ್ಲಿ "ಐಫೋನ್ ಎಕ್ಸ್" ಬೆಲೆ?
ದೇಶದಲ್ಲಿನ 55 ಔಟ್‌ಲೇಟ್‌ಗಳಲ್ಲಿ ಮತ್ತು ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ಗಳಲ್ಲಿ ಐಫೋನ್ ಎಕ್ಸ್ ಫೋನ್ ಅನ್ನು ಬುಕ್ ಮಾಡಬಹುದಾಗಿದೆ.!!
ಫೇಸ್‌ಲಾಕ್ ಫೀಚರ್ ಮತ್ತು ಬೆಜೆಲ್‌ಲೆಸ್ ನಂತಹ ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಆಪಲ್ ಕಂಪೆನಿಯ ಮೊದಲ ಸ್ಮಾರ್ಟ್‌ಫೋನ್ 'ಐಫೋನ್ ಎಕ್ಸ್' ಪ್ರೀ ಬುಕ್ಕಿಂಗ್ ಭಾರತದಲ್ಲಿ ಇಂದಿನಿಂದ ಆರಂಭವಾಗಿದೆ.! ದೇಶದಲ್ಲಿನ 55 ಔಟ್‌ಲೇಟ್‌ಗಳಲ್ಲಿ ಮತ್ತು ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ಗಳಲ್ಲಿ ಐಫೋನ್ ಎಕ್ಸ್ ಫೋನ್ ಅನ್ನು ಬುಕ್ ಮಾಡಬಹುದಾಗಿದೆ.!!
ಭಾರತ ಸೇರಿದಂತೆ ವಿಶ್ದವದ ಹಲವು ದೇಶಗಳಲ್ಲಿ 'ಐಫೋನ್ ಎಕ್ಸ್' ಮುಂಗಡ ಬುಕ್ಕಿಂಗ್ ಇಂದು ಶುರುವಾದಿದ್ದು, ಭಾರತದಲ್ಲಿ ಇಂದು ಮಧ್ಯಾಹ್ನ 12.30 ಕ್ಕೆ 'ಐಫೋನ್ ಎಕ್ಸ್' ಪ್ರೀ ಪ್ರಾರಂಭವಾಗಿದೆ. ನವೆಂಬರ್ 3 ರಿಂದ ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಲಭ್ಯವಾಗಲಿದ್ದು, ಭಾರತದಲ್ಲಿ ಫೋನ್ ಬೆಲೆ ಎಷ್ಟು? ಫೀಚರ್ಸ್ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಐಫೋನ್ X ಡಿಸ್‌ಪ್ಲೇ!!
ಆಪಲ್ ಮೊದಲ ಬಾರಿಗೆ OLED ಡಿಸ್‌ಪ್ಲೇ ಪ್ಯಾನಲ್ ಅನ್ನು ಐಫೋನ್ X ನಲ್ಲಿ ಅಳವಡಿಸಿದ್ದು, 5.8 ಇಂಚಿನ ಬೇಜೆಲ್ ಲೆಸ್ ಸ್ಕ್ರಿನ್ ಸೂಪರ್ ರೆಟೀನಾ 2436 x 1125 ಪಿಕ್ಸಲ್ ಗುಣಮಟ್ಟದ್ದಾಗಿದೆ.! ಅಲ್ಲದೇ ಎಡ್ಜ್ ಟು ಎಡ್ಜ್ ಡಿಸ್‌ಪ್ಲೆ, ಕಲರ್ ಕ್ಲಾರಿಟಿ ಹಾಗೂ ಟ್ರೂ ಟೋನ್ ಡಿಸ್‌ಪ್ಲೇ ಟೆಕ್ನಾಲಜಿಯನ್ನು ಹೊಂದಿದೆ.

ಹಾರ್ಡ್‌ವೇರ್!!
ಆಪಲ್ ಐಫೋನ್ X ಹೊಸ A11 ಬಯೋನಿಕ್ ಪ್ರೋಸೆಸರ್ ಹೊಂದಿದ್ದು, ಇದು ವಿಶ್ವ ಸ್ಮಾರ್ಟ್‌ಫೋನ್‌ಗಳಲ್ಲೇ ಬಳಕೆಯಾಗಿರುವ ಅತೀ ಹೆಚ್ಚಿನ ವೇಗದ ಪ್ರೋಸೆಸರ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಅಲ್ಲದೇ ಆಪಲ್ GPU ಗೇಮಿಂಗ್ ಅನುಭವನ್ನು ಅತ್ಯುತ್ತಮಗೊಳಿಸಿದೆ. ಈ ಪ್ರೋಸೆಸರ್ ಲೋ ಲೈಟ್ ನಲ್ಲಿಯೂ ಪಿಚ್ಚರ್ ಗಳನ್ನು ತೆಗೆಯಲು ಶಕ್ತವಾಗಿದೆ.

ಕ್ಯಾಮೆರಾ ಹೇಗಿದೆ?
ಐಫೋನ್ X ನಲ್ಲಿ 12 MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರಲ್ಲಿ ವೈಡ್ ಆಂಗಲ್ ಲೈನ್ಸ್ f/1.8 ಅಪರ್ಚರ್ ಹೊಂದಿದ್ದು, ಟೆಲಿ ಲೈನ್ಸ್ f/2.4 ಅಪರ್ಚರ್ ನಲ್ಲಿ ಫೋಟೊವನ್ನು ಕ್ಲಿಕ್ ಮಾಡಲಿದೆ. ಇದಲ್ಲದೇ ಡ್ಯುಯಲ್ ಟೊನ್ LED ಫ್ಲಾಷ್ ಸಹ ಇದರಲ್ಲಿದೆ. ಇದೆಲ್ಲಿ ಕ್ಯಾಮೆರಾವನ್ನು ವರ್ಟಿಕರ್ ಆಗಿ ನೀಡಲಾಗಿದೆ. ಅಲ್ಲದೇ ಇದರಲ್ಲಿ ಪೋಟ್ರೇಟ್ ಮೊಡ್ ಅನ್ನು ನೀಡಲಾಗಿದೆ. ಇದರಲ್ಲಿ ನೀವು ಬಣ್ಣಗಳನ್ನು ಬದಲಾಯಿಸುವ ಅವಕಾಶವನ್ನು ಮಾಡಿಕೊಡಲಾಗಿದೆ.

ಆಪಲ್‌ನ ಮೊದಲ AR ಮತ್ತು ಅನ್‌ಮೋಜಿ!!
ಐಫೋನ್ X ನಲ್ಲಿರುವ ಹಿಂಬದಿಯ ಕ್ಯಾಮೆರಾಗಳು AR ಸಫೋರ್ಟ್ ಮಾಡಲಿದ್ದು, ಮೊಷನ್ ಟ್ರಾಕಿಂಗ್ ಮಾಡಲಿದೆ. ಇದನ್ನು ಆಪಲ್ ಮೊದಲ ಬಾರಿಗೆ ತನ್ನ ಫೋನಿನಲ್ಲಿ ಅಳವಡಿಸಿದೆ. ಅಲ್ಲದೇ ಇದನ್ನು ಲಾಂಚ್ ವೇಳೆಯಲ್ಲಿ ಡೊಮೊ ಸಹ ನೀಡಲಾಗಿತ್ತು.!! ಎಮೋಜಿಗಳ ಬದಲಾಗಿ ನಿಮ್ಮದೇ ಅನ್‌ಮೋಜಿ ಕ್ರಿಯೆಟ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇದಕ್ಕಾಗಿ ಟ್ರೂ ಡೆಪ್ತ್ ಕ್ಯಾಮೆರಾ ಸಹಾಯ ಮಾಡಲಿದೆ. ನಿಮ್ಮ ಸ್ಟೀಕರ್ ಗಳನ್ನು ನೀವು ಕ್ರಿಯೇಟ್ ಮಾಡಿಕೊಳ್ಳಬಹುದಾಗಿದೆ. ಅದನ್ನು ಸ್ನೇಹಿತರಿಗೆ ಸೆಂಡ್ ಮಾಡಬಹುದಾಗಿದೆ.

ಐಫೋನ್ X ಫೇಸ್ ಐಡಿ!!
ಐಫೋನ್ X ನಲ್ಲಿ ಈ ಹಿಂದಿನ ಟೆಚ್ ಐಡಿಯನ್ನು ತೆಗೆದು ಹಾಕಿ ಹೊಸದಾಗಿ ಫೇಸ್ ಐಡಿ ಎಂಬ ಹೊಸ ಆಯ್ಕೆಯನ್ನು ನೀಡಲಾಗಿದೆ. ಇದು ನಿಮ್ಮ ಐಫೋನ್ ಅನ್‌ಲಾಕ್ ಮಾಡಲು ಬಳಕೆ ಮಾಡಿಕೊಳ್ಳಬಹುದಾಗಿದೆ. ಒಮ್ಮೆ ನಿಮ್ಮ ಫೇಸ್ ರಿಡ್ ಆದ ನಂತರದಲ್ಲಿ ನೀವು ಹೆರ್ ಸ್ಟೈಲ್ ಬದಲಾಯಿಸಿದರೂ, ಗಡ್ಡ ಬಿಟ್ಟರು ನಿಮ್ಮನ್ನು ಗುರುತಿಸಲಿದೆ. ಇದಕ್ಕಾಗಿ ಮುಂಭಾಗದಲ್ಲಿ ಸೆನ್ಸಾರ್ ಮತ್ತು ಕ್ಯಾಮೆರಾವನ್ನು ಇಡಲಾಗಿದ್ದು, ನೀವು ಸ್ಕ್ರಿನ್ ಅನ್ನು ಕೆಳಗಿನಿಂದ ಮೇಲೆ ಮಾಡಿದರೆ ಸಾಕು ತೆರೆದುಕೊಳ್ಳಲಿದೆ.

ಬ್ಯಾಟರಿ ಹೇಗಿದೆ ಮತ್ತು ಬೆಲೆ ಎಷ್ಟು?
ಐಫೋನ್ X ಸ್ಮಾರ್ಟ್‌ಫೋನ್ ವೈರ್‌ಲೈಸ್ ಚಾರ್ಜ್ ಸಪೋರ್ಟ್ ಮಾಡಲಿದ್ದು, 2716mAh ಬ್ಯಾಟರಿಯನ್ನು ಅಳವಡಿಸುವುದರೊಂದಿಗೆ ಬಾಳಿಕೆಯನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡಲಾಗಿದೆ . infnu ಐಫೋನ್ X ಎರಡು ಆವೃತ್ತಿಯಲ್ಲಿ ದೊರೆಯಲಿದ್ದು, 64GB ವೆರಿಯಂಟ್ ಐಫೋನ್ X ಬೆಲೆ 89,000ರೂ.ಗಳಿದ್ದರೆ, 256GB ವೆರಿಯಂಟ್ ಐಫೋನ್ X ಬೆಲೆ 1,02,000 ರೂ.ಗಳಾಗಿವೆ


Click it and Unblock the Notifications