ಮಾರುಕಟ್ಟೆಗೆ ಮೂರು ಲಕ್ಷದ ಐಫೋನ್: ಬ್ಯಾಟರಿ ಚಾರ್ಜ್ ಮಾಡುವುದೇ ಬೇಡ...!

|

ಮಾರುಕಟ್ಟೆಯಲ್ಲಿ ಈಗಾಗಲೇ ದುಬಾರಿ ಬೆಲೆಯ ಐಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ಐಫೋನ್ X ಅನೇಕ ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳ ವಿನ್ಯಾಸಕ್ಕೆ ಮುನ್ನಡಿ ಹಾಡಿದೆ. ದುಬಾರಿ ಬೆಲೆ ಕೊಟ್ಟು ಐಪೋನ್ X ಖರೀದಿಸಲು ಸಾಧ್ಯವಾಗದವರು ಕಡಿಮೆ ಬೆಲೆಯಲ್ಲಿ ಐಫೋನ್ X ಮಾದರಿಯಲ್ಲಿ ಕಾಣಿಸುವ ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳನ್ನು ಖರೀದಿಸುತ್ತಿದ್ದಾರೆ.

ಮಾರುಕಟ್ಟೆಗೆ ಮೂರು ಲಕ್ಷದ ಐಫೋನ್: ಬ್ಯಾಟರಿ ಚಾರ್ಜ್ ಮಾಡುವುದೇ ಬೇಡ...!

ಸದ್ಯ ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಇನ್ನು ದುಬಾರಿ ಬೆಲೆಯ ಐಫೋನ್ X ಕಾಣಿಸಿಕೊಂಡಿದ್ದು, $4,500ಕ್ಕೆ (ಸುಮಾರು ರೂ.3,04,762) ಮಾರಾಟವಾಗಲಿದ್ದು, ಐಫೋನ್ X ಟೆಲ್ಸಾ ಎಂದು ನಾಮಕರಣವನ್ನು ಮಾಡಲಿದೆ, ಈ ಸ್ಮಾರ್ಟ್ ಫೋನ್‌ ಅನ್ನು ಚಾರ್ಜ್ ಮಾಡುವ ಅವಶ್ಯಕತೆ ಇಲ್ಲ ಎನ್ನಲಾಗಿದ್ದು, ಫೋನಿನ ಬ್ಯಾಕ್ ಕವರ್ ನಲ್ಲಿ ಸೋಲಾರ್ ಪ್ಯಾನಲ್ ಅನ್ನು ನೀಡಲಾಗಿದೆ.

 ಚಾರ್ಜ್ ಮಾಡಬೇಕಾಗಿಲ್ಲ:

ಚಾರ್ಜ್ ಮಾಡಬೇಕಾಗಿಲ್ಲ:

ಐಫೋನ್ X ಟೆಲ್ಸಾ ವನ್ನು ಚಾರ್ಜ್ ಮಾಡುವ ಅವಶ್ಯಕತೆ ಇಲ್ಲ ಎನ್ನಲಾಗಿದ್ದು, ಇದಕ್ಕಾಗಿಯೇ ಫೋನಿನ ಹಿಂಭಾಗದಲ್ಲಿ ಸೋಲಾರ್ ಪ್ಯಾನಲ್ ನೀಡಲಾಗಿದ್ದು, ಇದರಿಂದಲೇ ಫೋನ್ ಚಾರ್ಜ್ ಆಗಲಿದೆ. ಇದು ವಾಟರ್ ಮತ್ತು ಡಸ್ಟ್ ಫ್ರೂಫ್ ಆಗಿದೆ. ಇದಕ್ಕಾಗಿಯೇ ಈ ಐಫೋನ್ ಬೆಲೆ ದುಬಾರಿಯಾಗಿದೆ.

ಐಫೋನ್‌ಗಿಂತಲೂ ಪ್ಯಾನಲ್ ದುಬಾರಿ:

ಐಫೋನ್‌ಗಿಂತಲೂ ಪ್ಯಾನಲ್ ದುಬಾರಿ:

ಮಾರುಕಟ್ಟೆಯಲ್ಲಿ $1000 ಗಿಂತಲೂ ಕಡಿಮೆ ಬೆಲೆಗೆ ಐಫೋನ್ X ಮಾರಾಟವಾಗುತ್ತಿದ್ದು, ಇದರ ಹಿಂಭಾಗದಲ್ಲಿ ಅಳಡಿಸಿರುವ ಟೆಲ್ಸಾ ಸೋಲಾರ್ ಪ್ಯಾನಲ್ ಬೆಲೆಯೂ ಇದಕ್ಕಿಂತ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಐಫೋನ್ X ಟೆಲ್ಸಾ $4500ಕ್ಕೆ ಮಾರಾಟವಾಗುತ್ತಿದೆ.

ಲಿಮಿಟೆಡ್:

ಲಿಮಿಟೆಡ್:

ಐಫೋನ್ X ಟೆಲ್ಸಾ ಆವೃತ್ತಿಯೂ ಲಿಮಿಟೆಡ್ ಆಗಿದ್ದು, ರಷ್ಯಾ ಮೂಲಕದ ಐಷಾರಾಮಿ ಸ್ಮಾರ್ಟ್‌ಫೋನ್ ವಿನ್ಯಾಸಕ ಕಾವಿರ್ ಇದನ್ನು ವಿನ್ಯಾಸ ಮಾಡಿದ್ದು, ಕೇಲವ 999 ಐಫೋನ್ X ಟೆಲ್ಸಾ ಮಾತ್ರವೇ ಮಾರಾಟವಾಗಲಿದೆ ಎನ್ನಲಾಗಿದೆ.

ಹೊಸತನ:

ಹೊಸತನ:

ಐಫೋನ್ X ನಲ್ಲಿ ಅಮೊಲೈಡ್ ಬ್ರೈಸಿಲ್ ಲೆಸ್ ಡಿಸ್‌ಪ್ಲೇ ವಿನ್ಯಾಸವನ್ನು ಕಾಣಬಹುದಾಗಿದೆ. ಅಲ್ಲದೇ ಫೇಸ್‌ ಲಾಕ್, ಡಿಸ್‌ಪ್ಲೇ ನೋಚ್ ಸೇರಿದಂತೆ ಅನೇಕ ಹೊಸತನಗಳಿಗೆ ಈ ಐಫೋನ್ ಸಾಕ್ಷಿಯಾಗಿತ್ತು ಎನ್ನಲಾಗಿದೆ.

Best Mobiles in India

English summary
'iPhone X Tesla' With a Solar Panel. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X