Home
ಮೊಬೈಲ್

ಐಫೋನ್‌ಗೆ ಪ್ರೀಪೇಯ್ಡ್ ಇ-ಸಿಮ್ ನೀಡುವುದು ಜಿಯೋ ಮಾತ್ರವೇ: ಬೆಸ್ಟ್‌ ಆಫರ್‌ ಇದೆ..!

ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ಸೆಪ್ಟೆಂಬರ್ 21, 2018ರಿಂದ ಜಿಯೋದಲ್ಲಿ ಮುಂಗಡ ಕಾಯ್ದಿರಿಸುವಿಕೆಗೆ ಲಭ್ಯವಿರಲಿದೆ. ಜಿಯೋ ಜಾಲತಾಣ jio.com, ರಿಲಯನ್ಸ್ ಡಿಜಿಟಲ್, ಮೈಜಿಯೋ ಸ್ಟೋರ್‌ ಹಾಗೂ ಮೈಜಿಯೋ ಆಪ್ ಮೂಲಕ ಗ್ರಾಹಕರು ಹೊಚ್ಚಹೊಸ ಐಫೋನ್‌ಗಳನ್ನು ಬುಕ್ ಮಾಡಬಹುದಾಗಿದೆ.

ಐಫೋನ್‌ಗೆ ಪ್ರೀಪೇಯ್ಡ್ ಇ-ಸಿಮ್ ನೀಡುವುದು ಜಿಯೋ ಮಾತ್ರವೇ: ಬೆಸ್ಟ್‌ ಆಫರ್‌ ಇದೆ..!

ಪ್ರೀಪೇಯ್ಡ್ ಹಾಗೂ ಪೋಸ್ಟ್‌ಪೇಯ್ಡ್ ಗ್ರಾಹಕರೆಲ್ಲರಿಗೂ ಹೊಸದಾಗಿ ಐಫೋನ್ ಲಾಂಚ್ ಮಾಡಿರುವ ಇ-ಸಿಮ್ ಸೌಲಭ್ಯವನ್ನು ಜಿಯೋ ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ವಿಶ್ವದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‍ವರ್ಕ್ ಸೇರುವ ಮುನ್ನ ಜಿಯೋ ಡಿಜಿಟಲ್ ಲೈಫ್ ಅನುಭವಿಸಲು ನೆರವಾಗಲಿದೆ ಡ್ಯುಯಲ್ ಸಿಮ್ ಸವಲತ್ತು ಇದರಿಂದ ದೊರೆಯಲಿದೆ.

21 ಸೆಪ್ಟೆಂಬರ್ 2018ರಿಂದ:

21 ಸೆಪ್ಟೆಂಬರ್ 2018ರಿಂದ:

ವಿಶ್ವದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‌ವರ್ಕ್ ಆದ ಜಿಯೋ ಹೊಸದಾಗಿ ಲಾಂಚ್ ಆಗಿರುವ ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ಗಳನ್ನು ಮಾರಾಟ ಮಾಡಲಿದೆ. ಅಲ್ಲದೇ ಸೆಪ್ಟೆಂಬರ್ 21, 2018ರ ಮುಂಗಡವಾಗಿ ಬುಕ್ ಮಾಡುವ ಅವಕಾಸವನ್ನು ಮಾಡಿಕೊಟ್ಟಿದೆ.

ಜಿಯೋ ಇ-ಸಿಮ್:

ಜಿಯೋ ಇ-ಸಿಮ್:

ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ಗಳೇರಡು ನ್ಯಾನೋ ಸಿಮ್ ಮತ್ತು ಡಿಜಿಟಲ್ ಇ-ಸಿಮ್ ಬಳಸುವ ಅವಕಾಶವನ್ನು ಹೊಂದಿದೆ. ಇದಕ್ಕದಾಗಿ ಐಫೋನ್‌ನಲ್ಲಿ ಡ್ಯುಯಲ್ ಸಿಮ್ ಅನ್ನು ಪರಿಚಯಿಸುತ್ತಿವೆ. ಇದಕ್ಕಾಗಿ ಜಿಯೋ ಇ-ಸಿಮ್ ಬಳಕೆ ಮಾಡುವ ಅವಕಾಶವನ್ನು ಮಾಡಿಕೊಡುತ್ತಿದೆ.

ಪ್ರೀಪೇಯ್ಡ್ ಹಾಗೂ ಪೋಸ್ಟ್‌ಪೇಯ್ಡ್

ಪ್ರೀಪೇಯ್ಡ್ ಹಾಗೂ ಪೋಸ್ಟ್‌ಪೇಯ್ಡ್

ಆಪಲ್‌ನ ಇ-ಸಿಮ್ ಸೌಲಭ್ಯವನ್ನು ಆಪಲ್ ಡ್ಯುಯಲ್ ಸಿಮ್ ಸಾಧನಗಳಲ್ಲಿ ಸಕ್ರಿಯಗೊಳಿಸಲಿರುವ ಜಿಯೋ, ಆಪಲ್‌ನ ಹೊಚ್ಚಹೊಸ ಐಫೋನ್‌ಗಳಲ್ಲಿ ಅತ್ಯಾಧುನಿಕ ಇ-ಸಿಮ್ ಸೌಲಭ್ಯವನ್ನು ಜಿಯೋ ಪ್ರೀಪೇಯ್ಡ್ ಹಾಗೂ ಪೋಸ್ಟ್‌ಪೇಯ್ಡ್ ಗ್ರಾಹಕರೆಲ್ಲರಿಗೂ ವಿಶೇಷವಾಗಿ ಸಕ್ರಿಯಗೊಳಿಸಲಿದೆ. ಜಿಯೋ, ಪ್ರಸ್ತುತ ನಮ್ಮ ದೇಶದಲ್ಲಿ ಪ್ರೀಪೇಯ್ಡ್ ಗ್ರಾಹಕರಿಗೂ ಇ-ಸಿಮ್ ಆಕ್ಟಿವೇಶನ್ ಸೌಲಭ್ಯ ನೀಡುತ್ತಿರುವ ಏಕೈಕ ಸಂಸ್ಥೆಯಾಗಿದೆ.

ಸೆಪ್ಟೆಂಬರ್ 28ಕ್ಕೆ ಮಾರಾಟ:

ಸೆಪ್ಟೆಂಬರ್ 28ಕ್ಕೆ ಮಾರಾಟ:

ಗ್ರಾಹಕರು ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ಸೆಪ್ಟೆಂಬರ್ 21, 2018ರ ಶುಕ್ರವಾರದಿಂದ ಜಿಯೋ ಜಾಲತಾಣ jio.com, ರಿಲಯನ್ಸ್ ಡಿಜಿಟಲ್, ಮೈಜಿಯೋ ಸ್ಟೋರ್‌ ಹಾಗೂ ಮೈಜಿಯೋ ಆಪ್ ಮೂಲಕ ಮುಂಗಡವಾಗಿ ಬುಕ್ ಮಾಡಬಹುದಾಗಿದ.ಎ ಸೆಪ್ಟೆಂಬರ್ 28, 2018ರ ಶುಕ್ರವಾರದಿಂದ ಮಳಿಗೆಗಳಲ್ಲಿ ಲಭ್ಯವಿರುತ್ತವೆ.

ವಿಶೇಷ ಆಫರ್:

ವಿಶೇಷ ಆಫರ್:

ಮಾರುಕಟ್ಟೆ ನಾಯಕತ್ವದ ತನ್ನ ಸ್ಥಾನಕ್ಕೆ ಅನುಗುಣವಾಗಿ, ಪ್ರೀಪೇಯ್ಡ್ ಹಾಗೂ ಪೋಸ್ಟ್‌ಪೇಯ್ಡ್ ಗ್ರಾಹಕರೆಲ್ಲರಿಗೂ ರಿಲಯನ್ಸ್ ಜಿಯೋ ವಿಶೇಷ ಟ್ಯಾರಿಫ್‌ಗಳನ್ನು ನೀಡುತ್ತಿದೆ. ಉಚಿತ ಕರೆ, ಎಸ್ಸೆಮ್ಮೆಸ್ ಹಾಗೂ ಜಿಯೋದ ಪ್ರೀಮಿಯಂ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾ ಜೊತೆಗೆ ಬಳಕೆದಾರರ ವಿಶಿಷ್ಟ ಅಗತ್ಯಗಳನ್ನು ಪೂರೈಸಲು ಪ್ರತಿ ಪ್ಲಾನಿನಲ್ಲೂ ಅತಿವೇಗದ ಡೇಟಾ ಸೌಲಭ್ಯ ನೀಡಲಾಗುತ್ತಿದೆ. ಐಫೋನ್ ಬಳಕೆದಾರರು ಡೇಟಾದ ಯಾವುದೇ ಮಿತಿಗಳಿಲ್ಲದೆ ಡಿಜಿಟಲ್ ಜೀವನಶೈಲಿಯನ್ನು ಪೂರ್ಣವಾಗಿ ಆನಂದಿಸುವುದನ್ನು ಜಿಯೋದ ಆಕರ್ಷಕ ಪ್ಲಾನುಗಳು ಖಚಿತಪಡಿಸುತ್ತವೆ.

ಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ವಿಶೇಷತೆ:

ಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ವಿಶೇಷತೆ:

ಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ನಲ್ಲಿ 5.8 ಹಾಗೂ 6.5-ಇಂಚಿನ ಸೂಪರ್ ರೆಟಿನಾ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಪ್ರತಿಮ ಬ್ರೈಟ್‌ನೆಸ್ ಹಾಗೂ ಟ್ರೂ ಬ್ಲ್ಯಾಕ್ ಅನುಭವ ನೀಡುವುದಲ್ಲದೆ ಎಚ್‌ಡಿಆರ್ ಫೋಟೋಗಳನ್ನು ತೆಗೆಯಲಿದೆ. ಅತ್ಯುತ್ತಮ ಫೋಟೋ ಹಾಗೂ ವೀಡಿಯೋ ಸೌಲಭ್ಯಗಳುಳ್ಳ ಸುಧಾರಿತ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆಯನ್ನು ಕಾಣಬಹುದಾಗಿದೆ.

ಎ12 ಬಯಾನಿಕ್ ಚಿಪ್:

ಎ12 ಬಯಾನಿಕ್ ಚಿಪ್:

ಮುಂದಿನ ತಲೆಮಾರಿನ ನ್ಯೂರಲ್ ಇಂಜಿನ್ ಇರುವ ಎ12 ಬಯಾನಿಕ್ ಚಿಪ್, ಕ್ಷಿಪ್ರ ಫೇಸ್ ಐಡಿ, ಹೆಚ್ಚು ವಿಸ್ತಾರವಾದ ಸ್ಟೀರಿಯೋ ಧ್ವನಿ, ದೀರ್ಘ ಬಾಳಿಕೆ ಬರುವ ಬ್ಯಾಟರಿ, ಎರಚುವಿಕೆ ಹಾಗೂ ನೀರು ನಿರೋಧಕ ಗುಣ, ಯಾವುದೇ ಮೊಬೈಲ್ ಫೋನ್ ಹೋಲಿಕೆಯಲ್ಲಿ ಅತ್ಯಂತ ದೀರ್ಘಕಾಲ ಬಾಳುವ ಗಾಜು, ಸಿಲ್ವರ್ ಹಾಗೂ ಸ್ಪೇಸ್ ಗ್ರೇಗಳನ್ನು ಬೆಸೆಯುವ ಹೊಸ ಗೋಲ್ಡ್ ಫಿನಿಶ್ ಜೊತೆಯಲ್ಲಿ ಇನ್ನೂ ಹೆಚ್ಚಿನ ಡೌನ್‌ಲೋಡ್ ವೇಗಕ್ಕಾಗಿ ಗಿಗಾಬಿಟ್-ಕ್ಲಾಸ್ ಎಲ್‌ಟಿಇಯನ್ನು ಪರಿಚಯಿಸಲಾಗುತ್ತಿದೆ.

Best Mobiles in India

English summary
iPhone XS and iPhone XS Max arrive on Jio, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+