ಡ್ಯುಯಲ್ ಸಿಮ್, ಡ್ಯುಯಲ್ ಕ್ಯಾಮೆರಾ ಇರುವ ಮೂರು ಐಫೋನ್ ಲಾಂಚ್...! ಆಂಡ್ರಾಯ್ಡ್ ಕೇಳುವವರಿಲ್ಲ..!
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯವನ್ನು ಶುರು ಮಾಡುವ ನೂತನ ಆಪಲ್ ಐಫೋನ್‌ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿವೆ. ಅಮೆರಿಕದ ಕ್ಯಾಲಿಫೋರ್ನಿಯಾದ ಆಪಲ್ ಪಾರ್ಕ್‌ನ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಫೋನ್ XS, ಐಫೋನ್ XS ಮ್ಯಾಕ್ಸ್ ಮತ್ತು ಐಫೋನ್ XRಗಳು ಲಾಂಚ್ ಆಗಿವೆ. ಈ ಮೂರು ಐಫೋನ್‌ಗಳು ಬಳಕೆದಾರರಿಗೆ ವಿವಿಧ ಮಾದರಿಯಲ್ಲಿ ಲಭ್ಯವಿರಲಿದೆ.

ಮೊಬೈಲ್ ಮಾರುಕಟ್ಟೆಯಲ್ಲಿಯೇ ಟಾಪ್ ಎಂಡ್ ಫೋನ್‌ಗಳು ಎಂದು ಗುರುತಿಸಿಕೊಂಡಿರುವ ಐಫೋನ್‌ಗಳ ಸಾಲಿನಲ್ಲಿ ಮತ್ತೇರಡು ದುಬಾರಿ ಐಫೋನ್ಗಳು ಸೇರಿಕೊಂಡಿವೆ. ಇದರೊಂದಿಗೆ ಮತ್ತೊಂದು ಬಜೆಟ್ ಬೆಲೆಯ ಐಫೋನ್ ಸಹ ಲಾಂಚ್ ಆಗಿದೆ. ನೂತನ ಐಫೋನ್ ಫೋನ್‌ಗಳು, ಬೆಲೆ ಹಾಗೂ ವೈಶಿಷ್ಟ್ಯಗಳ ಕುರಿತು ಮಾಹಿತಿಯೂ ಮುಂದಿದೆ.

ಐಫೋನ್ XS ವಿಶೇಷತೆಗಳು:
ಐಫೋನ್ XS ನಲ್ಲಿ 5.8 ಇಂಚಿನ ಸೂಪರ್ ರೆಟಿನಾ OLED ನೋಚ್ ಡಿಸ್‌ಪ್ಲೇಯನ್ನು (2436 x 1125 p) ಅಳವಡಿಸಲಾಗಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಡ್ಯುಯಲ್ ಸಿಮ್ ಹಾಕಬಹುದಾದ ಐಫೋನ್ ಇದಾಗಿದೆ, ಇದರಲ್ಲಿ ಡ್ಯುಯಲ್ ಸಿಮ್ ನೊಂದಿಗೆ eSIM ಸಪೋರ್ಟ್ ಸಹ ಇದೆ. ಐಫೋನ್ XSನಲ್ಲಿ ಆಪಲ್ A12 ಬಯೋನಿಕ್ ಪ್ರೊಸೆಸರ್ ಅನ್ನು ಕಾಣಬಹುದಾಗಿದೆ.

ಐಫೋನ್ XS ಕ್ಯಾಮೆರಾ
ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಐಫೋನ್ XSನಲ್ಲಿ ಅಳಡಿಸಲಾಗಿದ್ದು, 12MP + 12 MP ರಿಯರ್ ಕ್ಯಾಮೆರಾವನ್ನು ಅಳಡಿಸಲಾಗಿದೆ. ಒಂದು ವೈಡ್ ಆಗಲ್ ಲೈನ್ಸ್ ಆಗಿದ್ದು, ಮತ್ತೊಂದು ಟೆಲಿಫೋನ್ ಲೆನ್ಸ್ ಆಗಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಕ್ಲಿಕಿಸುವ ಸಲುವಾಗಿ 7 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಸ್ಮಾರ್ಟ್ HDR ಫೀಚರ್ ಅನ್ನು ಇದರಲ್ಲಿ ಕಾಣಬಹುದಾಗಿದ್ದು, ಹಿಂದಿಗಿಂತಲೂ ಸುಧಾರಿತ ಬ್ಯಾಟರಿ ಅಳವಡಿಸಲಾಗಿದೆ.

ಐಫೋನ್ XS ಮ್ಯಾಕ್ಸ್ ವಿಶೇಷತೆಗಳು:
ಐಫೋನ್ XS ಮ್ಯಾಕ್ಸ್ ನಲ್ಲಿ 6.5 ಇಂಚಿನ ಸೂಪರ್ ರೆಟಿನಾ OLED ನೋಚ್ ಡಿಸ್‌ಪ್ಲೇಯನ್ನು (2688 x 1442 p) ಅಳವಡಿಸಲಾಗಿದೆ. ಅಲ್ಲದೆ ಇದು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಅತೀ ದೊಡ್ಡ ಡಿಸ್‌ಪ್ಲೇ ಹೊಂದಿರುವ ಐಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಡ್ಯುಯಲ್ ಸಿಮ್ ಹಾಕಬಹುದಾದ ಐಫೋನ್ ಇದಾಗಿದೆ, ಇದರಲ್ಲಿ ಡ್ಯುಯಲ್ ಸಿಮ್ ನೊಂದಿಗೆ eSIM ಸಪೋರ್ಟ್ ಸಹ ಇದೆ. ಐಫೋನ್ XSನಲ್ಲಿ ಆಪಲ್ A12 ಬಯೋನಿಕ್ ಪ್ರೊಸೆಸರ್ ಅನ್ನು ಕಾಣಬಹುದಾಗಿದೆ.

ಐಫೋನ್ XS ಮ್ಯಾಕ್ಸ್ ಕ್ಯಾಮೆರಾ
ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಐಫೋನ್ XS ಮ್ಯಾಕ್ಸ್ ನಲ್ಲಿ ಅಳಡಿಸಲಾಗಿದ್ದು, 12MP + 12 MP ರಿಯರ್ ಕ್ಯಾಮೆರಾವನ್ನು ಅಳಡಿಸಲಾಗಿದೆ. ಒಂದು ವೈಡ್ ಆಗಲ್ ಲೈನ್ಸ್ ಆಗಿದ್ದು, ಮತ್ತೊಂದು ಟೆಲಿಫೋನ್ ಲೆನ್ಸ್ ಆಗಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಕ್ಲಿಕಿಸುವ ಸಲುವಾಗಿ 7 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಸ್ಮಾರ್ಟ್ HDR ಫೀಚರ್ ಅನ್ನು ಇದರಲ್ಲಿ ಕಾಣಬಹುದಾಗಿದ್ದು, ಹಿಂದಿಗಿಂತಲೂ ಸುಧಾರಿತ ಬ್ಯಾಟರಿ ಅಳವಡಿಸಲಾಗಿದೆ.

ಐಫೋನ್ XR ವಿಶೇಷತೆಗಳು:
ಈ ಬಾರಿ ಲಾಂಚ್ ಆಗಿರುವ ಬಜೆಟ್ ಬೆಲೆಯ ಆಪಲ್ ಫೋನ್ ಇದಾಗಿದೆ. ಆಪಲ್ A12 Bionic ಪ್ರೊಸೆಸರ್ ಅನ್ನು ಐಫೋನ್ XR ನಲ್ಲಿ ಕಾಣಬಹುದಾಗಿದ್ದು, 6.1 ಇಂಚುಗಳ LCD ಡಿಸ್‌ಪ್ಲೇಯನ್ನು ಇದರಲ್ಲಿ ನೀಡಲಾಗಿದ್ದು, ಹಿಂಭಾಗದಲ್ಲಿ 12MP ಸಿಂಗಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಕ್ಲಿಕಿಸುವ ಸಲುವಾಗಿ 7 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಒಟ್ಟು ಐದು ಬಣ್ಣದಲ್ಲಿ ಈ ಐಫೋನ್ ಮಾರಾಟವಾಗಲಿದೆ.

ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ಬೆಲೆ:
ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ಮಾರುಕಟ್ಟೆಯಲ್ಲಿ 64GB, 256GB ಮತ್ತು 512GB ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದು, ಸೆಪ್ಟೆಂಬರ್ 14 ರಿಂದ ಬುಕಿಂಗ್ ಆರಂಭವಾಗಲಿದ್ದು, ಸೆಪ್ಟೆಂಬರ್ 21 ರಿಂದ ಮಾರಾಟ ಆರಂಭವಾಗಲಿದೆ. ಸೆಪ್ಟೆಂಬರ್ 28ಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ. ಜಾಗತಿಕವಾಗಿ ಐಫೋನ್ XR ರೂ.72000ಕ್ಕೆ ಹಾಗೂ ಐಫೋನ್ XR ಮ್ಯಾಕ್ಸ್ ರೂ.79000ಕ್ಕೆ ದೊರೆಯಲಿದೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಬೆಲೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.

ಐಫೋನ್ XR ಬೆಲೆ:
ಐಫೋನ್ XR ಮಾರುಕಟ್ಟೆಯಲ್ಲಿ 64GB, 256GB ಮತ್ತು 512GB ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದು, ಸೆಪ್ಟೆಂಬರ್ 14 ರಿಂದ ಬುಕಿಂಗ್ ಆರಂಭವಾಗಲಿದ್ದು, ಭಾರತದಲ್ಲಿ ಆಕ್ಟೋಬರ್ 26 ರಿಂದ ಮಾರಾಟ ಆರಂಭವಾಗಲಿದೆ. ಜಾಗತಿಕವಾಗಿ ಈ ಫೋನ್ ರೂ. 54000ಕ್ಕೆ ಮಾರಾಟವಾಗಲಿದೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ XR 64GB ರೂ.76,900ಕ್ಕೆ ಮಾರಾಟವಾಗಲಿದೆ.


Click it and Unblock the Notifications








