ಹೊಸ 11 ಪ್ರೊ ಮ್ಯಾಕ್ಸ್‌ಗಿಂತಲೂ ಐಫೋನ್ ಎಕ್ಸ್‌ಎಸ್ ಮ್ಯಾಕ್ಸ್ ದುಬಾರಿ..!
ಇತ್ತೀಚಿಗೆ ಭಾರತದಲ್ಲಿ ಬಿಡುಗಡೆಯಾದ ಐಫೋನ್ 11 ಪ್ರೊ ಮ್ಯಾಕ್ಸ್ ಅತ್ಯಂತ ದುಬಾರಿ ಐಫೋನ್ ಎಂದು ನೀವು ಭಾವಿಸಿದ್ದರೆ, ಖಂಡಿತ ನಿಮ್ಮ ಊಹೆ ತಪ್ಪು. ಹೌದು, ಇತ್ತೀಚಿನ ಟಾಪ್ ಎಂಡ್ ಐಫೋನ್ 11 ಪ್ರೊ ಮ್ಯಾಕ್ಸ್‌ಗಿಂತ ಹಳೆಯ ಐಫೋನ್ ಎಕ್ಸ್‌ಎಸ್ ಮ್ಯಾಕ್ಸ್ ಹೆಚ್ಚಿನ ಬೆಲೆ ಹೊಂದಿತ್ತು ಎಂಬುದು ಗಮನಿಸಬೇಕಾಗಿದೆ.
ಐಫೋನ್ ಎಕ್ಸ್‌ಎಸ್ ಮ್ಯಾಕ್ಸ್ 512 GB ಆಂತರಿಕ ಮೆಮೊರಿಯೊಂದಿಗೆ 1,44,900 ರೂ. ಗೆ ದೊರೆಯುತ್ತಿತ್ತು. ಅಷ್ಟೇ ಆಂತರಿಕ ಮೆಮೊರಿ ಸಾಮರ್ಥ್ಯ ಹೊಂದಿರುವ ಹೊಸ ಐಫೋನ್ 11 ಪ್ರೊ ಮ್ಯಾಕ್ಸ್ ಫ್ಲಿಪ್‌ಕಾರ್ಟ್‌ನಲ್ಲಿ 1,38,900 ರೂ. ದೊರೆಯುತ್ತಿದೆ. ಆಪಲ್‌ನ ಈ ನಿರ್ಧಾರದಿಂದ ಗ್ರಾಹಕರು ಅಚ್ಚರಿಗೆ ಒಳಗಾಗಿದ್ದು, ಇದೇ ಮೊದಲ ಬಾರಿಗೆ ಹಳೇ ಮಾದರಿಗಿಂತ ಹೊಸ ಮಾದರಿಯ ಐಫೋನ್ ಕಡಿಮೆ ಬೆಲೆ ಹೊಂದಿದೆ.

ಡಿಸ್ಕೌಂಟ್ ಹೊರತಾಗಿಯೂ ಹೆಚ್ಚಿನ ಬೆಲೆ
ಸದ್ಯ ನಡೆಯುತ್ತಿರುವ ಇ-ಕಾಮರ್ಸ್ ಮಾರಾಟದ ಅವಧಿಯಲ್ಲಿನ ರಿಯಾಯಿತಿ ಮತ್ತು ಕ್ಯಾಶ್‌ಬ್ಯಾಕ್‌ಗಳ ಹೊರತಾಗಿಯೂ 512 GB ಆವೃತ್ತಿಯ ಐಫೋನ್ ಎಕ್ಸ್‌ಎಸ್ ಮ್ಯಾಕ್ಸ್, ಐಫೋನ್ 11 ಪ್ರೊ ಮ್ಯಾಕ್ಸ್‌ಗಿಂತ (512 GB ಆವೃತ್ತಿ) ಹೆಚ್ಚಿನ ಬೆಲೆಯನ್ನು ಹೊಂದುವರುದರೊಂದಿಗೆ ಮಾರಾಟವಾಗುತ್ತಿದೆ.

3 ಹೊಸ ಐಫೋನ್‌ಗಳ ಬಿಡುಗಡೆ
ಆಪಲ್ ಕಂಪನಿ ಇತ್ತೀಚೆಗೆ ಮೂರು ಹೊಸ ಐಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ವರ್ಷ ಲಾಂಚ್ ಆದ ಐಫೋನ್ 11, ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೋ ಮ್ಯಾಕ್ಸ್‌ಗಳು ಎ13 ಬಯೋನಿಕ್ ಚಿಪ್‌ಸೆಟ್ ಬೆಂಬಲದೊಂದಿಗೆ ಮಾರುಕಟ್ಟೆಗ ಕಾಲಿಟ್ಟಿವೆ.

ಡಿಸ್‌ಪ್ಲೇ ಗಾತ್ರದಲ್ಲಿ ವ್ಯತ್ಯಾಸ
ಈ ಮೂರು ಐಫೋನ್‌ಗಳ ಡಿಸ್‌ಪ್ಲೇ ಗಾತ್ರದಲ್ಲಿ ವ್ಯತ್ಯಾಸವನ್ನು ಹೊಂದಿವೆ. ಐಫೋನ್ 11 6.1 ಇಂಚಿನ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇ ಹೊಂದಿದ್ದರೆ, ಐಫೋನ್ 11 ಪ್ರೊ 5.8 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇ ಹೊಂದಿದೆ. ಇದರೊಂದಿಗೆ ಅತಿದೊಡ್ಡ ಐಫೋನ್ ಆಗಿರುವ ಐಫೋನ್ 11 ಪ್ರೊ ಮ್ಯಾಕ್ಸ್ 6.5 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇ ಹೊಂದಿದೆ.

ಬೆಲೆ ಎಷ್ಟು..?
64GBಯ ಆಪಲ್ ಐಫೋನ್ 11 ಬೆಲೆ 64,900 ರೂ.ಗಳಿಂದ ಪ್ರಾರಂಭವಾಗುತ್ತದೆ. ಇನ್ನು, 64GBಯ ಐಫೋನ್ 11 ಪ್ರೊ ಆವೃತ್ತಿಯ ಬೆಲೆ 99,900 ರೂ. ಆಗಿದ್ದು, 64GBಯ ಐಫೋನ್ 11 ಪ್ರೊ ಮ್ಯಾಕ್ಸ್ ಬೆಲೆ 1,09,900 ರೂ.ಗೆ ದೊರೆಯುತ್ತದೆ. ಐಫೋನ್ 11 ಪ್ರೊ ಮತ್ತು 11 ಪ್ರೊ ಮ್ಯಾಕ್ಸ್ 256GB ಜಿಬಿ ಮತ್ತು 512GB ಮೆಮೊರಿ ಆಯ್ಕೆಯಲ್ಲಿಯೂ ದೊರೆತರೆ, ಐಫೋನ್ 11 128GB ಮತ್ತು 256GB ಮೆಮೊರಿ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿವೆ.


Click it and Unblock the Notifications








