Home
ಮೊಬೈಲ್

ಭಾರತದಲ್ಲಿ ರಾಯಲ್ ಎನ್‌ಫಿಲ್ಡ್ ಬೈಕಿಗಿಂತ ದುಬಾರಿ ಐಫೋನ್ Xs ಮ್ಯಾಕ್ಸ್..!

ಆಪಲ್ ಮಾರುಕಟ್ಟೆಗೆ ಲಾಂಚ್ ಮಾಡಿರುವ ನೂತನ ಐಫೋನ್‌ಗಳಾದ ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ಈಗಾಗಲೇ ಜಾಗತಿಕವಾಗಿ ಹಲವು ಮಾರುಕಟ್ಟೆಗಳಲ್ಲಿ ದೊರೆಯುತ್ತಿದ್ದು, ಇಂದಿನಿಂದ ಭಾರತೀಯ ಮಾರುಕಟ್ಟೆಯಲ್ಲಿಯೂ ಮಾರಾಟವಾಗಲಿದೆ. ಲಕ್ಷಕ್ಕೂ ಅಧಿಕ ಬೆಲೆಗೆ ಮಾರಾಟವಾಗಲಿರುವ ಫೋನ್‌ ಗಳನ್ನು ಖರೀದಿಸಲು ಈಗಾಗಲೇ ಭಾರತೀಯರು ತುದಿಗಾಲಿನಲ್ಲಿ ನಿಂತಿದ್ದು, ಇದಕ್ಕಾಗಿ ಲಕ್ಷ ಲಕ್ಷ ಸಂಖ್ಯೆಯ ಐಫೋನ್‌ಗಳು ಭಾರತಕ್ಕೆ ಆಮದಾಗಿದೆ.

ವರ್ಷದಿಂದ ವರ್ಷಕ್ಕೆ ಆಪಲ್ ವರ್ಚಸ್ಸು ಅಧಿಕವಾಗುತ್ತಿದೆ. ಈ ಹಿನ್ನಲೆಯಲ್ಲಿ ಆಪಲ್ ಬೇಡಿಕೆ ಭಾರತದಲ್ಲಿ ಹೆಚ್ಚಾಗುತ್ತಿದೆ. ಇದಕ್ಕಾಗಿದೆಯೇ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರಕ್ಕೆ ಮುಂದಾಗಿರುವ ಆಪಲ್, ಈ ಬಾರಿ ಬೇಗನೇ ಭಾರತೀಯ ಮಾರುಕಟ್ಟೆಯಲ್ಲಿಯೂ ತನ್ನ ಐಫೋನ್‌ಗಳನ್ನು ಮಾರಾಟಕ್ಕೆ ಇಟ್ಟಿದೆ. ಈಗಾಗಲೇ ಹಲವು ಮಂದಿ ಫ್ರೀ ಬುಕ್ಕಿಂಗ್ ಸಹ ಮಾಡಿದ್ದಾರೆ ಎನ್ನಲಾಗಿದೆ.

ರಾಯಲ್ ಎನ್‌ಫಿಲ್ಡ್ ಬೈಕಿಗಿಂತ ದುಬಾರಿ:

ರಾಯಲ್ ಎನ್‌ಫಿಲ್ಡ್ ಬೈಕಿಗಿಂತ ದುಬಾರಿ:

ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ಐಫೋನ್ Xs ಮ್ಯಾಕ್ಸ್ 256GB ಬೆಲೆ ರಾಯಲ್ ಎನ್‌ಫಿಲ್ಡ್ ಬೈಕಿಗಿಂತ ದುಬಾರಿ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫಿಲ್ಡ್ 350 1.40 ಲಕ್ಷಕ್ಕೆ ಲಭ್ಯವಿದೆ ಎನ್ನಲಾಗಿದೆ. ಆದರೆ ಐಫೋನ್ Xs ಮ್ಯಾಕ್ಸ್ 512 GB ಆವೃತ್ತಿಯೂ ರೂ.1,44,900ಕ್ಕೆ ಮಾರಾಟವಾಗುತ್ತಿದೆ.

ಬೆಲೆ:

ಬೆಲೆ:

ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ಮಾರುಕಟ್ಟೆಯಲ್ಲಿ 64GB, 256GB ಮತ್ತು 512 GB ಆವೃತ್ತಿಯಲ್ಲಿ ಕಾಣಿಸಿಕೊಂಡಿದೆ. ಐಫೋನ್ Xs ರೂ.99,900 ರಿಂದ ರೂ.1,34,900 ವರೆಗೆ ದೊರೆಯಲಿದೆ. ಇದೇ ಮಾದರಿಯಲ್ಲಿ ಐಫೋನ್ Xs ಮ್ಯಾಕ್ಸ್ ರೂ.1,09,900 ದಿಂದ ರೂ.1,44,900 ವರೆಗೂ ಲಭ್ಯವಿರಲಿದೆ.

ಐಫೋನ್ XS ವಿಶೇಷತೆ:

ಐಫೋನ್ XS ವಿಶೇಷತೆ:

ಐಫೋನ್ XS ನಲ್ಲಿ 5.8 ಇಂಚಿನ ಸೂಪರ್ ರೆಟಿನಾ OLED ನೋಚ್ ಡಿಸ್‌ಪ್ಲೇಯನ್ನು (2436 x 1125 p) ಅಳವಡಿಸಲಾಗಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಡ್ಯುಯಲ್ ಸಿಮ್ ಹಾಕಬಹುದಾದ ಐಫೋನ್ ಇದಾಗಿದೆ, ಇದರಲ್ಲಿ ಡ್ಯುಯಲ್ ಸಿಮ್ ನೊಂದಿಗೆ eSIM ಸಪೋರ್ಟ್ ಸಹ ಇದೆ. ಐಫೋನ್ XSನಲ್ಲಿ ಆಪಲ್ A12 ಬಯೋನಿಕ್ ಪ್ರೊಸೆಸರ್ ಅನ್ನು ಕಾಣಬಹುದಾಗಿದೆ.

ಐಫೋನ್ XS ಕ್ಯಾಮೆರಾ:

ಐಫೋನ್ XS ಕ್ಯಾಮೆರಾ:

ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಐಫೋನ್ XSನಲ್ಲಿ ಅಳಡಿಸಲಾಗಿದ್ದು, 12MP + 12 MP ರಿಯರ್ ಕ್ಯಾಮೆರಾವನ್ನು ಅಳಡಿಸಲಾಗಿದೆ. ಒಂದು ವೈಡ್ ಆಗಲ್ ಲೈನ್ಸ್ ಆಗಿದ್ದು, ಮತ್ತೊಂದು ಟೆಲಿಫೋನ್‌ ಲೆನ್ಸ್ ಆಗಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಕ್ಲಿಕಿಸುವ ಸಲುವಾಗಿ 7 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಸ್ಮಾರ್ಟ್ HDR ಫೀಚರ್ ಅನ್ನು ಇದರಲ್ಲಿ ಕಾಣಬಹುದಾಗಿದ್ದು, ಹಿಂದಿಗಿಂತಲೂ ಸುಧಾರಿತ ಬ್ಯಾಟರಿ ಅಳವಡಿಸಲಾಗಿದೆ.

ಐಫೋನ್ XS ಮ್ಯಾಕ್ಸ್ ವಿಶೇಷತೆ:

ಐಫೋನ್ XS ಮ್ಯಾಕ್ಸ್ ವಿಶೇಷತೆ:

ಐಫೋನ್ XS ಮ್ಯಾಕ್ಸ್ ನಲ್ಲಿ 6.5 ಇಂಚಿನ ಸೂಪರ್ ರೆಟಿನಾ OLED ನೋಚ್ ಡಿಸ್‌ಪ್ಲೇಯನ್ನು (2688 x 1442 p) ಅಳವಡಿಸಲಾಗಿದೆ. ಅಲ್ಲದೆ ಇದು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಅತೀ ದೊಡ್ಡ ಡಿಸ್‌ಪ್ಲೇ ಹೊಂದಿರುವ ಐಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಡ್ಯುಯಲ್ ಸಿಮ್ ಹಾಕಬಹುದಾದ ಐಫೋನ್ ಇದಾಗಿದೆ, ಇದರಲ್ಲಿ ಡ್ಯುಯಲ್ ಸಿಮ್ ನೊಂದಿಗೆ eSIM ಸಪೋರ್ಟ್ ಸಹ ಇದೆ. ಐಫೋನ್ XSನಲ್ಲಿ ಆಪಲ್ A12 ಬಯೋನಿಕ್ ಪ್ರೊಸೆಸರ್ ಅನ್ನು ಕಾಣಬಹುದಾಗಿದೆ.

ಐಫೋನ್ XS ಮ್ಯಾಕ್ಸ್ ಕ್ಯಾಮೆರಾ:

ಐಫೋನ್ XS ಮ್ಯಾಕ್ಸ್ ಕ್ಯಾಮೆರಾ:

ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಐಫೋನ್ XS ಮ್ಯಾಕ್ಸ್ ನಲ್ಲಿ ಅಳಡಿಸಲಾಗಿದ್ದು, 12MP + 12 MP ರಿಯರ್ ಕ್ಯಾಮೆರಾವನ್ನು ಅಳಡಿಸಲಾಗಿದೆ. ಒಂದು ವೈಡ್ ಆಗಲ್ ಲೈನ್ಸ್ ಆಗಿದ್ದು, ಮತ್ತೊಂದು ಟೆಲಿಫೋನ್‌ ಲೆನ್ಸ್ ಆಗಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಕ್ಲಿಕಿಸುವ ಸಲುವಾಗಿ 7 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಸ್ಮಾರ್ಟ್ HDR ಫೀಚರ್ ಅನ್ನು ಇದರಲ್ಲಿ ಕಾಣಬಹುದಾಗಿದ್ದು, ಹಿಂದಿಗಿಂತಲೂ ಸುಧಾರಿತ ಬ್ಯಾಟರಿ ಅಳವಡಿಸಲಾಗಿದೆ.

Best Mobiles in India

English summary
iPhone XS, XS Max go on sale today, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+