Home
ಮೊಬೈಲ್

ಸ್ಯಾಮ್‌ಸಂಗ್ Vs ಐಫೋನ್ Vs ಒನ್‌ಪ್ಲಸ್: ಯಾವುದರ ಬ್ಯಾಟರಿ ಬೆಸ್ಟ್‌..! ವಿಡಿಯೋ ನೋಡಿ..!

ಸದ್ಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ಐಫೋನ್‌ಗಳಲ್ಲಿ ಕಡಿಮೆ ಗಾತ್ರದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಕಾರಣಕ್ಕೆಯಾಗಿ ಲಾಂಚ್ ಸಂದರ್ಭದಲ್ಲಿ ಆಪಲ್ ಆ ಕುರಿತು ಯಾವುದೇ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ಯೂಟ್ಯೂಬರ್ ಒಬ್ಬರು ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ಟಾಪ್ ಐಫೋನ್ ಗಳು ಮತ್ತು ಇದರೊಂದಿಗೆ ಟಾಪ್ ಆಂಡ್ರಾಯ್ಡ್ ಫೋನ್‌ಗಳನ್ನು ಒಮ್ಮೆ ಟೆಸ್ಟ್ ಮಾಡಿದ್ದಾರೆ.

ಸ್ಯಾಮ್‌ಸಂಗ್ Vs ಐಫೋನ್ Vs ಒನ್‌ಪ್ಲಸ್: ಯಾವುದರ ಬ್ಯಾಟರಿ ಬೆಸ್ಟ್‌..!

ಐಫೋನ್ X, ಐಫೋನ್ Xs. ಐಫೋನ್ Xs ಮ್ಯಾಕ್ಸ್ ಸೇರಿದಂತೆ ಹೊಸದಾಗಿ ಕಾಣಿಸಿಕೊಂಡಿರು ಆಂಡ್ರಾಯ್ಡ್ ಫೋನ್‌ಗಳಲ್ಲಿ ಸ್ಯಾಮ್‌ಸಂಗ್ ನೋಟ್ 9 ಮತ್ತು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ಗಳನ್ನು ಒಮ್ಮೆಗೆ ಚಾರ್ಜ್ ಮಾಡಿ ಬ್ಯಾಟರಿ ಟೆಸ್ಟ್ ಮಾಡಿದ್ದಾರೆ. ಇವುಗಳಲ್ಲಿ ಅತ್ಯಂತ ಕಡಿಮೆ ಗಾತ್ರದ ಬ್ಯಾಟರಿಯನ್ನು ಹೊಂದಿರುವ ಐಫೋನ್‌ಗಳು ಸ್ಪರ್ಧೆಯನ್ನು ಗೆದ್ದಿವೆ. ಈ ಹಿನ್ನಲೆಯಲ್ಲಿ ಅವುಗಳ ಕುರಿತು ಮಾಹಿತಿಯೂ ಮುಂದಿದೆ.

ಟಾಪ್ 5: ಐಫೋನ್ X

ಟಾಪ್ 5: ಐಫೋನ್ X

ಕಳೆದ ವರ್ಷ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಐಫೋನ್ X, 2716mAh ಬ್ಯಾಟರಿಯನ್ನು ಹೊಂದಿದ್ದು, 2436x1125p ಗುಣಮಟ್ಟದ 5.8 ಇಂಚಿನ ಡಿಸ್‌ಪ್ಲೇಯೊಂದಿಗೆ A11 ಬಯೋನಿಕ್ ಚಿಪ್ ಮತ್ತು 3 GB RAM ಅನ್ನ ಹೊಂದಿದ್ದು, ಬ್ಯಾಟರಿ ಬಾಳಿಗೆಯ ವಿಚಾರದಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಈ ಎಲ್ಲಾ ಫೋನ್‌ಗಳಿಗಿಂತಲೂ ಮೊದಲೇ ಆಫ್ ಆಗಿದೆ. ಒಟ್ಟು 4 ಗಂಟೆ 11 ನಿಮಿಷಗಳ ಕಾಲ ಬ್ಯಾಟರಿ ಬಾಳಿಕೆ ಬಂದಿದೆ.

ಟಾಪ್ 4: ಒನ್‌ಪ್ಲಸ್ 6

ಟಾಪ್ 4: ಒನ್‌ಪ್ಲಸ್ 6

ಪ್ರೀಮಿಯಮ್ ಮಾರುಕಟ್ಟೆಯ ಟಾಪ್ ಫೋನ್ ಆಗಿರುವ ಒನ್‌ಪ್ಲಸ್ 6, ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆ. ಆರಂಭದಲ್ಲಿ ಹೆಚ್ಚಿನ ಬ್ಯಾಟರಿ ಪರ್ಫರ್ಮೆನ್ಸ್ ನೀಡಿದ ಫೋನ್‌ ಕೊನೆ ಕೊನೆಯಲ್ಲಿ ಬೇಗನೇ ಖಾಲಿಯಾಗಿದೆ. ಇದರಲ್ಲಿ 3300mAh ಬ್ಯಾಟರಿಯನ್ನು ನೀಡಲಾಗಿದೆ. 2160x1080p ಗುಣಮಟ್ಟದ 6.3 ಇಂಚಿನ ಡಿಸ್‌ಪ್ಲೇಯೊಂದಿಗೆ SD845 ಚಿಪ್ ಮತ್ತು 8 GB RAM ಅನ್ನ ಹೊಂದಿದ್ದು, ಬ್ಯಾಟರಿ ಬಾಳಿಕೆಯ ವಿಚಾರದಲ್ಲಿ ನಾಲ್ಕನೇಯ ಸ್ಥಾನವನ್ನು ಪಡೆದುಕೊಂಡಿದೆ. ಒಟ್ಟು4 ಗಂಟೆ 44 ನಿಮಿಷಗಳ ಕಾಲ ಬ್ಯಾಟರಿ ಬಾಳಿಕೆ ನೀಡಿದೆ.

ಟಾಪ್ 3: ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9

ಟಾಪ್ 3: ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9

ಹೊಸದಾಗಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಸ್ಪರ್ಧೇಯಲ್ಲಿಯೇ ಅತೀ ದೊಡ್ಡದಾದ ಬ್ಯಾಟರಿಯನ್ನು ಹೊಂದಿದೆ. 4000mAh ಬ್ಯಾಟರಿಯೊಂದಿಗೆ ಕಾಣಿಸಿಕೊಂಡಿದ್ದರೂ ಸಹ ಆಪಲ್ ಫೋನ್‌ಗಳಿಗೆ ಸೆಡ್ಡು ಹೊಡೆಯುವಲ್ಲಿ ವಿಫಲವಾಗಿದೆ.

ಈ ಫೋನ್ 2960x1440p ಗುಣಮಟ್ಟದ 6.4 ಇಂಚಿನ ಡಿಸ್‌ಪ್ಲೇಯೊಂದಿಗೆ EX9810 ಚಿಪ್ ಮತ್ತು 6 GB RAM ಅನ್ನ ಹೊಂದಿದ್ದು, ಬ್ಯಾಟರಿ ಬಾಳಿಕಯ ವಿಚಾರದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಆರಂಭದಲ್ಲಿ ಈ ಎಲ್ಲಾ ಫೋನ್‌ಗಳಿಗಿಂತಲೂ ಮೊದಲೇ ಬ್ಯಾಟರಿ ಡೌನ್‌ ಆದರೂ ಕೊನೆಯಲ್ಲಿ ಸ್ಪಲ್ಪ ಹೆಚ್ಚಿನ ಪರ್ಫರ್ಮೆನ್ಸ್ ನೀಡಿದೆ. ಆದರೆ ದೊಡ್ಡ ಬ್ಯಾಟರಿ ಇದರಲ್ಲಿದ್ದು ಹೆಚ್ಚು ಬಳಕೆಯಾಗಬೇಕಿತ್ತು. ಒಟ್ಟು4 ಗಂಟೆ 47 ನಿಮಿಷಗಳ ಕಾಲ ಬ್ಯಾಟರಿ ಬಾಳಿಕೆ ಬಂದಿದೆ. ಒನ್‌ಪ್ಲಸ್‌ ಗಿಂತ ಕೆಲವೇ ನಿಮಿಷಗಳು ಜಾಸ್ತಿ ಅಷ್ಟೆ.

ಟಾಪ್ 2: ಐಫೋನ್ Xs

ಟಾಪ್ 2: ಐಫೋನ್ Xs

ಮಾರುಕಟ್ಟೆಯಲ್ಲಿ ಮೊನ್ನೆ ತಾನೇ ಲಾಂಚ್ ಆದ ಐಫೋನ್ Xs, ಈ ಹಿಂದಿನ ಫೋನ್‌ಗಿಂತಲೂ ಕಡಿಮೆ ಸಾಮರ್ಥ್ಯದ ಅಂದರೆ 2658mAh ಬ್ಯಾಟರಿಯನ್ನು ಹೊಂದಿದ್ದರೂ ಸಹ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. 2436x1125p ಗುಣಮಟ್ಟದ 5.8 ಇಂಚಿನ ಡಿಸ್‌ಪ್ಲೇಯೊಂದಿಗೆ A11 ಬಯೋನಿಕ್ ಚಿಪ್ ಮತ್ತು 4 GB RAM ಅನ್ನ ಹೊಂದಿದ್ದು, ಬ್ಯಾಟರಿ ಬಾಳಿಕೆಯ ವಿಚಾರದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಮೂಲಕ ಲಾಂಚ್ ಸಂದರ್ಭದಲ್ಲಿ ಆಪಲ್ ಹೇಳಿದ ಮಾತಿಗೆ ತಕ್ಕದಾಗಿ ಕಾರ್ಯನಿರ್ವಹಿಸಿದೆ. ಅಲ್ಲದೇ ಬ್ಯಾಟರಿ ಸಾಮರ್ಥ್ಯ ಕಡಿಮೆ ಇದ್ದರೂ ಸಹ ಬೆಸ್ಟ್ ಪರ್ಫರ್ಮೆನ್ಸ್ ನೀಡಿದೆ. ಸ್ಪರ್ದೇಯಲ್ಲಿ ಎಲ್ಲಾ ಫೋನ್‌ಗಳಿಗಿಂತ ಕಡಿಮೆ ಸಾಮರ್ಥ್ಯದ ಬ್ಯಾಟರಿ ಇದರದ್ದೆ ಆಗಿತ್ತು. ಒಟ್ಟು 4 ಗಂಟೆ 56 ನಿಮಿಷಗಳ ಕಾಲ ಬ್ಯಾಟರಿ ಬಾಳಿಕೆ ನೀಡಿದೆ.

ಟಾಪ್ 1: ಐಫೋನ್ Xs ಮ್ಯಾಕ್ಸ್

ಟಾಪ್ 1: ಐಫೋನ್ Xs ಮ್ಯಾಕ್ಸ್

ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಅತೀ ದೊಡ್ಡ ಐಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಐಫೋನ್ Xs ಮ್ಯಾಕ್ಸ್, ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. 3174mAh ಬ್ಯಾಟರಿಯೊಂದಿಗೆ ಸ್ಪರ್ಧೇಯಲ್ಲಿ ಕಾಣಿಸಿಕೊಂಡ ಅತೀ ಹೆಚ್ಚಿನ ಗುಣಮಟ್ಟದ 2688x1242pನ 6.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದರೂ ಬ್ಯಾಟರಿಯ ಬಾಳಿಕೆಯ ವಿಚಾರದಲ್ಲಿ ಈ ಫೋನ್ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡು ಆಪಲ್ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

A11 ಬಯೋನಿಕ್ ಚಿಪ್ ಮತ್ತು 4 GB RAM ನೊಂದಿಗೆ ಕಾಣಿಸಿಕೊಂಡು ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನಿಸಿಕೊಂಡಿದೆ. ಬ್ಯಾಟರಿ ಬಾಳಿಗೆಯ ವಿಚಾರದಲ್ಲಿ ಮೊದಲನೆ ಸ್ಥಾನವನ್ನು ಪಡೆದುಕೊಂಡಿದೆ. ಈ ಎಲ್ಲಾ ಫೋನ್‌ಗಳಿಗಿಂತಲೂ ಹೆಚ್ಚು ಬಾಳಿಕೆ ನೀಡಿದೆ. ಒಟ್ಟು 5 ಗಂಟೆ 08 ನಿಮಿಷಗಳ ಗಳ ಕಾಲ ಬ್ಯಾಟರಿ ಬಾಳಿಕೆ ನೀಡಿದೆ.

ವಿಡಿಯೋ ನೋಡಿ:

ಈ ಎಲ್ಲಾ ಫೋನ್‌ಗಳನ್ನು ಹೇಗೆ ಟೆಸ್ಟ್ ಮಾಡಲಾಗಿದೆ ಎಂಬುದನ್ನು ನೀವು ಇಲ್ಲಿ ನೋಡಿ ತಿಳಿಯಿರಿ.

Best Mobiles in India

English summary
iPhone XS / XS Max vs Galaxy Note 9 vs iPhone X Battery Life DRAIN TEST, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+