Home
ಮೊಬೈಲ್

ಈ iQOO ಗೇಮಿಂಗ್ ಫೋನ್ ಮೇಲೆ ಈಗ ಭರ್ಜರಿ ₹12,000 ರಿಯಾಯಿತಿ!

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳ ಆಗಮನ ನಿರಂತರವಾಗಿದೆ. ಈ ನಡುವೆ, ಶಕ್ತಿಯುತ ಸ್ನಾಪ್‌ಡ್ರಾಗನ್ 8 ಸರಣಿಯ ಪ್ರೊಸೆಸಸರ್ ಜೊತೆಗೆ ಗೇಮಿಂಗ್ ಮತ್ತು ಬಹುಕಾರ್ಯಕಗಳಿಗಾಗಿ ಹೆಸರುವಾಸಿಯಾದ ಹಿಂದಿನ ತಲೆಮಾರಿನ ಪ್ರಮುಖ ಸ್ಮಾರ್ಟ್‌ಫೋನ್ iQOO 12 5G ಇದೀಗ ಅಮೆಜಾನ್‌ನಲ್ಲಿ ಆಕರ್ಷಕ ರಿಯಾಯಿತಿಯೊಂದಿಗೆ ಲಭ್ಯವಿದೆ. ಬೆಲೆ ಕಡಿತ ಮತ್ತು ಬ್ಯಾಂಕ್ ಕೊಡುಗೆಗಳ ಮೂಲಕ ಗ್ರಾಹಕರು ಈಗ iQOO 12 5G ಫೋನ್‌ನ ಮೇಲೆ ಗರಿಷ್ಠ ₹ 12,000 ವರೆಗೆ ಉಳಿತಾಯ ಮಾಡಬಹುದು. ಈ ಮೊದಲು 52,999 ರೂ. ಮೂಲ ಬೆಲೆಯಲ್ಲಿ ಬಿಡುಗಡೆಯಾಗಿದ್ದ ಈ ಸ್ಮಾರ್ಟ್‌ಫೋನನ್ನು ಗ್ರಾಹಕರುವ 41,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಹಾಗಾದರೆ, ಶಕ್ತಿಯುತ ಸ್ನಾಪ್‌ಡ್ರಾಗನ್ 8 ಸರಣಿಯ ಪ್ರೊಸೆಸರ್, ಟ್ರಿಪಲ್ ಕ್ಯಾಮೆರಾ ಸೆಟಪ್, AMOLED ಡಿಸ್ಪ್ಲೇ ಮತ್ತು ದೊಡ್ಡ ಬ್ಯಾಟರಿಯಂತಹ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ iQOO 12 ಸ್ಮಾರ್ಟ್‌ಫೋನ್ ಮೇಲಿರುವ ಕೊಡುಗೆಗಳು ಯಾವುವು ಮತ್ತು ಫೀಚರ್ಸ್ ಹೇಗಿವೆ ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.

ಪ್ರಸ್ತುತ ಅಮೆಜಾನ್‌ನಲ್ಲಿ iQOO 12 5G ಸ್ಮಾರ್ಟ್‌ಫೋನ್ ₹ 41,999 ಬೆಲೆಯಲ್ಲಿ ಮಾರಾಟವಾಗುತ್ತಿದೆ. ಇದರ ಮೂಲ ಬೆಲೆ ₹ 52,999 ಆಗಿದ್ದು, ನೇರವಾಗಿ ₹ 11,000 ರಷ್ಟು ರಿಯಾಯಿತಿ ದೊರೆಯುತ್ತಿದೆ. ಇದರ ಜೊತೆಗೆ, ಫೆಡರಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಹೆಚ್ಚುವರಿಯಾಗಿ ₹ 1,000 ಬ್ಯಾಂಕ್ ಕೊಡುಗೆಯನ್ನು ಪಡೆಯಬಹುದು. ಈ ಮೂಲಕ ಫೋನ್‌ನ ಬೆಲೆ ₹ 41,000 ಕ್ಕಿಂತ ಕಡಿಮೆಯಾಗುತ್ತದೆ. ಖರೀದಿದಾರರು ಮಾಸಿಕ ₹ 2,036 ರಿಂದ ಪ್ರಾರಂಭವಾಗುವ ಸುಲಭ ಕಂತುಗಳ (EMI) ಆಯ್ಕೆಯನ್ನು ಸಹ ಆರಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ, ಕೆಲವು ನಿರ್ದಿಷ್ಟ ಅವಧಿಯವರೆಗೆ ಬಡ್ಡಿ ರಹಿತ ಇಎಂಐ ಆಯ್ಕೆಗಳು ಸಹ ಲಭ್ಯವಿವೆ.ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ ಗ್ರಾಹಕರಿಗೆ ವಿನಿಮಯ ಕೊಡುಗೆಯೂ ಲಭ್ಯವಿದೆ. ನಿಮ್ಮ ಹಳೆಯ ಫೋನನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ನೀವು ಗರಿಷ್ಠ ₹ 22,800 ವರೆಗೆ ರಿಯಾಯಿತಿ ಪಡೆಯಬಹುದು. ಆದರೆ, ವಿನಿಮಯದ ಮೌಲ್ಯವು ನಿಮ್ಮ ಹಳೆಯ ಫೋನಿನ ಕಾರ್ಯನಿರ್ವಹಣೆಯ ಸ್ಥಿತಿ ಮತ್ತು ಮಾದರಿಯನ್ನು ಅವಲಂಬಿಸಿರುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ.

ಈ iQOO ಗೇಮಿಂಗ್ ಫೋನ್ ಮೇಲೆ ಈಗ ಭರ್ಜರಿ ₹12,000 ರಿಯಾಯಿತಿ!

iQOO 12 5G ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು,
iQOO 12 5G ಸ್ಮಾರ್ಟ್‌ಫೋನ್ 1.5K ರೆಸಲ್ಯೂಶನ್, 144Hz ರಿಫ್ರೆಶ್ ದರ ಮತ್ತು 3,000 ನಿಟ್ಸ್ ಗರಿಷ್ಠ ಹೊಳಪನ್ನು ಹೊಂದಿರುವ 6.78-ಇಂಚಿನ LTPO AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ HDR10+ ಅನ್ನು ಸಹ ಬೆಂಬಲಿಸುತ್ತದೆ, ಇದು ವೀಡಿಯೊ ಮತ್ತು ಚಿತ್ರಗಳ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎನ್ನಬಹುದು. ಕಾರ್ಯಕ್ಷಮತೆಗಾಗಿ, ಈ iQOO 12 5G ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 Gen 3 ಪ್ರೊಸೆಸರ್, ಅಡ್ರಿನೊ 750 GPU ಮತ್ತು iQOO ನ ವಿಶೇಷ Q1 ಗೇಮಿಂಗ್ ಚಿಪ್‌ನಿಂದ ಚಾಲಿತವಾಗಿದೆ. ಇದು 16GB LPDDR5X RAM ಮತ್ತು 512GB UFS 4.0 ಸಂಗ್ರಹಣೆಯೊಂದಿಗೆ ಬರುತ್ತದೆ, ಇದು ವೇಗದ ಮತ್ತು ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸುತ್ತದೆ. ಸಾಫ್ಟ್‌ವೇರ್ ವಿಭಾಗದಲ್ಲಿ, ಈ ಸ್ಮಾರ್ಟ್‌ಫೋನ್ FunTouchOS 14 ನೊಂದಿಗೆ Android 14 ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ ಮತ್ತು ಕಂಪನಿಯು ಮೂರು ವರ್ಷಗಳ Android ನವೀಕರಣಗಳು ಮತ್ತು ಐದು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ನೀಡುವ ಭರವಸೆ ನೀಡಿದೆ.

ದೀರ್ಘಕಾಲದ ಬ್ಯಾಟರಿ ಬಾಳಿಕೆಗಾಗಿ, iQOO 12 5G ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 120W ವೈರ್ಡ್, 50W ವೈರ್‌ಲೆಸ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕ್ಯಾಮೆರಾ ವಿಭಾಗದಲ್ಲಿ, iQOO 12 5G ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ನೊಂದಿಗೆ 50MP ಮುಖ್ಯ ಸಂವೇದಕ, 50MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 3x ಆಪ್ಟಿಕಲ್ ಜೂಮ್‌ನೊಂದಿಗೆ 64MP ಟೆಲಿಫೋಟೋ ಲೆನ್ಸ್ ಸೇರಿವೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 16MP ಕ್ಯಾಮೆರಾವನ್ನು ನೀಡಲಾಗಿದೆ. ವಿಶೇಷವಾಗಿ ಗೇಮಿಂಗ್ ಅನುಭವವನ್ನು ಉತ್ತಮಗೊಳಿಸಲು, ಈ ಫೋನ್ ಸ್ಪರ್ಶ ಅಲ್ಗಾರಿದಮ್ ಅನ್ನು ಸಹ ಒಳಗೊಂಡಿದೆ, ಇದು ಬೆರಳುಗಳು ಒದ್ದೆಯಾಗಿದ್ದಾಗಲೂ ಸ್ಪರ್ಶ ಪ್ರತಿಕ್ರಿಯೆಯನ್ನು ಸುಧಾರಿಸುತ್ತದೆ. ಒಟ್ಟಾರೆಯಾಗಿ, iQOO 12 5G ಪ್ರಸ್ತುತ ಅಮೆಜಾನ್‌ನಲ್ಲಿ ಲಭ್ಯವಿರುವ ರಿಯಾಯಿತಿ ದರದಲ್ಲಿ ಅತ್ಯುತ್ತಮ ಮೌಲ್ಯವನ್ನು ನೀಡುತ್ತಿದೆ ಎನ್ನಬಹುದು.

Best Mobiles in India

English summary
The iQOO 12 5G is now available on Amazon for Rs 41,999, along with bank discounts and exchange offers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+