Home
ಮೊಬೈಲ್

ಸ್ವಲ್ಪ ಕಾಯಿರಿ! ಸೋನಿ ಕ್ಯಾಮೆರಾ.. 6150mAh ಬ್ಯಾಟರಿ.. ಡಿ.3ಕ್ಕೆ ಬರ್ತಿದೆ ಹೊಸ iQOO ಫೋನ್

ಐಕ್ಯೂ ಕಂಪನಿಯು ಭಾರತದಲ್ಲಿ ವಿಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವ ಮೂಲ ಭಾರೀ ಸದ್ದು ಮಾಡುತ್ತಿದೆ. ಈ ಪೈಕಿ ನಂಬರ್ ಸರಣಿಯ ಮೊಬೈಲ್‌ಗಳು ಭಾರತೀಯ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಇದೀಗ, ಕಂಪನಿಯು ಹೊಸ ಐಕ್ಯೂ 13 (iQOO 13) ಫೋನ್‌ ಬಿಡುಗಡೆಗೆ ಮಾಡಲು ಸಿದ್ಧವಾಗಿದೆ. ಇದು iQOO 12 ಫೋನಿನ ಉತ್ತರಾಧಿಕಾರಿಯಾಗಿದೆ. ಈಗಾಗಲೇ, ನೂತನ ಮೊಬೈಲ್‌ನ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಮುಂಬರುವ ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ ಹೊಂದಿರಲಿದೆ. ಬನ್ನಿ, ಹೊಸ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಐಕ್ಯೂ (iQOO) ಕಂಪನಿಯು ಡಿಸೆಂಬರ್ 3ರಂದು ಐಕ್ಯೂ 13 ಫೊನನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಫೋನ್ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಮೊಬೈಲ್‌ನಲ್ಲಿ 16GB RAM ಮತ್ತು 1TB ಸ್ಟೋರೇಜ್ ಲಭ್ಯವಿರಲಿದೆ. ಫೋನ್ 6.82 ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದೆ. ಜೊತೆಗೆ, 6150mAh ಬ್ಯಾಟರಿ ಮತ್ತು 120W ಫಾಸ್ಟ್ ಚಾರ್ಜಿಂಗ್ ಸೇರಿಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆಎಂಟ್ರಿ ಕೊಡಲು ಸಿದ್ಧವಾಗಿದೆ.

ಡಿ.3ಕ್ಕೆ iQOO 13 ಬಿಡುಗಡೆ; ಸೋನಿ ಕ್ಯಾಮೆರಾ.. 6150mAh ಬ್ಯಾಟರಿ ಖಚಿತ

ಐಕ್ಯೂ 13 ಫೋನಿನ ಬಿಡುಗಡೆ ವಿವರ

ಕಂಪನಿಯು ಡಿಸೆಂಬರ್ 3 ರಂದು ಭಾರತದಲ್ಲಿ ದೊಡ್ಡ ಸಮಾರಂಭವನ್ನು ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ತನ್ನ ಹೊಸ ಮತ್ತು ಪವರ್‌ಫುಲ್ ಮೊಬೈಲ್ ಐಕ್ಯೂ 13 ಅನ್ನು ಭಾರತದಲ್ಲಿ ರಿಲೀಸ್ ಮಾಡಲಿದೆ. ಪ್ರಸ್ತುತ, ಬಿಡುಗಡೆಯ ಸಮಯವನ್ನು ಬಹಿರಂಗಪಡಿಸಿಲ್ಲ. ಕಂಪನಿಯು ಈ ಫೋನಿನ ಲಾಂಚ್ ಈವೆಂಟ್‌ ಅನ್ನು ತನ್ನ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಸ್ಟ್ರೀಮ್ ಮಾಡಲಿದೆ. ನೀವು, ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ವೀಕ್ಷಿಸಬಹುದು. ಈ ಫೋನ್ ಅಮೆಜಾನ್‌ ಮೂಲಕ ಮಾರಾಟವಾಗಲಿದೆ.

ಐಕ್ಯೂ 13 ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಐಕ್ಯೂ 13 ಮೊಬೈಲ್ 6.82 ಇಂಚಿನ 2K ಪೂರ್ಣ ಎಚ್‌ಡಿ ಪ್ಲಸ್‌ ಡಿಸ್ಪ್ಲೇಯನ್ನು ಹೊಂದಿದೆ. ಇದು 3168 X 1440 ಪಿಕ್ಸೆಲ್‌ಗಳ ರೆಸಲ್ಯೂಶನ್, 144Hz ರಿಫ್ರೆಶ್ ದರ, 1800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಮತ್ತು 1440 ಪಿಕ್ಸೆಲ್‌ ಕಟ್‌ಹೋಲ್ ರೆಸಲ್ಯೂಶನ್ ಬೆಂಬಲ ಹೊಂದಿದೆ. ಈ ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಐಕ್ಯೂ 13 ಫೋನನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಿದೆ. ಈ ಪ್ರೊಸೆಸರ್ ಅನ್ನು 3nm ಫ್ಯಾಬ್ರಿಕೇಶನ್‌ಗಳಲ್ಲಿ ನಿರ್ಮಿಸಲಾಗಿದೆ. ಇದು ಆಂಡ್ರಾಯ್ಡ್‌ 15 ಆಧಾರಿತ OriginOS 5 ಓಎಸ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನ್ 24GB RAM ಮತ್ತು 1TB ಸ್ಟೋರೇಜ್ ಹೊಂದಿದೆ.

ಡಿ.3ಕ್ಕೆ iQOO 13 ಬಿಡುಗಡೆ; ಸೋನಿ ಕ್ಯಾಮೆರಾ.. 6150mAh ಬ್ಯಾಟರಿ ಖಚಿತ

ಕ್ಯಾಮೆರಾ ಸೆಟಪ್

ಐಕ್ಯೂ 13 ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ IMX921 ಕ್ಯಾಮೆರಾ ಇದೆ. ಜೊತೆಗೆ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ S5KJN1 ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಸೋನಿ IMX816 ಟೆಲಿಫೋಟೋ ಕ್ಯಾಮೆರಾ ಇರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಫೋನ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಮುಂಬರುವ ಐಕ್ಯೂ 13 ಅನ್ನು 6150mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಫೋನ್ 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.

ಇತರೆ ವೈಶಿಷ್ಟ್ಯಗಳು

ಐಕ್ಯೂ 13 ಮೊಬೈಲ್ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP69 ಮತ್ತು IP68 ರೇಟಿಂಗ್ ಪಡೆದಿದೆ. ಭದ್ರತೆಗಾಗಿ, ಇದು ಇನ್ ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈ ಫೈ 7, ಬ್ಲೂಟೂತ್ 5.4, ಎನ್‌ಎಫ್‌ಸಿ, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಐಕ್ಯೂ 13 ಫೋನಿನ ಬೆಲೆ (ಚೀನಾ ಬೆಲೆ)

12GB RAM + 256GB ಸ್ಟೋರೇಜ್ ಬೆಲೆ = 47,200 ರೂ.
16 GB RAM + 1 TB ಸ್ಟೋರೇಜ್ ಬೆಲೆ = 61,400 ರೂ.

Best Mobiles in India

English summary
iQOO 13 India Launch Date Announced: know details. ಐಕ್ಯೂ 13 ಫೋನನ್ನು ಡಿಸೆಂಬರ್ 3ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುತ್ತದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+