Home
ಮೊಬೈಲ್

iQOO 13: ಬರಲಿದೆ ಹೊಸ ಫೋನ್; ಬೆಲೆ, ಫೀಚರ್ಸ್‌ ಲೀಕ್.. ಯಾವಾಗ ಲಾಂಚ್?

ಐಕ್ಯೂ (iQoo) ಮೊಬೈಲ್‌ಗಳು ಮಾರುಕಟ್ಟೆಯಲ್ಲೇ ಭಾರೀ ಸದ್ದು ಮಾಡುತ್ತಿವೆ. ಈ ಫೋನ್‌ಗಳು ವಿವೋನ ಉಪ-ಬ್ರಾಂಡ್ ಆಗಿವೆ. ಇದೀಗ, ಕಂಪನಿಯ ಹೊಸ ಫೋನ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಹೌದು, ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿಯ ಐಕ್ಯೂ 13 ಫೋನ್ (iQoo 13) ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಅಧಿಕೃತ ಬಿಡುಗಡೆಗೂ ಮುನ್ನ ಈ ಫೋನಿನ ಭಾರತದ ಬಿಡುಗಡೆಯ ಟೈಮ್‌ಲೈನ್, ಬೆಲೆ ಮತ್ತು ಫೀಚರ್ಸ್‌ ಸೋರಿಕೆಯಾಗಿವೆ. ಬನ್ನಿ, ಈ ಫೋನ್ ಬಿಡುಗಡೆ ಯಾವಾಗ? ಮತ್ತು ಇನ್ನಿತರ ವಿವರಗಳನ್ನು ನೋಡೋಣ.

ಐಕ್ಯೂ 13 ಫೋನ್ ಐಕ್ಯೂ 12 (IQOO 12) ಫೋನಿನ ಉತ್ತರಾಧಿಕಾರಿಯಾಗಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಚಿಪ್‌ಸೆಟ್ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಇದು 6.7 ಇಂಚಿನ ಡಿಸ್ಪ್ಲೇ ಕೂಡ ಒಳಗೊಂಡಿರಲಿದೆ. ಇದು ಅಮೋಲೆಡ್ ಡಿಸ್ಪ್ಲೇ ಆಗಿರುತ್ತದೆ. ಈ ಡಿಸ್ಪ್ಲೇಯ ರಿಫ್ರೆಶ್ ರೇಟ್ 144Hz ಆಗಿದೆ. 2K ರೆಸಲ್ಯೂಶನ್ ಸಹ ಲಭ್ಯವಿದೆ. ಐಕ್ಯೂ 13 ಫೋನ್ ದೊಡ್ಡ 6150mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ.

iQOO 13: ಬರಲಿದೆ ಹೊಸ ಫೋನ್; ಬೆಲೆ, ಫೀಚರ್ಸ್‌ ಲೀಕ್.. ಯಾವಾಗ ಲಾಂಚ್?

ಐಕ್ಯೂ 13 ಲಾಂಚ್ ಟೈಮ್‌ಲೈನ್, ಬೆಲೆ ಲೀಕ್

ವರದಿಯ ಪ್ರಕಾರ, ಐಕ್ಯೂ 13 ಫೋನನ್ನು ಭಾರತೀಯ ಮಾರುಕಟ್ಟೆಯಲ್ಲಿ 55,000 ರೂ.ಗಳ ಬೆಲೆಯಲ್ಲಿ ಬಿಡುಗಡೆ ಮಾಡಲಾಗುವುದು. ಇದು ಮೂಲ ರೂಪಾಂತರದ ಬೆಲೆಯಾಗಿದೆ. ಈ ಹಿಂದಿನ ಫೋನ್‌ ಐಕ್ಯೂ 12 (12GB + 256GB) ಅನ್ನು 52,999 ರೂ.ಗಳ ಬೆಲೆಯಲ್ಲಿ ಬಿಡುಗಡೆ ಮಾಡಲಾಯಿತು.

ಲಾಂಚ್ ಟೈಮ್‌ಲೈನ್‌ ಬಗ್ಗೆ ಹೇಳುವುದಾದರೆ, ಐಕ್ಯೂ 13 ಅನ್ನು ಡಿಸೆಂಬರ್ 1 ಮತ್ತು ಡಿಸೆಂಬರ್ 10 ರ ನಡುವೆ ಚೀನಾದಲ್ಲಿ ಪ್ರಾರಂಭಿಸುವ ಸಾಧ್ಯತೆಯಿದೆ. ಈ ಹಿಂದಿನ ಫೋನ್‌ ಅನ್ನು ಇದೇ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಹಾಗಾಗಿ, ಈ ಬಾರಿಯೂ ಅದೇ ತಿಂಗಳು ಎಂಟ್ರಿ ಕೊಡುವ ಸಾಧ್ಯತೆ ಇದೆ.

ಐಕ್ಯೂ 13 ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ಐಕ್ಯೂ 13 ಫೋನ್ 6.7 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 2K ಪ್ಯಾನಲ್ ಮತ್ತು 144Hz ರಿಫ್ರೆಶ್ ದರವನ್ನು ಹೊಂದಿರಲಿದೆ.

ಪ್ರೊಸೆಸರ್: ಐಕ್ಯೂ 13 ಮೊಬೈಲ್ ಅನ್ನು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 4 (Qualcomm Snapdragon 8 Gen 4) ಚಿಪ್‌ಸೆಟ್‌ನೊಂದಿಗೆ ಬಿಡುಗಡೆ ಮಾಡಲಾಗುವುದು. ಈ ಪ್ರೊಸೆಸರ್ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. ಈ ಹಿಂದೆ ಬಿಡುಗಡೆಯಾಗಿರುವ ಐಕ್ಯೂ 12 ಫೊನ್ ಸ್ನಾಪ್‌ಡ್ರಾಗನ್ 8 Gen 3 ಚಿಪ್‌ನೊಂದಿಗೆ ಬಂದಿದೆ.

ಸ್ಟೋರೇಜ್: ಐಕ್ಯೂ 13 ಸ್ಮಾರ್ಟ್‌ಫೋನ್ 16GB RAM ಮತ್ತು 512GB ವರೆಗೆ ಸ್ಟೋರೇಜ್‌ ಆಯ್ಕೆಗಳಲ್ಲಿ ಬರುವ ಸಾಧ್ಯತೆಯಿದೆ.

ಈ ಸುದ್ದಿ ಓದಿದ್ದೀರಾ?: OnePlus: ಈ 5G ಫೋನ್ ಬೆಲೆ ಇಳಿಕೆ: 3,000 ಅಗ್ಗ.. 1,299 ರೂ.ನ ನೆಕ್‌ಬ್ಯಾಂಡ್ ಉಚಿತ!

iQOO 13: ಬರಲಿದೆ ಹೊಸ ಫೋನ್; ಬೆಲೆ, ಫೀಚರ್ಸ್‌ ಲೀಕ್.. ಯಾವಾಗ ಲಾಂಚ್?

ಕ್ಯಾಮೆರಾ: ಐಕ್ಯೂ 13 ಮೊಬೈಲ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಒಳಗೊಂಡಿದೆ. ಜೊತೆಗೆ, 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 50 ಮೆಗಾಪಿಕ್ಸೆಲ್ 2x ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿರಲಿದೆ.

ಬ್ಯಾಟರಿ: ಕಂಪನಿಯು ನೂತನ ಐಕ್ಯೂ 13 ಫೋನನ್ನು 6,150mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಮಾಡಲಿದೆ. ಇದನ್ನು ವೇಗವಾಗಿ ಚಾರ್ಜ್ ಮಾಡಲು 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಇರುತ್ತದೆ.

ಇತರೆ ವೈಶಿಷ್ಟ್ಯಗಳು: ಐಕ್ಯೂ 13 ಮೊಬೈಲ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, 4G, ಬ್ಲೂಟೂತ್, IP68 ರೇಟಿಂಗ್, ಅಲ್ಟ್ರಾಸಾನಿಕ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
iQOO 13 India Launch Timeline, Price, Specs Leaked. The smartphone will likely be launched between December 1st and December 10th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+