iQOO 13 ಬಿಡುಗಡೆ ದಿನಾಂಕ ಘೋಷಣೆ; ಪ್ರಿ-ಬುಕಿಂಗ್ ಶುರು.. ವಿಶೇಷ 'ಲಕ್ಕಿ ಬ್ಯಾಗ್' ಗಿಫ್ಟ್!
ಐಕ್ಯೂ (iQoo) ತನ್ನ ಅಭಿಮಾನಿಗಳಿಗೆ ದೀಪಾವಳಿ ಉಡುಗೊರೆ ನೀಡಲು ಸಜ್ಜಾಗಿದೆ. ಕಂಪನಿಯು, ಒಂದು ದಿನ ಮೊದಲೇ, ತನ್ನ ನಂಬರ್ ಸರಣಿಯಲ್ಲಿ ಐಕ್ಯೂ 13 (iQOO 13) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ. ಈಗಾಗಲೇ, ದಿನಾಂಕವನ್ನು ಘೋಷಿಸಿದೆ. ಈ ಫೋನ್ ಅಕ್ಟೋಬರ್ 30 ರಂದು ಅಧಿಕೃತವಾಗಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಇದು ಇತ್ತೀಚಿನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಬರುವುದು ಖಚಿತವಾಗಿದೆ. ಕಂಪನಿಯು ತನ್ನ ಪ್ರಿ-ಬುಕಿಂಗ್ ಅನ್ನು ಸಹ ಪ್ರಾರಂಭಿಸಿದೆ. ಜೊತೆಗೆ, ಮೈಕ್ರೋ ಸೈಟ್ ಮೂಲಕ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ.
ಐಕ್ಯೂ 13 ಫೋನ್ ಐಕ್ಯೂ 12 (IQOO 12) ಫೋನಿನ ಉತ್ತರಾಧಿಕಾರಿಯಾಗಿ ಲಾಂಚ್ ಆಗಲಿದೆ. ಈ ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಇದು 144Hz ರಿಫ್ರೆಶ್ ದರದೊಂದಿಗೆ 6.7 ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದೆ. ಈ ಫೋನಿನಲ್ಲಿ 16GB RAM ಮತ್ತು 512GB ವರೆಗಿನ ಇಂಟರ್ನಲ್ ಸ್ಟೋರೇಜ್ ಇರಲಿದೆ. ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 6150mAh ಬ್ಯಾಟರಿ ಸೇರಿದಂತೆ ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ.

ಐಕ್ಯೂ 13 ಫೋನಿನ ಬಿಡುಗಡೆ ದಿನಾಂಕ
ಮುಂಬರುವ ಐಕ್ಯೂ 13 ಫೋನಿಗೆ ಸಂಬಂಧಿಸಿದ ಮಾಹಿತಿಯನ್ನು ಚೀನಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಲಾಗಿದೆ. ಅದರಂತೆ, ಐಕ್ಯೂ 13 ಮೊಬೈಲ್ ಅನ್ನು ಚೀನಾದಲ್ಲಿ ಅಕ್ಟೋಬರ್ 30 ರಂದು (ಚೀನಾ ಸ್ಥಳೀಯ ಸಮಯ 16:00ಕ್ಕೆ) ಬಿಡುಗಡೆ ಮಾಡಲಾಗುವುದು. ಈ ಸ್ಮಾರ್ಟ್‌ಫೊನ್ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಬರಲಿದೆ. ಇದು ಹಸಿರು, ಬಿಳಿ, ಕಪ್ಪು ಮತ್ತು ಬೂದು ಬಣ್ಣದಲ್ಲಿ ಖರೀದಿಗೆ ಲಭ್ಯವಿರಲಿದೆ.
ಪ್ರಿ-ಬುಕಿಂಗ್ ಮಾಡಿದ್ರೆ ವಿಶೇಷ 'ಲಕ್ಕಿ ಬ್ಯಾಗ್'
ಐಕ್ಯೂ 13 ಫೋನನ್ನು ಮುಂಗಡವಾಗಿ ಬುಕ್ ಮಾಡುವ ಗ್ರಾಹಕರು, 9.9 ಯುವಾನ್‌ಗೆ ವಿಶೇಷ ಲಕ್ಕಿ ಬ್ಯಾಗ್ ಪಡೆಯಬಹುದು. ಇದರಲ್ಲಿ ಮೂರು ವರ್ಷಗಳ ಬ್ಯಾಟರಿ ವಾರಂಟಿ, ಒಂದು ವರ್ಷದ ವಿಸ್ತೃತ ವಾರಂಟಿ, ವೈರ್‌ಲೆಸ್ ಸ್ಪೋರ್ಟ್ಸ್ ಹೆಡ್‌ಫೋನ್‌ಗಳು, 24 ತಿಂಗಳ ನೋ ಕಾಸ್ಟ್ ಇಎಂಐ ಆಯ್ಕೆ ನೀಡಲಾಗುವುದು.
ಐಕ್ಯೂ 13 ಫೋನಿನ ವಿನ್ಯಾಸ
ಐಕ್ಯೂ 13 ಫೋನ್ ಮೂರು ಕ್ಯಾಮೆರಾ ಲೆನ್ಸ್ ಮತ್ತು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಸ್ಕ್ವಿರ್ಕಲ್ ಕ್ಯಾಮೆರಾ ಮಾಡ್ಯೂಲ್ ಹೊಂದಿದೆ. ಕ್ಯಾಮೆರಾ ಮಾಡ್ಯೂಲ್ ಹ್ಯಾಲೋ ಲೈಟ್‌ನೊಂದಿಗೆ ಬರುತ್ತದೆ. ಇದು ಡಿಫಾಲ್ಟ್ ಆಗಿ ಆಫ್ ಆಗಿರುತ್ತದೆ. ನಿಮ್ಮ ಇಷ್ಟದಂತೆ ಆಫ್ ಅಥವಾ ಆನ್ ಮಾಡಬಹುದು. ಮುಂಭಾಗದ ಪ್ಯಾನೆಲ್‌ನಲ್ಲಿ ಈ ಫೋನ್, ಫ್ಲಾಟ್ ಡಿಸ್ಪ್ಲೇ ಮತ್ತು ಪಂಚ್ ಹೋಲ್ ಹೊಂದಿರಲಿದೆ.
ಐಕ್ಯೂ 13 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಐಕ್ಯೂ 13 ಮೊಬೈಲ್ 6.7 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು BOE ನ ಹೊಸ Q10 ಪ್ಯಾನೆಲ್ ಹೊಂದಿರುತ್ತದೆ. ಡಿಸ್ಪ್ಲೇಯು 2K ರೆಸಲ್ಯೂಶನ್ ಮತ್ತು 144Hz ರಿಫ್ರೆಶ್ ದರದ ಬೆಂಬಲ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಐಕ್ಯೂ 13 ಫೋನನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಿದೆ. ಈ ಪ್ರೊಸೆಸರ್ ಅನ್ನು ಸ್ವಯಂ ಅಭಿವೃದ್ಧಿಪಡಿಸಿದ ಗೇಮಿಂಗ್ ಚಿಪ್ Q2 ನೊಂದಿಗೆ ಅಳವಡಿಸಲಾಗುತ್ತದೆ. ಇದು PC ಲೆವೆಲ್ 2K ಸೂಪರ್ ರೆಸಲ್ಯೂಶನ್ ಮತ್ತು 144FPS ಗೇಮಿಂಗ್‌ಗೆ ಬೆಂಬಲವನ್ನು ಒದಗಿಸುತ್ತದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ OriginOS 5 ನಲ್ಲಿ ಕೆಲಸ ನಿರ್ವಹಿಸಲಿದೆ.
ಸ್ಟೋರೇಜ್ ಆಯ್ಕೆ
ನೂತನ ಐಕ್ಯೂ 13 ಮೊಬೈಲ್ 16GB RAM ಮತ್ತು 512GB ವರೆಗಿನ ಇಂಟರ್ನಲ್ ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ.
ಕ್ಯಾಮೆರಾ ಸೆಟಪ್
ಕಂಪನಿಯು ಕ್ಯಾಮೆರಾ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ, ಇದು ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ 2x ಟೆಲಿಫೋಟೋ ಕ್ಯಾಮೆರಾ ಇರಲಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಐಕ್ಯೂ 13 ಫೋನ್ 6150mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ಕಪನಿ ಹೇಳಿದೆ. ಇದನ್ನು ಚಾರ್ಜ್ ಮಾಡಲು, 120W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಇತರೆ ವೈಶಿಷ್ಟ್ಯಗಳು
ಈ ಫೋನ್ ಧೂಳು ಮತ್ತು ನೀರು ನಿರೋಧಕ IP68 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, 4G, ಬ್ಲೂಟೂತ್, ಅಲ್ಟ್ರಾಸಾನಿಕ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.


Click it and Unblock the Notifications







