Home
ಮೊಬೈಲ್

ಭಾರತದಲ್ಲಿ iQOO 13 ಬಿಡುಗಡೆ ಖಚಿತ; ಬಿಗ್ ಬ್ಯಾಟರಿ, 512GB ಸ್ಟೋರೇಜ್.. ಬೆಲೆ ಇಷ್ಟು!

ಐಕ್ಯೂ (iQOO) ಇತ್ತೀಚೆಗೆ ತನ್ನ ಐಕ್ಯೂ 13 (iQOO 13) ಫೋನನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಇದನ್ನು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಪರಿಚಯಿಸಲಾಗಿದೆ. ಇದೀಗ, ಈ ಮೊಬೈಲ್ ಶೀಘ್ರದಲ್ಲೇ ಭಾರತಕ್ಕೂ ಲಗ್ಗೆ ಇಡಲಿದೆ. ಈ ಫೋನ್ ಬಿಡುಗಡೆಯನ್ನು ಕಂಪನಿಯು ಅಧಿಕೃತವಾಗಿ ಘೋಷಿಸಿದೆ. ಮತ್ತು ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ಐಕ್ಯೂ 13 ಖರೀದಿಗೆ ಲಭ್ಯವಿರುತ್ತದೆ ಎಂದು ತಿಳಿಸಲಾಗಿದೆ. ಬನ್ನಿ, ಹೊಸ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಪ್ರಸ್ತುತ, ಕಂಪನಿಯು ಐಕ್ಯೂ 13 ಭಾರತ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ. ಮುಂಬರುವ ಈ ಫೋನ್ 6,150mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿರಲಿದೆ. ಜೊತೆಗೆ, 120W ಫಾಸ್ಟ್ ಚಾರ್ಜಿಂಗ್ ಇರಲಿದೆ. ಫೋನ್ 6.82 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. 16GB RAM ಮತ್ತು 1TB ಸ್ಟೋರೇಜ್ ಒಳಗೊಂಡಿದೆ. ಇದರೊಂದಿಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಭಾರತದಲ್ಲಿ iQOO 13 ಬಿಡುಗಡೆ ಖಚಿತ; ಬಿಗ್ ಬ್ಯಾಟರಿ, 512GB ಸ್ಟೋರೇಜ್.. ಬೆಲೆ?

ಐಕ್ಯೂ 13 ಭಾರತದಲ್ಲಿ ಬಿಡುಗಡೆ

ಮುಂಬರುವ ಮೊಬೈಲ್ ಬಗ್ಗೆ ಕಂಪನಿ ಮಾಹಿತಿ ನೀಡಿದೆ. ಕಂಪನಿಯು ತನ್ನ ಅಧಿಕೃತ 'ಎಕ್ಸ್‌' ಖಾತೆಯ ಮೂಲಕ ಐಕ್ಯೂ 13 ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಮತ್ತು ಇದನ್ನು ಇ ಕಾಮರ್ಸ್ ಸೈಟ್ ಅಮೆಜಾನ್ ಮೂಲಕ ಮಾರಾಟ ಮಾಡಲಾಗುವುದು ಎಂದು ತಿಳಿಸಿದೆ. ಇದಲ್ಲದೆ, ಈ ಫೋನಿನ ಉತ್ಪನ್ನ ಪುಟವನ್ನು ಅಮೆಜಾನ್‌ನಲ್ಲಿ ಲೈವ್ ಮಾಡಲಾಗಿದೆ.

ಐಕ್ಯೂ 13 ಫೋನಿನ ಬೆಲೆ

ಐಕ್ಯೂ 13 ಅನ್ನು ಚೀನಾದಲ್ಲಿ 12GB RAM ಮತ್ತು 16GB RAM ನೊಂದಿಗೆ ಒಟ್ಟು 5 ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು 256GB ಸ್ಟೋರೇಜ್‌ ಮತ್ತು 1 TB ವರೆಗಿನ ಸ್ಟೋರೇಜ್ ಒಳಗೊಂಡಿದೆ. ಈ ಮೊಬೈಲ್ ಬೆಲೆ ಸುಮೂರು 47,200 ರಿಂದ 61,400 ರೂ. ಇದೆ. ಭಾರತದಲ್ಲಿಯೂ ಐಕ್ಯೂ 13 ಅನ್ನು ಇದೇ ಬೆಲೆಯಲ್ಲಿ ಬಿಡುಗಡೆ ಮಾಡಬಹುದು. 1TB ಸ್ಟೋರೇಜ್ ರೂಪಾಂತರವು ಬಿಡುಗಡೆ ಆಗುತ್ತದೆಯೇ ಅಥವಾ ಇಲ್ಲವೇ ಎಂಬುದು ಖಚಿತವಾಗಿಲ್ಲ.

ಐಕ್ಯೂ 13 ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಐಕ್ಯೂ 13 ಮೊಬೈಲ್ 6.82 ಇಂಚಿನ ಪೂರ್ಣ ಎಚ್‌ಡಿ ಪ್ಲಸ್‌ ಡಿಸ್ಪ್ಲೇಯನ್ನು ಹೊಂದಿದೆ. ಇದು ಓಎಲ್‌ಇಡಿ ಡಿಸ್ಪ್ಲೇ ಆಗಿದೆ. ಇದು 3168 X 1440 ಪಿಕ್ಸೆಲ್‌ಗಳ ರೆಸಲ್ಯೂಶನ್, 1800 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಮತ್ತು 144Hz ರಿಫ್ರೆಶ್ ದರ ಹೊಂದಿದೆ. ಈ ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಈ ಫೋನ್ ಇತ್ತೀಚಿನ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್‌ 15 ಆಧಾರಿತ OriginOS 5 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನ್ 16GB RAM ಮತ್ತು 1TB ಸ್ಟೋರೇಜ್ ಒಳಗೊಂಡಿದೆ.

ಕ್ಯಾಮೆರಾ ಸೆಟಪ್

ಐಕ್ಯೂ 13 ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ OIS ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾ ಲಭ್ಯವಿದೆ. ಜೊತೆಗೆ 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು OIS ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಟೆಲಿಫೋಟೋ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 32 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಈ ಫೋನ್ 6,150mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಸಿಲಿಕಾನ್ ಆನೋಡ್ ತಂತ್ರಜ್ಞಾನದಲ್ಲಿ ತಯಾರಿಸಲಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ವೈಶಿಷ್ಟ್ಯಗಳು

ಐಕ್ಯೂ 13 ಫೋನ್ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP69 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈ-ಫೈ 7, ಬ್ಲೂಟೂತ್ 5.4, ಎನ್‌ಎಫ್‌ಸಿ, ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
iqoo 13 launch in india has been officially teased sale on amazon confirmed: : Price, Specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+