Home
ಮೊಬೈಲ್

ಭಾರತದಲ್ಲಿ 'iQOO 15' ಪ್ರೀ-ಬುಕ್ಕಿಂಗ್: ಮೊದಲ 24 ಗಂಟೆಗಳಲ್ಲೇ ದಾಖಲೆ!

ಭಾರತದಲ್ಲಿ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿರುವ Snapdragon 8 Elite Gen 5 ಫ್ಲಾಗ್‌ಶಿಪ್ ಫೋನ್ 'iQOO 15' ಪ್ರೀ-ಬುಕ್ಕಿಂಗ್ನಲ್ಲಿ ದಾಖಲೆ ಬರೆದಿದೆ ಎಂದು ಕಂಪೆನಿ ಹೇಳಿಕೊಂಡಿದೆ. iQOO ಕಂಪೆನಿ ಪ್ರಕಾರ, iQOO 15 ಫೋನ್‌ಗಾಗಿ ಪ್ರಿ-ಬುಕಿಂಗ್ ಆರಂಭವಾದ ಮೊದಲ 24 ಗಂಟೆಗಳಲ್ಲೇ, ಭಾರತದಲ್ಲಿ iQOO ಬ್ರ್ಯಾಂಡ್ ಇತಿಹಾಸದಲ್ಲೇ ಅತಿ ಹೆಚ್ಚು ಪ್ರಿ-ಲಾಂಚ್ ಬುಕ್ಕಿಂಗ್‌ಗಳು ದಾಖಲಾಗಿವೆ ಎಂದು ಕಂಪೆನಿ ತಿಳಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

iQOO 15: ಭಾರತದಲ್ಲಿ ದಾಖಲೆಮಾಡಿದ ಪ್ರಿ-ಬುಕಿಂಗ್
ಇದೇ iQOO 15 ನವೆಂಬರ್ 26 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ನಿರೀಕ್ಷಿತ ಬಿಡುಗಡೆಗೂ ಮುನ್ನ, iQOO ಕಂಪೆನಿಯು ಮುನ್ನ ಮುಂಬರುವ ಬಹುನಿರೀಕ್ಷಿತ iQOO 15 ಫೋನ್ ಯಾವುದೇ iQOO ಫ್ಲ್ಯಾಗ್‌ಶಿಪ್‌ಗಿಂತ ಮುನ್ನ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಂಖ್ಯೆಯ ಪ್ರಿ-ಲಾಂಚ್ ಪ್ರಿ-ಬುಕಿಂಗ್‌ಗಳನ್ನು ಸಾಧಿಸಿದೆ ಎಂದು ತಿಳಿಸಿರುವುದನ್ನು Gadgets 360 ವರದಿ ಮಾಡಿದೆ. iQOO ಕಂಪೆನಿ ಪ್ರಕಾರ, ಈ ಹಿಂದಿನ ಮಾದರಿಗಳಾದ QOO 13 ಗೆ ಹೋಲಿಸಿದರೆ ಸುಮಾರು 1.5 ಪಟ್ಟು ಹೆಚ್ಚು, iQOO 12 ಗೆ ಹೋಲಿಸಿದರೆ 5 ಪಟ್ಟು ಹೆಚ್ಚಿನ ಪ್ರಿ-ಬುಕಿಂಗ್ ಅನ್ನು iQOO 15 ಪಡೆದಿದೆ.

ಇಷ್ಡೇ ಅಲ್ಲದೆ, ಇದು ಇಂದಿನವರೆಗೆ ಅಮೆಜಾನ್ ಮತ್ತು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ iQOO ಸ್ಮಾರ್ಟ್‌ಫೋನ್ ಎಂದು ಕಂಪನಿ ಹೇಳಿಕೊಂಡಿದ್ದು, iQOO 13 ಗಿಂತ ಇ ಫೋನ್ ಮೂರು ಪಟ್ಟು ಹೆಚ್ಚು ಹುಡುಕಾಟಗಳನ್ನು ಪಡೆದಿದೆ ಎಂದು ಹೇಳಿದೆ. ಆದರೆ, ಈ ಅಂಕಿಅಂಶಗಳ ನಿಖರವಾದ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಇನ್ನು iQOO ಹೇಳುವಂತೆ, ಈ ಅಂಕಿಅಂಶಗಳು "ಪ್ರಿಯಾರಿಟಿ ಪಾಸ್" ಮೂಲಕ ನಡೆದ ಪ್ರಿ-ಲಾಂಚ್ ಬುಕ್ಕಿಂಗ್‌ಗಳನ್ನು ಆಧರಿಸಿವೆ. ಇದರಿಂದ ಗ್ರಾಹಕರು QOO 15 ಫೋನ್ ಲಾಂಚ್‌ಗಿಂತ ಮುಂಚೆಯೇ ಖರೀದಿಸಲು ತೋರಿಸಿರುವ ಆಸಕ್ತಿ ಸ್ಪಷ್ಟವಾಗುತ್ತದೆ.

ಭಾರತದಲ್ಲಿ 'iQOO 15' ಪ್ರೀ-ಬುಕ್ಕಿಂಗ್: ಮೊದಲ 24 ಗಂಟೆಗಳಲ್ಲೇ ದಾಖಲೆ!

iQOO 15: ಆನ್‌ಲೈನಿನಲ್ಲಿ ಬೆಲೆ ಸೋರಿಕೆ!
ಇತ್ತೀಚಿಗಷ್ಟೇ iQOO 15 ಫೋನ್ ಬೆಲೆ ಸೋರಿಕೆಯಾಗಿದೆ. ಟೆಕ್ ಟಿಪ್ಸ್ಟರ್ ಅಭಿಷೇಕ್ ಯಾದವ್ ಅವರ ಪ್ರಕಾರ, iQOO 15 ಗೆ ಸಂಬಂಧಿಸಿದ ಲಿಸ್ಟಿಂಗ್ Amazon India ವೆಬ್‌ಸೈಟ್‌ನಲ್ಲಿ ಕಂಡುಬಂದಿದ್ದು, ಇದು ಎರಡು ಸ್ಟೋರೇಜ್ ಮಾದರಿಗಳಲ್ಲಿ ಲಭ್ಯವಿರುವಂತೆ ತೋರುತ್ತದೆ. ಇವುಗಳಲ್ಲಿ 12GB RAM + 256GB ಸ್ಟೋರೇಜ್ ಫೋನ್ ಬೆಲೆ ₹72,999 ಆಗಿದ್ದರೆ, 16GB RAM + 512GB ಸ್ಟೋರೇಜ್ ಮಾದರಿಯ ಫೋನ್ ಬೆಲೆ ₹79,999 ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಅನ್ನು Alpha ಮತ್ತು Legend ಎಂಬ ಎರಡು ಬಣ್ಣಗಳಲ್ಲಿ ನೀಡಲಾಗುತ್ತದೆ ಎಂದು ಲಿಸ್ಟಿಂಗ್ ಸೂಚಿಸುತ್ತದೆ.

iQOO 15: ಬೆಲೆ ಇನಷ್ಟು ಕಡಿಮೆ ಇರುವ ಸಾಧ್ಯತೆ ಇದೆಯೇ?
ಲೀಕ್ ಆದ ಬೆಲೆಗಳನ್ನು ಗಮನಿಸಿದರೆ, iQOO 15 ನೇರವಾಗಿ OnePlus 15 ಜೊತೆ ಸ್ಪರ್ಧೆಯಲ್ಲಿರುವುದು ಸ್ಪಷ್ಟ. OnePlus 15 ಕೂಡ ಇದೇ ಬೆಲೆಯ ಶ್ರೇಣಿಯಲ್ಲಿ ಲಭ್ಯವಿರುವ ಕಾರಣ, ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಕಠಿಣ ಪೈಪೋಟಿ ನಿರೀಕ್ಷಿಸಲಾಗಿದೆ. ಆದರೆ, iQOO ಇಂಡಿಯಾ ಸಿಇಒ ನಿಪುನ್ ಮಾರ್ಯಾ ಅವರು ಈ ಹಿಂದೆ Gadgets 360 ಜೊತೆ ಮಾತನಾಡುವ ವೇಳೆ, iQOO 15 ಲಾಂಚ್ ಆಫರ್‌ಗಳೊಂದಿಗೆ ₹65,000 - ₹70,000 ರೇಂಜ್‌ನಲ್ಲಿ ಲಭ್ಯವಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಹಾಗಾಗಿ, ಕೊಡುಗೆಯ ಬೆಲೆಗಳನ್ನು ನಿರೀಕ್ಷಿಸಬಹುದಾಗಿದೆ.

iQOO 15 ಪ್ರೀ-ಬುಕ್ಕಿಂಗ್ ಆರಂಭವಾಗಿದೆ.
ದೇಶದಲ್ಲಿ ನವೆಂಬರ್ 20, ಗುರುವಾರ ಮಧ್ಯಾಹ್ನ 12 ಗಂಟೆಯಿಂದ Amazon ಮತ್ತು iQOO India e-storeಗಳಲ್ಲಿiQOO 15 ಪ್ರೀ-ಬುಕ್ಕಿಂಗ್ ಆರಂಭವಾಗಿದೆ. ಪ್ರೀ-ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಆಕರ್ಷಕ ಆಫರ್‌ಗಳು ಹಾಗೂ ವಿಶೇಷ ಲಾಭಗಳನ್ನು ಕಂಪನಿಯು ಘೋಷಿಸಿದೆ. ಹಾಗಾದರೆ, ಮುಂಬರುವ iQOO 15 ಪ್ರೀ-ಬುಕ್ಕಿಂಗ್ ಕೊಡುಗೆಗಳು ಯಾವುವು?, ಬೆಲೆ ಎಷ್ಟಿರಬಹುದು ಹಾಗೂ ಫೀಚರ್ಸ್ ಹೇಗಿವೆ ಎಂಬ ಎಲ್ಲಾ ವಿವರಗಳನ್ನು ಮುಂದೆ ಓದಿ ತಿಳಿಯೋಣ ಬನ್ನಿ.

ಭಾರತದಲ್ಲಿ 'iQOO 15' ಪ್ರೀ-ಬುಕ್ಕಿಂಗ್: ಮೊದಲ 24 ಗಂಟೆಗಳಲ್ಲೇ ದಾಖಲೆ!

iQOO 15 : ಪ್ರೀ-ಬುಕಿಂಗ್‌ಗಾಗಿ ವಿಶೇಷ 'Priority Pass'
ಇಂದಿನಿಂದ iQOO 15 ಪ್ರೀ-ಬುಕ್ ಮಾಡಲಿರುವ ಗ್ರಾಹಕರಿಗೆ ಕಂಪೆನಿಯು Priority Pass ನೀಡುತ್ತಿದೆ. ಈ Priority Pass ಪಡೆಯುವ ಗ್ರಾಹಕರು ಒಂದು ಜೋಡಿ iQOO TWS 1e ಇಯರ್‌ಬಡ್‌ಗಳು ಮತ್ತು ಹೆಚ್ಚುವರಿ 12 ತಿಂಗಳ ವಿಸ್ತೃತ ಖಾತರಿಯ ಕೊಡುಗೆಯನ್ನು ಪಡೆಯಬಹುದು.

iQOO 15 : ಪ್ರಮುಖ ವೈಶಿಷ್ಟ್ಯಗಳು.
ನಾವು ಈಗಾಗಲೇ ತಿಳಿದಿರುವಂತೆ, iQOO 15 ಫೋನ್ ಅತ್ಯಂತ ಫ್ಲಾಗ್‌ಶಿಪ್ ಫೀಚರ್ಸ್‌ಗಳನ್ನು ಹೊತ್ತು ಬರುತ್ತಿದೆ. ಇವುಗಳಲ್ಲಿ, Samsung ಅಭಿವೃದ್ಧಿಪಡಿಸಿದ 2K M14 LEAD OLED ಡಿಸ್‌ಪ್ಲೇ ಹೆಚ್ಚು ಗಮನಸೆಳೆದಿದೆ. ಈ ಡಿಸ್‌ಪ್ಲೇಯು 2,600 ನಿಟ್‌ಗಳವರೆಗೆ ಗರಿಷ್ಠ ಹೊಳಪು, ಡಾಲ್ಬಿ ವಿಷನ್ ಬೆಂಬಲ ಮತ್ತು ಟ್ರಿಪಲ್ ಆಂಬಿಯೆಂಟ್ ಲೈಟ್ ಸೆನ್ಸರ್‌ಗಳನ್ನು ಹೊಂದಿದೆ ಎಂದು ದೃಢಪಡಿಸಲಾಗಿದೆ. ಗೇಮಿಂಗ್ ಮತ್ತು ಸಾಮಾನ್ಯ ಬಳಕೆಯ ಸಮಯದಲ್ಲಿ ವರ್ಧಿತ ಹ್ಯಾಪ್ಟಿಕ್ ಪ್ರತಿಕ್ರಿಯೆಗಾಗಿ ಈ ಫೋನ್ ಡ್ಯುಯಲ್-ಆಕ್ಸಿಸ್ ವೈಬ್ರೇಶನ್ ಮೋಟಾರ್ ಅನ್ನು ಸಹ ಒಳಗೊಂಡಿದೆ.

ಕಾರ್ಯಕ್ಷಮತೆಗಾಗಿ, ಈ iQOO 15 ಫೋನಿನಲ್ಲಿ ಇತ್ತೀಚಿನ Snapdragon 8 Elite Gen 5 ಪ್ರೊಸೆಸರ್ ಬಳಸಲಾಗಿದೆ. ಈ ಚಿಪ್‌ಸೆಟ್ ,LPDDR5X Ultra RAM, UFS 4.1 ಆನ್‌ಬೋರ್ಡ್ ಸ್ಟೋರೇಜ್, iQOO ನ ಸೂಪರ್‌ಕಂಪ್ಯೂಟಿಂಗ್ ಚಿಪ್ Q3 ಮತ್ತು ಥರ್ಮಲ್ ಮ್ಯಾನೇಜ್‌ಮೆಂಟ್‌ಗಾಗಿ 8,000 ಚದರ ಎಂಎಂ ಸಿಂಗಲ್-ಲೇಯರ್ ವೇಪರ್ ಚೇಂಬರ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಈ ಫೋನ್‌ ಭಾರತದಲ್ಲಿ ಮೊದಲ ಬಾರಿಗೆ Android 16 ಆಧಾರಿತ OriginOS 6 ನೊಂದಿಗೆ ಬಿಡುಗಡೆಯಾಗುತ್ತಿದೆ. ಕಂಪನಿ 5 ವರ್ಷಗಳ OS ಅಪ್ಡೇಟ್ ಮತ್ತು 7 ವರ್ಷಗಳ ಸೆಕ್ಯುರಿಟಿ ಪ್ಯಾಚ್‌ಗಳು ನೀಡುವುದಾಗಿ ತಿಳಿಸಿದೆ.

ಕ್ಯಾಮೆರಾ ವಿಭಾಗದಲ್ಲಿ, ಈ ಪೋನ್ 50-ಮೆಗಾಪಿಕ್ಸೆಲ್ ಸೆನ್ಸರ್‌ಗಳ ವ್ಯವಸ್ಥೆಯನ್ನು ಹೊಂದಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ ಸೋನಿ IMX921 ಮುಖ್ಯ ಸಂವೇದಕ, 3x ಜೂಮ್ ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ IMX882 ಸಂವೇದಕ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಮತ್ತು 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಇವೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಬ್ಯಾಟರಿ ವಿಭಾಗದಲ್ಲಿ, 100W ವೈರ್ಡ್ ಚಾರ್ಜಿಂಗ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವಿರುವ 7,000mAh ದೊಡ್ಡ ಬ್ಯಾಟರಿ ಇದೆ. ಜೊತೆಗೆ ಕಂಪನಿ ಹೊಸ Game Live Streaming Assistant ಪರಿಚಯಿಸಿದೆ.

Best Mobiles in India

English summary
iQOO has announced that its upcoming Snapdragon 8 Elite Gen 5 flagship, the iQOO 15, has achieved a new milestone in India. Within just the first 24 hours of opening pre-bookings, the company recorded the highest pre-launch bookings ever in the history of the iQOO brand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+