ಭಾರತಕ್ಕೆ iQOO 15 ಆಗಮನಕ್ಕೂ ಮೊದಲೇ ಪ್ರಮುಖ ವೈಶಿಷ್ಟ್ಯಗಳು ಬಹಿರಂಗ!
iQOO ಕಂಪೆನಿಯು ತನ್ನ ಮುಂದಿನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ iQOO 15 ಅನ್ನು ಭಾರತದಲ್ಲಿ ಅಧಿಕೃತವಾಗಿ ನವೆಂಬರ್ 26, 2025ರಂದು ಬಿಡುಗಡೆ ಮಾಡುತ್ತಿದೆ ಎಂಬ ವಿಷಯವನ್ನು ನೀವು ಈಗಾಗಲೇ ತಿಳಿದಿರಬಹುದು. ಈ ಹೊಸ iQOO 15 ಸ್ಮಾರ್ಟ್‌ಫೋನ್ ಭಾರತದಲ್ಲಿಯೂ ಕೂಡ ಇತ್ತೀಚೆಗೆ ಬಿಡುಗಡೆಯಾದ ಚೀನೀ ಮಾದತಿಯಂತೆಯೇ ಅದೇ 3nm ಸ್ನಾಪ್‌ಡ್ರಾಗನ್ 8 ಎಲೈಟ್ ಜೆನ್ 5 ಚಿಪ್‌ಸೆಟ್ ಮತ್ತು Q3 ಗೇಮಿಂಗ್ ಚಿಪ್‌ನಿಂದ ಚಾಲಿತವಾಗಿದೆ ಎಂದು ತಿಳಿಸಲಾಗಿದ್ದು, ಇದೀಗ ಈ ಫೋನ್‌ನ ಬಣ್ಣ ಆಯ್ಕೆಗಳು ಮತ್ತು ಪ್ರಮುಖ ವೈಶಿಷ್ಟ್ಯಗಳನ್ನು ಸಹ ಬಹಿರಂಗಪಡಿಸಿದೆ.!
ಹೌದು, ಭಾರತದಲ್ಲಿ iQOO 15 ಸ್ಮಾರ್ಟ್‌ಫೋನ್ ಬಿಡುಗಡೆಗೂ ಮೊದಲೇ ಅಮೆಜಾನ್‌ನಲ್ಲಿ ವಿಶೇಷ ಮೈಕ್ರೋಸೈಟ್ ತೆರೆಯಲಾಗಿದೆ. ಅಮೆಜಾನ್ ಇದೀಗ ಈ ಮೈಕ್ರೋಸೈಟ್ ಅನ್ನು ನವೀಕರಿಸಿದ್ದು, ದೇಶದಲ್ಲಿ iQOO 15 ಫೋನ್ ಸಿಲ್ವರ್ ಮತ್ತು ಬ್ಲ್ಯಾಕ್ ಎರಡು ಬಣ್ಣಗಳಲ್ಲಿ ಲಭ್ಯವಿರುತ್ತದೆ ಎಂದು ತಿಳಿದಿದೆ. ಮೊದಲಿಗೆ ಕೇವಲ ಸಿಲ್ವರ್ ಎಡಿಷನ್ ಮಾತ್ರ ತೋರಿಸಲ್ಪಟ್ಟಿದ್ದರೂ, ಇದೀಗ ಬ್ಲ್ಯಾಕ್ ಕಲರ್‌ವೇ ಕೂಡ ಸೇರಿಸಲಾಗಿದೆ. ಆದರೆ, ಚೀನಾ ಆವೃತ್ತಿಯಂತೆ ಲೆಜೆಂಡರಿ (ಸಿಲ್ವರ್), ಟ್ರ್ಯಾಕ್ (ಬ್ಲ್ಯಾಕ್), ಲಿಂಗ್ಯುನ್ (ಗ್ರೇ) ಮತ್ತು ವಿಲ್ಡರ್ನೆಸ್ (ಹಸಿರು) ಬಣ್ಣಗಳಲ್ಲಿ ಬರಲಿದೆಯೇ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.
iQOO ಇಂಡಿಯಾ ಮುಖ್ಯಸ್ಥ ನಿಪುಣ್ ಮರಿಯಾ ಅವರು ಇತ್ತೀಚೆಗೆ ನವೆಂಬರ್ 26 ರಂದು ದೇಶದಲ್ಲಿ ಫೋನ್ ಬಿಡುಗಡೆಯಾಗಲಿದೆ ಎಂದು ಘೋಷಿದ್ದಾರೆ. ಈ ಹ್ಯಾಂಡ್‌ಸೆಟ್ ಆಂಡ್ರಾಯ್ಡ್ 16 ಅನ್ನು ಆಧರಿಸಿದ OriginOS 6 ನೊಂದಿಗೆ ಬರಲಿದೆ ಮತ್ತು 3nm ಸ್ನಾಪ್‌ಡ್ರಾಗನ್ 8 ಎಲೈಟ್ ಜೆನ್ 5 ಚಿಪ್‌ಸೆಟ್ ಮತ್ತು Q3 ಗೇಮಿಂಗ್ ಚಿಪ್‌ನಿಂದ ಚಾಲಿತವಾಗಿದೆ ಎಂದು ತಿಳಿಸಲಾಗಿತ್ತು. ಇದರ ಜೊತೆಗೆ, ಭಾರತೀಯ ಮಾದರಿಯು 144Hz ವರೆಗೆ ರಿಫ್ರೆಶ್ ರೇಟ್ 2K ರೆಸಲ್ಯೂಶನ್ ಡಿಸ್‌ಪ್ಲೇ ಮತ್ತು 8,000 sq.mm ವೇಪರ್ ಚೇಂಬರ್ ಕೂಲಿಂಗ್ ಪ್ಲೇಟ್‌ನೊಂದಿಗೆ ಸಜ್ಜುಗೊಂಡಿದೆ ಎಂದು ಮಾಹಿತಿ ನೀಡಲಾಗಿದೆ.
ಈ ಎಲ್ಲಾ ಅಂಶಗಳನ್ನು ಗಮನಿಸಿದರೆ, ಭಾರತದಲ್ಲಿ ಬಿಡುಗಡೆಯಾಗಲಿರುವ iQOO 15 ಫೋನ್ ಕೂಡ ಬಹುತೇಕ ಚೀನೀ ಮಾದರಿಯಂತೆ ಅದೇ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ, ಈ ಕುರಿತು ಅಧಿಕೃತ ಮಾಹಿತಿ ಲಭ್ಯವಾಗುವವರಗೆ ಕಾದುನೋಡಬೇಕು. ಹಾಗಾದರೆ, ಚೀನಾದಲ್ಲಿ ಬಿಡುಗಡೆಯಾಗಿದ್ದ iQOO 15 ಪೋನ್ ಹೇಗಿತ್ತು?, ಅಲ್ಲಿ ಬೆಲೆ ಎಷ್ಟು ಎಂಬ ಎಲ್ಲಾ ಅಂಶಗಳನ್ನು ಸಹ ನೋಡೋಣ ಬನ್ನಿ.
ಚೀನಾದಲ್ಲಿ ಬಿಡುಗಡೆಯಾಗಿರುವ iQOO 15 ಸ್ಮಾರ್ಟ್‌ಫೋನ್ 6.85 ಇಂಚಿನ 2K Samsung M14 AMOLED 8T LTPO ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಯು 144Hz ರಿಫ್ರೆಶ್ ರೇಟ್ ಮತ್ತು 2,600 ನಿಟ್ಸ್ ಪೀಕ್ ಬ್ರೈಟ್‌ನೆಸ್ ಹೊಂದಿದ್ದು, ಇದು ಆಧುನಿಕ ಗೇಮಿಂಗ್ ಅಥವಾ ವಿಡಿಯೋ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ಜೊತೆಗೆ ಇರದಲ್ಲಿ ಆಂಟಿ-ರಿಫ್ಲೆಕ್ಷನ್ ಕೋಟಿಂಗ್ ಹೊರಾಂಗಣ ಬೆಳಕಿನಲ್ಲಿಯೂ ಸ್ಪಷ್ಟ ದೃಶ್ಯ ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ. ಕಾರ್ಯಕ್ಷಮತೆಗಾಗಿ, ಈ ಫೋನ್‌ನಲ್ಲಿ Qualcomm ನ Snapdragon 8 Elite Gen 5 ಪ್ರೊಸೆಸರ್‌ನ್ನು ಬಳಕೆ ಮಾಡಲಾಗಿದೆ.

ಈ ಫೋನಿನ ಪ್ರಮುಖ ಆಕರ್ಷಣೆ ಅದರ 7,000mAh ದೊಡ್ಡ ಬ್ಯಾಟರಿ. ಇದು 100W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ದೀರ್ಘಕಾಲದ ಗೇಮಿಂಗ್ ಅಥವಾ ಸ್ಟ್ರೀಮಿಂಗ್‌ಗೂ ಬ್ಯಾಟರಿ ಶಕ್ತಿ ಕಾಪಾಡಿಕೊಳ್ಳುತ್ತದೆ.ಕ್ಯಾಮೆರಾ ವಿಭಾಗದಲ್ಲಿ, ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50MP Sony IMX921 ಪ್ರಾಥಮಿಕ ಸೆನ್ಸರ್ (OIS ಸಹಿತ), 50MP Samsung JN1 ಅಲ್ಟ್ರಾ ವೈಡ್ ಲೆನ್ಸ್, ಮತ್ತು 50MP Sony IMX882 3x ಟೆಲಿಫೋಟೋ ಲೆನ್ಸ್ ಇವೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಇದೆ
iQOO 15 ಫೋನ್‌ನಲ್ಲಿ ಗರಿಷ್ಠ 16GB LPDDR5x RAM ಮತ್ತು 1TB UFS 4.1 ಸ್ಟೋರೇಜ್ ಲಭ್ಯವಿದೆ. ಇದು Android 16 ಆಧಾರಿತ Origin OS 6 ನಲ್ಲಿ ಕಾರ್ಯನಿರ್ವಹಿಸುತ್ತದೆ. ಸಂಪರ್ಕಕ್ಕಾಗಿ Wi-Fi 7, Bluetooth 6.0, NFC ಮತ್ತು IR ಬ್ಲಾಸ್ಟರ್ ಲಭ್ಯ. ಇದರ ಜೊತೆಗೆ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು, 3D ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು IP68/IP69 ರೇಟ್‌ನ ವಾಟರ್-ಡಸ್ಟ್ ರೆಸಿಸ್ಟೆಂಟ್ ಬಾಡಿಯಂತಹ ಪ್ರೀಮಿಯಂ ಪೀಚರ್ಸ್ ಇವೆ. ಜೊತೆಗೆ ಫೋನಿನಲ್ಲಿ Adreno 840 GPU ಮತ್ತು ವಿಶೇಷ Q3 ಗೇಮಿಂಗ್ ಚಿಪ್ ಸಹ ಇದೆ.
iQOO 15 : ಬೆಲೆ ಎಷ್ಟು?
ಚೀನಾದಲ್ಲಿ iQOO 15 ಫೋನ್ ಬೆಲೆ 4,199 ಯುಯಾನ್ (ಸುಮಾರು ₹51,700)ರಿಂದ ಆರಂಭವಾಗುತ್ತದೆ. ಇದರ ಉನ್ನತ ಮಾದರಿಯು 5,499 ಯುಯಾನ್ (ಸುಮಾರು ₹67,800) ಬೆಲೆ ಹೊಂದೊದ್ದು, ಇದು Honor of Kings ವಿಶೇಷ ಆವೃತ್ತಿಯಾಗಿದೆ.


Click it and Unblock the Notifications








