Home
ಮೊಬೈಲ್

ವಿಶ್ವದ ಗಮನ ಸೆಳೆದ iQOO 15 ಫೋನ್ ಬಿಡುಗಡೆ: ಇಲ್ಲಿದೆ ಸಂಪೂರ್ಣ ವಿವರ!

ಭಾರತ, ಚೀನಾ ಸೇರಿದಂತೆ ವಿಶ್ವದಾದ್ಯಂತ ಸ್ಮಾರ್ಟ್‌ಫೋನ್ ಪ್ರಿಯರು ಬಹುದಿನಗಳಿಂದ ಎದುರುನೋಡುತ್ತಿದ್ದ ಬಹುನಿರೀಕ್ಷಿತ 'iQOO 15' ಸ್ಮಾರ್ಟ್‌ಫೋನ್ ಭರ್ಜರಿಯಾಗಿ ಬಿಡುಗಡೆಯಾಗಿದೆ. ಅಕ್ಟೋಬರ್ 20 ರಂದು, ಅಂದರೆ ನೆನ್ನೆ ಚೀನಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ iQOO 15 ಸ್ಮಾರ್ಟ್‌ಫೋನ್ ಪರಿಚಯಗೊಂಡಿದ್ದು, Snapdragon 8 Elite Gen 5 ಚಿಪ್‌ಸೆಟ್‌ನಿಂದ ಚಾಲಿತವಾಗಿರುವ ಕಂಪೆನಿಯ ಮೊದಲ ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮಿದೆ. ಗೇಮಿಂಗ್ ಪ್ರಿಯರು ಮತ್ತು ಹೈ-ಪರ್ಫಾರ್ಮೆನ್ಸ್ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿರುವ ಈ iQOO 15 ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೂ ಬರುವುದು ಸಹ ಖಚಿತವಾಗಿದೆ. ಹಾಗಾದರೆ, ಹೊಸ iQOO 15 ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆ ಎಷ್ಟು ಎಂಬ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ.

iQOO 15 : ಪ್ರಮುಖ ವೈಶಿಷ್ಟ್ಯಗಳು
ಹೊಸ iQOO 15 ಸ್ಮಾರ್ಟ್‌ಫೋನ್ 6.85 ಇಂಚಿನ 2K Samsung M14 AMOLED 8T LTPO ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಯು 144Hz ರಿಫ್ರೆಶ್ ರೇಟ್ ಮತ್ತು 2,600 ನಿಟ್ಸ್ ಪೀಕ್ ಬ್ರೈಟ್‌ನೆಸ್ ಹೊಂದಿದ್ದು, ಇದು ಆಧುನಿಕ ಗೇಮಿಂಗ್ ಅಥವಾ ವಿಡಿಯೋ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ಜೊತೆಗೆ ಇರದಲ್ಲಿ ಆಂಟಿ-ರಿಫ್ಲೆಕ್ಷನ್ ಕೋಟಿಂಗ್ ಹೊರಾಂಗಣ ಬೆಳಕಿನಲ್ಲಿಯೂ ಸ್ಪಷ್ಟ ದೃಶ್ಯ ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ. ಕಾರ್ಯಕ್ಷಮತೆಗಾಗಿ, ಈ ಫೋನ್‌ನಲ್ಲಿ Qualcomm ನ Snapdragon 8 Elite Gen 5 ಪ್ರೊಸೆಸರ್‌ನ್ನು ಬಳಕೆ ಮಾಡಲಾಗಿದೆ.

ವಿಶ್ವದ ಗಮನ ಸೆಳೆದ iQOO 15 ಫೋನ್ ಬಿಡುಗಡೆ: ಇಲ್ಲಿದೆ ಸಂಪೂರ್ಣ ವಿವರ!

ಈ ಫೋನಿನ ಪ್ರಮುಖ ಆಕರ್ಷಣೆ ಅದರ 7,000mAh ದೊಡ್ಡ ಬ್ಯಾಟರಿ. ಇದು 100W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ದೀರ್ಘಕಾಲದ ಗೇಮಿಂಗ್ ಅಥವಾ ಸ್ಟ್ರೀಮಿಂಗ್‌ಗೂ ಬ್ಯಾಟರಿ ಶಕ್ತಿ ಕಾಪಾಡಿಕೊಳ್ಳುತ್ತದೆ.ಕ್ಯಾಮೆರಾ ವಿಭಾಗದಲ್ಲಿ, ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50MP Sony IMX921 ಪ್ರಾಥಮಿಕ ಸೆನ್ಸರ್ (OIS ಸಹಿತ), 50MP Samsung JN1 ಅಲ್ಟ್ರಾ ವೈಡ್ ಲೆನ್ಸ್, ಮತ್ತು 50MP Sony IMX882 3x ಟೆಲಿಫೋಟೋ ಲೆನ್ಸ್ ಇವೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಇದೆ

iQOO 15 ಫೋನ್‌ನಲ್ಲಿ ಗರಿಷ್ಠ 16GB LPDDR5x RAM ಮತ್ತು 1TB UFS 4.1 ಸ್ಟೋರೇಜ್ ಲಭ್ಯವಿದೆ. ಇದು Android 16 ಆಧಾರಿತ Origin OS 6 ನಲ್ಲಿ ಕಾರ್ಯನಿರ್ವಹಿಸುತ್ತದೆ. ಸಂಪರ್ಕಕ್ಕಾಗಿ Wi-Fi 7, Bluetooth 6.0, NFC ಮತ್ತು IR ಬ್ಲಾಸ್ಟರ್ ಲಭ್ಯ. ಇದರ ಜೊತೆಗೆ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು, 3D ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು IP68/IP69 ರೇಟ್‌ನ ವಾಟರ್-ಡಸ್ಟ್ ರೆಸಿಸ್ಟೆಂಟ್ ಬಾಡಿಯಂತಹ ಪ್ರೀಮಿಯಂ ಪೀಚರ್ಸ್ ಇವೆ. ಜೊತೆಗೆ ಫೋನಿನಲ್ಲಿ Adreno 840 GPU ಮತ್ತು ವಿಶೇಷ Q3 ಗೇಮಿಂಗ್ ಚಿಪ್ ಸಹ ಇದೆ.

iQOO 15 : ಬೆಲೆ ಎಷ್ಟು?
ಚೀನಾದಲ್ಲಿ iQOO 15 ಫೋನ್ ಬೆಲೆ 4,199 ಯುಯಾನ್ (ಸುಮಾರು ₹51,700)ರಿಂದ ಆರಂಭವಾಗುತ್ತದೆ. ಇದರ ಉನ್ನತ ಮಾದರಿಯು 5,499 ಯುಯಾನ್ (ಸುಮಾರು ₹67,800) ಬೆಲೆ ಹೊಂದೊದ್ದು, ಇದು Honor of Kings ವಿಶೇಷ ಆವೃತ್ತಿಯಾಗಿದೆ.

ಭಾರತಕ್ಕೆ ಯಾವಾಗ?
ಭಾರತದ ಮಾರುಕಟ್ಟೆಗೆ iQOO 15 ಸ್ಮಾರ್ಟ್‌ಫೋನ್ ಆಗಮನದ ಸುದ್ದಿಯನ್ನು iQOO ಇಂಡಿಯಾದ ಸಿಇಒ ನಿಪುಣ್ ಮಾರ್ಯಾ ಅವರು ಅಧಿಕೃತವಾಗಿ ದೃಢಪಡಿಸಿದ್ದಾರೆ. ನಿಪುಣ್ ಮಾರ್ಯಾ ಅವರ (@nipunmarya) X (ಹಿಂದೆ ಟ್ವಿಟರ್) ಪೋಸ್ಟ್‌ನಲ್ಲಿ iQOO 15 ಸ್ಮಾರ್ಟ್‌ಫೋನ್ ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂಬುದಾಗಿ ತಿಳಿಸಲಾಗಿದೆ. ಹಾಗೆಯೇ, ಭಾರತೀಯ ರೂಪಾಂತರವು ಕ್ವಾಲ್ಕಾಮ್‌ನ ಇತ್ತೀಚಿನ ಸ್ನಾಪ್‌ಡ್ರಾಗನ್ 8 Gen 5 ಚಿಪ್‌ಸೆಟ್‌ ಹೊಂದಲಿದೆ ಮತ್ತು ಆಂಡ್ರಾಯ್ಡ್ 16-ಆಧಾರಿತ OriginOS 6 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಚಾರದ ಚಿತ್ರವು ದೃಢಪಡಿಸಿದೆ. ಇಷ್ಟು ಮಾಹಿತಿಗಳು ಈಗ ಅಧಿಕೃತವಾಗಿ ಲಭ್ಯವಿವೆ! ಆದರೆ, ನಿಪುಣ್ ಮಾರ್ಯಾ ಅವರು ದೇಶದಲ್ಲಿ iQOO 15 ಸ್ಮಾರ್ಟ್‌ಫೋನ್ ಯಾವಾಗ ಬಿಡುಗಡೆಯಾಗುತ್ತದೆ ಎಂಬ ನಿಖರ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ.

ಒಟ್ಟಾರೆಯಾಗಿ, iQOO 15 ಒಂದು ಸಂಪೂರ್ಣ ಹೈ-ಪರ್ಫಾರ್ಮೆನ್ಸ್ ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮುವ ಲಕ್ಷಣವಿದೆ. ಶಕ್ತಿಶಾಲಿ ಚಿಪ್, ದೊಡ್ಡ ಬ್ಯಾಟರಿ ಮತ್ತು ಉತ್ತಮ ಕ್ಯಾಮೆರಾ ಪೀಚರ್ಸ್ ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಸ್ಪರ್ಧೆ ನೀಡುವಂತಿದೆ. ಭಾರತದಲ್ಲಿ ಇದರ ಬಿಡುಗಡೆಯ ನಿರೀಕ್ಷೆಯೂ ಈಗ ತೀವ್ರಗೊಂಡಿದೆ. ನೀವು ಕೂಡ ಭಾರತದಲ್ಲಿ iQOO 15 ಫೋನ್ ಬಿಡುಗಡೆ ದಿನಾಂಕವನ್ನು ಎದುರುನೋಡುತ್ತಿದ್ದೀರಾ?, ಬೆಲೆ ಎಷ್ಟಿರಬೇಕು ಎಂಬುದು ನಿಮ್ಮ ಆಶಯ? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
iQOO 15 sets a new benchmark with Qualcomm’s Snapdragon 8 Elite Gen 5 SoC and a huge 7,000mAh battery for all-day power. check here for more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+