Home
ಮೊಬೈಲ್

ಭಾರತದಲ್ಲಿ iQOO 15 ಭರ್ಜರಿ ಲಾಂಚ್: ಟಾಪ್ ಪರ್ಫಾರ್ಮೆನ್ಸ್, ಅತ್ಯುತ್ತಮ ಬೆಲೆ!

ಭಾರತದ ಮೊಬೈಲ್ ಮಾರುಕಟ್ಟೆಯು ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ iQOO 15 ಬಿಡುಗಡೆಯ ಕುರಿತು ಸಾಕಷ್ಟು ನಿರೀಕ್ಷೆಗಳನ್ನು ಹೊಂದಿತ್ತು. ಇಂದು (ನವೆಂಬರ್ 26) iQOO 15 ಫೋನಿನ ಭರ್ಜರಿ ಬಿಡುಗಡೆಯಿಂದಾಗಿ ಎಲ್ಲಾ ಕುತೂಹಲಗಳಿಗೆ ತೆರೆದಿದ್ದಿದೆ. iQOO ಅಭಿಮಾನಿಗಳ ನಿರೀಕ್ಷೆಯಂತೆಯೇ, ಭಾರತದಲ್ಲಿ Qualcomm‌ನ ಅತ್ಯಂತ ಶಕ್ತಿಶಾಲಿ 3nm Snapdragon 8 Elite Gen 5 ಚಿಪ್‌ಸೆಟ್‌ನಿಂದ ಚಾಲಿತವಾಗಿರುವ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗುವ(ಬ್ಯಾಂಕ್ ಕೊಡುಗೆಗಳು ಸೇರಿದಂತೆ) ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಆಗಿ iQOO 15 ಫೋನ್ ಕಾಲಿಟ್ಟಿದೆ.!

ಇಷ್ಟೇ ಅಲ್ಲದೆ, ಈ iQOO 15 ಫೋನ್ 6.85 ಇಂಚಿನ 2K AMOLED ಡಿಸ್‌ಪ್ಲೇ, 144Hz ರಿಫ್ರೆಶ್ ರೇಟ್, ಮತ್ತು 7,000mAh ದೊಡ್ಡ ಬ್ಯಾಟರಿಯಂತಹ ಅತ್ಯುತ್ತಮ ಫೀಚರ್ಸ್‌ಗಳನ್ನುಒಳಗೊಂಡಿದೆ. ಒಟ್ಟಾರೆಯಾಗಿ, iQOO 15 ಬಿಡುಗಡೆಯು ಮಾರುಕಟ್ಟೆಯ ನಿರೀಕ್ಷೆಯನ್ನು ತಲುಪಿರುವುದು ಮಾತ್ರವಲ್ಲದೆ, ದೇಶದಲ್ಲಿ ಪ್ರೀಮಿಯಂ ಸ್ಪರ್ಧೆಯನ್ನೂ ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ. ಹಾಗಾದರೆ, ಇಂದು ಭರ್ಜರಿ ಎಂಟ್ರಿ ನೀಡಿರುವ iQOO 15 ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ ಹೇಗಿದೆ?, ಈ ಫೋನಿನ ಸಂಪೂರ್ಣ ಫೀಚರ್ಸ್ ಯಾವುವು ಎಂಬುದನ್ನು ನೋಡೋಣ ಬನ್ನಿ.

iQOO 15: ಬೆಲೆ ಮತ್ತು ಲಭ್ಯತೆ
iQOO 15‌ ಫೋನಿನ ಭಾರತ ಬೆಲೆ 72,999 ರೂ. ರಿಂದ ಆರಂಭವಾಗಿದೆ. ಈ ಬೆಲೆಗೆ 12GB RAM + 256GB ಸ್ಟೋರೇಜ್ ಹೊಂದಿರುವ ಬೇಸ್ ವೇರಿಯಂಟ್‌ ಅನ್ನು ಪರಿಚಯಸಲಾಗಿದೆ. ಇನ್ನು 16GB RAM + 512GB ಸ್ಟೋರೇಜ್ ಹೊಂದಿರುವ ಟಾಪ್ ಮಾದರಿಯು 79,999 ರೂ.ಬೆಲೆಯಲ್ಲಿ ಬಿಡುಗಡೆಯಾಗಿದೆ. ಆದರೆ, iQOO ಈ ಎರಡೂ ಫೋನ್‌ಗಳ ಮೇಲೆ ಆರಂಭಿಕ ಆಫರ್ ಆಗಿ 7,000 ರೂ. ಇನ್‌ಸ್ಟಂಟ್ ಬ್ಯಾಂಕ್ ಡಿಸ್ಕೌಂಟ್ ಪ್ರಕಟಿಸಿದೆ. ಇದರಿಂದ ಫೋನ್‌ಗಳ ಪರಿಣಾಮಕಾರಿ ಬೆಲೆ ಕ್ರಮವಾಗಿ 64,999 ರೂ. ಮತ್ತು 71,999 ರೂ.ಗೆ ಇಳಿಕೆಯಾಗಲಿದೆ. ಇನ್ನು ಗ್ರಾಹಕರು ಡಿಸೆಂಬರ್ 1ರಿಂದ ಮಧ್ಯಾಹ್ನ 12 ಗಂಟೆಗೆ Amazon ನಲ್ಲಿ ಈ ಎರಡೂ ಮಾದರಿಯ ಫೋನ್‌ಗಳನ್ನು ಲೆಜೆಂಡ್ ಮತ್ತು ಆಲ್ಫಾ ಬ್ಲ್ಯಾಕ್ ಎಂಬ ಎರಡು ಬಣ್ಣ ಆಯ್ಕೆಗಳೊಂದಿಗೆ ಖರೀದಿಸಬಹುದು. ಪ್ರಿಯಾರಿಟಿ ಪಾಸ್ ಬಳಕೆದಾರರಿಗೆ ನವೆಂಬರ್ 27ರಿಂದಲೇ ಫೋನ್‌ಗಳು ಲಭ್ಯವಿರಲಿದೆ

ಭಾರತದಲ್ಲಿ iQOO 15 ಭರ್ಜರಿ ಲಾಂಚ್: ಟಾಪ್ ಪರ್ಫಾರ್ಮೆನ್ಸ್, ಅತ್ಯುತ್ತಮ ಬೆಲೆ!

iQOO 15: ವಿನ್ಯಾಸ, ಸಂಪೂರ್ಣ ಫೀಚರ್ಸ್ ಮತ್ತು ವೈಶಿಷ್ಟ್ಯಗಳು
iQOO 15 ಫೋನ್ ಬಲಿಷ್ಟ ಅಲ್ಯೂಮಿನಿಯಂ ಫ್ರೇಮ್ ಮತ್ತು RGB LED ಸ್ಟ್ರಿಪ್‌ನಿಂದ ಎದ್ದು ಕಾಣುವ ವಿಶಿಷ್ಟವಾದ ಹಿಂಭಾಗದ ಕ್ಯಾಮೆರಾ ಮಾಡ್ಯೂಲ್‌ನೊಂದಿಗೆ ಪ್ರೀಮಿಯಂ, ಫ್ಲಾಟ್ ವಿನ್ಯಾಸವನ್ನು ಹೊಂದಿದೆ. ಆಲ್ಫಾ ಬ್ಲಾಕ್ ಆವೃತ್ತಿಯು ಫೈಬರ್‌ಗ್ಲಾಸ್ ಹಿಂಭಾಗದ ಫಲಕವನ್ನು ಹೊಂದಿದೆ ಮತ್ತು ಲೆಜೆಂಡ್ ಬಿಳಿ ಆವೃತ್ತಿಯು ಗಾಜಿನ ಹಿಂಭಾಗವನ್ನು ಹೊಂದಿದೆ. ಇದರ ಹಿಂದಿನ iQOO 13 ಗಿಂತ ಹೋಲಿಸಿದರೆ ಫ್ಲಾಟ್ ಮತ್ತು ಸ್ವಲ್ಪ ಹೆಚ್ಚು ದುಂಡಾದ ಮೂಲೆಗಳನ್ನು ಹೊಂದಿದೆ. ಟ್ರಿಪಲ್-ರಿಯರ್-ಕ್ಯಾಮೆರಾ ಸೆಟಪ್ ಅನ್ನು ಹಿಂಭಾಗದಲ್ಲಿ ಚದರ-ಆಕಾರದ ಮಾಡ್ಯೂಲ್‌ನಲ್ಲಿ ಇರಿಸಲಾಗಿದೆ, ಅದು ಅತಿಯಾಗಿ ದೊಡ್ಡದಾಗಿಯೂ ಇಲ್ಲ. ಇದರಲ್ಲಿನ ಕ್ಯಾಮೆರಾ ಡೆಕೊವನ್ನು ಸುತ್ತುವರೆದಿರುವ ಮತ್ತು ಗೇಮಿಂಗ್‌ನಂತಹ ನಿರ್ದಿಷ್ಟ ಸನ್ನಿವೇಶಗಳಲ್ಲಿ ಬೆಳಗುವ ಗಮನಾರ್ಹ RGB LED ಲೈಟ್ ಒಂದು ಗಮನಾರ್ಹ ವಿನ್ಯಾಸ ಅಂಶವಾಗಿದೆ.

ಡಿಸ್‌ಪ್ಲೇ ವಿಭಾಗದಲ್ಲಿ, iQOO 15‌ ಫೋನ್ 144Hz ವರೆಗೆ ರಿಫ್ರೆಶ್ ರೇಟಗ, 2K ರೆಸಲ್ಯೂಶನ್, 508 ppi ಪಿಕ್ಸೆಲ್ ಸಾಂದ್ರತೆ ಮತ್ತು 6,000 ನಿಟ್‌ಗಳ ಗರಿಷ್ಠ ಹೊಳಪಿನೊಂದಿಗೆ 6.85-ಇಂಚಿನ ಸ್ಯಾಮ್‌ಸಂಗ್ M14 8T LTPO AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೆಯು 1Hz ಆಲ್‌ವೇಸ್ ಆನ್ ಡಿಸ್ಪ್ಲೇ ವೈಶಿಷ್ಟ್ಯವನ್ನು ಸಹ ಪಡೆದಿದೆ. ಈ ಫೋನಿನ ಪರದೆಯು ಆಂಟಿ-ರಿಫ್ಲೆಕ್ಟಿವ್ ಫಿಲ್ಮ್ ಮತ್ತು ವೆಟ್ ಫಿಂಗರ್ ಕಂಟ್ರೋಲ್‌ನೊಂದಿಗೆ ಬರುತ್ತದೆ, ಇದು ಬಳಕೆದಾರರಿಗೆ ಕರೆ ಮಾಡಲು, ಫೋಟೋಗಳನ್ನು ಕ್ಲಿಕ್ ಮಾಡಲು, ವೀಡಿಯೊಗಳನ್ನು ಶೂಟ್ ಮಾಡಲು ಮತ್ತು ಒದ್ದೆಯಾದ ಅಥವಾ ಬೆವರುವ ಕೈಗಳಿಂದ ಗೇಮ್‌ಗಳನ್ನು ಆಡಲು ಅನುವು ಮಾಡಿಕೊಡುತ್ತದೆ.

ಭಾರತದಲ್ಲಿ iQOO 15 ಭರ್ಜರಿ ಲಾಂಚ್: ಟಾಪ್ ಪರ್ಫಾರ್ಮೆನ್ಸ್, ಅತ್ಯುತ್ತಮ ಬೆಲೆ!

ಕಾರ್ಯಕ್ಷಮತೆಗಾಗಿ,QOO 15 ಅನ್ನು ಕ್ವಾಲ್ಕಾಮ್‌ನ ಆಕ್ಟಾ ಕೋರ್ 3nm ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5 ಚಿಪ್‌ಸೆಟ್, ಅಡ್ರಿನೊ GPU ನೊಂದಿಗೆ ಜೋಡಿಸಲಾಗಿದೆ, ಮತ್ತು ಇವು16GB ವರೆಗೆ LPDDR5x RAM ಮತ್ತು 512GB ವರೆಗೆ UFS4.1 ಆಂತರಿಕ ಸಂಗ್ರಹಣೆಯಿಂದ ಸಂಯೋಜಿಸಲ್ಪಟ್ಟಿದೆ. ಕಂಪೆನಿ ಹೇಳಿಕೊಂಡಿರುವಂತೆ, ಈ ಫೋನ್ AnTuTu ಬೆಂಚ್‌ಮಾರ್ಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಫೋನ್ 4.18 ಮಿಲಿಯನ್ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಕಂಪೆನಿಯ ಪ್ರಕಾರ, ಈ ಫೋನ್ 23 ಪ್ರತಿಶತ ಸುಧಾರಿತ GPU ಕಾರ್ಯಕ್ಷಮತೆ, 25 ಪ್ರತಿಶತ ಸುಧಾರಿತ ರೇ-ಟ್ರೇಸಿಂಗ್, ವರ್ಧಿತ 20 ಪ್ರತಿಶತ ಸಿಂಗಲ್ ಕೋರ್ ಕಾರ್ಯಕ್ಷಮತೆ ಮತ್ತು 17 ಪ್ರತಿಶತ ಸುಧಾರಿತ ಮಲ್ಟಿ ಕೋರ್ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಇಷ್ಟೇ ಅಲ್ಲದೆ, ಫೋನ್ 37 ಪ್ರತಿಶತದಷ್ಟು ಉತ್ತಮ NPU ಕಾರ್ಯಕ್ಷಮತೆಯನ್ನು ಸಹ ನೀಡುತ್ತದೆ. ಇದರ ಉಷ್ಣ ಶಕ್ತಿಯನ್ನು ಕಾಪಾಡಿಕೊಳ್ಳಲು, iQOO 15 ಫೋನ್ 8K VC ಕೂಲಿಂಗ್ ಸಿಸ್ಟಮ್ ಅನ್ನು ಹೊಂದಿದ್ದು, 8,000 ಚದರ ಮಿಮೀ ಶಾಖ ಪ್ರಸರಣ ಪ್ರದೇಶವನ್ನು ಹೊಂದಿದೆ. ಇದು ಹಿಂಭಾಗದ ಕ್ಯಾಮೆರಾ ಮಾಡ್ಯೂಲ್ ಅಡಿಯಲ್ಲಿ ಇರಿಸಲಾದ ಹೊಸ ಮಾನ್ಸ್ಟರ್ ಹ್ಯಾಲೊ ಆಂಬಿಯೆಂಟ್ ಲೈಟಿಂಗ್ ಅನ್ನು ಸಹ ಒಳಗೊಂಡಿದೆ. ಸಾಫ್‌ವೇರ್ ವಿಭಾಗದಲ್ಲಿ, iQOO 15 ಫೋನ್ Android 16 ಆಧಾರಿತ OriginOS 6 ಮೇಲೆ ರನ್ ಆಗುತ್ತದೆ. ಕಂಪನಿ 5 ವರ್ಷಗಳ Android ಅಪ್‌ಗ್ರೇಡ್ ಮತ್ತು 7 ವರ್ಷಗಳ ಭದ್ರತಾ ಅಪ್‌ಡೇಟ್‌ಗಳನ್ನು ಭರವಸೆ ನೀಡಿದೆ.

ಭಾರತದಲ್ಲಿ iQOO 15 ಭರ್ಜರಿ ಲಾಂಚ್: ಟಾಪ್ ಪರ್ಫಾರ್ಮೆನ್ಸ್, ಅತ್ಯುತ್ತಮ ಬೆಲೆ!

ಕ್ಯಾಮೆರಾ ವಿಭಾಗದಲ್ಲಿ, iQOO 15 ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದೆ, ಇದು 50-ಮೆಗಾಪಿಕ್ಸೆಲ್ ಸೋನಿ IMX921 ಪ್ರಾಥಮಿಕ ಶೂಟರ್‌ನಿಂದ 1/1.56-ಇಂಚಿನ ಸಂವೇದಕ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ನೊಂದಿಗೆ ಬಂದಿದೆ. ಜೊತೆಗೆ ಈ ಫೋನ್ 50-ಮೆಗಾಪಿಕ್ಸೆಲ್ ಸೋನಿ IMX882 1/1.95-ಇಂಚಿನ ಟೆಲಿಫೋಟೋ ಪೆರಿಸ್ಕೋಪ್ ಕ್ಯಾಮೆರಾವನ್ನು 3x ಆಪ್ಟಿಕಲ್ ಜೂಮ್, 3.7x "ಲಾಸ್‌ಲೆಸ್ ಜೂಮ್" ಮತ್ತು 10x ಜೂಮ್ ಸಾಮರ್ಥ್ಯಗಳನ್ನು ಹೊಂದಿದೆ, ಹಾಗೂ 1/2.76-ಇಂಚಿನ ಸಂವೇದಕದೊಂದಿಗೆ 50-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾದೊಂದಿಗೆ ಜೋಡಿಯಾಗಿದೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ದೊರೆಯುತ್ತದೆ, ಇದು ಕೂಡ 4K@60fps ವೀಡಿಯೋ ರೆಕಾರ್ಡಿಂಗ್‌ಗೆ ಬೆಂಬಲಿಸುತ್ತದೆ.

ಈ ಫೋನ್ AI ವಿಷುಯಲ್ ಮತ್ತು ರಿಫ್ಲೆಕ್ಷನ್ ಎರೇಸ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ, ಇದು ಸ್ಟ್ಯಾಂಡರ್ಡ್, ಪೋರ್ಟ್ರೇಟ್ ಮತ್ತು ಲ್ಯಾಂಡ್‌ಸ್ಕೇಪ್ ಕ್ಯಾಮೆರಾ ಮೋಡ್‌ಗಳಲ್ಲಿ ಲಭ್ಯವಿದೆ. ಬ್ಯಾಟರಿ ವಿಭಾಗದಲ್ಲಿ, iQOO 15 ಫೋನ್‌ನಲ್ಲಿ 7,000mAh ಸಿಲಿಕಾನ್-ಕಾರ್ಬನ್ ಬ್ಯಾಟರಿ ಇದೆ, ಇದು 100W ವೈರ್ಡ್ ಹಾಗೂ 40W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್‌ನ್ನು ಬೆಂಬಲಿಸುತ್ತದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 + IP69 ರೇಟಿಂಗ್ ಸುರಕ್ಷತೆ ಇದೆ. ಇನ್ನು ಆಲ್ಫಾ ಬ್ಲ್ಯಾಕ್ ಮಾದರಿ 216.2 ಗ್ರಾಂ ತೂಕವಿದ್ದು, ಲೆಜೆಂಡ್ ವೇರಿಯಂಟ್ 220 ಗ್ರಾಂ ತೂಕವನ್ನು ಹೊಂದಿದೆ. ಒಟ್ಟಾರೆಯಾಗಿ, iQOO 15 ಫೋನ್ ಪ್ರಿಮಿಯಂ ಪರ್ಫಾರ್ಮೆನ್ಸ್, ಬೃಹತ್ ಬ್ಯಾಟರಿ ಸಾಮರ್ಥ್ಯ ಮತ್ತು ಅಗ್ರಮಟ್ಟದ ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ ಭಾರತದ ಫ್ಲಾಗ್‌ಶಿಪ್ ಸೆಗ್ಮೆಂಟ್‌ಗೆ ಮತ್ತೊಂದು ಬಲಿಷ್ಠ ಸ್ಪರ್ಧಿಯಾಗಿ ಬಂದಿದೆ.

Best Mobiles in India

English summary
Today (November 26) has finally put an end to all the anticipation with the grand launch of the iQOO 15. Just as iQOO fans had hoped, the iQOO 15 has arrived as the most affordable flagship smartphone in India (including available bank offers), powered by Qualcomm’s latest and most powerful 3nm Snapdragon 8 Elite Gen 5 chipset.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+