Home
ಮೊಬೈಲ್

iQOO 15: ಫೋನ್ ಪ್ರಿಯರಿಗೆ ಸಿಹಿಸುದ್ದಿ!..ಬಿಡುಗಡೆಗೆ ಮುನ್ನವೇ ಸೆನ್ಸೇಷನ್!

ಐಕ್ಯೂ ಪ್ರಿಯರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ವಿವೋ ಕಂಪನಿಯ ಉಪಬ್ರಾಂಡ್ ಆಗಿರುವ ಐಕ್ಯೂ ತನ್ನ ಹೊಸ ಪ್ರಮುಖ ಫೋನ್‌ಗಳಾದ iQOO 15 ಅನ್ನು ಮುಂದಿನ ತಿಂಗಳು ಚೀನಾದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಫೋನ್‌ಗೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದಿನಿಂದಲೇ ಆನ್‌ಲೈನ್‌ನಲ್ಲಿ ಸುದ್ದಿಗಳು ಹರಿದಾಡುತ್ತಿದ್ದು, ಇದರ ಫೀಚರ್ಸ್ ಬಗ್ಗೆ ಹಲವಾರು ಊಹಾಪೋಹಗಳು ಹರಿದಾಡಿದ್ದವು. ಇದೀಗ ಫೋನಿನ ವಿನ್ಯಾಸ ಮತ್ತು ಬಣ್ಣಗಳು ಅಧಿಕೃತವಾಗಿ ಹೊರಬಿದ್ದಿವೆ.

ಐಕ್ಯೂ ಕಂಪನಿಯು ಅಧಿಕೃತವಾಗಿ ಈ ಫೋನ್ ಮಾರ್ಬಲ್-ರೀತಿಯ ಹಿಂಭಾಗದ ವಿನ್ಯಾಸವನ್ನು ಮತ್ತು ಎರಡು ಹೊಸ ಬಣ್ಣಗಳನ್ನು ಬಹಿರಂಗಪಡಿಸಿದ್ದು, ಇದು ಫೋನ್ ಪ್ರಿಯರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ಪ್ರಸ್ತುತ, ಚೀನಾದಲ್ಲಿ ಗ್ರಾಹಕರಿಗಾಗಿ iQOO 15 ಪ್ರೀ-ಬುಕ್ಕಿಂಗ್ ತೆರೆದಿವೆ. ಇದಲ್ಲದೆ, ಪ್ರಸಿದ್ಧ ಟಿಪ್‌ಸ್ಟರ್ ಸಂಜು ಚೌಧರಿ ಕೂಡ ಈ ಫೋನ್‌ನ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದ್ದು, ಈ ಫೋನ್ ತಂತ್ರಜ್ಞಾನದ ಹೊಸ ಕ್ರಾಂತಿಯನ್ನು ತರಲಿದೆ ಎಂದು ಹೇಳಿದ್ದಾರೆ.

iQOO 15: ಪ್ರಮುಖ ವೈಶಿಷ್ಟ್ಯಗಳು (ನಿರೀಕ್ಷಿತ)
iQOO 15 ಅನ್ನು ವೀಬೋ ಪೋಸ್ಟ್‌ನಲ್ಲಿ ಎರಡು ಚಿತ್ರಗಳಲ್ಲಿ ತೋರಿಸಲಾಗಿದೆ. ಈ ಚಿತ್ರಗಳು ಫೋನ್‌ನ ವಿನ್ಯಾಸವನ್ನು ಸ್ಪಷ್ಟವಾಗಿ ತೋರಿಸುತ್ತವೆ. ಫೋನ್‌ನ ಹಿಂಭಾಗದಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಎಲ್‌ಇಡಿ ಫ್ಲಾಶ್ ಅನ್ನು ಕಾಣಬಹುದು. ಈ ಕ್ಯಾಮೆರಾ ಮಾಡ್ಯೂಲ್ ಸ್ಕ್ವಿರ್ಕಲ್ (ಸ್ಕ್ವೇರ್ ಮತ್ತು ಸರ್ಕಲ್) ಆಕಾರದಲ್ಲಿದ್ದು, ಆಕರ್ಷಕವಾಗಿ ಕಾಣುತ್ತದೆ. ಮೂರು ಕ್ಯಾಮೆರಾಗಳಲ್ಲಿ ಒಂದು ಟೆಲಿಫೋಟೋ ಸೆನ್ಸರ್ ಆಗಿದ್ದು, ಇದು 100x ಡಿಜಿಟಲ್ ಜೂಮ್ ಸಾಮರ್ಥ್ಯವನ್ನು ಹೊಂದಿದೆ. ಇದು ಫೋಟೋಗ್ರಫಿ ಪ್ರಿಯರಿಗೆ ಒಂದು ಉತ್ತಮ ಆಯ್ಕೆಯಾಗಿದೆ.

ಈ ಫೋನ್‌ನ ಬಲಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ಕಂಟ್ರೋಲ್ ಬಟನ್‌ಗಳಿವೆ. ಫೋನ್‌ನ ಮೆಟಲ್ ಫ್ರೇಮ್ ಮತ್ತು ಮಾರ್ಬಲ್-ರೀತಿಯ ಹಿಂಭಾಗದ ಫಲಕವು iQOO 15 ಗೆ ಪ್ರೀಮಿಯಂ ನೋಟವನ್ನು ನೀಡಿದೆ. ಕಂಪನಿಯು ಈ ಫೋನ್ ಅನ್ನು "ಲಿಂಗ್ಯುನ್" ಸೇರಿದಂತೆ ಎರಡು ಹೊಸ ಬಣ್ಣಗಳಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಚಿತ್ರಗಳಲ್ಲಿ ಫೋನ್ ಅನ್ನು ಒಂದು ಕೆಂಪು ಛಾಯೆಯ ಹಿಂಭಾಗ ಮತ್ತು ಇನ್ನೊಂದು ಬೆಳ್ಳಿ ಬಣ್ಣದಲ್ಲಿ ತೋರಿಸಲಾಗಿದೆ, ಇದು ತುಂಬಾ ಆಕರ್ಷಕವಾಗಿದೆ.

iQOO 15: ಫೋನ್ ಪ್ರಿಯರಿಗೆ ಸಿಹಿಸುದ್ದಿ!..ಬಿಡುಗಡೆಗೆ ಮುನ್ನವೇ ಸೆನ್ಸೇಷನ್!

ಇನ್ನು ಜನಪ್ರಿಯ ಟಿಪ್‌ಸ್ಟರ್ ಸಂಜು ಚೌಧರಿ ಅವರು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ iQOO 15 ರ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ಹಂಚಿಕೊಂಡಿದ್ದಾರೆ. ಫೋನ್ 2K ರೆಸಲ್ಯೂಷನ್ ಮತ್ತು ಆಂಟಿ-ರಿಫ್ಲೆಕ್ಟಿವ್ ಲೇಪನದೊಂದಿಗೆ 6.8 ಇಂಚಿನ LTPO AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ಅವರು ಹೇಳಿದ್ದಾರೆ. ಈ iQOO 15 ಫೋನ್ 100W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ 7,000mAh ಬ್ಯಾಟರಿಯನ್ನು ಪ್ಯಾಕ್ ಮಾಡಬಹುದು. ಇದು ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ ಎಂದು ಹೇಳಲಾಗಿದೆ.

ಕ್ಯಾಮೆರಾ ವಿಭಾಗದಲ್ಲಿ, ಫೋನಿನ ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, 50-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 50-ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸಾರ್ ಇರಬಹುದು ಇದು ಅದ್ಭುತವಾದ ಫೋಟೋಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ. ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಮೂಲಕ ಫೋನ್ ಅನ್ನು ಅನ್‌ಲಾಕ್ ಮಾಡಬಹುದು. ಅಲ್ಲದೆ, ಫೋನ್‌ನಲ್ಲಿ RGB ಲೈಟ್ ಸ್ಟ್ರಿಪ್ ಇರಬಹುದು ಮತ್ತು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ಅಥವಾ IP69 ರೇಟಿಂಗ್ ಅನ್ನು ಹೊಂದಿರಬಹುದು.

ಗೇಮಿಂಗ್ ಪ್ರಿಯರಿಗೆ ವಿಶೇಷ ಆಕರ್ಷಣೆ!
ಗೇಮಿಂಗ್ ಪ್ರಿಯರಿಗೆ ಇದು ಮತ್ತೊಂದು ಸಿಹಿಸುದ್ದಿ ಏನೆಂದರೆ, ಈ ಫೋನ್ ಶೀಘ್ರದಲ್ಲಿ ಬಿಡುಗಡೆಯಾಗಲಿರುವ ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5 ಚಿಪ್‌ಸೆಟ್‌ನಿಂದ ಚಾಲಿತವಾಗಲಿದೆ ಎಂದು ವದಂತಿಗಳಿವೆ. ಇದರೊಂದಿಗೆ "ಗೇಮಿಂಗ್ ಚಿಪ್" ಕೂಡ ಇರಲಿದ್ದು, ಇದು ಗೇಮಿಂಗ್ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ. LPDDR5X RAM ಮತ್ತು UFS 4.1 ಆನ್‌ಬೋರ್ಡ್ ಸ್ಟೋರೇಜ್ ಕೂಡ ಇರುವುದರಿಂದ ಫೋನ್ ವೇಗವಾಗಿ ಕಾರ್ಯನಿರ್ವಹಿಸಲಿದೆ.

ಈ ಎಲ್ಲಾ ವೈಶಿಷ್ಟ್ಯಗಳನ್ನು ನೋಡಿದರೆ, iQOO 15 ಬಿಡುಗಡೆಗೆ ಮುನ್ನವೇ ಫೋನ್ ಪ್ರಿಯರಲ್ಲಿ ದೊಡ್ಡ ಸಂಚಲನವನ್ನು ಮೂಡಿಸಿದೆ. ಪ್ರಸ್ತುತ, ಚೀನಾದಲ್ಲಿ ಇದರ ಪ್ರೀ-ಬುಕ್ಕಿಂಗ್ ಆರಂಭವಾಗಿದ್ದು, ಅಕ್ಟೋಬರ್‌ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಈ ಫೋನ್ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸುವುದು ಖಚಿತ. ಆದರೆ, ಭಾರತದ ಮಾರುಕಟ್ಟೆಗೆ ಯಾವಾಗ ಆಗಮನಿಸಲಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ದೊರೆತಿಲ್ಲ ಎನ್ನುವುದೇ ಬೇಸರದ ಸಂಗತಿ. ಈ ಮಾಹಿತಿಗಾಗಿ ನಾವು ಕಾಯುತ್ತಿರುತ್ತೇವೆ. ನೀವು ಕಾಯುತ್ತಿರಿ.!

Best Mobiles in India

English summary
iQOO company has officially unveiled the iQOO 15 phone's back design, characterized by a marble-like appearance, along with two new color options, which has attracted interest from technology enthusiasts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+