Home
ಮೊಬೈಲ್

ಭಾರತೀಯ ಮಾರುಕಟ್ಟೆಗೆ iQOO 15: ಜನಪ್ರಿಯ ಟಿಪ್‌ಸ್ಟರ್ ನೀಡಿದ ಲೇಟೆಸ್ಟ್ ಮಾಹಿತಿ!

ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಬಿಡುಗಡೆಗೂ ಮುನ್ನವೇ ದೊಡ್ಡ ಸಂಚಲನ ಸೃಷ್ಟಿಸಿರುವ iQOO 15 ಸ್ಮಾರ್ಟ್‌ಫೋನ್ ಬಗ್ಗೆ ಒಂದು ಪ್ರಮುಖ ಮಾಹಿತಿ ಹೊರಬಿದ್ದಿದೆ. ಮೊಬೈಲ್ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿರುವ ಈ ಹೊಸ iQOO 15 ಸ್ಮಾರ್ಟ್‌ಫೋನ್ ಇದೇ ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆಯಾಗುತ್ತಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಇದೀಗ ಈ ಫೋನ್ ಭಾರತಕ್ಕೆ ಯಾವಾಗ ಬರಲಿದೆ ಎಂಬ ಕುತೂಹಲಕ್ಕೆ ಉತ್ತರ ಸಿಕ್ಕಿದ್ದು, ಜನಪ್ರಿಯ ಟಿಪ್‌ಸ್ಟರ್ ಒಬ್ಬರು ನಿಖರವಾದ ಸುಳಿವು ನೀಡಿದ್ದಾರೆ.!

ಭಾರತದಲ್ಲಿ iQOO 15 ಬಿಡುಗಡೆ ಯಾವಾಗ?
iQOO ಕಂಪನಿಯು ಮೊದಲು ಅಕ್ಟೋಬರ್‌ನಲ್ಲಿ ಚೀನಾದಲ್ಲಿ iQOO 15 ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಆದರೆ, ಭಾರತೀಯ ಗ್ರಾಹಕರಿಗೆ ಸಂತಸದ ಸುದ್ದಿ ಏನೆಂದರೆ, ಜನಪ್ರಿಯ ಟಿಪ್‌ಸ್ಟರ್ ಡೆಬಯಾನ್ ರಾಯ್ (@Gadgetsdata) ಅವರ ಪ್ರಕಾರ,ಈ iQOO 15 ಸ್ಮಾರ್ಟ್‌ಫೋನ್ ಬಹುಶಃ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಭಾರತೀಯ ಮಾರುಕಟ್ಟೆಗೆ ಕಾಲಿಡುವ ಸಾಧ್ಯತೆ ಇದೆ. ಜೊತೆಗೆ ಡೆಬಯಾನ್ ರಾಯ್ ಅವರು ಕೆಲವು ಲೈವ್ ಚಿತ್ರಗಳನ್ನು ಹಂಚಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ವಿನ್ಯಾಸ ಮತ್ತು ನೋಟ: ಹೇಗಿರಲಿದೆ iQOO 15?
ಟಿಪ್‌ಸ್ಟರ್ ಡೆಬಯಾನ್ ರಾಯ್ ಅವರು ಹಂಚಿಕೊಂಡಿರುವ ಲೈವ್ ಚಿತ್ರಗಳ ಪ್ರಕಾರ, iQOO 15 ತನ್ನ ಪ್ರೀಮಿಯಂ ವಿನ್ಯಾಸದಿಂದ ಗಮನ ಸೆಳೆಯುತ್ತಿದೆ.
ಹಿಂಭಾಗದ ವಿನ್ಯಾಸ: ಫೋನ್‌ನ ಹಿಂಭಾಗದಲ್ಲಿ "ಸ್ಕ್ವಿರ್ಕಲ್" (ಚೌಕ ಮತ್ತು ವೃತ್ತದ ಮಿಶ್ರಣ) ಆಕಾರದ ಕ್ಯಾಮೆರಾ ಮಾಡ್ಯೂಲ್ ಇರಲಿದೆ. ಕಂಪನಿಯು ಈಗಾಗಲೇ ಫೋನ್ ಮಾರ್ಬಲ್-ರೀತಿಯ ಹಿಂಭಾಗದ ವಿನ್ಯಾಸ ಮತ್ತು 'ಲಿಂಗ್ಯುನ್' ಸೇರಿದಂತೆ ಎರಡು ಹೊಸ ಆಕರ್ಷಕ ಬಣ್ಣಗಳಲ್ಲಿ ಬರಲಿದೆ ಎಂದು ದೃಢಪಡಿಸಿದೆ. ಜೊತೆಗೆ ಇದು ಅತಿ ತೆಳುವಾದ ಅಂಚುಗಳು (ಬೆಜೆಲ್‌ಗಳು) ಮತ್ತು ಮುಂಭಾಗದ ಕ್ಯಾಮೆರಾಕ್ಕಾಗಿ ಮಧ್ಯದಲ್ಲಿ ಹೋಲ್-ಪಂಚ್ ಸ್ಲಾಟ್ ಹೊಂದಿರುವ ಫ್ಲಾಟ್ ಡಿಸ್‌ಪ್ಲೇಯೊಂದಿಗೆ ಕಾಣಿಸಿಕೊಳ್ಳಲಿದೆ.

ಭಾರತೀಯ ಮಾರುಕಟ್ಟೆಗೆ iQOO 15: ಜನಪ್ರಿಯ ಟಿಪ್‌ಸ್ಟರ್ ನೀಡಿದ ಲೇಟೆಸ್ಟ್ ಮಾಹಿತಿ!
Photo credit: X/@GadgetsData

ಸದ್ಯ ಚೀನಾದಲ್ಲಿ ಈ ಫೋನ್‌ಗೆ ಪ್ರೀ-ಬುಕ್ಕಿಂಗ್ ಆರಂಭವಾಗಿದ್ದು, ಮೊಬೈಲ್ ಪ್ರಿಯರಲ್ಲಿ iQOO 15 ಭಾರೀ ನಿರೀಕ್ಷೆ ಹುಟ್ಟಿಸಿದೆ. ಈ ಗೇಮಿಂಗ್ ಫೋನ್‌ಗೆ ಸಂಬಂಧಿಸಿದಂತೆ ಈಗಾಗಲೇ ಪ್ರಸಿದ್ಧ ಟಿಪ್‌ಸ್ಟರ್ ಸಂಜು ಚೌಧರಿ ಅವರು ಹಲವು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದ್ದಾರೆ. ಅವುಗಳನ್ನೂ ಸಹ ಒಮ್ಮೆ ನೋಡೋಣ ಬನ್ನಿ.

iQOO 15: ನಿರೀಕ್ಷಿತ ಪ್ರಮುಖ ವೈಶಿಷ್ಟ್ಯಗಳು
ಪ್ರೊಸೆಸರ್: ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5 ಚಿಪ್‌ಸೆಟ್‌ನೊಂದಿಗೆ "ಗೇಮಿಂಗ್ ಚಿಪ್" ಸಹ ಇರಲಿದೆ.
ಡಿಸ್‌ಪ್ಲೇ: 6.8 ಇಂಚಿನ LTPO AMOLED ಡಿಸ್ಪ್ಲೇ (2K ರೆಸಲ್ಯೂಷನ್).
ಬ್ಯಾಟರಿ: 7,000mAh ಬ್ಯಾಟರಿ ಮತ್ತು 100W ವೈರ್ಡ್ ಚಾರ್ಜಿಂಗ್ ಬೆಂಬಲ.
ಕ್ಯಾಮೆರಾ: ಹಿಂಭಾಗದಲ್ಲಿ ಟ್ರಿಪಲ್ 50-ಮೆಗಾಪಿಕ್ಸೆಲ್ ಸೆಟಪ್ (ಪ್ರೈಮರಿ, ಅಲ್ಟ್ರಾವೈಡ್ ಮತ್ತು ಟೆಲಿಫೋಟೋ ಲೆನ್ಸ್) ಇರಲಿದ್ದು, ಟೆಲಿಫೋಟೋ ಸೆನ್ಸರ್ 100x ಡಿಜಿಟಲ್ ಜೂಮ್ ಸಾಮರ್ಥ್ಯ ಹೊಂದಿರುತ್ತದೆ.
ಇತರೆ: ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್, IP68/IP69 ರೇಟಿಂಗ್ ಮತ್ತು RGB ಲೈಟ್ ಸ್ಟ್ರಿಪ್. |

iQOO 15 LPDDR5X RAM ಮತ್ತು UFS 4.1 ಸ್ಟೋರೇಜ್ ಜೊತೆಗೆ ಬರಲಿದ್ದು, ಗೇಮಿಂಗ್ ಪ್ರಿಯರಿಗಾಗಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುವ ನಿರೀಕ್ಷೆಯಿದೆ. ಭಾರತದ ಬಿಡುಗಡೆಯ ನಿಖರ ದಿನಾಂಕಕ್ಕಾಗಿ ನಾವು ಇನ್ನಷ್ಟು ದಿನ ಕಾಯಬೇಕಾಗಬಹುದಾದರೂ, ಇದು ಭಾರತೀಯ ಮಾರುಕಟ್ಟೆಯಲ್ಲಿಯೂ ಸಹ ಹೊಸ ಅಲೆಯನ್ನೇ ಸೃಷ್ಟಿಸುವುದು ಖಚಿತ. ನೀವು ಕೂಡ ಈ ಹೊಸ iQOO ಫೋನ್‌ಗಾಗಿ ಕಾಯುತ್ತಿದ್ದೀರಾ?. ಈ ಕೆಳಗೆ ಕಾಮೆಂಟ್ ಮಾಡಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ.

Best Mobiles in India

English summary
Ahead of its October China debut, the much-hyped iQOO 15's India release window has been leaked by tipster Debayan Roy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+