iQOO 15 ಭಾರತದ ಬೆಲೆ ಲೀಕ್: ಬಿಡುಗಡೆಗೂ ಮೊದಲೇ ಪ್ರಮುಖ ಮಾಹಿತಿ!
ಭಾರತದ ಮೊಬೈಲ್ ಮಾರುಕಟ್ಟೆಗೆ ಶೀಘ್ರದಲ್ಲೇ ಬಿಡುಗಡೆಯಾಗುತ್ತಿರುವ ಬಹುನಿರೀಕ್ಷಿತ Snapdragon 8 Elite Gen 5 ಫ್ಲಾಗ್‌ಶಿಪ್ ಫೋನ್ iQOO 15 ಪ್ರೀ-ಬುಕ್ಕಿಂಗ್ ನೆನ್ನೆಯಷ್ಟೇ ಆರಂಭವಾಗಿದೆ. ಇದೇ ನವೆಂಬರ್ 26 ರಂದು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ iQOO 15 ಫೋನ್ ಬಿಡುಗಡೆಯಾಗುತ್ತಿದೆ. ಈ ಫೋನ್ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗಿ, ಇದರ ಭಾರತದ ಬೆಲೆ ಮತ್ತು ಸ್ಟೋರೇಜ್ ಆಯ್ಕೆಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ.!
iQOO 15: ಆನ್‌ಲೈನಿನಲ್ಲಿ ಬೆಲೆ ಸೋರಿಕೆ!
ಟೆಕ್ ಟಿಪ್ಸ್ಟರ್ ಅಭಿಷೇಕ್ ಯಾದವ್ ಅವರ ಪ್ರಕಾರ, iQOO 15 ಗೆ ಸಂಬಂಧಿಸಿದ ಲಿಸ್ಟಿಂಗ್ Amazon India ವೆಬ್‌ಸೈಟ್‌ನಲ್ಲಿ ಕಂಡುಬಂದಿದ್ದು, ಇದು ಎರಡು ಸ್ಟೋರೇಜ್ ಮಾದರಿಗಳಲ್ಲಿ ಲಭ್ಯವಿರುವಂತೆ ತೋರುತ್ತದೆ. ಇವುಗಳಲ್ಲಿ 12GB RAM + 256GB ಸ್ಟೋರೇಜ್ ಫೋನ್ ಬೆಲೆ ₹72,999 ಆಗಿದ್ದರೆ, 16GB RAM + 512GB ಸ್ಟೋರೇಜ್ ಮಾದರಿಯ ಫೋನ್ ಬೆಲೆ ₹79,999 ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಅನ್ನು Alpha ಮತ್ತು Legend ಎಂಬ ಎರಡು ಬಣ್ಣಗಳಲ್ಲಿ ನೀಡಲಾಗುತ್ತದೆ ಎಂದು ಲಿಸ್ಟಿಂಗ್ ಸೂಚಿಸುತ್ತದೆ.
iQOO 15: ಬೆಲೆ ಇನಷ್ಟು ಕಡಿಮೆ ಇರುವ ಸಾಧ್ಯತೆ ಇದೆಯೇ?
ಲೀಕ್ ಆದ ಬೆಲೆಗಳನ್ನು ಗಮನಿಸಿದರೆ, iQOO 15 ನೇರವಾಗಿ OnePlus 15 ಜೊತೆ ಸ್ಪರ್ಧೆಯಲ್ಲಿರುವುದು ಸ್ಪಷ್ಟ. OnePlus 15 ಕೂಡ ಇದೇ ಬೆಲೆಯ ಶ್ರೇಣಿಯಲ್ಲಿ ಲಭ್ಯವಿರುವ ಕಾರಣ, ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಕಠಿಣ ಪೈಪೋಟಿ ನಿರೀಕ್ಷಿಸಲಾಗಿದೆ. ಆದರೆ, iQOO ಇಂಡಿಯಾ ಸಿಇಒ ನಿಪುನ್ ಮಾರ್ಯಾ ಅವರು Gadgets 360 ಜೊತೆ ಮಾತನಾಡುವ ವೇಳೆ, iQOO 15 ಲಾಂಚ್ ಆಫರ್‌ಗಳೊಂದಿಗೆ ₹65,000 - ₹70,000 ರೇಂಜ್‌ನಲ್ಲಿ ಲಭ್ಯವಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಹಾಗಾಗಿ, ಕೊಡುಗೆಯ ಬೆಲೆಗಳನ್ನು ನಿರೀಕ್ಷಿಸಬಹುದಾಗಿದೆ.

iQOO 15 ಪ್ರೀ-ಬುಕ್ಕಿಂಗ್ ಆರಂಭವಾಗಿದೆ.
ದೇಶದಲ್ಲಿ ನೆನ್ನೆ (20, ಗುರುವಾರ) ಮಧ್ಯಾಹ್ನ 12 ಗಂಟೆಯಿಂದ Amazon ಮತ್ತು iQOO India e-storeಗಳಲ್ಲಿiQOO 15 ಪ್ರೀ-ಬುಕ್ಕಿಂಗ್ ಆರಂಬವಾಗಿದೆ. ಪ್ರೀ-ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಆಕರ್ಷಕ ಆಫರ್‌ಗಳು ಹಾಗೂ ವಿಶೇಷ ಲಾಭಗಳನ್ನು ಕಂಪನಿಯು ಘೋಷಿಸಿದೆ. ಹಾಗಾದರೆ, ಮುಂಬರುವ iQOO 15 ಪ್ರೀ-ಬುಕ್ಕಿಂಗ್ ಕೊಡುಗೆಗಳು ಯಾವುವು?, ಬೆಲೆ ಎಷ್ಟಿರಬಹುದು ಹಾಗೂ ಫೀಚರ್ಸ್ ಹೇಗಿವೆ ಎಂಬ ಎಲ್ಲಾ ವಿವರಗಳನ್ನು ಮುಂದೆ ಓದಿ ತಿಳಿಯೋಣ ಬನ್ನಿ.
iQOO 15 : ಪ್ರೀ-ಬುಕಿಂಗ್‌ಗಾಗಿ ವಿಶೇಷ 'Priority Pass'
ಇಂದಿನಿಂದ iQOO 15 ಪ್ರೀ-ಬುಕ್ ಮಾಡಲಿರುವ ಗ್ರಾಹಕರಿಗೆ ಕಂಪೆನಿಯು Priority Pass ನೀಡುತ್ತಿದೆ. ಈ Priority Pass ಪಡೆಯುವ ಗ್ರಾಹಕರು ಒಂದು ಜೋಡಿ iQOO TWS 1e ಇಯರ್‌ಬಡ್‌ಗಳು ಮತ್ತು ಹೆಚ್ಚುವರಿ 12 ತಿಂಗಳ ವಿಸ್ತೃತ ಖಾತರಿಯ ಕೊಡುಗೆಯನ್ನು ಪಡೆಯಬಹುದು.
iQOO 15 : ಪ್ರಮುಖ ವೈಶಿಷ್ಟ್ಯಗಳು.
ನಾವು ಈಗಾಗಲೇ ತಿಳಿದಿರುವಂತೆ, iQOO 15 ಫೋನ್ ಅತ್ಯಂತ ಫ್ಲಾಗ್‌ಶಿಪ್ ಫೀಚರ್ಸ್‌ಗಳನ್ನು ಹೊತ್ತು ಬರುತ್ತಿದೆ. ಇವುಗಳಲ್ಲಿ, Samsung ಅಭಿವೃದ್ಧಿಪಡಿಸಿದ 2K M14 LEAD OLED ಡಿಸ್‌ಪ್ಲೇ ಹೆಚ್ಚು ಗಮನಸೆಳೆದಿದೆ. ಈ ಡಿಸ್‌ಪ್ಲೇಯು 2,600 ನಿಟ್‌ಗಳವರೆಗೆ ಗರಿಷ್ಠ ಹೊಳಪು, ಡಾಲ್ಬಿ ವಿಷನ್ ಬೆಂಬಲ ಮತ್ತು ಟ್ರಿಪಲ್ ಆಂಬಿಯೆಂಟ್ ಲೈಟ್ ಸೆನ್ಸರ್‌ಗಳನ್ನು ಹೊಂದಿದೆ ಎಂದು ದೃಢಪಡಿಸಲಾಗಿದೆ. ಗೇಮಿಂಗ್ ಮತ್ತು ಸಾಮಾನ್ಯ ಬಳಕೆಯ ಸಮಯದಲ್ಲಿ ವರ್ಧಿತ ಹ್ಯಾಪ್ಟಿಕ್ ಪ್ರತಿಕ್ರಿಯೆಗಾಗಿ ಈ ಫೋನ್ ಡ್ಯುಯಲ್-ಆಕ್ಸಿಸ್ ವೈಬ್ರೇಶನ್ ಮೋಟಾರ್ ಅನ್ನು ಸಹ ಒಳಗೊಂಡಿದೆ.
ಕಾರ್ಯಕ್ಷಮತೆಗಾಗಿ, ಈ iQOO 15 ಫೋನಿನಲ್ಲಿ ಇತ್ತೀಚಿನ Snapdragon 8 Elite Gen 5 ಪ್ರೊಸೆಸರ್ ಬಳಸಲಾಗಿದೆ. ಈ ಚಿಪ್‌ಸೆಟ್ ,LPDDR5X Ultra RAM, UFS 4.1 ಆನ್‌ಬೋರ್ಡ್ ಸ್ಟೋರೇಜ್, iQOO ನ ಸೂಪರ್‌ಕಂಪ್ಯೂಟಿಂಗ್ ಚಿಪ್ Q3 ಮತ್ತು ಥರ್ಮಲ್ ಮ್ಯಾನೇಜ್‌ಮೆಂಟ್‌ಗಾಗಿ 8,000 ಚದರ ಎಂಎಂ ಸಿಂಗಲ್-ಲೇಯರ್ ವೇಪರ್ ಚೇಂಬರ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಈ ಫೋನ್ ಭಾರತದಲ್ಲಿ ಮೊದಲ ಬಾರಿಗೆ Android 16 ಆಧಾರಿತ OriginOS 6 ನೊಂದಿಗೆ ಬಿಡುಗಡೆಯಾಗುತ್ತಿದೆ. ಕಂಪನಿ 5 ವರ್ಷಗಳ OS ಅಪ್ಡೇಟ್ ಮತ್ತು 7 ವರ್ಷಗಳ ಸೆಕ್ಯುರಿಟಿ ಪ್ಯಾಚ್‌ಗಳು ನೀಡುವುದಾಗಿ ತಿಳಿಸಿದೆ.
ಕ್ಯಾಮೆರಾ ವಿಭಾಗದಲ್ಲಿ, ಈ ಪೋನ್ 50-ಮೆಗಾಪಿಕ್ಸೆಲ್ ಸೆನ್ಸರ್‌ಗಳ ವ್ಯವಸ್ಥೆಯನ್ನು ಹೊಂದಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ ಸೋನಿ IMX921 ಮುಖ್ಯ ಸಂವೇದಕ, 3x ಜೂಮ್ ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ IMX882 ಸಂವೇದಕ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಮತ್ತು 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಇವೆ. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಬ್ಯಾಟರಿ ವಿಭಾಗದಲ್ಲಿ, 100W ವೈರ್ಡ್ ಚಾರ್ಜಿಂಗ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವಿರುವ 7,000mAh ದೊಡ್ಡ ಬ್ಯಾಟರಿ ಇದೆ. ಜೊತೆಗೆ ಕಂಪನಿ ಹೊಸ Game Live Streaming Assistant ಪರಿಚಯಿಸಿದೆ.


Click it and Unblock the Notifications








