Home
ಮೊಬೈಲ್

ಭಾರತದಲ್ಲಿ iQOO 15 ಸ್ಮಾರ್ಟ್‌ಫೋನ್ ಬಿಡುಗಡೆ ಸಮಯ ಈಗ ಅಧಿಕೃತ!

ಇದೇ ಅಕ್ಟೋಬರ್ 20 ರಂದು ಚೀನಾದಲ್ಲಿ ಬಹುನಿರೀಕ್ಷಿತ iQOO 15 ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿರುವ ಸುದ್ದಿಯನ್ನು ನೀವು ಈಗಾಗಲೇ ತಿಳಿದಿರಬಹುದು. ಹಾಗೆಯೇ ಈ ಸ್ಮಾರ್ಟ್‌ಫೋನ್ ಶೀಘ್ರವೇ ಭಾರತದ ಮಾರುಕಟ್ಟೆಗೆ ಆಗಮಿಸಲಿದೆ ಎಂಬ ಹಲವು ವದಂತಿಯ ಸುದ್ದಿಗಳನ್ನು ಸಹ ಕೇಳಿರಬಹುದು. ಆದರೆ, ಈ ಸುದ್ದಿ ಇನ್ನು ವದಂತಿಯಾಗಿ ಉಳಿದಿಲ್ಲ.! ಏಕೆಂದರೆ, ಭಾರತದ ಮಾರುಕಟ್ಟೆಯಲ್ಲಿ iQOO 15 ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿರುವ ಸುದ್ದಿ ಅಧಿಕೃತವಾಗಿ ಖಚಿತವಾಗಿದೆ. ಈ ಸಿಹಿಸುದ್ದಿಯೂ ಸೇರಿದಂತೆ, ಇಲ್ಲಿಯವರೆಗೂ ನಾವು ತಿಳಿದಿರುವ ಎಲ್ಲಾ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.

ಭಾರತದ ಮಾರುಕಟ್ಟೆಗೆ iQOO 15 ಸ್ಮಾರ್ಟ್‌ಫೋನ್ ಆಗಮನದ ಸುದ್ದಿಯನ್ನು iQOO ಇಂಡಿಯಾದ ಸಿಇಒ ನಿಪುಣ್ ಮಾರ್ಯಾ ಅವರು ಅಧಿಕೃತವಾಗಿ ದೃಢಪಡಿಸಿದ್ದಾರೆ. ನಿಪುಣ್ ಮಾರ್ಯಾ ಅವರ (@nipunmarya) X (ಹಿಂದೆ ಟ್ವಿಟರ್) ಪೋಸ್ಟ್‌ನಲ್ಲಿ iQOO 15 ಸ್ಮಾರ್ಟ್‌ಫೋನ್ ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂಬುದಾಗಿ ತಿಳಿಸಲಾಗಿದೆ. ಹಾಗೆಯೇ, ಭಾರತೀಯ ರೂಪಾಂತರವು ಕ್ವಾಲ್ಕಾಮ್‌ನ ಇತ್ತೀಚಿನ ಸ್ನಾಪ್‌ಡ್ರಾಗನ್ 8 Gen 5 ಚಿಪ್‌ಸೆಟ್‌ ಹೊಂದಲಿದೆ ಮತ್ತು ಆಂಡ್ರಾಯ್ಡ್ 16-ಆಧಾರಿತ OriginOS 6 ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಚಾರದ ಚಿತ್ರವು ದೃಢಪಡಿಸಿದೆ.

ಇಷ್ಟು ಮಾಹಿತಿಗಳು ಈಗ ಅಧಿಕೃತವಾಗಿ ಲಭ್ಯವಿವೆ! ಆದರೆ, ನಿಪುಣ್ ಮಾರ್ಯಾ ಅವರು ದೇಶದಲ್ಲಿ iQOO 15 ಸ್ಮಾರ್ಟ್‌ಫೋನ್ ಯಾವಾಗ ಬಿಡುಗಡೆಯಾಗುತ್ತದೆ ಎಂಬ ನಿಖರ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಅಕ್ಟೋಬರ್ 20 ರಂದು ಚೀನಾದಲ್ಲಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ, ಆದ್ದರಿಂದ ಭಾರತದಲ್ಲಿ ನವೆಂಬರ್ ಮೊದಲ ವಾರದಲ್ಲಿ iQOO 15 ಬರುವುದಾಗಿ ನಾವು ನಿರೀಕ್ಷಿಸುತ್ತೇವೆ. ಈ ಸ್ಮಾರ್ಟ್‌ಫೋನ್ ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂಬುದನ್ನು ಚೀನೀ ಆವೃತ್ತಿಯ iQOO 15 ಫೀಚರ್ಸ್ ನೋಡಿ ತಿಳಿಯಬಹುದು. ಅಲ್ಲಿನ ಮಾರುಕಟ್ಟೆಯಲ್ಲಿ ಫೋನಿನ ಬಹುತೇಕ ವೈಶಿಷ್ಟ್ಯಗಳು ಬಹಿರಂಗವಾಗಿವೆ.

iQOO 15 ಸ್ಮಾರ್ಟ್‌ಫೋನ್: ಬಹುತೇಕ ವೈಶಿಷ್ಟ್ಯಗಳು ಬಹಿರಂಗ!
ಮುಂಬರುವ iQOO 15 ಚೀನೀ ರೂಪಾಂತರವು ನವೀಕರಿಸಿದ Q3 ಗೇಮಿಂಗ್ ಚಿಪ್‌ನೊಂದಿಗೆ ಬರುತ್ತದೆ, ಇದು 2K ನಲ್ಲಿ 144fps ಗೇಮ್‌ಪ್ಲೇ ಅನ್ನು ಬೆಂಬಲಿಸುತ್ತದೆ. ಈ ಫೋನ್ 8K ವೇಪರ್ ಚೇಂಬರ್ (VC) ಡೋಮ್ ಕೂಲಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಈ ಕೂಲಿಂಗ್ ಯೂನಿಟ್‌ನ ಹೊಸ ವಿನ್ಯಾಸವು ಹೈ-ಕಂಡಕ್ಟಿವಿಟಿ ಗ್ರ್ಯಾಫೈಟ್‌ನ ಎರಡು ಪದರಗಳನ್ನು ಬಳಸುತ್ತದೆ, ಇದು ಹಿಂದಿನ ಆವೃತ್ತಿಯ ಹೋಲಿಸಿದರೆ 47 ಪ್ರತಿಶತ ಉತ್ತಮ ಕೂಲಿಂಗ್ ಅನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ. iQOO ನ ಉತ್ಪನ್ನ ನಿರ್ವಾಹಕರ ಪ್ರಕಾರ, iQOO 15 ರ VC ಹೀಟ್ ಸಿಂಕ್ ಐಫೋನ್ 17 ಪ್ರೊ ಮ್ಯಾಕ್ಸ್ ಅನ್ನು ಮೀರಿಸುತ್ತದೆ. ಈ ಎಲ್ಲಾ ಅಂಶಗಳು ಗೇಮಿಂಗ್ ಪ್ರಿಯರನ್ನು ಸಾಕಷ್ಟು ಆಕರ್ಷಿಸಿದೆ.

ಭಾರತದಲ್ಲಿ iQOO 15 ಸ್ಮಾರ್ಟ್‌ಫೋನ್ ಬಿಡುಗಡೆ ಸಮಯ ಈಗ ಅಧಿಕೃತ!

ಕಾರ್ಯಕ್ಷಮತೆಗಾಗಿ, ಚೀನಾದ ಮಾದರಿಯ iQOO 15 ಫೋನ್ ಕೂಡ Qualcomm ನ ಇತ್ತೀಚಿನ Snapdragon 8 Gen 5 ಚಿಪ್‌ಸೆಟ್‌ನಿಂದ ಶಕ್ತಿಯನ್ನು ಪಡೆಯಲಿದೆ. ಡಿಸ್‌ಪ್ಲೇ ವಿಭಾಗದಲ್ಲಿ ಈ ಫೋನ್ 6.85-ಇಂಚಿನ 2K 8T LTPO Samsung "ಎವರೆಸ್ಟ್" ಪ್ಯಾನೆಲ್‌ನೊಂದಿಗೆ ಬರಲಿದ್ದು, ಇದು 144Hz ರಿಫ್ರೆಶ್ ರೇಟ್ ಮತ್ತು 6,000 ನಿಟ್ಸ್ ವರೆಗಿನ ಗರಿಷ್ಠ ಲೋಕಲ್ ಬ್ರೈಟ್‌ನೆಸ್ ಹೊಂದಿರಲಿದೆ. ಬ್ಯಾಟರಿ ವಿಭಾಗದಲ್ಲಿ, ಈ ಸಾಧನವು ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು 7,000mAh ಗಿಂತ ಹೆಚ್ಚಿನ ಬ್ಯಾಟರಿಯನ್ನು ಹೊಂದಿರುಲಿದೆ. ಇದು ಧೂಳು ಮತ್ತು ನೀರಿನ ರಕ್ಷಣೆಗಾಗಿ IP69 ರೇಟಿಂಗ್‌ ಮತ್ತು ಬಯೋಮೆಟ್ರಿಕ್ ಭದ್ರತೆಗಾಗಿ 3D ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಒಳಗೊಂಡಿರುತ್ತದೆ.

iQOO 15 ಫೋನಿನ ಭಾರತೀಯ ಆವೃತ್ತಿಯು ಚೀನೀ ಕೌಂಟರ್‌ಪಾರ್ಟ್‌ಗೆ ಹೋಲುತ್ತದೆ ಎಂದು ನಿರೀಕ್ಷಿಸಲಾಗಿದೆ, ಆದರೆ ಸಂಗ್ರಹಣಾ ಆಯ್ಕೆಗಳು ಮತ್ತು ಬ್ಯಾಟರಿ ಗಾತ್ರದಂತಹ ಒಂದೆರಡು ವ್ಯತ್ಯಾಸಗಳಿರಬಹುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಒಟ್ಟಾರೆಯಾಗಿ, ಭಾರತದಲ್ಲಿಯೂ iQOO 15 ಫೋನ್ ಸಂಚಲನ ಸೃಷ್ಟಿಸುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ, ಸ್ಯಾಮ್‌ಸಂಗ್, ಆ್ಯಾಪಲ್‌ನಂತಹ ಫ್ಲಾಗ್‌ಶಿಪ್‌ ಫೋನ್‌ಗಳಿಗೆ ಹೋಲಿಸಿದರೆ, ಸಾಮಾನ್ಯವಾಗಿ iQOO ಫೋನ್‌ಗಳ ಬೆಲೆಯು ಕಡಿಮೆ ಇರುವುದನ್ನು ನಾವು ನೋಡಬಹುದು. ಒಂದು ವೇಳೆ ಪರಿಣಾಮಕಾರಿ ಬೆಲೆಯಲ್ಲಿ iQOO 15 ಸ್ಮಾರ್ಟ್‌ಫೋನ್ ಬಿಡುಗಡೆಯಾದರೆ, ಈ ಮೇಲಿನ ವೈಶಿಷ್ಟ್ಯಗಳಿಂದ ಪೋನ್ ಹೆಚ್ಚು ಸದ್ದು ಮಾಡುವುದು ಖಂಡಿತ.!

Best Mobiles in India

English summary
iQOO 15 India launch is confirmed, offering cutting-edge specs, powerful performance, and advanced features for tech enthusiasts. check here To know more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+