iQOO 15 ಪ್ರೀ-ಬುಕಿಂಗ್ ಡೇಟ್, ಆಫರ್ಸ್ ಮತ್ತು ನಿರೀಕ್ಷಿತ ಬೆಲೆ!
ಭಾರತದಲ್ಲಿ ಮುಂದಿನ ನವೆಂಬರ್ 26 ರಂದು ಬಹುನಿರೀಕ್ಷಿತ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ iQOO 15 ಬಿಡುಗಡೆಯಾಗಲಿದೆ. ಇದೇ ಸಂದರ್ಭದಲ್ಲಿ, iQOO ಕಂಪನಿಯು ಈ ಫೋನ್‌ಗಾಗಿ ಅಧಿಕೃತ ಪ್ರೀ-ಬುಕಿಂಗ್ ಆರಂಭ ದಿನಾಂಕ ಹಾಗೂ Priority Pass ಮಾಹಿತಿ ಕೂಡ ಹಂಚಿಕೊಂಡಿದೆ. ಗ್ರಾಹಕರು ಕೇವಲ ₹1,000 (ರಿಫಂಡಬಲ್) ಪಾವತಿಸಿ Priority Pass ಪಡೆದರೆ, ಫೋನ್‌ನ್ನು ಮೊದಲಿಗರಾಗಿ ಮುಂಗಡವಾಗಿ ಕಾಯ್ದಿರಿಸಿಕೊಳ್ಳಲು ಅವಕಾಶ ಸಿಗುತ್ತದೆ. ಹಾಗಾದರೆ, ಈ Priority Pass ಪಡೆದರೆ ಏನೆಲ್ಲಾ ಲಾಭಗಳು ದೊರೆಯಲಿವೆ ಎಂಬುದನ್ನು ನೋಡೋಣ ಬನ್ನಿ.
ದೇಶದಲ್ಲಿ iQOO 15 ಸ್ಮಾರ್ಟ್‌ಫೋನ್ ಪ್ರೀ-ಬುಕಿಂಗ್ ಅಧಿಕೃತವಾಗಿ ಇದೇ ನವೆಂಬರ್ 20 ರಿಂದ ಪ್ರಾರಂಭವಾಗಲಿದೆ. ₹1,000 (ರಿಫಂಡಬಲ್) ಪಾವತಿಸಿ Priority Pass ಪಡೆದವರಿಗೆ iQOO ಕಂಪೆನಿಯು ಕೆಲವು ವಿಶೇಷ ಸೌಲಭ್ಯಗಳನ್ನು ನೀಡಲಿದೆ. ಇದರಲ್ಲಿ ಗ್ರಾಹಕರಿಗೆ ಉಚಿತ iQOO TWS 1e ವೈರ್‌ಲೆಸ್ ಇಯರ್‌ಬಡ್ಸ್ ಹಾಗೂ 12 ತಿಂಗಳ ಹೆಚ್ಚುವರಿ ವಾರಂಟಿ ದೊರೆಯಲಿವೆ. ಆದರೆ ಈ ಪಾಸ್‌ಗಳು ಸೀಮಿತ ಸಂಖ್ಯೆಯಲ್ಲಿ ಲಭ್ಯವಿರುವುದರಿಂದ "first come, first serve" ಆಧಾರದ ಮೇಲೆ ವಿತರಿಸಲಾಗುತ್ತದೆ ಎಂದು ಕಂಪೆನಿಯು ತಿಳಿಸಿದೆ.
ಭಾರತದಲ್ಲಿ iQOO 15: ನಿರೀಕ್ಷಿತ ಬೆಲೆ ಮತ್ತು ಸ್ಪರ್ಧೆ
ಅತ್ಯಂತ ಆಕರ್ಷಕ ಫೀಚರ್ಸ್ ಹೊಂದಿರುವ iQOO 15 ಅನ್ನು ದೇಶದ ಫ್ಲ್ಯಾಗ್‌ಶಿಪ್ ಮಾರುಕಟ್ಟೆಯಲ್ಲಿ ಮತ್ತೊಂದು ಬಲವಾದ ಸ್ಪರ್ಧಿಯಾಗಿ ಪರಿಗಣಿಸಲಾಗಿದೆ. ಇತ್ತೀಚಿನ Gadgets300 ವರದಿ ಪ್ರಕಾರ, Snapdragon 8 Elite Gen 5 ಚಿಪ್‌ಸೆಟ್ ಹೊಂದಿರುವ ಫೋನ್‌ಗಳಲ್ಲಿ ಅತ್ಯಂತ ಅಗ್ಗದ ಆಯ್ಕೆಯಾಗಿ, ಭಾರತದಲ್ಲಿ iQOO 15 ಸ್ಮಾರ್ಟ್‌ಫೋನ್ ₹60,000 ಪ್ರಾರಂಭಿಕ ಆಫರ್ ಬೆಲೆಗೆ ಲಭ್ಯವಿರಬಹುದು ಎಂದು ತನ್ನ ಮೂಲಗಳನ್ನು ಉಲ್ಲೇಖಿಸಿ ಅಭಿಪ್ರಾಯಪಟ್ಟಿದೆ.

ದೇಶದಲ್ಲಿ ಪ್ರಸ್ತುತ ಇದೇ ಮಟ್ಟದ Snapdragon 8 Elite Gen 5 ಪ್ರೊಸೆಸರ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಬೆಲೆ ಸಾಮಾನ್ಯವಾಗಿ ₹70,000 ಕ್ಕಿಂತ ಹೆಚ್ಚಾಗಿರುವ ನಿರೀಕ್ಷೆ ಇದೆ. ಇದೇ ವಾರದ ಅವಧಿಯಲ್ಲಿ ದೇಶದಲ್ಲಿ OnePlus 15 ಮತ್ತು Realme GT 8 Pro ಎರಡೂ ಸ್ಮಾರ್ಟ್‌ಫೋನ್‌ಗಳು ಕೂಡ ಇದೇ ಚಿಪ್‌ಸೆಟ್‌ನೊಂದಿಗೆ ಬಿಡುಗಡೆಗೊಳ್ಳಲಿರುವುದರಿಂದ, ಸ್ಪರ್ಧೆಗೆ ತಕ್ಕಂತೆ iQOO ತನ್ನ ಬೆಲೆ ತಂತ್ರವನ್ನು ಆಕರ್ಷಕವಾಗಿಟ್ಟುಕೊಂಡಿದೆ ಎಂದು ಈ ವರದಿಯು ಸೂಚಿಸುತ್ತದೆ.
ಭಾರತಕ್ಕೆ iQOO 15 : ಏನೆಲ್ಲಾ ನಿರೀಕ್ಷೆಗಳಿವೆ?
ನವೆಂಬರ್ 26 ರಂದು ಬಿಡುಗಡೆಯಾಗುತ್ತಿರುವ ಈ ಬಹುನಿರೀಕ್ಷಿತ iQOO 15 ಸ್ಮಾರ್ಟ್‌ಫೋನ್ Snapdragon 8 Elite Gen 5 ಪ್ರೊಸೆಸರ್ ಚಾಲಿತ iQOO ಕಂಪನಿಯ ಮೊದಲ ಸ್ಮಾರ್ಟ್‌ಫೋನ್ ಆಗಲಿದೆ. ಈ ಫೋನಿನಲ್ಲಿ Samsung 2K M14 OLED ಡಿಸ್‌ಪ್ಲೇ ಇರಲಿದೆ. ಔಟ್ ಆಫ್ ದಿ ಬಾಕ್ಸ್ OriginOS ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ 5 ವರ್ಷಗಳ OS ನವೀಕರಣಗಳು ಮತ್ತು 7 ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಪಡೆಯುತ್ತದೆ ಎಂದು ಕಂಪೆನಿಯು ಇತ್ತೀಚಿಗಷ್ಟೇ ದೃಢಪಡಿಸಿದೆ.
ಇದರ ಪ್ರಮುಖ ಫೀಚರ್ಸ್‌ಗಳಲ್ಲಿ, ಬೃಹತ್ 7000mAh ಬ್ಯಾಟರಿ, ಟ್ರಿಪಲ್ 50-ಮೆಗಾಪಿಕ್ಸೆಲ್ ಹಿಂಭಾಗದ ಕ್ಯಾಮೆರಾ ಸೆಟಪ್ ಇರುವುದು ಖಚಿತವಾಗಿದ್ದರೆ, iQOO 15 ಆಂತರಿಕವಾಗಿ ಅಭಿವೃದ್ಧಿಪಡಿಸಿದ ಗೇಮ್ ಲೈವ್‌ಸ್ಟ್ರೀಮಿಂಗ್ ಅಸಿಸ್ಟೆಂಟ್ ಅನ್ನು ಒಳಗೊಂಡಿರುತ್ತದೆ, ಜೊತೆಗೆ ಅತಿದೊಡ್ಡ ಸಿಂಗಲ್-ಲೇಯರ್ ಕೂಲಿಂಗ್ ಸಿಸ್ಟಮ್ ಎಂದು ಹೇಳಲಾಗುತ್ತದೆ. ಈ ಎಲ್ಲಾ ಅಂಶಗಳು ಭಾರತೀಯ ಫ್ಲ್ಯಾಗ್‌ಶಿಪ್ ಮಾರುಕಟ್ಟೆಯಲ್ಲಿ iQOO 15 ಹೊಸ ಟ್ರೆಂಡ್ ನಿರ್ಮಿಸುವ ಸಾಧ್ಯತೆಯನ್ನು ಹುಟ್ಟುಹಾಕಿದೆ.


Click it and Unblock the Notifications








